ಅಭಿಪ್ರಾಯ / ಸಲಹೆಗಳು

Crime Reported in:Mangalore North PS    

ಪಿರ್ಯಾದಿದಾರರು MAHAMMAD HABIB KOYA ಮಂಗಳೂರು ಬಂದರ್ ನಲ್ಲಿರುವ  ಬಸ್ತ ಕ್ರಾಸ್  ಎಂಬಲ್ಲಿ ಕರಾವಳಿ ಎಂಟರ್ ಪ್ರೈಸಸ್ ಎಂಬ ಸಂಸ್ಥೆಯ ಪಾಲುದಾರರಾಗಿದ್ದು, ಸಂಸ್ಥೆಯ ಕೆಲಸ ಕಾರ್ಯಕ್ಕಾಗಿ  KA-21-V-3863 ನೊಂದಣಿ ನಂಬ್ರದ ಬಿಳಿ ಆಕ್ಟಿವಾ ಸ್ಕೂಟರ್ ನ್ನು 2015 ನೇ ಇಸವಿಯಲ್ಲಿ ಖರೀದಿ ಮಾಡಿ ಉಪಯೋಗಿಸುತ್ತಿದ್ದು, ಪಿರ್ಯಾದಿದಾರರು ಎಂದಿನಂತೆ ದಿನಾಂಕ 11-07-2022 ರಂದು ಬೆಳಿಗ್ಗೆ 10.00 ಗಂಟೆಗೆ ಮಂಗಳೂರು ನಗರದ  ಬಂದರ್ ಕರ್ನಾಟಕ ಬ್ಯಾಂಕ್ ಎದುರು ರಸ್ತೆಯ ಬದಿಯಲ್ಲಿ  ತಮ್ಮ ಬಾಬ್ತು  KA-21 V-3863 ನೊಂದಣಿ ನಂಬ್ರದ ಬಿಳಿ ಆಕ್ಟಿವಾ ಸ್ಕೂಟರ್ ನ್ನು  ಪಾರ್ಕ್ ಮಾಡಿ ಇಟ್ಟು ನಂತರ ತಮ್ಮ ಕೆಲಸಕ್ಕೆ  ಹೋಗಿದ್ದು, ನಂತರ ಕೆಲಸ ಮುಗಿಸಿ ಸಂಜೆ 5.00 ಗಂಟೆಗೆ ತಾನು ಆಕ್ಟಿವಾ ಸ್ಕೂಟರ್ ಇಟ್ಟಿದ್ದ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು  ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ಬಗ್ಗೆ ತಮ್ಮ ಸ್ನೇಹಿತರಲ್ಲಿ ವಿಚಾರ ತಿಳಿಸಿ ಈವರೆಗೂ ಹುಡುಕಾಡಿದರೂ ಮೋಟಾರ್ ಸೈಕಲ್ ಸಿಗದೇ ಇದ್ದುದರಿಂದ   ತಮ್ಮ ಬಾಬ್ತು ಬಿಳಿ ಬಣ್ಣದ KA-21V-3863 ನೊಂದಣಿ ನಂಬ್ರದ ಬಿಳಿ ಆಕ್ಟಿವಾ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ

 

Crime Reported in:Konaje PS

 ದಿನಾಂಕ 20.07.2022 ರಂದು 08.00 ಗಂಟೆಗೆ ಪಿರ್ಯಾದಿ Mallikarjun Biradar ದಾರರಿಗೆ ಅಬ್ದುಲ್ ಅಜೀಜ್ ಎಂಬಾತನು ತೌಡುಗೋಳಿ ಕಡೆಯಿಂದ ನಡುಪದವು ಕಡೆಗೆ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ತರುತ್ತಿದ್ದಾನೆ ಎಂಬುದಾಗಿ ದೊರೆತ ಖಚಿತ ಮಾಹಿತಿಯಂತೆ ಬೆಳಿಗ್ಗೆ 10.30 ಗಂಟೆಗೆ ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ನಡುಪದವು-ಕಂಬ್ಲಪದವು ರಸ್ತೆಯ ಏರ್ಮಾಡಿ ಮಳಿಗೆ ಎಂಬಲ್ಲಿ ಆರೋಪಿಯಾದ ಅಬ್ದುಲ್ ಅಜೀಜ್ ಯಾನೆ ಮಹಮ್ಮದ್ ಅಜೀಜ್ ಯಾನೆ ಪೋಕರ್ ಅಜೀಜ್ ಎಂಬಾತನ ವಶದಲ್ಲಿದ್ದ 1.405 KG  ತೂಕದ 7000/- ರೂಪಾಯಿ ಮೌಲ್ಯದ ನಿಷೇಧಿತ ಗಾಂಜಾ ಎಂಬ ಮಾದಕ ವಸ್ತು, ಗಾಂಜಾ ತುಂಬಿಸಲು ಉಪಯೋಗಿಸಿದ ಕಪ್ಪು ಬಣ್ಣದ ಬ್ಯಾಗ್ ಮತ್ತು ಬಿಳಿ ಬಣ್ಣದ ಒಪ್ಪೋ ಕಂಪೆನಿಯ ಮೊಬೈಲ್ ಫೋನ್ ನ್ನು ಮಹಜರು ಮುಖೇನ ವಶಕ್ಕೆ ಪಡೆದು ಆರೋಪಿಯನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಂಡಿರುತ್ತಾರೆ ಎಂಬಿತ್ಯಾದಿ.

 

Crime Reported in: Ullal PS

ದಿನಾಂಕ 19-07-2022 ರಂದು ರಾತ್ರಿ 09-00 ಗಂಟೆಗೆ ಪಿರ್ಯಾದಿ Kiran Kumar  ತೊಕ್ಕೊಟ್ಟು ನಲ್ಲಿರುವ ಉಳ್ಳಾಲ ಪಂಚಾಯತ್ ಕಛೇರಿ ಕಟ್ಟಡದ ಹೊರಗೆ ಮಲಗಿದ್ದು ರಾತ್ರಿ ಸುಮಾರು 11-00 ಗಂಟೆಗೆ ನಿದ್ರೆಯಲ್ಲಿದ್ದ ಪಿರ್ಯಾದಿದಾರರನ್ನು ಎಬ್ಬಿಸಿದಾಗ ಪಿರ್ಯಾದಿದಾರರು ಎಚ್ಚರಿಕೆಗೊಂಡು ನೋಡಿದಾಗ ಪಿರ್ಯಾದಿದಾರರ ಪರಿಚಯದ ಉಳ್ಳಾಲದ ಉಳಿಯ ನಿವಾಸಿ ಸಚಿನ್ ಹಾಗೂ ನೋಡಿ ಪರಿಚಯವಿರುವ ಸುಮನ್ ಎಂಬುವರು ಪಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ನಡೆಸಿ ಪಿರ್ಯಾದಿಯನ್ನು ಉದ್ದೇಶಿಸಿ ”ಬೇವರ್ಸಿ ರಂಡೆ ಮಗ ಬಲ” ಎಂದು ಅವ್ಯಾಚ್ಯವಾಗಿ ಬೈದು ಎಳೆದುಕೊಂಡು ಹೋಗಿದ್ದು ಸಚಿನ್ ಪಿರ್ಯಾದಿದಾರರ ಎಡ ಭಾಗದ ಪಕ್ಕೆಗೆ, ಎದೆಗೆ, ಬಲ ಭಾಗದ ಬುಜಕ್ಕೆ, ಕುತ್ತಿಗೆಗೆ ಕಾಲಿನಿಂದ ತುಳಿದಿದ್ದು ನೆಲಕ್ಕುರುಳಿದ ಪಿರ್ಯಾದಿಗೆ ಹಣೆಯ ಬಲ ಭಾಗಕ್ಕೆ ಗುದ್ದಿದ ಗಾಯವಾಗಿದ್ದು ಆರೋಪಿ ಸಚಿನ್ ತನ್ನ ಕೈಯಲ್ಲಿದ್ದ ಸಣ್ಣ ಚೂರಿಯಿಂದ ಹೊಟ್ಟೆ ಕೆಳಭಾಗಕ್ಕೆ ತಿವಿದು ರಕ್ತ ಗಾಯವಾಗಿದ್ದು, ಆರೋಪಿಗಳಿಬ್ಬರು ಅವ್ಯಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ, ಓಡಿ ಹೋಗಿರುತ್ತಾರೆ ಎಂಬಿತ್ಯಾದಿ

 

Crime Reported in: Mulki PS

ದಿನಾಂಕ: 19-07-2022 ಮಂಗಳೂರು ತಾಲೂಕು ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಗಣಪತಿ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟು ಉಲಾಯಿ- ಪಿದಾಯಿ ಎಂಬ ನಸೀಬಿನ ಜೂಜಾಟ ಆಟ ಆಡುತ್ತಿರುವ  ಸಂಗಯ್ಯ ಹಿರೀಮಠ ಹಾಗೂ ಮುಸ್ತಾಫಾ ಎಂಬ ಎರಡು ಮಂದಿ ಆರೋಪಿಗಳನ್ನು, ಆರೋಪಿಗಳ ವಶದಲ್ಲಿದ್ದ ಒಟ್ಟು 1090=00 ರೂ. ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಕಪ್ಪು, ಕೆಂಪು ಬಿಳಿ ಮತ್ತು ಹಸಿರು  ಬಣ್ಣದಿಂದ ಕೂಡಿದ ಟವೆಲ್ ಹಾಗೂ 52 ಇಸ್ಫೀಟ್ ಎಲೆಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನ ಪಡಿಸಿ ಕ್ರಮ ಜರಗಿಸಲಾಗಿದೆ ಎಂಬಿತ್ಯಾದಿ.

 

Crime Reported in: Urva PS

ದಿನಾಂಕ 19-07-2022 ರಂದು ಸಂಜೆ ಜೆ.ಬಿ ಲೋಬೋ ತಿರುವು ರಸ್ತೆ ಬಳಿ ಎನ್.ಹೆಚ್ 66 ಪ್ಲೈಓವರ್ ಕೆಳಗೆ ರಾಘವೇಂದ್ರ, ಪ್ರಾಯ 32 ವರ್ಷ,  ವಾಸ: ಡೋರ್ ನಂಬ್ರ 6-21, ಕೋಡಿಕಲ್ ಕ್ರಾಸ್ ರಸ್ತೆ, ಪೆರ್ಪುಲಾಡಿ, ದೇರೆಬೈಲ್ ಗ್ರಾಮ, ಮಂಗಳೂರು ಎಂಬಲ್ಲಿ ಗಾಂಜಾ ಸೇವನೆ ಮಾಡಿಕೊಂಡಿರುವವನನ್ನು ವಶಕ್ಕೆ ಪಡೆದು ಕುಂಟಿಕಾನ ಎ ಜೆ  ಆಸ್ಪತ್ರೆಯ ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದಲ್ಲಿ  ವೈದ್ಯರ ಈತನು ಗಾಂಜಾ ಸೇವನೆ ಮಾಡಿರುವುದಾಗಿ ದೃಢಪತ್ರ ನೀಡಿರುವುದರಿಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 20-07-2022 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080