Crime Reported in Urva PS
ದಿನಾಂಕ 19-11-2021 ರಂದು ಮುಂಜಾನೆ 01-30 ಗಂಟೆ ಸುಮಾರಿಗೆ ಪಿರ್ಯಾದಿ Rohan Listen Dsouza ದಾರರ ಬಾಬ್ತು KA-19-D-2607 ನೇ ಮಜ್ಡ ವಾಹನವನ್ನು ಹಾಗೂ ಪಿರ್ಯಾದಿದಾರರ ವಾಹನದ ಹಿಂಬದಿ ಸುಜೀರ್ ಎಂಬವರ ಬಾಬ್ತು KA-19-ME-7161 ನೇ ಆಲ್ಟೋ 800 ಕಾರನ್ನು ಮಂಗಳೂರು ನಗರದ ಕೋಡಿಕಲ್ ಮುಖ್ಯ ರಸ್ತೆಯ 5ನೇ ಅಡ್ಡರಸ್ತೆಗೆ ಸೇರುವಲ್ಲಿ ವಾಹನಗಳನ್ನು ಪಾರ್ಕ ಮಾಡಿದ್ದು ಸದರಿ ಎರಡು ವಾಹನಗಳ ಮುಂಭಾಗದ ಗ್ಲಾಸ್ ನ್ನು ಯಾವುದೋ ಹತ್ಯಾರಿನಿಂದ ಹೊಡೆದು ಹಾನಿಗೊಳಿಸಿದ್ದು ಇದರಿಂದ ಪಿರ್ಯಾದಿದಾರರಿಗೆ ರೂಪಾಯಿ 5000/- ಹಾಗೂ ಸುಜೀರ್ ರವರಿಗೆ ರೂಪಾಯಿ 4000/- ರಷ್ಟು ನಷ್ಟ ಉಂಟಾಗಿರುವುದಾಗಿದೆ. ಆ ಸಮಯ ಶಬ್ದ ಕೇಳಿ ವಾಹನದಲ್ಲಿ ಮಲಗಿದ್ದ ಪಿರ್ಯಾದಿದಾರು ಹೊರ ಬಂದ ಪಿರ್ಯಾದಿದಾರರು ಒರ್ವ ದೃಡಕಾಯ ಬೊಕ್ಕ ತಲೆಯ ವ್ಯಕ್ತಿ ಕೋಡಿಕಲ್ ಕಟ್ಟೆ ಕಡೆಗೆ ಓಡುತ್ತಿರುವುದನ್ನು ನೋಡಿರುವುದಾಗಿದೆ
2) ಪಿರ್ಯಾದು Manu Mathew ದಾರರು ಬಜಾಜ್ ಪಿನ್ ಸರ್ವ್ ನಲ್ಲಿ ಸೇಲ್ಸ್ ಆಫಿಸರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 14-11-2021 ರಂದು ಬೆಳಿಗ್ಗೆ 11.10 ಗಂಟೆಗೆ ತಮ್ಮ ಬಾಬ್ತು 2017 ಮಾದರಿಯ KA19EU8548 ಕಪ್ಪು ಬಣ್ಣದ NS200 ನೇ ಬೈಕನ್ನು ಬಿಜೈ ಕಾಪಿಕಾಡ್ ರಸ್ತೆಯಲ್ಲಿರುವ ಜಯಲಕ್ಷ್ಮಿ ಸಿಲ್ಕ್ ಅಂಗಡಿಯ ಮುಂದೆ ಮುಖ್ಯ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿ ಭಾರತ್ ಮಾಲ್ ನ ಬಿಗ್ ಬಜಾರ್ ಗೆ ಹೋಗಿ ಅಪರಾಹ್ನ 01.15 ಗಂಟೆಗೆ ವಾಪಾಸು ಬಂದು ನೋಡಿದಾಗ ಬೈಕ್ ಪಾರ್ಕ್ ಮಾಡಿದ ಸ್ಥಳದಲ್ಲಿ ಇರದೇ ಇದ್ದು ಆಸುಪಾಸಿನಲ್ಲಿ ವಿಚಾರಿಸಿ ಎಲ್ಲಾ ಕಡೆ ಹುಡುಕಾಡಿ ಸಿಗದೇ ಇದ್ದ ಕಾರಣ ದಿನಾಂಕ 19-11-2021 ರಂದು ಪಿರ್ಯಾದುದಾರರು ತಮ್ಮ ಬೈಕ್ ನ್ನು ಯಾರೂ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ಪಿರ್ಯಾದಿಯಾಗಿರುತ್ತದೆ ಹಾಗೂ ಕಳವಾದ ಬೈಕ್ ನ ಅಂದಾಜು ಮೌಲ್ಯ ರೂ 40,000/- ಆಗಬಹುದು ಎಂಬಿತ್ಯಾದಿ.
Crime Reported in Mangalore East PS
ಮಂಗಳೂರು ಪೂರ್ವ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಅನಿತಾ ನಿಕ್ಕಂ ರವರು ದಿನಾಂಕ: 18-11-2021 ರಂದು ರಾತ್ರಿಯ ವಿಶೇಷ ರೌಂಡ್ಸ್ ಕರ್ತವ್ಯದ ಬಗ್ಗೆ ಠಾಣಾ ಪಿ.ಸಿ.ಆರ್ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ದಿನಾಂಕ: 19-11-2021 ರಂದು ಬೆಳಗ್ಗಿನ ಜಾವ ಸುಮಾರು 02.30 ಗಂಟೆ ವೇಳೆಗೆ ಮಂಗಳೂರು ನಗರದ ಬಲ್ಮಠದ ಆರ್ಯಾ ಸಮಾಜ ರಸ್ತೆಯಲ್ಲಿರುವ ಗೂಡಂಗಡಿ ಬಳಿ ಇಬ್ಬರು ತಮ್ಮ ಇರುವಿಕೆಯನ್ನು ಮರೆಮಾಚಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದನ್ನು ಕಂಡು ಸಂಶಯಗೊಂಡು ಟಾರ್ಚ್ ಬೆಳಕಿನ ಸಹಾಯದಿಂದ ಅವರ ಹತ್ತಿರ ಹೋಗುವಷ್ಟ ರಲ್ಲಿ ಓಡಿ ಹೋಗಲು ಪ್ರಯತ್ನಿಸಿದವರನ್ನು ಸಿಬ್ಬಂದಿಯವರು ಹಿಡಿದು ವಿಚಾರಿಸಿದಾಗ ಅವರ ಹೆಸರು ಸೃಷ್ಠೀಧರ್ ಸಿಂಗ್ @ ಸುಬೋಲ್ ಸಿಂಗ್ ಪ್ರಾಯ 21 ವರ್ಷ ವಾಸ: ಮೂಡಕಂಟ ಗ್ರಾಮ, ಕೊಟಕಿ ಅಂಚೆ, ಪಶ್ಚಿಮಮಿಂದನಪುರ ಜಿಲ್ಲೆ, ಪಶ್ಚಿಮಬಂಗಾಳ ರಾಜ್ಯ, ಹಾಲಿ ವಾಸ ಕೇರ್ ಆಪ್: ಪಿಕ್ಸ್ ಹೊಟೇಲ್, ಬಲ್ಮಠ, ಮಂಗಳೂರು ಹಾಗೂ ದಿಲೀಪ್ ಸಿಂಗ್ ಪ್ರಾಯ 21 ವರ್ಷ ವಾಸ: ರಾಮ ಗ್ರಾಮ, ಲವಡೊಂಗರಿ ಅಂಚೆ, ಪಶ್ಚಿಮ ಮಿಂದನಪುರ, ಪಶ್ಚಿಮ ಬಂಗಾಳ ರಾಜ್ಯ ಹಾಲಿ ವಾಸ: ವೈಲ್ಡ್ ಸ್ಪಿರೀಟ್ ಹೊಟೇಲ್ ವಾಮಂಜೂರು ಎಂದು ತಿಳಿಸಿದ್ದು, ಇವರು ಅಪರ ವೇಳೆಯಲ್ಲಿ ಮೇಲಿನ ಸ್ಥಳದಲ್ಲಿ ಇದ್ದ ಬಗ್ಗೆ ವಿಚಾರಿಸಿದಾಗ ಸಮರ್ಪಕವಾದ ಉತ್ತರ ನೀಡದೇ ಇದ್ದುದ್ದರಿಂದ ಇವರು ಯಾವುದೋ ಬೇವಾರಂಟು ತಕ್ಷೀರನ್ನು ನಡೆಸುವ ಉದ್ದೇಶದಿಂದ ಸದ್ರಿ ಸ್ಥಳದಲ್ಲಿ ರಾತ್ರಿ ವೇಳೆ ಹೊಂಚು ಹಾಕುತ್ತಿರುವುದಾಗಿ ಇವನ ವರ್ತನೆಯಿಂದ ಬಲವಾದ ಸಂಶಯ ಬಂದಿದ್ದು, ಇವರನ್ನು ವಶಕ್ಕೆ ಪಡೆದು ಇವರ ವಿರುದ್ದ ಕಲಂ 96 ಕೆ.ಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
Crime Reported in Barke PS
ಪಿರ್ಯಾದಿ HARUN AQTHER ದಾರರು ಹಾಗೂ ಸಿಬ್ಬಂದಿಯವರಾದ ಬರ್ಕೆ ಠಾಣೆ ಹಾಗೂ ಉರ್ವಾ ಪೊಲೀಸ್ ಠಾಣಾ ಕಳವು ಪ್ರಕರಣಗಳಲ್ಲಿ ಮಂಗಳೂರು ನಗರದಲ್ಲಿ ಆರೋಪಿ ಪತ್ತೆ ಕಾರ್ಯಕ್ಕೆ ಮಂಗಳೂರು ಖಾಸಗಿ ವಾಹನದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದಾಗ ಪಿರ್ಯಾದಿದಾರರಿಗೆ 11.30 ಗಂಟೆಗೆ ಅಡ್ಯಾರ್ ಕಡೆಯಿಂದ ಕೆಎ03 ಎಮ್ ಟಿ 0300 ನೇ ಟೋಯೊಟಾ ಇನೋವಾ ಕಾರಿನಲ್ಲಿ ಭಾರತ ದೇಶ ರದ್ದು ಮಾಡಿದ 1000 ಮತ್ತು 500 ಮುಖ ಬೆಲೆಯ ನೋಟುಗಳನ್ನು ತೆಗೆದುಕೊಂಡು ಲಾಲ್ ಬಾಗ್ ಕಡೆ ಬರುತ್ತಿದ್ದಾರೆ ಎಂಬ ಮಾಹಿತಿಯಂತೆ ಕೆ.ಎಸ್.ಆರ್.ಟಿ.ಸಿ ಲಾಲ್ ಬಾಗ್ ಪರಿಸರದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆಎ03 ಎಮ್ ಟಿ 0300 ನೇ ಇನೋವಾ ಕಾರು ಲಾಲ್ ಬಾಗ್ ಕಡೆಯಿಂದ ನೆಹರೂ ಅವಿನ್ಯೂ ರಸ್ತೆಯಲ್ಲಿ ಸಾಗುತ್ತಿರುವುದನ್ನು ನೋಡಿ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಸದರಿ ಕಾರನ್ನು ಕೆನರಾ ಸ್ಕೂಲ್ ಬಳಿ ತಡೆದು ನಿಲ್ಲಿಸಿ ವಿಚಾರಿಸಿದಾಗ ಚಾಲಕ ಸೀಟಿನಲ್ಲಿದ್ದವರು ಜುಬೈರ್ ಹಮ್ಮಬ್ಬ ಎಂತಲೂ ಉಳಿದ ಇಬ್ಬರು ದೀಪಕ್ ಕುಮಾರ್ ಹಾಗೂ ಅಬ್ದುಲ್ ನಾಸೀರ್ ಎಂತಲೂ ತಿಳಿಸಿದ್ದು ಅವರನ್ನು ಕುಲಂಕೂಶವಾಗಿ ವಿಚಾರಿಸಲಾಗಿ ಕಾರಿನ ಹಿಂಬದಿಯ ಎರಡೂ ಬ್ಯಾಗಿನಲ್ಲಿ ರೂ. 1000 ಹಾಗೂ 500 ಮುಖ ಬೆಲೆಯ ಭಾರತ ದೇಶ ರದ್ದು ಮಾಡಿದ ನೋಟುಗಳಿದ್ದು ಇದರಲ್ಲಿ ಸುಮಾರು ಒಂದೂ ಮುಕ್ಕಾಲು ಕೋಟಿ ಇರುವುದಾಗಿಯೂ ಸದರಿ ನೋಟುಗಳನ್ನು ಬ್ರೋಕರಿಗಳಿಗೆ ನೀಡಿ ಕಮೀಷನ್ ಪಡೆದುಕೊಂಡು ಲಾಭಗಳಿಸುವುದಾಗಿಯೂ ಸದರಿ ಮೂರು ವ್ಯಕ್ತಿಗಳು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ಅಕ್ರಮ ಲಾಭಗಳಿಸುವ ಉದ್ದೇಶದಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಸದರಿ ಕಾರು ಹಾಗು ಅದರಲ್ಲಿದ್ದ ಮೂರು ಜನರನ್ನು ಕಾರಿನಲ್ಲಿದ್ದ 2 ಬ್ಯಾಗುಗಳನ್ನು ಯಥಾ ಸ್ಥಿತಿಯಲ್ಲಿ ವಶಕ್ಕೆ ಪಡೆದು ಆಪಾದಿತರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ.
Crime Reported in Mangalore East PS
ಮಂಗಳೂರು ನಗರದ ಬೆಸೆಂಟ್ ಬಳಿಯ ಮನೆಯಿಂದ ದಿನಾಂಕ: 12-11-2021 ರಂದು ಮಧ್ಯಾಹ್ನ 12-30 ಗಂಟೆ ಸಮಯಕ್ಕೆ ಪಿರ್ಯಾದಿ Somappa (38) ದಾರರು ಹೊರಗೆ ಕೂಲಿ ಕೆಲಸಕ್ಕೆ ಹೋಗಿದ್ದ ಸಮಯ ಪಿರ್ಯಾದಿದಾರರ ಪತ್ನಿ ಮತ್ತು 12 ವರ್ಷ ಪ್ರಾಯದ ಮಗ ಅಶೋಕ ಜೋತೆಗೆ ದೇವಸ್ಥಾನಕ್ಕೆಂದು ಮಕ್ಕಳಿಗೆ ಹೇಳಿ ಹೋದವರು ಇವರೆಗೂ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಪಿರ್ಯಾದಿದಾರರ ಪತ್ನಿ ಮತ್ತು ಮಗನನ್ನು ಪತ್ತೆ ಮಾಡಿ ಕೊಡಬೇಕು ಎಂಬಿತ್ಯಾದಿ.
ಕಾಣೆಯಾದ ಮನುಷ್ಯನ ವಿವರ ಈ ಕೆಳಗಿನಂತಿದೆ.
1) ಹೆಸರು : ಸೋಮವ್ವ
2) ಗಂಡ : ಸೋಮಪ್ಪ
3) ವಯಸ್ಸು : 30 ವರ್ಷ
4) ಎತ್ತರ : ‘5’ ft
5) ಚಹರೆ : ದಪ್ಪ ಮೈಕಟ್ಟು, ದುಂಡು ಮುಖ, ಎಡ ಕೈಯಲ್ಲಿ ಕಪ್ಪು ಎಳ್ಳು ಮಚ್ಚೆ
6) ಬಣ್ಣ : ಎಣ್ಣೆಗಪ್ಪು ಮೈ ಬಣ್ಣ
7) ಉಡುಪು : ಹಳದಿ ಟಿ-ಶರ್ಟ್, ಸ್ಯಾಂಡಲ್ ಕಲರ್ ಸ್ಯಾರ್ಟ್ಸ್.
8) ಭಾಷೆ : ಕನ್ನಡ, ಲಂಬಾಣಿ, ಹಿಂದಿ ಮಾತನಾಡುತ್ತಾರೆ.
9) ಕಾಣೆಯಾದ ಸ್ಥಳ:- : ಬಸ್ತಿಕಾರ್ ಅಂಗಡಿ ಹತ್ತಿರ, ಬೆಸೆಂಟ್ ಕಾಲೇಜ್ ಹತ್ತಿರ, ಕೊಡಿಯಾಲ್ ಬೈಲ್,
ಮಂಗಳೂರು.
ಕಾಣೆಯಾದ ಗಂಡು ಮಗುವಿನ ವಿವರ ಈ ಕೆಳಗಿನಂತಿದೆ.
1) ಹೆಸರು : ಅಶೋಕ್
2) ತಂದೆ : ಸೋಮಪ್ಪ
3) ವಯಸ್ಸು : 12 ವರ್ಷ
4) ಚಹರೆ : ದುಂಡು ಮುಖ
5) ಬಣ್ಣ : ಸಾಧಾರಣ ಬಿಳಿ ಮೈ ಬಣ್ಣ
6) ಕಾಣೆಯಾದ ಸ್ಥಳ:- : ಬಸ್ತಿಕಾರ್ ಅಂಗಡಿ ಹತ್ತಿರ, ಬೆಸೆಂಟ್ ಕಾಲೇಜ್ ಹತ್ತಿರ, ಕೊಡಿಯಾಲ್ ಬೈಲ್, ಮಂಗಳೂರು.
7) ಭಾಷೆ : ಲಂಬಾಣಿ ಮಾತನಾಡುತ್ತಾರೆ