Crime Reported in: Mangalore West Traffic PS
ಫಿರ್ಯಾಧಿದಾರರು SMT DEEPA ದಿನಾಂಕ 16-07-2022 ರಂದು ಸಮಯ ಸುಮಾರು ಮದ್ಯಾಹ್ನ 12.00 ಗಂಟೆಗೆ ತನ್ನ ಬಾಬ್ತು KA-15-X-3703 ನೇ ಸ್ಕೂಟರನ್ನು ಪಿವಿಎಸ್ ಕಡೆಯಿಂದ ಉರ್ವ ಸ್ಟೋರ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಲಾಲ್ ಭಾಗ್ ಸಿಗ್ನಲ್ ಬಳಿ ತಲುಪುತ್ತಿದ್ದಂತೆ ಕೆಂಪು ದೀಪ ಉರಿಯುತ್ತಿದ್ದನ್ನು ಕಂಡು ಫಿರ್ಯಾಧಿದಾರರು ವಾಹನವನ್ನು ನಿಲ್ಲಿಸುತ್ತದ್ದಂತೆ ಪಿವಿಎಸ್ ಕಡೆಯಿಂದ ಲಾಲ್ ಭಾಗ್ ಕಡೆಗೆ KA-19-MF-2757 ನೇ ಕಾರನ್ನು ಅದರ ಚಾಲಕ ರಮೇಶ್ ಶೆಟ್ಟಿ ರವರು ಸಾರ್ವಜನಿಕ ರಸ್ತೆಯಲ್ಲಿ ತೀರಾ ನಿರ್ಲಕ್ಷತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿಗ್ನಲ್ ಬಳಿ ನಿಂತಿದ್ದ ಫಿರ್ಯಾಧಿದಾರರ ಸ್ಕೂಟರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾಧಿದಾರರು ವಾಹನ ಸಮೇತ ರಸ್ತೆಗೆ ಬಿದ್ದು, ತಲೆಗೆ,ಕುತ್ತಿಗೆಗೆ, ಭುಜಕ್ಕೆ ಹಾಗೂ ಬೆನ್ನು ಮೂಳೆಗೆ ಗುದ್ದಿದ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಅಲ್ಲಿಯೇ ಇದ್ದ ಫಿರ್ಯಾಧಿದಾರರ ಪರಿಚಯದ ಸುನೀಲ್ ರವರು ರಸ್ತೆ ಬದಿಗೆ ತಂದು ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಲ್ಲಿಯೇ ಬರುತ್ತಿದ್ದ ಆಟೋ ರಿಕ್ಷಾದಲ್ಲಿ ನಗರದ ಎ ಜೆ ಆಸ್ಪತ್ರೆಗೆ ದಾಖಲಿಸಿರುವುದು ಎಂಬಿತ್ಯಾದಿ
Crime Reported in: Mangalore East PS
ಫಿರ್ಯಾದಿ Nagesh ಹೆಂಡತಿಯ ತಮ್ಮ ದೀಪಕ್, (ಪ್ರಾಯ 29 ವರ್ಷ) ಎಂಬಾತನು ಬಂಟ್ವಾಳದ ಅಮ್ಮಂಜೆಯಲ್ಲಿ ವಾಸವಾಗಿದ್ದು, ಕಂಟ್ರಾಕ್ಟ್ ದಾರ ಪ್ರವೀಣ್ ಎಂಬವರ ಜೊತೆ ಸುಮಾರು 8 ವರ್ಷದಿಂದ ಪ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದನು, ಪ್ರವೀಣ್ ರವರ ಜೊತೆ ದೀಪಕ್ ನು ಸುಮಾರು ಒಂದು ವಾರದಿಂದ ನಿರ್ಮಿತಿ ಕೇಂದ್ರದವರು ಮಾಡಿಸುತ್ತಿದ್ದ ಮಂಗಳೂರಿನ ಬಾರೈಬೈಲಿನಲ್ಲಿರುವ ಅಗ್ನಿ ಶಾಮಕ ಠಾಣೆಯ ವಾಹನ ನಿಲುಗಡೆ ಕಟ್ಟಡದ ಮೇಲ್ಚಾವಣೆಗೆ ಶೀಟ್ ಅಳವಡಿಸುವ ಕೆಲಸವನ್ನು ಮಾಡುತ್ತಿದ್ದನು. ದಿನಾಂಕ 19/07/2022 ರಂದು ಬೆಳಿಗ್ಗೆ 09.50 ಗಂಟೆಗೆ ದೀಪಕ್ ನು ಅಗ್ನಿ ಶಾಮಕ ಠಾಣೆಯ ವಾಹನ ನಿಲುಗಡೆ ಕಟ್ಟಡದ ಮೇಲ್ಚಾವಣೆಗೆ ಶೀಟ್ ಅಳವಡಿಸುವಾಗ ಅಯತಪ್ಪಿ ಸುಮಾರು 30 ಅಡಿ ಕೆಳಗಡೆ ಬಿದ್ದು, ತಲೆಗೆ ತೀವೃ ಗಾಯವಾದವನನ್ನು ಅಲ್ಲಿದ್ದ ಕೆಲಸಗಾರರು ಹಾಗೂ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಕೂಡಲೇ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರೂ, ದೀಪಕ್ ಬೆಳಿಗ್ಗೆ 10.39 ಗಂಟೆಗೆ ಆಸ್ಪತ್ರೆಯಲ್ಲಿ ಮೃತ ಪಟ್ಟಿರುವುದಾಗಿ ತಿಳಿಸಿದನು, ಈ ಘಟನೆಗೆ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆದ ನವೀತ್, ಕೆಲಸವನ್ನು ಮಾಡಿಸುತ್ತಿದ್ದ ಪ್ರವೀಣ್ ಹಾಗೂ ಕೆಲಸದ ಉಸ್ತುವಾರಿ ವಹಿಸಿದ್ದ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದವರು ಸುಮಾರು 30 ಅಡಿ ಎತ್ತರದಲ್ಲಿ ಕೆಲಸಗಾರರಿಂದ ಕೆಲಸ ಮಾಡಿಸುವ ವೇಳೆ ಕೆಲಸಗಾರರ ಸುರಕ್ಷತಾ ದೃಷ್ಟಿಯಿಂದ ಸೇಪ್ಟಿ ನೆಟ್ ಅಳವಡಿಸದೇ ಹಾಗೂ ಸೇಪ್ಟಿ ಬೆಲ್ಟ್, ಸೇಪ್ಟಿ ಹೆಲ್ಮೆಟ್ ನೀಡದೇ ತೀವ್ರ ನಿರ್ಲಕ್ಷವಹಿಸಿರುವುದೇ ಈ ಅನಾಹುತಕ್ಕೆ ಕಾರಣವಾಗಿರುತ್ತದೆ ಎಂಬಿತ್ಯಾದಿ
Crime Reported in: Traffic North Police Station
ದಿನಾಂಕ 18/19-07-2022 ರಂದು ರಾತ್ರಿ ವೇಳೆ KA-69-0492 ನಂಬ್ರದ ಲಾರಿಯನ್ನು ಅದರ ಚಾಲಕನಾದ ಬಸವರಾಜ್ ಕದಮ್ ಎಂಬಾತನು ಕೂಳೂರು ಸಮೀಪದ ವೀನು ಫರ್ನಿಚರ್ ಅಂಗಡಿ ಕಟ್ಟಡದ ಎದರು ರಾ.ಹೆ 66 ರ ರಸ್ತೆಯ ಡ ಬಾಗದ ಬಿಳಿ ಬಣ್ಣದ ಮಾರ್ಕಿಂಗ್ ಲೈನ್ ಮೇಲೆ ಯಾವುದೇ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸದೇ ಕೂಳೂರು ಜಂಕ್ಷನ್ ಕಡೆಗೆ ಮುಖ ಮಾಡಿ ಪಾರ್ಕ್ ಮಾಡಿ ನಿಲ್ಲಿಸಿದ್ದು, ದಿನಾಂಕ 19-07-2022 ರಂದು ಬೆಳಗ್ಗಿನ ಜಾವ 03:15 ಗಂಟೆಗೆ KA-27-B-4557 ನಂಬ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕನಾದ ಮೌಲಾಲಿ ಎಂಬಾತನು ಕೊಟ್ಟಾರ ಚೌಕಿ ಜಂಕ್ಷನ್ ಕಡೆಯಿಂದ ಕೂಳೂರು ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಾ.ಹೆ 66 ರ ವೀನು ಫರ್ನಿಚರ್ ಅಂಗಡಿ ಕಟ್ಟಡದ ಎದರಿನಲ್ಲಿ ಕೂಳೂರು ಜಂಕ್ಷನ್ ಕಡೆಗೆ ಮುಖ ಮಾಡಿ ಪಾರ್ಕ್ ಮಾಡಿ ನಿಲ್ಲಿಸಿದ್ದ KA-69-0492 ನಂಬ್ರದ ಲಾರಿಯ ಹಿಂಬಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ KA-27-B-4557 ನಂಬ್ರದ ಗೂಡ್ಸ್ ಲಾರಿಯ ಚಾಲಕನಾದ ಮೌಲಾಲಿ ಎಂಬಾತನಿಗೆ ಎರಡೂ ಕಾಲುಗಳ ಮೊಣಗಂಟಿಗೆ, ಎಡಕಾಲಿನ ಕೋಲುಕಾಲಿಗೆ ಚರ್ಮ ತರಚಿ ರಕ್ತಗಾಯ ಮತ್ತು ಬಲಕಾಲಿನ ಹಿಮ್ಮಡಿಗೆ ಮಾಂಸದೊಂದಿಗೆ ಚರ್ಮ ಕಿತ್ತು ಹೋದ ರೀತಿಯ ಗಂಭೀರ ಸ್ವರೂಪದ, ಮತ್ತು ಬಲಕಾಲಿನ ಹಿಮ್ಮಡಿಗೆ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.
Crime Reported in: CEN Crime PS Mangaluru City
ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಸರ್ವೇ ನಂಬ್ರ:97/3P6 ರಲ್ಲಿ 0.7.06 ಸೆಂಟ್ಸ್ ಮತ್ತು 97/3P7 ರಲ್ಲಿ 0.9.10 ಸೆಂಟ್ಸ್ ಜಾಗದಲ್ಲಿ 2-127/2 ಡೋರ್ ನಂಬ್ರದ 2 ಅಂತಸ್ತಿನ RCC ಮನೆ ಮತ್ತು ಒಟ್ಟು 0.16.70 ಸ್ಥಿರಾಸ್ತಿಯನ್ನು 1ನೇ ಆರೋಪಿ ಕಿರಣ್ ಕುಮಾರ್ ಅತ್ತೋಳಿಗೆ ಹೊಂದಿದ್ದು, 1ನೇ ಆರೋಪಿ ಕಿರಣ್ ಕುಮಾರ್ ಅತ್ತೋಳಿಗೆ ಮತ್ತು 2ನೇ ಆರೋಪಿ ದೀಕ್ಷಿತ್ ರಾಜ್ ಹಾಗೂ 3ನೇ ಆರೋಪಿ ಬಾಲಕೃಷ್ಣ ಸುವರ್ಣರೊಂದಿಗೆ ಶಾಮೀಲಾಗಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕನ್ನು ನಂಬಿಸಿ ಬ್ಯಾಂಕಿನಲ್ಲಿರುವ ಸಾರ್ವಜನಿಕರ ಹಣವನ್ನು ಲಪಟಾಯಿಸುವ ಸಮಾನ ಉದ್ದೇಶಹೊಂದಿ 1ನೇ ಆರೋಪಿಯ ಬಾಬ್ತು ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಸರ್ವೇ ನಂಬ್ರ 78-5B ರಲ್ಲಿ 0.22.90 ಸೆಂಟ್ಸ್ ಮತ್ತು ಸರ್ವೇ ನಂಬ್ರ:78-2A ರಲ್ಲಿ 0.05.60 ಸೆಂಟ್ಸ್ ಜಾಗ ಒಟ್ಟು 0.28.50 ಸೆಂಟ್ಸ್ ಖಾಲಿ ಜಾಗದಲ್ಲಿ 2-127/10ನೇ ಡೋರ್ ನಂಬ್ರದ 2 ಅಂತಸ್ತಿನ RCC ಮನೆ ಇರುವುದಾಗಿ ಸುಳ್ಳು ಸೃಷ್ಟಿಸಿದ ದಾಖಲಾತಿಯನ್ನು, 1ನೇ ಆರೋಪಿ 2ನೇ ಆರೋಪಿತನಿಗೆ ಜಾಗ ಮತ್ತು ಮನೆಯನ್ನು ಮಾರಾಟ ಮಾಡುತ್ತಿರುವುದಾಗಿ ಬ್ಯಾಂಕನ್ನು ನಂಬಿಸಿ ಸುಳ್ಳು ಸೃಷ್ಟಿಸಿದ ದಾಖಲಾತಿಯನ್ನು 2018ನೇ ಸಾಲಿನಲ್ಲಿ ಫಿರ್ಯಾದಿ DINESH KUMAR H R ಬ್ಯಾಂಕಿನ ಶಾಖಾಧಿಕಾರಿಯಾಗಿದ್ದ ರಾಜೇಂದ್ರ ವಿ ಮುಗಳಿಹಾಲರವರಿಗೆ ಪೂರೈಸಿ ದಿನಾಂಕ:14-05-2018ರ 2ನೇ ಆರೋಪಿತನ ಸಾಲದ ಅರ್ಜಿಯಂತೆ ಸಾಲದ ಪ್ರಪತ್ರಗಳಿಗೆ 2 ಮತ್ತು ಜಾಮೀನುದಾರ 3ನೇ ಆರೋಪಿಯ ಸಹಿ ಪಡೆದು ದಿನಾಂಕ:16-05-2018 ರಂದು 2ನೇ ಆರೋಪಿಗೆ ರೂ.39,90,000/- ಲಕ್ಷ ಹಣವನ್ನು ಮಂಜೂರು ಮಾಡಿರುತ್ತಾರೆ. ಬ್ಯಾಂಕಿನಿಂದ ಸಾಲ ಪಡೆದುಕೊಂಡ 2ನೇ ಆರೋಪಿ ಬ್ಯಾಂಕಿಗೆ ಸರಿಯಾಗಿ ಸಾಲದ ಕಂತನ್ನು ಕಟ್ಟದೆ ಸತಾಯಿಸುತ್ತಿದ್ದು, ಸಾಲ ಮರು ಪಾವತಿಸುವಂತೆ ಬ್ಯಾಂಕಿನ ಅಧಿಕಾರಿಯವರು ಒತ್ತಾಯಿಸಿದಾಗ ಸಾಲಕ್ಕೆ ಅಡಮಾನ ಇಟ್ಟ ಮನೆಯಿರುವ ಸ್ಥಿರಾಸ್ತಿಯನ್ನು ಮಾರಾಟ ಮಾಡಿ ಸಾಲವನ್ನು ಚುಕ್ತ ಮಾಡುವುದಾಗಿ ಬ್ಯಾಂಕಿನವರನ್ನು ಪುನಃ ನಂಬಿಸಿ ಬ್ಯಾಂಕಿನ ಗ್ರಾಹಕರಾದ ವಿನೋದ್ ರವರಿಗೆ ಸದ್ರಿ 2ನೇ ಆರೋಪಿತ ಬ್ಯಾಂಕಿಗೆ ಈಗಾಗಲೇ ಸಾಲಕ್ಕಾಗಿ ಅಡಮಾನ ಇರಿಸಿರುವ ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಸರ್ವೇ ನಂಬ್ರ 78-5B ರಲ್ಲಿ 0.22.90 ಸೆಂಟ್ಸ್ ಮತ್ತು ಸರ್ವೇ ನಂಬ್ರ:78-2A ರಲ್ಲಿ 0.05.60 ಸೆಂಟ್ಸ್ ಜಾಗ ಒಟ್ಟು 0.28.50 ಸೆಂಟ್ಸ್ ಖಾಲಿ ಜಾಗದಲ್ಲಿ 2-127/10ನೇ ಡೋರ್ ನಂಬ್ರದ 2 ಅಂತಸ್ತಿನ RCC ಮನೆಯಿರುವ ಸ್ಥಿರಾಸ್ತಿಯನ್ನು ಮಾರಾಟ ಮಾಡುವುದಾಗಿ ತಿಳಿಸಿ ಮನೆಯಿರುವ ಯಾವುದೋ ಸ್ಥಿರಾಸ್ತಿಯನ್ನು ತಮ್ಮದೆಂದು ಬ್ಯಾಂಕಿನ ಗ್ರಾಹಕರಾದ ವಿನೋದ್ ಮತ್ತು ವಿನಯ್ ರವರಿಗೆ ತೋರಿಸಿ ನಂಬಿಸಿದಂತೆ ವಿನೋದ್ ಮತ್ತು ವಿನಯ್ ಮನೆಯಿರುವ ಸ್ಥಿರಾಸ್ತಿಯನ್ನು ಖರೀದಿಸುವರೇ ಗೃಹ ಸಾಲಕ್ಕಾಗಿ ದಿನಾಂಕ:11-11-2019 ರಂದು ಸಲ್ಲಿಸಿದ ಜಂಟಿ ಅರ್ಜಿಯಂತೆ ಮ್ಯಾನೇಜರ್ ಸಾಲದ ಪ್ರಪತ್ರಗಳಿಗೆ ವಿನೋದ್ ಮತ್ತು ವಿನಯ್ ಹಾಗೂ ಜಾಮೀನುದಾರರ ಸಹಿ ಪಡೆದು ದಿನಾಂಕ:13-11-2019 ರಂದು ವಿನೋದ್ ಮತ್ತು ವಿನಯ್ ರವರಿಗೆ ರೂ.39,00,000/- ಲಕ್ಷ ಸಾಲ ಮಂಜೂರು ಮಾಡಿಧ ಹಣದಿಂದಲೇ 2ನೇ ಆರೋಪಿಯ ಸಾಲವನ್ನು ಮುಕ್ತಾಯಗೊಳಿಸಿ ಬ್ಯಾಂಕಿಗೆ ಮತ್ತು ಗ್ರಾಹಕರಾದ ವಿನೋದ್ ಮತ್ತು ವಿನಯ್ ರವರಿಗೆ ಅಪರಾಧಿಕ ನಂಬಿಕೆ ದ್ರೋಹ ಎಸಗಿ ಬ್ಯಾಂಕಿಗೆ ಭಾರಿ ನಷ್ಟವನ್ನುಂಟು ಮಾಡಿರುವುದಾಗಿದೆ ಎಂಬಿತ್ಯಾದಿ.
Crime Reported in: : Mangalore East Traffic PS
ದಿನಾಂಕ 18-07-2022 ರಂದು ಫಿರ್ಯಾದಿದಾರರಾದ ಶ್ರೀಧರ್ ರವರು ತನ್ನ ಬಾಬ್ತು KA-19-HA-8825 ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಜ್ಯೋತಿ ಜಂಕ್ಷನ್ ಕಡೆಯಿಂದ ಅತ್ತಾವರ ಕಡೆಗೆ ಹೊರಟು ಸಮಯ ಸುಮಾರು 18-30 ಗಂಟೆಗೆ ಆವೇರಿ ಜಂಕ್ಷನ್ ಬಂದು ತಲುಪಿ ರಸ್ತೆ ಮಧ್ಯದ ಬ್ಯಾರಿಕೇಡ್ ಬಳಿ ಯುನಿಟಿ ಆಸ್ಪತ್ರೆ ಕಡೆಯಿಂದ ಮಿಲಾಗ್ರಿಸ್ ಕಡೆಗೆ ಸಾಗುತಿದ್ದ ವಾಹನಗಳನ್ನು ಗಮನಿಸಿ ಮೋಟಾರು ಸೈಕಲನ್ನು ನಿಲ್ಲಿಸಿಕೊಂಡು ಇದ್ದಾಗ ಅದೇ ವೇಳೆಗೆ ಮಿಲಾಗ್ರಿಸ್ ಕಡೆಯಿಂದ ಆವೇರಿ ಜಂಕ್ಷನ ಕಡೆಗೆ KA-19-ML-8174 ನೋಂದಣಿ ನಂಬ್ರದ ಕಾರನ್ನು ಅದರ ಚಾಲಕಿಯಾದ ಶ್ರೀಮತಿ ಫ್ಲೋರಿನ್ ಡಿ ಸೋಜಾ ರವರು ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲಿನ ಹಿಂಬದಿ ಬಲ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿಂತಿದ್ದ ಮೋಟಾರು ಸೈಕಲ್ ಮುಂದಕ್ಕೆ ಚಲಿಸಿ ಬಿದ್ದಿದ್ದು ಫಿರ್ಯಾದುದಾರರು ಕೊಡ ರಸ್ತೆ ಮೇಲೆ ಬಿದ್ದ ವೇಳೆ ಕಾರು ಚಲಾಯಿಸುತಿದ್ದ ಫ್ಲೂರಿನ್ ಡಿ ಸೋಜಾ ರವರಿಗೆ ಕಾರನ್ನು ನಿಯಂತ್ರಿಸ ಲಾಗದೆ ಫಿರ್ಯಾದಿದಾರರ ಎಡ ಕಾಲಿನ ಮೇಲೆ ಹಾದು ಹೋಗಿರುತ್ತದೆ. ಅಪಘಾತದಲ್ಲಿ ಗಾಯಾಳುವಿಗೆ ಎಡ ಕಾಲಿನ ಪಾದದ ಮೇಲ್ಭಾಗದ ಮುಳೆ ಮುರಿತದ ಗಾಯ, ಬಲ ಕಾಲು ಮೊಣಕಂಟಿನ ಮೇಲೆ ತರಚಿದ ಗಾಯ, ಮುಗಿನ ಮಧ್ಯ , ಹಣೆ ಮಧ್ಯ ಮತ್ತು ಮುಖದ ಬಲ ಭಾಗದಲ್ಲಿ ತರಚಿದ ಗಾಯ, ಸೋಂಟಕ್ಕೆ ಗುದ್ದಿದ ನಮೂನೆಯ ಗಂಭಿರ ಗಾಯ ಉಂಟಾಗಿದ್ದು ಅಪಘಾತ ಪಡಿಸಿದ ಕಾರು ಚಾಲಕಿ ಗಾಯಾಳನ್ನು ಹತ್ತಿರದ ಅಥೆನಾ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು ಅಲ್ಲಿನ ವೈದ್ಯರು ಪರಿಕ್ಷಿಸಿ ಒಳ ರೋಗಿಯಾಗಿ ಚಿಕಿತ್ಸೆ ನಿಡುತಿರುತ್ತಾರೆ.
Crime Reported in: Mangalore Rural PS
ದಿನಾಂಕ: 18-07-2022 ರಂದು ರಾತ್ರಿ 21.00 ಗಂಟೆಗೆ ಮಂಗಳೂರು ತಾಲೂಕು ಅರ್ಕುಳ ಹತ್ತಿರ ಸಾರ್ವಜನಿಕ ಸ್ಥಳದ ಬಳಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಮೊಹಮ್ಮದ್ ಅಫೀಜ್ (21) ವಾಸ-ಕುಂಪನ ಮಜಲು ಫರಂಗಿಪೇಟೆ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ.
Crime Reported in: Kankanady Town PS
ಪಿರ್ಯಾದಿ Harsha.S KA 53 HC 3838 ನೇ ಕಂದು ಬಣ್ಣದ ರಾಯಲ್ ಎನ್ ಫೀಲ್ಡ್ ಬುಲೆಟ್ ಮೊಟಾರು ಸೈಕಲ್ ನ ಮಾಲೀಕರಾಗಿದ್ದು, ದಿನಾಂಕ: 14.07.2022 ರಂದು ಮಂಗಳೂರು ನಿಂದ ಅವರ ಮನೆ ಬೆಂಗಳೂರಿಗೆ ಹೋಗಲಿದ್ದರಿಂದ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಸಂಜೆ 18:50 ಗಂಟೆಗೆ ಪಾರ್ಕಿಂಗ್ ಮಾಡಿ, ಪಾರ್ಕಿಂಗ್ ಮಾಡಿದ ಬಗ್ಗೆ ಚೀಟಿಯನ್ನು ಪಡೆದು ಬೆಂಗಳೂರಿಗೆ ಹೋಗಿರುತ್ತಾರೆ. ದಿನಾಂಕ 18-07-2022 ರಂದು ಬೆಳಿಗ್ಗೆ 07.00 ಗಂಟೆಗೆ ಬೆಂಗಳೂರು ನಿಂದ ವಾಪಾಸು ರೈಲ್ ನಲ್ಲಿ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಬಂದು ನೋಡಿದಾಗ ಪಾರ್ಕ್ ಮಾಡಿದ ಸ್ಥಳದಲ್ಲಿ ಬುಲೆಟ್ ಮೋಟಾರು ಸೈಕಲ್ ಕಾಣೆಯಾಗಿದ್ದು, ಯಾರೋ ಕಳ್ಳರು ಪಿರ್ಯಾದಿದಾರರ ಬುಲೆಟ್ ಮೊಟಾರು ಸೈಕಲನ್ನು ದಿನಾಂಕ14.07.2022 ರಂದು ಸಂಜೆ 18:50 ಗಂಟೆಯಿಂದ ದಿನಾಂಕ 18.07.2022 ರ ಬೆಳಿಗ್ಗೆ 07:00 ಗಂಟೆಯ ಮದ್ಯಾವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಬುಲೆಟ್ ಮೊಟಾರು ಸೈಕಲಿನ ಅಂದಾಜು ಮೌಲ್ಯ ರೂ. 99,000/- ಆಗಬಹುದು ಎಂಬಿತ್ಯಾಧಿ.
Crime Reported in: Bajpe PS
ಪಿರ್ಯಾದಿ Raviraj Acharya ದಿನಾಂಕ 17.07.2022 ರಂದು ರಾತ್ರಿ 9.15 ಗಂಟೆಗೆ ತನ್ನ ಬಾಬ್ತು ಕಾರು ನಂ KA19M9543 ನೇ ದರಲ್ಲಿ ಪಿರ್ಯಾದಿದಾರರ ಪತ್ನಿ ಹಾಗೂ ಮಕ್ಕಳೊಂದಿಗೆ ಮದುವೆ ಕಾರ್ಯಕ್ರಮವನ್ನು ಮುಗಿಸಿ ಮನೆಗೆ ಬರುತ್ತಿರುವ ಸಮಯ ಠಾಣಾ ವ್ಯಾಪ್ತಿಯ ಮಂಗಳೂರು ತಾಲೂಕು ಗುರುಪುರ ಭಾಮಿ ಶಾಲೆ ಬಳಿ ತಲುಪಿದಾಗ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಗುರುಪುರ ಕಡೆಗೆ ಬಂದ ಪಿಕಪ್ ವಾಹನವನ್ನು ಅದರ ಚಾಲಕನು ವೇಗವಾಗಿ ಚಾಲಾಯಿಸಿಕೊಂಡು ಬಂದು ಬಾಮಿ ಸ್ಕೂಲ್ ಬಳಿ ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರ ಕಾರಿನ ಮುಂಬಾಗಕ್ಕೆ ಡಿಕ್ಕಿಪಡಿಸಿದನು.ಡಿಕ್ಕಿಯ ರಭಸಕ್ಕೆ ಕಾರಿನ ಮುಂಬಾಗ ಜಖಂಗೊಂಡಿರುತ್ತದೆ ಅಲ್ಲದೆ ಪಿರ್ಯಾದಿದಾರರಿಗೆ ತಲೆಯ ಬಲಭಾಗ ಮತ್ತು ಬೆರಳಿಗೆ ರಕ್ತಗಾಯವಾಗಿರುತ್ತದೆ ಎಂಬಿತ್ಯಾದಿಯಾಗಿದೆ.