ಅಭಿಪ್ರಾಯ / ಸಲಹೆಗಳು

Crime Reported in Mangalore West Traffic PS                     

 

ಪಿರ್ಯಾದು PRASANNA RODRIGUES ದಾರರು ಮಂಗಳೂರು ನಗರದ ಎಬಿ ಶೆಟ್ಟಿ ಸರ್ಕಲ್ ಕಡೆಯಿಂದ ಸೆಂಟ್ರಲ್ ಮಾರ್ಕೆಟ್ ಕಡೆಗೆ ಕೆಎ19ಈಸಿ8236ನೇ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಹೋಗುವಾಗ ಸೈಂಟ್ ಪೌಲ್ ಚರ್ಚ್ ಎದುರುಗಡೆ  ತಲುಪುತ್ತಿದ್ದಂತೆ ಎಬಿ ಶೆಟ್ಟಿ ವೃತ್ತದ ಕಡೆಯಿಂದ ಹ್ಯಾಮಿಲ್ಟನ್ ಕಡೆಗೆ ಕೆಎ19ಎಂಎಚ್ 9207ನೇ ಇನ್ನೋವಾ ಕಾರನ್ನು ಅದರ ಚಾಲಕ ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದುದಾರರ ಮೋಟಾರು ಸೈಕಲನ್ನು ಓವರ್ ಟೇಕ್ ಮಾಡಿಕೊಂಡು ಬಂದು ಮೋಟಾರು ಸೈಕಲ್ಲಿನ ಬಲಬದಿಗೆ ಕಾರಿನ ಎಡಬದಿಯ ಹಿಂಬದಿಯ ಡೋರನ್ನು ತಾಗಿಸಿದ ಪರಿಣಾಮ ಪಿರ್ಯಾದುದಾರರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತದ ಗಾಯವಾಗಿದ್ದು, ಕಾರಿನ ಚಾಲಕ ಪಿರ್ಯಾದುದಾರರನ್ನು ಆಸ್ಪತ್ರೆಗೆ ಸಾಗಿಸಿರುವುದಿಲ್ಲ. ಪಿರ್ಯಾದುದಾರರು ಕೊಡಿಯಾಲ ಬೈಲು ಯನಪೋಯಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು, ಪ್ರಸ್ತುತ ಚಿಕಿತ್ಸೆಯ ಬಗ್ಗೆ ಕದ್ರಿ ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಘಟನೆಯು ದಿನಾಂಕ:15-02-2022ರ 11:30 ಗಂಟೆಯ ಸುಮಾರಿಗೆ ನಡೆದಿರುವುದಾಗಿದೆ ಎಂಬಿತ್ಯಾದಿ.

 

 

Crime Reported in CEN Crime PS

ಪಿರ್ಯಾದಿ VIJAY KANCHAN ದಾರರು ದಿನಾಂಕ 19-02-2022 ರಂದು ಠಾಣಾ  ಹೆಚ್.ಸಿ  ಸಂತೋಷ್ ಕುಮಾರ್ ಮತ್ತು ಪಿ.ಸಿ  ನವೀನ್ ಕುಮಾರ್ ರವರೊಂದಿಗೆ ಠಾಣೆಯಿಂದ ಬೆಳಿಗ್ಗೆ 9-30 ಗಂಟೆಗೆ ರೌಂಡ್ಸ್ ಕರ್ತವ್ಯದ ಬಗ್ಗೆ ಖಾಸಗಿ ವಾಹನದಲ್ಲಿ ಹೊರಟು ಉರ್ವಾಸ್ಟೋರ್, ಉರ್ವಾ ಮೈದಾನ, ಸುಲ್ತಾನ್ ಬತ್ತೇರಿ ಕಡೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 10-00 ಗಂಟೆಗೆ ಬಾತ್ಮೀದಾರರೊಬ್ಬರು ಪಿರ್ಯಾದಿದಾರರಿಗೆ ಕರೆ ಮಾಡಿ ಮಂಗಳೂರು ನಗರದ  ಲೇಡಿಹಿಲ್  ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಒಬ್ಬ ಯುವಕನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಸದ್ರಿ ರಸ್ತೆಯಲ್ಲಿ ನಡೆದಾಡುವ ನಾಗರಿಕರಿಗೆ ಮತ್ತು ಓಡಾಡುವ  ವಾಹನಗಳಿಗೆ  ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಬಂದ ಮಾಹಿತಿಯಂತೆ ತಕ್ಷೀರು ಸ್ಥಳಕ್ಕೆ 10-15 ಗಂಟೆಗೆ ತೆರಳಿ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ರಸ್ತೆಯಲ್ಲಿ ನಡೆಡಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಪವನ್ ಕುಮಾರ ಶೆಟ್ಟಿ ಪ್ರಾಯ 20 ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದಂತೆ ಆತನನ್ನು  ಮಂಗಳೂರು ಎ.ಜೆ ವೈದಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 19-02-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080