ಅಭಿಪ್ರಾಯ / ಸಲಹೆಗಳು

Crime Reported in Moodabidre PS

ದಿನಾಂಕ 19-04-2022ರಂದು ಪಿರ್ಯಾಧಿ Shivananda ದರರು ತನ್ನ ಬಾಬ್ತು ದ್ವಿ-ಚಕ್ರ ವಾಹನದಲ್ಲಿ ಮೂಡಬಿದ್ರೆ ಕಡೆಯಿಂದ ಮಾರೂರು ಕಡೆಗೆ ಹೋಗುತ್ತಾ ಬೆಳಿಗ್ಗೆ 10:15 ಗಂಟೆ ಸಮಯಕ್ಕೆ ಗಂಟಾಲ್ ಕಟ್ಟೆ ಬಳಿ ಇರುವ ಹಾಲಿನ ಸೊಸೈಟಿ ಬಳಿ ತಲುಪುತಿದ್ದಂತೆ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ KA70H7257 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರನು ಸಹ ಸವಾರನೊಬ್ಬನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅದರ ಮುಂದಿನಿಂದ ಪಿರ್ಯಾಧಿದಾರರ ಪರಿಚಯದ ಗೋಪಾಲ@ಸುಜಿತ್ ಎಂಬವರು ರಮೇಶ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಬರುತಿದ್ದ ಹೊಸದಾದ ನೊಂದಣಿಯಾಗದ TVS JUPITER ಹೆಸರಿನ ಕಂದು ಬಣ್ಣದ ದ್ವಿ-ಚ್ರಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಮೋಟಾರು ಸೈಕಲಿನಲ್ಲಿದ್ದವರು ರಸ್ತೆಗೆ ಎಸೆಯಲ್ಲಟ್ಟ ಪರಿಣಾಮ ಗೋಪಾಲ @ ಸುಜಿತ್ ರವರ ತಲೆಗೆ ಗುದ್ದಿದ ಗಾಯ, TVS JUPITER ನಲ್ಲಿದ್ದ ಸಹಸವಾರ ರಮೇಶ್ ರವರ ತಲೆಗೆ ಗಂಭೀರ ರೀತಿಯ ಗಾಯ, ಅಪಘಾತ ಪಡಿಸಿದ ಮೋಟಾರು ಸೈಕಲಿನ ಸವಾರ ಅನೂಜನ ಹಣೆಗೆ, ಗಲ್ಲಕ್ಕೆ, ಗುದ್ದಿದ ಗಾಯ ಮತ್ತು ಆತನೊಂದಿಗೆ ಇದ್ದ ಸಹ ಸವಾರ ಸ್ವಸ್ತಿಕ್ ನ ಎಡ ಕೈಗೆ ಮತ್ತು ಎಡ ಕಾಲಿಗೆ ತರಚಿದ ಗಾಯವಾಗಿತ್ತು. ಗಂಭೀರ ಗಾಯಗೊಂಡ ರಮೇಶರವರನ್ನು ಅಲ್ಲಿಗೆ ಕರೆಯಿಸಿದ 108 ಅಂಬುಲೆನ್ಸ್ ನಲ್ಲಿ ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯ ಮೃತಪಟ್ಟಿರುವುದಾಗಿ ಸಾರಾಂಶ.

Crime Reported in Traffic South Police Station       

ದಿನಾಂಕ :19-04-2022 ರಂದು ಪಿರ್ಯಾದಿ LAHESH ದಾರರು ಅವರ ಕಾರು ನಂಬ್ರ KA-19-MG-1092 ನೇದನ್ನು ಚಲಾಯಿಸಿಕೊಂಡು ಪರಾರಿಯಿಂದ ಪಿ.ವಿ.ಎಸ್. ಹೋಗಿ ಅಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಅವರ ಸಂಭಂದಿಕರ ತಿಥಿ ಕಾರ್ಯಕ್ರಮಕ್ಕೆ ಹೋಗಲು ಮಂಗಳೂರಿನಿಂದ ಮನೆಯಾದ ಪರಾರಿ ಕಡೆಗೆ ಹೋಗುತ್ತಾ ವಾಮಂಜೂರು ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ್ದ ‘KISTHU 3’D’ ಬಸ್ಸು ನಂಬ್ರ KA-19-AA-8338 ನೇದನ್ನು ಅದರ ಚಾಲಕ ರಾಘವೇಂದ್ರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಮದ್ಯಾಹ್ಣ 1-00 ಘಂಟೆಗೆ ಪರಾರಿ ತಿರುವು ರಸ್ತೆಯಲ್ಲಿ ತಲುಪಿದಾಗ ಬಸ್ಸಿನ ಮುಂದಿನ ಬಾಗಿಲಿನಿಂದ ಒಬ್ಬ ಮಹಿಳೆ ಬಸ್ಸಿನಿಂದ ಕೆಳಗಡೆ ಮಣ್ಣು ರಸ್ತೆಗೆ ಬಿದ್ದಿದ್ದು ಕೂಡಲೇ ಹಿಂದಿನಿಂದ  ಪಿರ್ಯಾದಿದದಾರರು ಮತ್ತು ಅಪಘಾತ ಪಡಿಸಿದ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಸ್ಥಳಕ್ಕೆ ಹೋಗಿ ಉಪಚರಿಸಿ ನೋಡಲಾಗಿ ಮಹಿಳೆಗೆ ತಲೆಯ ಗಂಭೀರ ಸ್ವರೂಪದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ನಂತರ ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ತಮ್ಮ ಕಾರಿನಲ್ಲಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಸಿದ್ದು  ವೈದ್ಯರು  ಪರೀಕ್ಷಿಸಿ ಗಾಯಾಳುವನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಎಂಬಿತ್ಯಾದಿ.

 

Crime Reported in Mangalore North PS

ಪಿರ್ಯಾದಿ ASHWIN ದಾರರು ದಿನಾಂಕ 18.04.2022 ರಂದು  ಕೋರ್ಟ್ ಗೆ ಹೋಗಲು ತಮ್ಮ ಸಹೋದರರಾದ ಅರ್ಜುನ್ ರವರ ಹೋಂಡಾ ಆಕ್ಟೀವಾ ಸ್ಕೂಟರ್ ನ್ನು ಚಲಾಯಿಸಿಕೊಂಡು ಕೊಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ನ್ಯಾಯಾಲಯಕ್ಕೆ ಹೋಗಲು ತಮ್ಮ ಬಾಬ್ತು ಹೋಂಡಾ ಆಕ್ಟೀವಾ ಸ್ಕೂಟರ್ ನ್ನು ಕೋರ್ಟ್ ಆವರಣದ ಪಾರ್ಕಿಂಗ್ ಸ್ಥಳದಲ್ಲಿ ಬೆಳಗ್ಗೆ 10:40 ಗಂಟೆಗೆ ಪಾರ್ಕ್ ಮಾಡಿ ಹೋಗಿರುತ್ತಾರೆ. ನಂತರ ಕೋರ್ಟ್ ಕೆಲಸ ಮುಗಿಸಿ ವಾಪಾಸ್ಸು ಬಂದು ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ನ್ನು ನೋಡಿದಾಗ ಯರೋ ಕಳ್ಳರು ಪಿರ್ಯಾದಿದಾರರ ಸ್ಕೂಟರ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

 

Crime Reported in Mangalore South PS                         

ದಿನಾಂಕ 17-04-2022 ರಂದು ಸಂಜೆ 19-10 ಗಂಟೆಯಿಂದ 20-30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ RAMACHANDRA KULAL ದಾರರ ಆರ್. ಸಿ. ಮಾಲಕತ್ವದ KA 19 AB 6333 ನೊಂದಣಿ ಸಂಖ್ಯೆಯ MD6M14LK5G4H17706 ಚೆಸಿಸ್ ನಂಬ್ರ, OK4HG4054503 ಇಂಜಿನ್ ನಂಬ್ರದ, 08/2016ನೇ ಮೋಡಲ್ ನ ಕಪ್ಪು- ಹಳದಿ ಬಣ್ಣದ ಅಟೋ ರಿಕ್ಷಾವನ್ನು ಮಂಗಳೂರು ನಗರದ ಪಾಂಡೇಶ್ವರದ, ಎಂ. ವಿ. ಶೆಟ್ಟಿ ರಸ್ತೆಯಲ್ಲಿ ರಸ್ತೆ, ಬದಿಯಲ್ಲಿ ಪಾರ್ಕ್ ಮಾಡಿಟ್ಟಿರುವುದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಅಟೋ ರಿಕ್ಷಾದ ಅಂದಾಜು ಮೌಲ್ಯ 95,000/-ರೂಪಾಯಿ ಆಗಬಹುದು ಕಳವಾದ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

          

ಇತ್ತೀಚಿನ ನವೀಕರಣ​ : 19-04-2022 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080