Feedback / Suggestions

Crime Reported in Mangalore East Traffic PS                        

ದಿನಾಂಕ 18-03-2022 ರಂದು ಪಿರ್ಯಾದಿದಾರರಾದ ಕೆ.ಹೆಚ್. ಧನುಷ್ ರವರು ತನ್ನ ಗೆಳೆಯನಾದ  ಅರವಿಂದ್ ದಾಸ್(20)ರವರೊಂದಿಗೆ ಆಟವಾಡಲು ಹೋಗಿದ್ದವರು. ಆಟ ಮುಗಿಸಿ ವಾಪಾಸು ಮನೆಯ ಕಡೆಗೆ ಬರುತ್ತಾ ಕುಂಟಿಕಾನ  KSRTC ಡಿಪ್ಪೋ  ಮುಂಭಾಗ ಕೆ.ಪಿ.ಟಿ ಕಡೆಯಿಂದ ಕೊಟ್ಟಾರ ಚೌಕಿ ಕಡೆಗೆ ಹಾದು ಹೋಗಿರುವ ರಾ ಹೆ 666 ನೇ ಡಾಮಾರು ರಸ್ತೆಯನ್ನು ದಾಟಿ ಬಾರೇಬೈಲ್ ಕಡೆಗೆ ಹೋಗಲು ರಸ್ತೆಯನ್ನು ದಾಟುತ್ತಿದ್ದ ವೇಳೆ ಸಂಜೆ ಸಮಯ ಸುಮಾರು 19.45 ಗಂಟೆಗೆ KA-19-HJ-3236  ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಕೆ.ಪಿ.ಟಿ ಕಡೆಯಿಂದ ಕೊಟ್ಟಾರ್ ಚೌಕಿ ಕಡೆಗೆ ರಾ.ಹೆ 66 ರಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಸ್ನೇಹಿತ ಅರವಿಂದ್ ದಾಸ್ (20) ರವರಿಗೆ ಡಿಕ್ಕಿ ಪಡಿಸಿ,ಮೋಟಾರ್ ಸೈಕಲಿನ ಸವಾರನ್ನು ನಿಲ್ಲಿಸದೇ ಹೋಗಿರುತ್ತಾನೆ.ಈ ಅಪಘಾತದಿಂದ ಅರವಿಂದ ದಾಸ್(20) ರವರು ರಾ.ಹೆ 66 ನೇ ಡಾಮಾರು ರಸ್ತೆಗೆ ಬಿದ್ದು, ಎಡಕಾಲಿನ ಕೋಲುಕಾಲಿಗೆ ಮೂಳೆ ಮುರಿತ ಗಂಭೀರ ಸ್ವರೂಪದ ಗಾಯ ಕೈ ಕಾಲುಗಳಿಗೆ ಚರ್ಮಕಿತ್ತ ರಕ್ತಗಾಯ,ಬಲ ಕೆನ್ನೆಗೆ ಮತ್ತು ಬಲಕಿವಿಯ ಬಳಿ ರಕ್ತವಾಗಿದ್ದು,ಸಾರ್ವಜನಿಕರ ಸಹಾಯದಿಂದ ಹತ್ತಿರದ  ಎ.ಜೆ ಅಸ್ಪತ್ರೆಗೆ ಸಾಗಿಸಿದ್ದು, ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಈ ಬಗ್ಗೆ  ಮೋಟಾರ್ ಸೈಕಲಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ

 

Crime Reported in Traffic South Police Station       

ದಿನಾಂಕ: 18-03-2022 ರಂದು ಈಚರ್ ಲಾರಿ ನಂಬ್ರ: KA-63-8299 ನೇದರಲ್ಲಿ ಈರಣ್ಣ ಗಂಗಾಚಾರಿಯವರು ಚಾಲಕರಾಗಿ ಹಾಗೂ ಪಿರ್ಯಾದಿ SANTOSH P.V ದಾರರು ಸ್ವಿವಿಂಗ್ ಸೆಟ್ಟರ್ ವಾಹನದ ಕ್ಲಿನರ್ ಆಗಿದ್ದು, ಈಚರ್ ಲಾರಿಯಲ್ಲಿ ಕುಳಿತು ಸ್ವಿವಿಂಗ್ ಸೆಟ್ಟರ್ ವಾಹನವನ್ನು ಲೋಡ್ ಮಾಡಿಕೊಂಡು ಮುಡಿಪು ಕಡೆಯಿಂದ ಕೊಣಾಜೆ ಮಾರ್ಗವಾಗಿ ಸುರಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 02:00 ಗಂಟೆಗೆ ಮಂಗಳೂರು ತಾಲ್ಲೂಕು ನಾಟೆಕಲ್ ತಿರುವು ರಸ್ತೆಯಲ್ಲಿ ತಲುಪಿದಾಗ ಈಚರ್ ಲಾರಿ ಚಾಲಕ ಈರಣ್ಣ ಗಂಗಾಚಾರಿ ಎಂಬುವರು ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದರ ಪರಿಣಾಮ ಈಚರ್ ಲಾರಿ ಮೇಲಿದ್ದ ಸ್ವಿಯಿಂಗ್ ಸ್ವೆಟ್ಟರ್ ವಾಹನ ನಂಬ್ರ: KA-51-MM-5414 ಹಾಗೂ ಈಚರ್ ಲಾರಿ ರಸ್ತೆಗೆ ಬಿದ್ದು, ಸ್ವಿಯಿಂಗ್ ಸ್ವೆಟ್ಟರ್ ವಾಹನ ಭಾಗಶಃ ಜಖಂಗೊಂಡಿರುವುದಾಗಿದೆ, ಹಾಗೂ ಪಿರ್ಯಾದಿದಾರರಿಗೆ ಎಡಕೈ ಮತ್ತು ಎಡ ಕಾಲಿಗೆ ಸಣ್ಣ ಪುಟ್ಟ  ಗಾಯವಾಗಿದ್ದು ಅವರು ಕಣಚೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ, ಹಾಗೂ ಈಚರ್ ಲಾರಿ ಚಾಲಕ ಈರಣ್ಣ ಗಂಗಾಚಾರಿಯವರಿಗೆ ಯಾವುದೇ ಗಾಯವಾಗಿರುವುದಿಲ್ಲ,  ಎಂಬಿತ್ಯಾದಿ.

 

2)  ದಿನಾಂಕ: 18-03-2022 ರಂದು ಪಿರ್ಯಾದಿ SANTHOSH ದಾರರು ಅವರ ಬಾಬ್ತು ಸ್ಕೂಟರ್ ನಂಬ್ರ KA-19-HC-8045  ನೇದನ್ನು ಉಳ್ಳಾಲ ಕೋಡಿಕಡೆಯಿಂದ ಉಳ್ಳಾಲ ಸಯ್ಮರ್ ಸ್ಯಾಂಡ್ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಸಂಜೆ 8:00 ಗಂಟೆಗೆ ಉಳ್ಳಾಲ ಪ್ಯಾರಿಸ್ ಜಂಕ್ಷನ್ ಮತ್ತು ಸಹರಾ ಆಸ್ಪತ್ರೆ ಬಳಿ ತಲುಪುತ್ತಿದ್ದಂತೆ ಉಳ್ಳಾಲ ಅಬ್ಬಕ್ಕ ಸರ್ಕಲ್ ಕಡೆಯಿಂದ ಉಳ್ಳಾಲ ಕೋಡಿ ಕಡೆಗೆ  ಆಟೋ ರಿಕ್ಷಾ ನಂಬ್ರ  KA-19-AC-5456 ನೇದನ್ನು  ಅದರ ಚಾಲಕ ಮೊಹಮ್ಮದ್ ಮುಸ್ತಪನು  ಎಂಬಾತನು ಇಬ್ಬರು ಸಹ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಆಟೋರಿಕ್ಷವನ್ನು  ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದರು ಹಾಗೂ ಅಪಘಾತ ಪಡಿಸಿದ ಆಟೋರಿಕ್ಷಾ ರಸ್ತೆಗೆ ಮಗಚಿ ಬಿದ್ದಿತು, ಈ ಅಪಘಾತದಿಂದ ಪಿರ್ಯಾದಿದಾರರ ಮುಖಕ್ಕೆ ಮತ್ತು ತಲೆಗೆ ಗುದ್ದಿದ ರೀತಿಯ ರಕ್ತಗಾಯ ಹಾಗೂ ಆಟೋರಿಕ್ಷಾದಲ್ಲಿದ್ದ ಸಹ ಪ್ರಯಾಣಿಕರಾದ  ಶಮಿಮರವರಿಗೆ ಬಲಭುಜಕ್ಕೆ ಮತ್ತು  ತಲೆಗೆ ಗುದ್ದಿದ ರೀತಿಯ ಗಾಯ ಮತ್ತು ಆಟೋ ರಿಕ್ಷಾ ಚಾಲಕ ಮತ್ತು ಇನ್ನೊಬ್ಬ ಸಹ ಪ್ರಯಾಣಿಕರಾದ  ಅಹಮದ್ ಶಾಹಿದ್ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅಲ್ಲಿ ಸೇರಿದ್ದ ಜನರು ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಟೋರಿಕ್ಷಾದಲ್ಲಿದ್ದ ಗಾಯಾಳು ಶಮಿಮಳನ್ನು ಚಿಕಿತ್ಸೆ ಬಗ್ಗೆ ಉಳ್ಳಾಲ ಸಹರಾ ಆಸ್ಪತ್ರಗೆ ಕರೆದುಕೊಂಡು ಹೋಗಿದ್ದು ಬಳಿಕ ಪಿರ್ಯಾದಿದಾರರು ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆ  ಹೋಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಗಾಯಾಳು ಶಮಿಮ ರವರು ಹೆಚ್ಚಿನ ಚಿಕಿತ್ಸೆಗಾಗಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ.  ಎಂಬಿತ್ಯಾದಿ.

 

Last Updated: 19-03-2022 07:25 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080