ಅಭಿಪ್ರಾಯ / ಸಲಹೆಗಳು

Crime Reported  in Mangalore Rural PS

ಪಿರ್ಯಾದಿದಾರರಾದ ಪ್ರೀತಮ್ ಫೆರ್ನಾಂಡಿಸ್ (27 ವರ್ಷ) ಎಂಬವರು 2021 ನೇ ಎಪ್ರಿಲ್ 8 ರಂದು ರಾಯಚೂರು ಜಿಲ್ಲೆಯ ಆಂತೋನಿ ಎಂಬವರ ಮಗಳು ರೂಪಾ (24 ವರ್ಷ) ಎಂಬವರನ್ನು ಮದುವೆಯಾಗಿದ್ದು, ಆಕೆಯು ದಿನಾಂಕ: 14-08-2021 ರಿಂದ ನೀರುಮಾರ್ಗ ಗ್ರಾಮದ ಒಳಬೈಲು ಕರಾವಳಿ ಕಾಲೇಜು ಬಳಿ ಇರುವ ಜಿ.ಆರ್. ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು,  ನಿನ್ನೆ ದಿನಾಂಕ: 18-08-2021 ರಂದು ಬೆಳಿಗ್ಗೆ 8.30 ಗಂಟೆಗೆ ಅಟೋ ರಿಕ್ಷಾದಲ್ಲಿ ಕೆಲಸಕ್ಕೆ ಹೋದವಳು ಮನೆಗೆ ಬಾರದೇ, ಕಾಣೆಯಾಗಿರುತ್ತಾಳೆ. ಆಕೆಯ ಮೊಬೈಲ್ ಒಮ್ಮೊಮ್ಮೆ ರಿಂಗ್ ಆಗುತ್ತಿದ್ದು, ಕೆಲವೊಮ್ಮೆ ಸ್ವಿಚ್ ಆಫ್ ಆಗಿರುತ್ತದೆ. ಕಾಣೆಯಾದ ನನ್ನ ಪತ್ನಿ ರೂಪಾ (24 ವರ್ಷ) ಎಂಬಾಕೆಯನ್ನು ಪತ್ತೆ ಮಾಡಿಕೊಡಬೇಕು ಎಂಬಿತ್ಯಾದಿಯಾಗಿರುತ್ತದೆ.  ಕಾಣೆಯಾದವರ ವಿವರ

ಹೆಸರು:- ಶ್ರೀಮತಿ ರೂಪಾ.

ಪ್ರಾಯ: 24 ವರ್ಷ 

5.2" ಅಡಿ ಎತ್ತರ, ಗೋದಿ ಮೈ ಬಣ್ಣ,

ಕಪ್ಪು ಲೆಗ್ಗಿನ್ಸ್ ಮತ್ತು ಗ್ರೇ ಕಲರ್ ಟಾಪ್ ಧರಿಸಿರುತ್ತಾರೆ. ಕಪ್ಪು ಬಣ್ಣದ ಲೇಡಿಸ್ ಹ್ಯಾಂಡ್ ಬ್ಯಾಗ್ ಮತ್ತು ಟಿಫನ್ ಬ್ಯಾಗ್. ಮಾತನಾಡುವ ಭಾಷೆ: ಕನ್ನಡ, ಹಿಂದಿ, ಲಂಬಾಣಿ ಮತ್ತು ಇಂಗ್ಲೀಷ್ ಭಾಷೆ  ಮಾತನಾಡುತ್ತಾರೆ

Crime Reported  in Traffic South PS

ದಿನಾಂಕ  19-08-2021 ರಂದು   ಪಿರ್ಯಾದಿದಾರರಾದ    ವಿಜಯ  ಲಕ್ಷ್ಮಿ ಎಂಬವರು ಅವರ  ಮನೆಯಾದ ಜಲ್ಲಿಗುಡ್ಡೆ  ಕಡೆಯಿಂದ ಮಂಗಳೂರು   ಕಡೆಗೆ   ಅವರ   ಬಾಬ್ತು   ಸ್ಕೂಟರ್   ನಂಬ್ರ   KA-19-EK-7715  ನೇದಲ್ಲಿ   ಸವಾರಿ ಮಾಡಿಕೊಂಡು  ಹೋಗುತ್ತಿರುವ   ಸಮಯ  ಸುಮಾರು  ಬೆಳಿಗ್ಗೆ 09:45 ಗಂಟೆಗೆ  ಕಂಕನಾಡಿ  ಬಿ ಗ್ರಾಮದ   ಗರೊಡಿ ಸಮೃದ್ಧಿ ಹಾಲ್ ನ   ಬಳಿ  ತಲುಪುತ್ತಿದ್ದಂತೆ   ಅದೇ ರಸ್ತೆಯಲ್ಲಿ   ಅವರ   ಹಿಂದಿನಿಂದ ಬರುತ್ತಿದ್ದ   ಅಂದರೆ   ನಾಗೂರಿ   ಕಡೆಯಿಂದ   ಪಂಪ್ ವೆಲ್  ಕಡೆಗೆ  ಟಿಪ್ಪರ್  ಲಾರಿ ನಂಬ್ರ   KA-19-AC-7402  ನೇದನ್ನು  ಅದರ   ಚಾಲಕ   ಸಿದ್ದಪ್ಪ  ಕುರಿ    ಎಂಬಾತನು ಲಾರಿಯಲ್ಲಿ ಜಲ್ಲಿಯನ್ನು   ತುಂಬಿಸಿಕೊಂಡು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು   ಬಂದು  ಪಿರ್ಯಾದಿದಾರರ ಸ್ಕೂಟರ್  ನ  ಹಿಂಬದಿಗೆ   ಡಿಕ್ಕಿ  ಪಡಿಸಿದ   ಪರಿಣಾಮ    ಅವರು   ಸ್ಕೂಟರ್   ಸಮೇತ   ರಸ್ತೆಗೆ   ಬಿದ್ದು   ಅವರ   ಹಣೆಗೆ   ಗಲ್ಲಕ್ಕೆ   ಹಾಗೂ   ಕೈಕಾಲುಗಳಿಗೆ   ರಕ್ತಗಾಯ ಮತ್ತು   ಬಲ ಕೈಮುಂಭಾಗಕ್ಕೆ   ಗುದ್ದಿದ   ಗಾಯವಾಗಿದ್ದು  ಚಿಕಿತ್ಸೆ   ಬಗ್ಗೆ   ಅವರನ್ನು   ಅಲ್ಲಿ   ಸೇರಿದ   ಸಾರ್ವಜನಿಕರು   ಕರೆದುಕೊಂಡು  ಹೋಗಿ ಮಂಗಳೂರಿನ    ಸಿಟಿ  ಆಸ್ಪತ್ರೆಗೆ   ದಾಖಲಿಸಿರುತ್ತಾರೆ  ಎಂಬಿತ್ಯಾದಿ

2)ದಿನಾಂಕ:19.08.2021ರಂದು ಪಿರ್ಯಾದಿದಾರರಾದ ಗಣೇಶ್ (52) ರವರು ಪಂಪ್ ಆಪರೇಟರ್ ಕೆಲಸ ಮಾಡಿಕೊಂಡಿದ್ದು ತಮ್ಮ ಮೊಬೈಲ್ ರಿಪೇರಿ ಗೆಂದು ಪಂಪವೆಲ್ ಗೆ ಬಂದು ಮೊಬೈಲ್ ರಿಪೇರಿ ಮಾಡಿಸಿಕೊಂಡು ನಾಗುರಿ ಪಂಪ್ ಹೌಸ್ ಕಡೆಗೆ  ಹೋಗುತ್ತಿರುವ ಸಮಯ ಸುಮಾರು 15:00 ಗಂಟೆಗೆ ಪಂಪವೆಲ್ ನಲ್ಲಿ ಬಿ ಸಿ ರೋಡ್ ಕಡೆಗೆ ಹೊಗುವ ಬಸ್ ಸ್ಟಾಪ್  ಬಳಿ ರಸ್ತೆಯನ್ನು ದಾಟುವಾಗ ಪಂಪವೆಲ್ ನಿಂದ  ನಾಗುರಿ ಕಡೆಗೆ ಬರುತ್ತಿದ್ದ KL-14-R-8013 ನೇದರ  ಬೈಕ್ ಸವಾರ ಸಂಶುದ್ದೀನ್ ಬೈಕ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು   ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯದಿದಾರರು ಡಾಮಾರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯ ಹಾಗೂ ಎಡಗಾಲಿನ ಹೆಬ್ಬೆಳಿಗೆ ರಕ್ತಗಾಯ ವಾಗಿದ್ದು ಗಾಯಳುವನ್ನು ಅಪಘಾತಪಡಿಸಿದ ಬೈಕ್ ಸವಾರ ಆಟೋರಿಕ್ಷಾವೊಂದರಲ್ಲಿ ಚಿಕಿತ್ಸೆ ಬಗ್ಗೆ ಕಂಕನಾಡಿ ಪಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

Crime Reported  in Mangalore South PS

ದಿನಾಂಕ: 19-08-2021 ರಂದು ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಕಾ&ಸು ವಿಭಾಗದ ಪಿಎಸ್ಐ ಮಂಜುಳಾ ಎಲ್ ರವರು ಠಾಣೆಯಲ್ಲಿರುವ ಸಮಯ 16-45 ಗಂಟೆಗೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಭಾರತ್ ಮೈದಾನದ ಬಳಿ ಮರೆಯಲ್ಲಿ ನಿಂತುಕೊಂಡು ಇಬ್ಬರು ಯುವಕರು ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬುದಾಗಿ  ಖಚಿತ   ವರ್ತಮಾನ ಬಂದಂತೆ, ಸದ್ರಿ ಸ್ಥಳಕ್ಕೆ  17-10 ಗಂಟೆಗೆ  ಸಿಬ್ಬಂಧಿ ಜೊತೆ  ಹೋಗಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳಾದ ಧನುಶ್ ಕುಮಾರ್, ಪ್ರಾಯ 23 ವರ್ಷ,  ವಾಸ : ಕನ್ಯಾ ಹೌಸ್, ರಾಯಿ ಗ್ರಾಮ ಮತ್ತು ಅಂಚೆ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಭವಿಶ್ ಶೆಟ್ಟಿ, ಪ್ರಾಯ 25 ವರ್ಷ,  ವಾಸ : ಧೂಮಾವತಿ ದೇವಸ್ಥಾನದ ಬಳಿ, ಮಂಗಳಾಂತಿ ಅಂಚೆ, ಮಂಜನಾಡಿ, ಮಂಗಳೂರು ಎಂಬವರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ, ಆರೋಪಿಗಳು  ಗಾಂಜಾ ಸೇವನೆ ಮಾಡಿದ ಬಗ್ಗೆ  ಒಪ್ಪಿಕೊಂಡಿದ್ದು,    ಆರೋಪಿಗಳನ್ನು ಮಂಗಳೂರು ಎ.ಜೆ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಗಳು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಗಳ  ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

Crime Reported  in Ullal PS

ಪ್ರಕರಣದ ಸಾರಾಂಶವೇನೆಂದರೆ ಇತ್ತೀಚೆಗೆ ಕೋವಿಡ್  19 ಸಾಂಕ್ರಾಮಿಕ ರೋಗವು ಉಲ್ಬಣಗೊಂಡಿದ್ದು, ಪ್ರಾಣಹಾನಿ ಆಗುತ್ತಿರುವುದು ತೀರಾ ಹೆಚ್ಚಳವಾಗುತ್ತಿರುವುದು ಕಂಡು ಬಂದಿರುವುದರಿಂದ  ಮಾನ್ಯ ಕರ್ನಾಟಕ ಸರಕಾರವು ನಂ.ಆರ್ ಡಿ.158/ಟಿಎನ್ಆರ್/2020 ದಿನಾಂಕ. 13-08-2021 ಮತ್ತು ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರು, ಅದ್ಯೆಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ದ.ಕ ಜಿಲ್ಲೆ ಮಂಗಳೂರುಇವರ ನಡವಳಿ ಆದೇಶ ನಂಬ್ರ ಎಮ್ ಎನ್ ಜಿ (2)ಸಿಆರ್ 156/2021/133465/ಸಿ4/31 ದಿನಾಂಕ 14-08-2021 ರಲ್ಲಿ ಕೋವಿಡ್-19 ಹಿನ್ನಲೆಯಲ್ಲಿ ಜಿಲ್ಲೆಯಾದೆಂತ ಜಾರಿಗೊಳಿಸಿದ ಮಾರ್ಗಸೂಚಿ ನಿರ್ಬಂದಗಳನ್ನು ಮುಂದುವರೆಸಿರುವ ಆದೇಶದಲ್ಲಿ ರಾತ್ರಿ 09-00 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯ ತನಕ ರಾತ್ರಿ ಕರ್ಪ್ಯೂ ಆದೇಶವನ್ನು ಹೊರಡಿಸಿದ್ದರೂ ಕುತ್ತಾರು ಪರಿಸರದಲ್ಲಿರುವ “Vegee Nation” Pure veg multi Cuisine Family Restaurant ದಿನಾಂಕ 19-08-2021 ರಂದು ಸಮಯ ರಾತ್ರಿ 09-30 ಗಂಟೆಗೆ ತೆರದು ವ್ಯಾಪಾರ ಮಾಡುತ್ತಿರುವುದನ್ನು ಉಳ್ಳಾಲ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್   ಸಂತೋಷ ಕುಮಾರ್ ಹಾಗೂ ಪಿಸಿ  ಪರಮೇಶ್ವರ್ ರವರು ಸಮವಸ್ತ್ರದಲ್ಲಿ ಹೊಯ್ಸಳ  ಇಲಾಖಾ ವಾಹನದಲ್ಲಿ ರೌಂಡ್ಸ ಕರ್ತವ್ಯದಲ್ಲಿರುವಾಗ ಕಂಡು ಇಲಾಖಾ ವಾಹನವನ್ನು ಅಲ್ಲಿಯೇ ಬದಿಯಲ್ಲಿ ನಿಲ್ಲಿಸಿ ಸದ್ರಿ ರೆಸ್ಟೋರೆಂಟ್ ಒಳಗಡೆ ಹೋಗಿ, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗಿರಾಕಿಗಳನ್ನು ಕುಳ್ಳಿರಿಸಿ ವ್ಯಾಪಾರ ಮಾಡುತ್ತಿರುವುದನ್ನು ಮೋಬೈಲ್ ಪೋನ್ ನಲ್ಲಿ ವೀಡಿಯೋ ಶೂಟಿಂಗ್ ಮಾಡಿಕೊಂಡು, ರೆಸ್ಟೋರೆಂಟ್ ಮಾಲಿಕ ರಾಜೇಶ್ ಶೆಟ್ಟಿ (24) ವಾಸ: ಕೊರಗಜ್ಜನ ಕಟ್ಟೆಯ ಹಿಂಬದಿ ಕುತ್ತಾರ ಮುನ್ನೂರು ಗ್ರಾಮ. ಇವರು ರೆಸ್ಟೋರೆಂಟ್ ಒಳಗಡೆ ಅವಧಿ ಮೀರಿ ಗ್ರಾಹಕರನ್ನು ಸೇರಿಸಿಕೊಂಡು ಯಾವುದೇ ಸಾಮಾಜಿಕ ಅಂತರವನ್ನು ಪಾಲಿಸದೇ ವ್ಯಾಪಾರವನ್ನು ಮಾಡಿಕೊಂಡು ಸರಕಾರದ ಆದೇಶವನ್ನು ಉಲ್ಲಂಘಿಸಿರುವುದರಿಂದ ಸದ್ರಿ ರೆಸ್ಟೋರೆಂಟ್ ಮಾಲಿಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೋಳ್ಳುವ ಬಗ್ಗೆ ನೀಡಿದ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported  in Moodabidre PS

ದಿನಾಂಕ: 19-08-2021 ರಂದು ಪಿರ್ಯಾದಿದಾದರು ತಮ್ಮ ಬಾಬ್ತು ಕೆಎ-20-ಈಡಬ್ಲು 8679 ನಂಬ್ರದ ಮೋಟಾರ್ ಬೈಕನ್ನು ಸವಾರಿ ಮಾಡಿಕೊಂಡು ಮೂಡಬಿದ್ರೆಯ ಬಲ್ಲಾಳ್ ಹೋಟೇಲ್ ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು ಮದ್ಯಾಹ್ನ 2-45 ಗಂಟೆಗೆ ಮಂಗಳೂರು ಕಡೆಯಿಂದ ಕೆಎ -20-ಎಂಸಿ-1671 ನಂಬ್ರದ ಕಾರನ್ನು ಅದರ ಚಾಲಕನಾದ ರೊನಾಲ್ಡ್ ಡಿ ಸಿಲ್ವ ರವರು  ನಿರ್ಲಕ್ಷತನ ಹಾಗು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದುದಾರರ ಎಡಕೈ ಮತ್ತು ಬಲಕಾಲಿಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಆಳ್ವಾಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ ಸಾರಂಶವಾಗಿರುತ್ತದೆ

 

 

ಇತ್ತೀಚಿನ ನವೀಕರಣ​ : 20-08-2021 05:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080