ಅಭಿಪ್ರಾಯ / ಸಲಹೆಗಳು

Crime Reported in Mulki PS  

ದಿನಾಂಕ 19-04-2022 ರಂದು ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ವಿನಾಯಕ ತೋರಗಲ್ ರವರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಖಾಸಾಗೀ ವಾಹನದಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ 16-00 ಗಂಟೆಗೆ ಹೊರಟು ಮುಲ್ಕಿ ಕಾರ್ನಾಡು, ಕಿಲ್ಪಾಡಿ, ಕೆಂಚನಕೆರೆ ಕಡೆಗಳಲ್ಲಿ ಸಂಚರಿಸುತ್ತಾ 18-00 ಗಂಟೆಗೆ ಬಪ್ಪನಾಡು ಗ್ರಾಮದ ಮುಲ್ಕಿ ಶಾಂಭವಿ ಬ್ರಿಡ್ಜ್ ಬಳಿ ತಲುಪಿದಾಗ ಅಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಓರ್ವ ವ್ಯಕ್ತಿಯು ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡು ಬಂದಿದ್ದು, ಪಿರ್ಯಾದಿದಾರರು ವಾಹನವನ್ನು ನಿಲ್ಲಿಸಿ ಆತನ ಬಳಿ ತೆರಳುತ್ತಿದ್ದಂತೆ ಆತನು ಪೊಲೀಸರನ್ನು ಕಂಡು ಆತನ ಕೈಯಲ್ಲಿದ್ದ ಹೊಗೆಬತ್ತಿಯ ತುಂಡನ್ನು ಶಾಂಭವಿ ನದಿಗೆ ಬಿಸಾಡಿದ್ದು, ನಂತರ ಆತನ ಹೆಸರು, ವಿಳಾಸ ಕೇಳಲಾಗಿ ಸೈಪುಲ್ಲಾ ಯಾನೆ ಸೈಪುದ್ದೀನ್, ಪ್ರಾಯ: 26 ವರ್ಷ, ವಾಸ; ಕೇರಾಫ್ ಶೇಖ್ ಅಹಮ್ಮದ್ ರವರ ಬಾಡಿಗೆ ಮನೆ ಕೃಷ್ಣಾಪುರ 7ನೇ ಬ್ಲಾಕ್, ಕಾಟಿಪಳ್ಳ ಗ್ರಾಮ, ಮಂಗಳೂರು ತಾಲೂಕು ಎಂಬುದಾಗಿ ತಿಳಿಸಿರುತ್ತಾನೆ. ಬಳಿಕ ಆರೋಪಿಯನ್ನು ಮಂಗಳೂರು ಎ.ಜೆ ಆಸ್ಪತ್ರೆಯ ವೈದ್ಯರಿಂದ ಮಾಧಕ ವಸ್ತು ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆ ಗೊಳಪಡಿಸಿದ್ದು, ಆರೋಪಿ ಸೈಪುಲ್ಲಾ ಯಾನೆ ಸೈಪುದ್ದೀನ್   ನು ಗಾಂಜಾ ಸೇವನೆ ಮಾಡಿರುವುದಾಗಿ ಎ.ಜೆ. ಆಸ್ಪತ್ರೆಯ ವೈದ್ಯರು ದೃಡಪತ್ರವನ್ನು ನೀಡಿರುತ್ತಾರೆ. ಈ ದೃಡಪತ್ರವನ್ನು ಸ್ವೀಕರಿಸಿಕೊಂಡು ಆರೋಪಿಯ ವಿರುದ್ದ ಕ್ರಮಕ್ಕಾಗಿ ದೂರು ನೀಡಿರುವುದಾಗಿದೆ.

 

Crime Reported in Mangalore East Traffic PS                

ಪಿರ್ಯಾದಿದಾರರಾದ ರೆನಿಷಾ ರೈನಾ ಕ್ಯಾಸ್ಟ್ಲೀನೋ ಎಂಬುವರು ದಿನಾಂಕ; 20/04/2022 ರಂದು ತಮ್ಮ ಸಹಪಾಠಿ ರಾಕೇಶ್ ರಾಜ್ ಎಂಬುವರೊಂದಿಗೆ ಅವರ ಸ್ಕೂಟರ್ ನೊಂದಣಿ ಸಂಖ್ಯೆ; KA-19-EW-3718 ನೇಯದರಲ್ಲಿ ರಾಕೇಶ್ ರಾಜ್ ರವರು ಸವಾರರಾಗಿಯೂ ಪಿರ್ಯಾದಿದಾರರು ಹಿಂಬದಿ ಸವಾರರಾಗಿಯೂ ಕುಳಿತುಕೊಂಡು ಪಿ.ವಿ.ಎಸ್. ಜಂಕ್ಷನ್ ಕಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಾ ಸಮಯ ಮಧ್ಯಾಹ್ನ 12:45 ಗಂಟೆಗೆ ಬ್ರಿಲಿಯಂಟ್ ಪದವಿ ಪೂರ್ವ ಕಾಲೇಜು ಎದುರು ತಲುಪುತ್ತಿದ್ದಂತೆ ಸದ್ರಿ ರಸ್ತೆಯಲ್ಲಿ ಎದುರುಗಡೆಯಿಂದ ಬಂಟ್ಸ್ ಹಾಸ್ಟೇಲ್ ಕಡೆಯಿಂದ ಪಿ.ವಿ.ಎಸ್. ಕಡೆಗೆ ಆಟೋ ರಿಕ್ಷಾ ನೊಂದಣಿ ಸಂಖ್ಯೆ: KA-19-AA-8670 ನೇಯದನ್ನು ಅದರ ಚಾಲಕ ಕೃಷ್ಣಪ್ಪ ಎಂಬುವರು ದುಡುಕುತನ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿ ಸ್ಕೂಟರ್ ಸವಾರ ಹಾಗೂ ಸಹ ಸವಾರರು ಸ್ಕೂಟರ್ ಸಮೇತ ಸದ್ರಿ ರಸ್ತೆಗೆ ಬಿದ್ದು ಸ್ಕೂಟರ್ ಸವಾರ ರಾಕೇಶ್ ರಾಜ್ ರವರಿಗೆ ತಲೆಗೆ, ಭುಜಕ್ಕೆ, ಗುದ್ದಿದ ರೀತಿಯ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞಾಹೀನರಾಗಿದ್ದು ಹಾಗೂ ಸಹ ಸವಾರರಾದ ಪಿರ್ಯಾದಿದಾರರಿಗೆ ಮುಖಕ್ಕೆ ಗುದ್ದಿದ ರೀತಿಯ ಗಾಯವಾಗಿ ಮೇಲಿನ ಹಲ್ಲುಗಳು ತುಂಡಾದ ಗಂಭೀರ ಸ್ವರೂಪದ ಹಾಗೂ ಹಣೆಗೆ ಎಡ ಕಣ್ಣಿನ ಮೇಲೆ ಗುದ್ದಿದ ರೀತಿಯ ಗಾಯಗಳಾಗಿದ್ದು ಚಿಕಿತ್ಸೆ ಬಗ್ಗೆ ಯನಪೋಯಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಎಂಬಿತ್ಯಾದಿ.

 

Crime Reported in Bajpe PS

ಪಿರ್ಯಾದಿ Smt Umavathi ದಾರರು ದಿನಾಂಕ: 18-04-2022 ರಂದು ಅಕ್ಕ ಲೀಲಾವತಿ(58) ಹಾಗೂ ಲೀಲಾವತಿ ಯವರ ಮಗ ಸಂತೋಷ್ (32) ಎಂಬವರೊಂದಿಗೆ ಆಟೋರಿಕ್ಷಾ ನಂಬ್ರ ಕೆಎ 19 ಎಡಿ 5534 ನೇದರಲ್ಲಿ ಶಿಬರೂರು ಕಡೆಯಿಂದ ನೀರುಮಾರ್ಗ ಕಡೆಗೆ ಪ್ರಯಾಣಿಸುತ್ತಿರುವಾಗ ಸಮಯ ಸುಮಾರು 15.30 ಗಂಟೆಗೆ ಮಂಗಳೂರು ತಾಲೂಕು ಮೂಡುಪೆರಾರ ಗ್ರಾಮದ ಕಿನ್ನಿಕಂಬ್ಳ ಸರ್ಕಾರಿ ಫ್ರೌಡಶಾಲೆ ತಿರುವು ಬಳಿ ತಲುಪುವಾಗ ಅತೀ ವೇಗವಾಗಿ ಹೋಗುತ್ತಿದ್ದ  ಆಟೋರಿಕ್ಷಾ ಚಾಲಕ ದೀಕ್ಷಿತ್ ರವರು ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ, ಆಟೋರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ಬದಿಯ ಸೇತುವೆಗೆ ಡಿಕ್ಕಿಯಾಗಿ ನಿಂತಿತು. ಅಪಘಾತದ ಪರಿಣಾಮ ಪಿರ್ಯಾದಿದಾರರ ಎಡಕಾಲಿಗೆ ಮತ್ತು ಎಡಕೈಗೆ ಗುದ್ದಿದ ಗಾಯ ಹಾಗೂ ಲೀಲಾವತಿಯವರಿಗೆ ಎಡಕಾಲಿಗೆ ಗುದ್ದಿದ ಗಾಯ ಹಾಗೂ ಸಂತೋಷ್ ರವರ ಗದ್ದಕ್ಕೆ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದಿ ಹಾಗೂ ಸಂತೋಷ್ ರವರು ಬಜಪೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿದ್ದು, ಲೀಲಾವತಿಯವರು ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ  ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 20-04-2022 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080