ಅಭಿಪ್ರಾಯ / ಸಲಹೆಗಳು

Crime Reported in: Mangalore North PS

ಪಿರ್ಯಾದಿ FEDRIC FERAVO ಹಾಗೂ ಅವರ ಸ್ನೇಹಿತರಾದ ವಿಜಯ್ ಬರ್ಜೊಜ ಎಂಬವರು ಮಂಗಳೂರು ನಗರದ ಹಂಪನಕಟ್ಟೆಯಲ್ಲಿರುವ ಕಟ್ಟಡದಲ್ಲಿ ಚಿಕ್ಕ ಜ್ಯೂಸ್ ಅಂಗಡಿಯನ್ನು ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಅಂಗಡಿಗೆ ಪ್ರತಿನಿತ್ಯ ಬೆನ್ನಿಚಾನ್ ಜೋಸೆಫ್ ಎಂಬವರು ಉಪ್ಪಿನಕಾಯಿ ಮಸಾಲ ಪೌಡರ್ ಗಳನ್ನು ಪೂರೈಸುತ್ತಿದ್ದು, ತಾನು ದಾವಣಗೆರೆಯಲ್ಲಿ ಗೋಟ್ ಫಾರ್ಮ್ (Goat Farm)ನ್ನು ಹೊಂದಿ ಆಡು(Goat) ಸಾಕಾಣಿಕೆ ಮಾಡಿರುವುದಾಗಿ ಹೇಳಿ, ಪಿರ್ಯಾದಿದಾರರ ಪಾಲಿಗೆ ಬಂದ ಜಮೀನಿನಲ್ಲಿ ಗೋಟ್ ಫಾರ್ಮ್ ಮಾಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ ಒಪ್ಪಂದವನ್ನು ಮಾಡಿಕೊಂಡಿದ್ದು, ಅದರಂತೆ ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತರಾದ ವಿಜಯ್ ಬರ್ಜೋಜರವರು ತಲಾ 3 ಲಕ್ಷದಂತೆ 2021 ನೇ ಇಸವಿ ಮಾರ್ಚ್ ತಿಂಗಳಲ್ಲಿ ಬೆನ್ನಿಚಾನ್ ಜೋಸೆಫ್ ರವರ ICICI ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದು, ಹಣವನ್ನು ಪಡೆದ ಬಳಿಕ ಕರಾರಿನಂತೆ ಯಾವುದೇ ಕೆಲಸ ಮಾಡದೇ ಹಣವನ್ನು ಈವರೆಗೂ ಹಿಂದಿರುಗಿಸದೇ ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಮತ್ತು ಮೋಸ ಮಾಡಿರುವುದಾಗಿದೆ ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂಬಿತ್ಯಾದಿಯಾಗಿ ನೀಡಿದ ದೂರಿನ ಸಾರಾಂಶ. 

Crime Reported in: Konaje PS       

ಪಿರ್ಯಾದಿದಾರರ Mohammed Mansooru ತಂದೆ ಬಿ ಎಮ್ ಶೇಖಬ್ಬ (56) ರವರು ಕೇರಳ ರಾಜ್ಯದ ಕಣ್ಣೂರಿನ  ಗ್ಲೋಬಲ್ ಮಾಲ್ನಲ್ಲಿ ಸ್ವೀಟ್ ಕಾರ್ನ್ ಸ್ಟಾಲ್  ಇಟ್ಟುಕೊಂಡು ಸುಮಾರು 4 ವರ್ಷದಿಂದ   ವ್ಯಾಪಾರ ಮಾಡಿಕೊಂಡಿದ್ದು ರಂಜಾನ್ ಬಳಿಕ ವ್ಯಾಪಾರ ಕಡಿಮೆ ಇದ್ದುದರಿಂದ ಅವರು ಸುಮಾರು ಒಂದು ತಿಂಗಳಿನಿಂದ ಕಣ್ಣೂರಿಗೆ ಹೋಗದೇ ಮನೆಯಲ್ಲಿಯೇ ಇದ್ದರು. ಈ ನಡುವೆ ಅವರು “ರಿಯಲ್ ಎಸ್ಟೇಟ್” ಬಿಸ್ ನೆಸ್ ನ್ನು ಕೂಡ ಮಾಡುತ್ತಿದ್ದರು. ದಿನಾಂಕ 17-06-2022 ರಂದು ಬೆಳಿಗ್ಗೆ 08-00 ಗಂಟೆಗೆ ಮನೆಯಿಂದ ಹೊರಟು ಹೊರಗಡೆ ಹೋದವರು ವಾಪಾಸ್ಸು ಈ ತನಕ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುತ್ತದೆ.  ಕಾಣೆಯಾದ ತಂದೆಯವರ ಪತ್ತೆ ಬಗ್ಗೆ ಸಂಬಂಧಿಕರು, ಸ್ನೇಹಿತರಲ್ಲಿ ವಿಚಾರಿಸಿ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದು ತಂದೆಯವರನ್ನು ಪತ್ತೆ ಮಾಡಿಕೊಡಬೇಕೆಂದು ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿರುತ್ತಾರೆ ಎಂಬಿತ್ಯಾದಿ.

Crime Reported in: Mangalore South PS

ಅರ್ಜಿದಾರರು HARSHENDRA HEGDE ಮತ್ತು ಅರ್ಜಿದಾರರ ಹೆಂಡತಿ ಶ್ರೀಮತಿ ಶಿಲ್ಪ ಪ್ರಾಯ 30 ವರ್ಷದವರು ದಿನಾಂಕ 19.06.2022 ರಂದು ಮನೆಯಿಂದ ಪಿಲಿಕುಳ ನಿಸರ್ಗಧಾಮಕ್ಕೆ ತೆರಳುವ ಸುಲುವಾಗಿ, ಬಂಟ್ವಾಳ ತಾಲೂಕಿನ  ಕೊಯಿಲ ಗ್ರಾಮದಿಂದ ಹೊರಟು 11.30 ಗಂಟೆಗೆ ಮಂಗಳೂರು ನಗರದ ಸರ್ವಿಸ್ ಬಸ್  ನಿಲ್ದಾಣದಲ್ಲಿ ಬಂದಿಳಿದು, ನಂತರ ಪಿಲಿಕುಳಕ್ಕೆ ಹೋಗುವ  ಬಸ್ ಗೆ ಹತ್ತುವ ಮುಂಚಿತವಾಗಿ ಪಿರ್ಯಾದಿದಾರರ ಹೆಂಡತಿ  ಶೌಚಾಲಯಕ್ಕೆಂದು ಸರ್ವಿಸ್ ಬಸ್  ನಿಲ್ದಾಣದಲ್ಲಿರುವ ಸಾರ್ವಜನಿಕ  ಶೌಚಾಲಯಕ್ಕೆ ತೆರಳಿದವರು ವಾಪಾಸು ಮರಳಿ ಬಾರದೇ ಇದ್ದು   ಕೂಡಲೇ ಪಿರ್ಯಾದಿದಾರರು ಶ್ರೀಮತಿ ಶಿಲ್ಪ ರವರ ಮೊಬೈಲ್ ಫೋನ್ ಗೆ ಕರೆಮಾಡಿದರೆ, ಕರೆಗೆ ಉತ್ತರಿಸದೇ ಇದ್ದು, ಸ್ವಲ್ಪ ಸಮಯದ ನಂತರ ಮೊಬೈಲ್  ಫೋನ್  ಸ್ವೀಚ್ ಆಫ್ ಆಗಿರುತ್ತದೆ.. ಪಿರ್ಯಾದಿದಾರರ ಹೆಂಡತಿ ಶ್ರೀಮತಿ ಶಿಲ್ಪ ರವರ ಬಗ್ಗೆ ಸ್ನೇಹಿತರಲ್ಲಿ, ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿಯು ಸಿಕ್ಕಿರುವುದಿಲ್ಲ, ಅದರಿಂದ ಕಾಣೆಯಾದ ಶಿಲ್ಪರವರನ್ನು  ಪತ್ತೆಮಾಡಿಕೊಡಬೇಕಾಗಿ ಎಂಬಿತ್ಯಾದಿಯಾಗಿ

ಇತ್ತೀಚಿನ ನವೀಕರಣ​ : 20-06-2022 07:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080