ಅಭಿಪ್ರಾಯ / ಸಲಹೆಗಳು

Crime Reported in Urva PS

ಫಿರ್ಯಾದಿದಾರರ ಮಾವನವರಾದ ಮೊಹಮ್ಮದ್ ಆಯೂಬ್ ಇಸ್ಮಾಯಿಲ್, ಪ್ರಾಯ - 62 ವರ್ಷ  ರವರು  ದಿನಾಂಕ 20.09.2021 ರಂದು ಬೆಳ್ಳಿಗ್ಗೆ 6.00 ಗಂಟೆಯ ಸಮಯಕ್ಕೆ ತನ್ನ ಕೋಡಿಕಲ್ ವಾಸದ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೊರಟು ಹೋಗಿದ್ದು ಇದುವರೆಗೂ ಪತ್ತೆಯಾಗದೆ ಇದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದು ಸಾರಾಂಶವಾಗಿರುತ್ತದೆ

Crime Reported in Traffic North PS

ದಿನಾಂಕ:19-09-2021 ರಂದು ಪಿರ್ಯಾದಿದಾರರಾದ ಇಸ್ಮಾಯಿಲ್ ಕೆ ರವರ ತಮ್ಮ ಇಯಾಜ್ (18) ಎಂಬಾತನು KA-19-HE-6892 ನಂಬ್ರದ ಸ್ಕೂಟರಿನಲ್ಲಿ ಹಳೆಯಂಗಡಿಯಿಂದ ಕೊಲ್ನಾಡಿಗೆ ಹೋಗುತ್ತಾ ಸಮಯ 19:30 ಗಂಟೆಗೆ ಕೊಲ್ನಾಡು ಜಂಕ್ಷನ್ ಬಳಿ ತೆರೆದ ಡಿವೈಡರ್ ಬಳಿ ಇಂಡಿಕೇಟರ್ ಹಾಕಿ ಬಲಬದಿಗೆ ಹೋಗುತ್ತಿದ್ದಂತೆ ರಾ ಹೆ 66 ರ ಮುಲ್ಕಿ ಜಂಕ್ಷನ್ ಕಡೆಯಿಂದ ಮಂಗಳೂರು ಕಡೆಗೆ KA-19-MK-3772 ನಂಬ್ರದ ನೀಲಿ ಬಣ್ಣದ BMW ಕಾರನ್ನು ಅದರ ಚಾಲಕನಾದ ಯೋಗೀಶ್ ಗೋಯಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಇಯಾಜ್ ನು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಯಾಜ್ನ ತಲೆಗೆ ಗಂಭೀರ ಸ್ವರೂಪದ ಒಳಗಾಯವಾಗಿದ್ದು ಅಲ್ಲದೆ ಮೂಗಿಗೆ ಹಾಗೂ ಎಡ ಕೆನ್ನೆ  ಎಡಭಾಗದ ರಕ್ತಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಹಾಗೂ ಅಪಘಾತ ಪಡಿಸಿದ ಕಾರು ಚಾಲಕ ಅಪಘಾತದ ವೇಳೆ ಅಮಲು ಪದಾರ್ಥ ಸೇವಿಸಿರುವುದಾಗಿದೆ.ಎಂಬಿತ್ಯಾದಿ.

Crime Reported in Ullal PS

ಪಿರ್ಯಾದಿದಾರರಾದ ರಾಜೇಶ್ ರವರು  ಉಳ್ಳಾಲ ಮಾಸ್ತಿಕಟ್ಟೆಯಲ್ಲಿಯಲ್ಲಿರುವ ಕುಮೇರು ಶ್ರೀ ಪಾಡಂಗರ ಪೂಮಾಲಾ ಭಗವತೀ ಕ್ಷೇತ್ರದಲ್ಲಿ ಅದ್ಯಕ್ಷರಾಗಿದ್ದು ದಿ:16-9-2021 ರಂದು ಸಂಕ್ರಮಣ ಪೂಜೆ ಆದ ಬಳಿಕ ಬೆಳಗ್ಗೆ 9:00 ಗಂಟೆಗೆ ಕ್ಷೇತ್ರದ ಎಲ್ಲಾ 7 ಗುಡಿಗಳಿಗೆ ಬೀಗಹಾಕಿ ಭದ್ರ ಪಡಿಸಿ ಮನೆಗೆ ಹೋಗಿದ್ದು ದಿ:20-9-2021 ರಂದು ಬೆಳಗ್ಗೆ 6:00 ಗಂಟೆಯ ಸಮಯಕ್ಕೆ ಕುಟುಂಬದ ಸದಸ್ಯರಾದ ುದಯ ರವರು ಪೋನ್ ಮಾಡಿ ಅಣ್ಣಪ್ಪ ಗುಡಿಯ  ಬಾಗಿಲು ತೆರೆದಿರುವುದಾಗಿ ಪೋನ್ ಮೂಲಕ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಮಾಸ್ತಿಕಟ್ಟೆ ಗೆ ಬಂದು ನೋಡಿದಾಗ  ಅಣ್ಣಪ್ಪ ಗುಡಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ಒಳ ಪ್ರವೇಶಿಸಿ ಪಂಚ ಲೋಹದ ಅಣ್ಣಪ್ಪ ದೇವರ ಮೂರ್ತಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.ಕಳವಾದ ಅಣ್ಣಪ್ಪ ದೈವದ ಮೂರ್ತಯ ಅಂದಾಜು ಮೌಲ್ಯ 70,000/- ಅಲ್ಲದೆ ಶ್ರೀ ಭಗವತಿ ದೇವರ ಗುಡಿಯ ಬಾಗಿಲನ್ನು ಕೂಡ ಕಳ್ಳರು ಮೀಟಿ ತೆರೆದಿದ್ದು ಈ ಕಳ್ಳತನವನ್ನು ದಿನಾಂಕ 16-9-2021 ರ ಬೆಳಗ್ಗೆ 9:00 ಗಂಟೆಯಿಂದ ದಿ: 20-9-2021 ರ ಬೆಳಗ್ಗೆ 6: 00 ಗಂಟೆಯ ಮದ್ಯೆ ಯಾರೋ ಕಳ್ಳರು ಪಿರ್ಯಾದಿದಾರರ ಕುಟುಂಬದ ಅಣ್ಣಪ್ಪ ದೈವದ ಪಂಚಲೋಹ ಮೊಗವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬಿತ್ಯಾದಿ ಪಿರ್ಯಾದಿದಾರರ ದೂರಿನ ಸಾರಾಂಶ

Crime Reported in Kavoor PS  

ಪಿರ್ಯಾದಿ Raghava S Padil ದಾರರು ದಿನಾಂಕ 19/09/2021 ರಂದು  ಕೆಎ 19 ಜಿ 658 ನಂಬ್ರದ ಇಲಾಖಾ ವಾಹನದಲ್ಲಿ ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕರಿಂದ ಬಂದ ಮಾಹಿತಿಯೇನೆಂದರೆ ಠಾಣಾ ವ್ಯಾಪ್ತಿಯ ಕಾವೂರು ಗ್ರಾಮದ ಜ್ಯೋತಿನಗರದ ಆಂಜನೇಯ ದೇವಸ್ಥಾನದ ರಂಗಮಂದಿರದ ಬಳಿಯಿರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಸುಮಾರು 10 ರಿಂದ 15 ಜನ ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದಾಗಿ ಮಾಹಿತಿ ಬಂದಂತೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಗಳ ಜೊತೆಯಲ್ಲಿ ಪಿರ್ಯಾದಿದಾರರು ಸಮಯ ಸುಮಾರು 18.45 ಗಂಟೆಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿದಲ್ಲಿ ಆಪಾದಿತರು ಒಬ್ಬರಿಗೊಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಳ್ಳದೇ ಮುಖಕ್ಕೆ ಸರಿಯಾಗಿ ಮಾಸ್ಕ್ ಹಾಕದೇ ನೆಲದ ಮೇಲೆ ಪೇಪರ್ ಹಾಕಿ ಕುಳಿತುಕೊಂಡು ಹಣವನ್ನು ಪಣವಾಗಿಟ್ಟು ಇಸ್ಪಿಟ್ ಜುಗಾರಿ ಆಟದಲ್ಲಿ ನಿರತರಾಗಿರುವುದನ್ನು ನೋಡಿದ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಆಪಾದಿತರನ್ನು ತಡೆದು ನಿಲ್ಲಿಸಿ ಇಸ್ಪಿಟ್ ಜುಗಾರಿ ಆಟದಲ್ಲಿ ಬಳಸಿದ ನಗದು ರೂ 4730/- ಮತ್ತು ಜೂಜಾಟದಲ್ಲಿ ಬಳಸಿದ ಬಿಳಿ ಹಾಳೆಗಳು ಮತ್ತು ನೀಲಿ ಬಣ್ಣದ ಬಾಲ್ ಪೆನ್, ಇಸ್ಪಿಟ್ ಎಲೆಗಳನ್ನು ಸ್ವಾಧೀನಪಡಿಸಿಕೊಂಡು ಆಪಾದಿತರ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿ ಎಂಬಿತ್ಯಾದಿ.

Crime Reported in Surathkal PS

ಪಿರ್ಯಾದಿ SMT ARFAZ FOUZIYA ದಾರರರು ತನ್ನ ಗಂಡನೊಂದಿಗೆ ತಮ್ಮ ರೇಂಜ್ ರೋವರ್ ಕಾರಿನಲ್ಲಿ ಚೊಕ್ಕಬೆಟ್ಟುವಿನ ಮನೆಯಿಂದ ಹೊರಡುವಾಗ ಆಪಾದಿತ ಕಲಂದರನು ತನ್ನ ಬಾಬ್ತು ಕೆಎ-19-ಎಮ್ ಇ-4073 ನೇಯ ಸಿಲ್ವರ್ ಬಣ್ಣದ ಇನೋವಾ ಕಾರನ್ನು ಪಿರ್ಯಾದಿದಾರರು ಇದ್ದ ಕಾರಿಗೆ ಅಡ್ಡಲಾಗಿ ನಿಲ್ಲಿಸಿ ತಡೆದಿದ್ದು ಪಿರ್ಯಾದಿದಾರರ ಗಂಡ ಕಾರನ್ನು ಹತ್ತಿರದ ರಸ್ತೆಯ ಮೂಲಕ ಚಲಾಯಿಸಿಕೊಂಡು ಮುಂದೆ ಹೋದಾಗ ಬೆನ್ನಟ್ಟಿಕೊಂಡು ಬಂದ ಆಪಾಧಿತ ಚಾಲಕನು ಪಿರ್ಯಾದಿದಾರರ ಇದ್ದ ಕಾರನ್ನು ಓವರ್ ಟೇಕ್ ಮಾಡಿ ಕಾರನ್ನು ನಿಲ್ಲಿಸಲು ಸೂಚಿಸಿ ತನ್ನ ಕಾರಿನಿಂದ ಇಳಿದು ಬಂದು ಪಿರ್ಯಾದಿದಾರರಿಗೆ ಮತ್ತು ಅವರ ಗಂಡನಿಗೆ ಬೆವರ್ಸಿ, ನಾಯಿ, ನಿನಗೆ ಬಾರಿ ಅಹಂಕಾರ ಇದೆ ಎಂದು ಬೈದು ಕೈಯಿಂದ ಹಲ್ಲೆ ನಡೆಸಿ, ಪಿರ್ಯಾದಿದಾರರ ಗಂಡನಿಗೆ ಕೂಡಾ ಬೈದು ಹಲ್ಲೆ ನಡೆಸಿ ನೋಡಿಕೊಳ್ಳುವುದಾಗಿ ಬೆದರಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Crime Reported in Kankanady Town PS

ಪಿರ್ಯಾದಿ Shankara ದಾರರು ತಮ್ಮ ಸಂಸಾರದೊಂದಿಗೆ ಶಕ್ತಿನಗರ ನಾಲ್ಯಪದವು ಮುಗ್ರೊಡಿ ಎಂಬಲ್ಲಿ ವಾಸಮಾಡಿಕೊಂಡಿದ್ದು, ತಮ್ಮ ಮನೆಯ ಪಕ್ಕದಲ್ಲಿರುವ ಬಹ್ಮಲಿಂಗೇಶ್ವರ ದೈವಸ್ಥಾನದ ಆರ್ಚಕರಾಗಿ ಸೇವೆ ಸಲ್ಲಿಸುತ್ತಿರುವುದಾಗಿದೆ. ಪಿರ್ಯಾದಿದಾರರು ದಿನಾಲೂ ಬೆಳಗ್ಗೆ ಮತ್ತು ಸಂಜೆ 05 ಗಂಟೆಗೆ ದೇವರ ಪೂಜೆ ಮಾಡಿ ಪ್ರಸಾದ ವಿತರಿಸುವುದಾಗಿದೆ ಎಂದಿನಂತೆ ನಿನ್ನೆ ದಿನ ದಿನಾಂಕ 18-09-2021 ರಂದು ಸಂಜೆ 5 ಗಂಟೆಗೆ ಪೂಜೆ ಮಾಡಿ ಪ್ರಸಾದ ವಿತರಿಸಿ ನಂತರ ಗರ್ಭ ಗುಡಿಯ ಬಾಗಲಿಗೆ ಬೀಗ ಹಾಕಿ ಹತ್ತಿರದ ಮನೆ ಹೋಗಿದ್ದು ಮರುದಿನ ಅಂದರೆ 19-09-2021 ರಂದು ಬೆಳಗ್ಗೆ 05:00 ಗಂಟೆಗೆ ಪೂಜೆಗೆಂದು ಬಂದು ನೋಡಿದಾಗ ಯಾರೋ ಕಳ್ಳರು ಬಂದು ಗುಡಿಯ ಅಣ್ಣಪ್ಪ ಪಂಜುರ್ಲಿ ಹಾಗೂ ಬಹ್ಮಲಿಂಗೇಶ್ವರ  ದೇವಿಯ ಗುಡಿಯ ಎರಡು ಬಾಗಲಿನ ಬೀಗ ಮುರಿದು ಅಂದಾಜು ರೂ 50000 ರೂಪಾಯಿ ಮೌಲ್ಯದ ದೇವರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Crime Reported in  Moodabidre PS

ಪಿರ್ಯಾದಿದಾರರಾದ ಶ್ರೀ.ಅಬೂಬಕ್ಕರ್ ಪ್ರಾಯ.43 ವರ್ಷ, ತಂದೆ.ದಿ.ಅಹಮ್ಮದ್,  ವಾಸ: ಅಫ್ ರಾಜ್ ಮಂಜೀಲ್, ಗುಂಡುಕಲ್ಲು, ಪಡುಮಾರ್ನಾಡು ಗ್ರಾಮ ರವರು  ದಿನಾಂಕ: 17-09-2021 ರಂದು ಸಂಜೆ 4.30 ಗಂಟೆಗೆ ಜಮಾತಿನ ಸುಮಾರು 30 ಜನರು ಸೇರಿ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲುನಲ್ಲಿರುವ ಮೊಯ್ಯೊದ್ದೀನ್ ಜುಮ್ಮಾ ಮಸೀದಿಯ ಪಕ್ಕದಲ್ಲಿರುವ ಮದರಸದಲ್ಲಿ ವಕ್ಫ ಬೋರ್ಡ್ ಆಡಳಿತ ಅಧಿಕಾರಿಯವರಿಂದ ನಡೆಯುತ್ತಿದ್ದ ಸಭೆಯಲ್ಲಿರುವ ಸಮಯ ನಮ್ಮ ಜಮಾತಿಗೆ ಸಂಬಂಧ ಪಡದ ಆರೋಪಿಗಳಾದ 1) ಅಬ್ದುಲ್ ಅಜೀಜ್, ತಂದೆ.ಸೈಯ್ಯದ್ ಆಲಿ, ವಾಸ. ಗುಂಡುಕಲ್ಲು, ಪಡುಮಾರ್ನಾಡು ಗ್ರಾಮ, ಮೂಡುಮಾರ್ನಾಡು ಅಂಚೆ, ಮೂಡಬಿದ್ರೆ ತಾಲೂಕು. 2) ಸೈಯ್ಯದ್ ಆಲಿ, ತಂದೆ.ಚಯ್ಯಬ್ಬ ಬ್ಯಾರಿ, ವಾಸ. ಗುಂಡುಕಲ್ಲು, ಪಡುಮಾರ್ನಾಡು ಗ್ರಾಮ, ಮೂಡುಮಾರ್ನಾಡು ಅಂಚೆ, ಮೂಡಬಿದ್ರೆ ತಾಲೂಕುರವರು ನಮ್ಮನ್ನು ಏಕಾಏಕಿ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುವುದು 

ಇತ್ತೀಚಿನ ನವೀಕರಣ​ : 20-09-2021 06:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080