ಅಭಿಪ್ರಾಯ / ಸಲಹೆಗಳು

Crime Reported  in Konaje PS     

ದಿನಾಂಕ 18-08-2021 ರಂದು ಪಿರ್ಯಾದಿ Sharanappa Bhandari PSI ದಾರರು  ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಧ್ಯಾಹ್ನ ಸುಮಾರು 13:30 ಗಂಟೆಗೆ ಮಂಗಳೂರು ತಾಲೂಕು ಹರೇಕಳ ಗ್ರಾಮದ ಹರೇಕಳ ಪಂಚಾಯತ್ ಬಳಿಯಲ್ಲಿ ಹರೇಕಳದಿಂದ ಕಡವಿನ ಬಳಿ ಕಡೆಗೆ ಹೋಗುವ ರಸ್ತೆ ಬದಿಯಲ್ಲಿ ಧೂಮಪಾನ ಮಾಡಿ, ಪೊಲೀಸರನ್ನು ಕಂಡು ಗಾಬರಿಯಿಂದ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆತನು ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

2) ಪಿರ್ಯಾದಿ Muneer Ahammad ದಾರರು ನೌಶಿನಾ ಬಾನು ಎಂಬವಳನ್ನು ಸುಮಾರು 05 ವರ್ಷಗಳ ಹಿಂದೆ ಮದುವೆ ಆಗಿದ್ದು ಒಂದು ಗಂಡು ಮಗು ಇರುತ್ತದೆ ಮದುವೆಯಾಗಿ 2-3 ತಿಂಗಳ ನಂತರ ಸಣ್ಣ ಪುಟ್ಟ ವಿಷಯಗಳಿಗೆ ಅವರೊಳಗೆ ಜಗಳವಾಗುತಿದ್ದು  ಪಿರ್ಯಾದಿದಾರರ ಪತ್ನೀಯು ಪಿರ್ಯಾದಿದಾರರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡುತಿದ್ದುದ್ದಲ್ಲದೆ ನಿನ್ನೆ ದಿನ ದಿನಾಂಕ 17.08.2021 ಸಂಜೆ 17.30 ಗಂಟೆಗೆ ಆರೋಪಿಗಳಾದ  ನೌಶಿನಾಳ ತಂದೆ ಉಮ್ಮರಬ್ಬ   ಅವಳ  ಅಣ್ಣಂದಿರಾದ ನಜೀಬ್ ರಹಿಮಾನ್ , ಆಶಿಬ್ ರೆಹಿಮಾನ್  ,ನೌಷಾದ್  ಮತ್ತು ಅವಳ ಸಂಬಂಧಿಕರು ಕೆಎ 41 ಝೆಡ್  6978 ನೇ ರಿಟ್ಜ್ ಕಾರಿನಲ್ಲಿ ಪಿರ್ಯಾದಿದಾರರ ಮನೆ Samanige House Assaigoli  ಬಂದು ಪಿರ್ಯಾದಿದಾರರ ಪತ್ನಿ ನೌಶಿನಾಳ ಜೊತೆ ಸೇರಿ ಪಿರ್ಯಾದಿದಾರರು ಸಂಜೆ 17.45 ಗಂಟೆಗೆ  ಮನೆಗೆ ಬಂದಾಗ ಅವರನ್ನು ತಡೆದು ಆರೋಪಿ ಉಮ್ಮರಬ್ಬನು ಹಿಂದಿನಿಂದ ಹಿಡಿದು ಆರೋಪಿತರಾದ ನಜೀಬ್ ರಹಿಮಾನ್  ನು ತಲೆಗೆ ಮುಷ್ಠಿ ಹಿಡಿದು ಗುದ್ದಿ ನೌಶಿನಾಳು ಕೈಯಿಂದ ಪಿರ್ಯಾದಿದಾರರ ಕೈಗೆ ಹಲ್ಲೆ ನೆಡೆಸಿದಲ್ಲದೆ ಆಕೆಯ  ಅಣ್ಣಂದಿರಾದ ಆಶಿಬ್ ರೆಹಿಮಾನ್ ಮತ್ತು ನೌಷಾದ್ ರವರು ಕಬ್ಬಿಣದ ರಾಡ್ ನಿಂದ ಮೈಗೆ ಹೊಡೆದು  “ಬೇವರ್ಸಿ … ಮಗ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ಬೈದು   ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನೆಡೆಸಿರುದಾಗಿದೆ ಎಂಬಿತ್ಯಾದಿ

Crime Reported  in Traffic South PS

ದಿನಾಂಕ :18.08.2021 ರಂದು ಪಿರ್ಯಾದಿದಾರರಾದ ಹಾಮದ್ ಬಾವ  (22) ರವರು ತಮ್ಮ ಮನೆಯಿಂದ ಸ್ಕೂಟರ್ ನಂಬ್ರ :KA-19-HA-3480 ನೇದರಲ್ಲಿ ತಮ್ಮ ಅಣ್ಣನಾದ ಮಹಮ್ಮದ್ ಹುಸೇನ್ ಸವಾರನಾಗಿ ಪಿರ್ಯಾದಿದಾರರು ಸಹಸವಾರನಾಗಿ  ವಾಮಂಜೂರಿಗೆ ವಿದ್ಯುತ್ ಬಿಲ್ ತುಂಬಲು ಹೊಗುತ್ತೀರುವ ಸಮಯ ಸುಮಾರು ಬೆಳ್ಳಿಗ್ಗೆ 11:00 ಗಂಟೆಗೆ ವಾಮಂಜೂರಿನ ದೇವರ ಪದವು ಬಳಿ ತಲುಪಿ  ರಾ ಹೆ 169 ಮುಖ್ಯರಸ್ತೆಗೆ ಬರಲು ತಮ್ಮ ಸ್ಕೂಟರ್ ನ್ನು ನಿಲ್ಲಿಸಿಕೊಂಡಿರುವಾಗ  ವಾಮಂಜೂರು ಕಡೆಯಿಂದ ಬರುತ್ತಿದ್ದ ಪಿಕಪ್ ವಾಹನ ನಂಬ್ರ: KA-19-B-1229 ಅದರ ಚಾಲಕ ಸೋಹನ್ ಡಿಸೋಜಾ ರವರು ಪಿಕಪ್ ವಾಹನವನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರ ಹಾಗೂ ಅವರ ಅಣ್ಣ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಗಾಲಿನ ಕೋಲು ಮೂಳೆಮುರಿತದ ಗಾಯ ಹಾಗೂ ಬಲಬದಿ ಕಣ್ಣಿನ ಹುಬ್ಬಿಗೆ ರಕ್ತಗಾಯ ಗಾಯವಾಗಿದ್ದು, ಪಿರ್ಯಾದಿದಾರರ ಅಣ್ಣನಿಗೆ ಯಾವುದೇ ಗಾಯಗಳಾಗಿರುವುದಿಲ್ಲ  ಗಾಯಳು ಹಾಮದ್ ಬಾವ ರವರನ್ನು ಅವರ ಅಣ್ಣ ಮಹಮ್ಮದ್ ಹುಸೇನ್ ರವರು ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾಧಿ

Crime Reported  in Mangalore South PS

ದಿನಾಂಕ 16-08-2021ರಂದು ಬೆಳಿಗ್ಗೆ 06-30 ಗಂಟೆಯಿಂದ ಬೆಳಿಗ್ಗೆ 09-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ  ಅತ್ತಾವರ ಮಿಲಾಗ್ರೀಸ್ ಮೊತ್ತಿಮಹಲ್ ಹೋಟೆಲ್ ಹಿಂಭಾಗ, ಪಿರ್ಯಾದುದಾರರಾದ ಕ್ಸೇವಿಯರ್  ವಿ. ಜಾರ್ಜ್ ರವರ ಮನೆಯ ಕಂಪೌಂಡಿನಲ್ಲಿ ಪಾರ್ಕ್ ಮಾಡಿಟ್ಟಿದ್ದ 04/2012 ನೇ ಮೊಡಲ್ ನ ಬಿಳಿ ಬಣ್ಣದ KA19EF0472  ನೊಂದಣಿ ನಂಬ್ರದ CHASSIS NO. ME4JC448DC7312465, ENG NO. JC4E5312675  ದ  ಅಂದಾಜು ಮೌಲ್ಯ 18,000/- ಬೆಲೆ ಬಾಳುವ ಹೊಂಡಾ ಆಕ್ಟಿವಾ ದ್ಚಿಚಕ್ರ ವಾಹನವನ್ನ ಕಳವು ಮಾಡಿಕೊಂಡು ಹೋಗಿರುವುದಾಗಿದೆ.

Crime Reported  in Kankanady Town PS

ದಿನಾಂಕ 18/08/2021 ರಂದು ರಾತ್ರಿ 7.00 ಗಂಟೆಗೆ ಕಂಕನಾಡಿ ನಗರ ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕ ರಘು ನಾಯಕ, ರವರಿಗೆ ಮಂಗಳೂರು ನಗರದ ಪದವು ಗ್ರಾಮದ ಕುಲಶೇಖರ ಚೌಕಿ ಎಂಬಲ್ಲಿರುವ ಕಾಂಚನಾ ಗಂಗಾ ಟ್ರೇಡರ್ಸ್ ಎಂಬ ಗೋದಾಮಿನ ಕೊಠಡಿಯಲ್ಲಿ ಆಲ್ವಿನ್ ಪಿಂಟೋ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಸ್ಪೋಟಕ ವಸ್ತುವಾದ ಪಟಾಕಿಯನ್ನು ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಅಕ್ರಮವಾಗಿ ದಸ್ತಾನು ಇರಿಸಿಕೊಂಡಿರುವುದಾಗಿ ಬಂದ ಮಾಹಿತಿ ಮೇರೆಗೆ ರಾತ್ರಿ 8.00 ಗಂಟೆಗೆ ದಾಳಿ ನಡೆಸಿ ಅಲ್ವೀನ್ ಪಿಂಟೋ ಎಂಬಾತನು ಯಾವುದೇ ಸುರಕ್ಷತಾ ಕ್ರಮವನ್ನು ಅನುಸರಿಸದೇ ಅಸುಪಾಸು ಜನ ವಸತಿ ಇರುವ ಕುಲಶೇಖರ ಚೌಕಿ ಬಳಿ ಇರುವ ಕಾಂಚನಾ ಗಂಗಾ ಟ್ರೇಡರ್ಸ್ ಎಂಬ ಹೆಸರಿನ ಮೊಟ್ಟೆ ದಾಸ್ತಾನು ಇಡುವ ಗೋದಾಮಿನ ಕೊಠಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡಿ ಹಣಗಳಿಸುವ ಉದ್ದೇಶದಿಂದ ಅಕ್ರಮವಾಗಿ ದಾಸ್ತಾನು ಇರಿಸಿದ್ದ  ವಿವಿಧ  ಹೆಸರಿನ ಸುಮಾರು 4,31,630/- ರೂಪಾಯಿ  ಮೌಲ್ಯದ ಸ್ಫೋಟಕ ವಸ್ತುವಾದ ಪಟಾಕಿಗಳನ್ನು ಮಹಜರು ಮುಖೇನಾ ಸ್ವಾಧೀನ ಪಡಿಸಿಕೊಂಡಿರುವುದಾಗಿದೆ.

Crime Reported  in Moodabidre PS

ದಿನಾಂಕ: 17-08-2021 ರಂದು ಮಂಜುನಾಥ ಎಂಬುವರು ಮೋಟಾರು ಸೈಕಲ್ ನಂ ಕೆಎ-20 ವೈ-2250 ನೇದರಲ್ಲಿ ಸಹಸವಾರನಾಗಿ ಕುಳಿತುಕೊಂಡು ಮೂಡಬಿದ್ರೆ ಕಡೆಯಿಂದ ಕೆಸರುಗದ್ದೆ ಕಡೆಗೆ ಬರುತ್ತಾ ಮದ್ಯಾಹ್ನ 14.45 ಗಂಟೆಗೆ ಬೆಳುವಾಯಿ ಗ್ರಾಮದ ಕೆಸರುಗದ್ದೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಬೆಳುವಾಯಿ ಕಡೆಗೆ ಮೋಟಾರು ಸೈಕಲ್ ನಂಬ್ರ ಕೆಎ-09 ಇಕ್ಯೂ-6182 ನೇದನ್ನು ಅದರ ಸವಾರ ರಂಜಿತ್ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಮಂಜುನಾಥರವರು ಸವಾರಿ ಮಾಡುತ್ತಿದ್ದ  ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರ ಮತ್ತು ಸಹಸವಾರ ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು ಪಿರ್ಯಾದಿದಾರರು ಹಾಗೂ ಸವಾರ ಗಾಯಗೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 19-08-2021 04:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080