ಅಭಿಪ್ರಾಯ / ಸಲಹೆಗಳು

Crime Reported in Traffic South PS

ದಿನಾಂಕ: 18-01-2022ರಂದು ಪಿರ್ಯಾದಿ ARUN KUMAR M ದಾರರ ಸ್ನೇಹಿತ ಸಚಿನ್ ರವರು ಅವರ ಮೋಟಾರ್ ಸೈಕಲ್ ನಂಬರ್ KA-19-EG-5862 ನೇದರಲ್ಲಿ ತೊಕ್ಕಟ್ಟು ಕಡೆಯಿಂದ ಮಂಗಳೂರು ಕಡೆಗೆ NH-66 ರಸ್ತೆಯಲ್ಲಿ ಸಮಯ ಸುಮಾರು 23:40  ಗಂಟೆಗೆ ಬರುತ್ತಿರುವಾಗ ಸವಾರ ಸಚಿನ್ ರವರು ನೇತ್ರಾವತಿ ಸೇತುವೆಯಲ್ಲಿ ಏಕಮುಖ ರಸ್ತೆಯಲ್ಲಿ ತಲುಪಿದಾಗ  ಸವಾರನು ಮೋಟಾರ್ ಸೈಕಲ್ ಅನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ರಸ್ತೆಯ ಬದಿಯ ಪಾದಚಾರಿ ರಸ್ತೆಗೆ ಮೋಟಾರ್ ಸೈಕಲ್ ಅನ್ನು ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ಪಿರ್ಯಾದಿದಾರರ ಸ್ನೇಹಿತ ಸಚಿನ್  ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ಹಿಂಬದಿ ಹಾಗೂ ತಲೆಯ ಬಲಬದಿಗೆ ಗುದ್ದಿದ ಗಂಭಿರ ಸ್ವರೂಪದ ರಕ್ತ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಆಂಬುಲೆನ್ಸ್ ಒಂದರಲ್ಲಿ ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ವತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ ಅವರನ್ನು ಪರಿಕ್ಷೀಸಿದ ವೈದ್ಯರು ಗಾಯಳು ಸಚಿನ್ ರವರು ಮಾರ್ಗದಲ್ಲೆ ಮೃತ ಪಟ್ಟಿರಯವುದಾಗಿ ತಿಳಿಸಿರುತ್ತಾರೆ ಈ ಅಪಘಾತಕ್ಕೆ ಮೋಟಾರ್ ಸೈಕಲ್ ನಂಬರ್ KA-19-EG-5862 ನೇದರ ಸವಾರ ಸಚಿನ್ ರವರೆ ಕಾರಣವಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ  ಎಂಬಿತ್ಯಾದಿ.

Crime Reported in Moodabidre PS      

ಪಿರ್ಯಾದಿ HARISH DEVADIGA ದಾರರ ಅಣ್ಣನಾದ ವಾಮನ ದೇವಾಡಿಗ ರವರು  ದಿನಾಂಕ: 19-01-2022 ರಂದು ಉಡುಪಿ ಯಕ್ಷಗಾನಕ್ಕೆ ಹೋದವರು ದಿನಾಂಕ: 20-01-2022 ರಂದು ತನ್ನ ಬಾಬ್ತು ಕೆಎ-21-ಎಕ್ಸ್-1074 ನೇ ಮೋಟಾರು ಸೈಕಲ್ ನಲ್ಲಿ ಉಡುಪಿಯಿಂದ ವಾಪಸ್ಸು ಮೂಡಬಿದ್ರೆ ಮಾರ್ಗವಾಗಿ ವೇಣೂರು ಕಡೆಗೆ ಹೊರಟಿದ್ದು ಬೆಳಿಗ್ಗೆ ಸಮಯ ಸುಮಾರು 06.30 ಗಂಟೆಗೆ ಕಲ್ಲಬೆಟ್ಟು ಎಂ ಕೆ ಶೆಟ್ಟಿ ಶಾಲೆಯ ಕ್ರಾಸ್ ಬಳಿ ತಲುಪುತ್ತಿದ್ದಂತೆ ವೇಣೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಕೆಎ-19-ಎಂಜಿ-0491 ನೇ ನಂಬ್ರದ ಕಾರನ್ನು  ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಮೋಟಾರು ಬೈಕ್ ಸವಾರನಿಗೆ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರು ಸೈಕಲ್ ಸಮೇತ ಸವಾರನು  ರಸ್ತೆಗೆ ಬಿದ್ದು ತೆಲೆಗೆ ಗಂಬೀರ ರೀತಿಯಲ್ಲಿ ಗಾಯವಾಗಿ ಮೃತಪಟ್ಟಿರುತ್ತಾರೆ,  ಈ ರಸ್ತೆ ಅಪಘಾತಕ್ಕೆ ಕೆಎ-19-ಎಂಜಿ-0491 ನೇ ನಂಬ್ರದ ಕಾರಿನ ಚಾಲಕನಾದ ತೌಸಿಫ್ ರವರ ನಿರ್ಲಕ್ಷತನದ ಮಾನವ ಜೀವಕ್ಕೆ ಅಪಾಯಕಾರಿಯಾದ  ಚಾಲನೆಯೇ ಕಾರಣವಾಗಿದ್ದು, ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೂಳ್ಳಬೇಕಾಗಿ ಎಂಬಿತ್ಯಾದಿ.

Crime Reported in Ullal PS

ಪಿರ್ಯಾದಿ Praveen B Nದಾರರು ಮೆಸ್ಕಾಂ ಕೋಟೆಕಾರ್ ಶಾಖೆಯ ಶಾಖಾಧಿಕಾರಿಯಾಗಿದ್ದು ದಿನಾಂಕ 17-01-2022 ಸಂಜೆ ಸುಮಾರು 5-30 ಗಂಟೆಗೆ ಕೋಟೆಕಾರ್ ಮೆಸ್ಕಾಂ ಶಾಖಾ ವ್ಯಾಪ್ತಿಯ ಫಿಜ್ಜಾ ಮೈದಾನದ ಬಳಿ ವಿದ್ಯುತ್ ಎಲ್.ಟಿ ಕಂಬಕ್ಕೆ ಕೆ.ಎ-04-ಸಿ-9167 ನೇ ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅಜಾಗರೂಕತೆಯಿಂದ ಹಾಗೂ ಅತಿ ವೇಗದಿಂದ ಚಲಾಯಿಸಿ ಡಿಕ್ಕಿ ಹೊಡಿಸಿದ ಕಾರಣವಿದ್ಯುತ್ ಕಂಬ ತುಂಡಾಗಿದ್ದು ಇದರಿಂದ ಮೆಸ್ಕಾಂ ಇಲಾಖೆಗೆ ಸುಮಾರು 22000/- ರೂ ನಷ್ಟ ಉಂಟಾಗಿರುತ್ತದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 20-01-2022 07:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080