ಅಭಿಪ್ರಾಯ / ಸಲಹೆಗಳು

Crime Reported in Panambur PS,

 ಪಿರ್ಯಾದಿ SMT SAMPATA THUKARAMA BHOSLE ದಾರರ ಮಗಳು ಶ್ರೀಮತಿ ಅರ್ಚನಾ ಪ್ರಾಯ: 25 ವರ್ಷ ಮತ್ತು ಅವಳ ಇಬ್ಬರು ಚಿಕ್ಕ ಮಕ್ಕಳಾದ ಕುಮಾರಿ ಕ್ರಾಂತಿ ಪ್ರಾಯ: 3 ವರ್ಷ ಮಗ ಕಾರ್ತಿಕ್ ಪ್ರಾಯ: 2 ವರ್ಷ ಎಂಬವರುಗಳು ದಿನಾಂಕ: 16-10-2021 ರಂದು ಬೆಳಿಗ್ಗೆ 8.00. ಗಂಟೆಗೆ ಪಣಂಬೂರು ಕೂರಿಕಟ್ಟ ಅಯ್ಯಪ್ಪ ಮಂದಿರದ ಸಮೀಪದ ಬಾಡಿಗೆ ಮನೆಯಿಂದ ಪಣಂಬೂರು ಬೀಚ್ ನ ಬಸವರಾಜ್ ಎಂಬವರ ಅಂಗಡಿಗೆ ಕೆಲಸಕ್ಕೆ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಎಂಬಿತ್ಯಾದಿ

Crime Reported in Ullal PS       

ಉಳ್ಳಾಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯೆವಸ್ಥೆಯ ಪೊಲೀಸ್ ಉಪ ನಿರೀಕ್ಷಕ ಪ್ರದೀಪ್ ಟಿ ಆರ್ ರ ವರು ದಿನಾಂಕ 20-10-2021 ರಂದು ಸಮಯ ಸುಮಾರು ರಾತ್ರಿ 12-30   ಗಂಟೆ ಸಮಯಕ್ಕೆ ಠಾಣಾ  ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಮಾನ್ಯ ಉಪ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರು ನೀಡಿದ ಮಾಹಿತಿಯೆಂತೆ  ಸೋಮೆಶ್ವರ್ ಗ್ರಾಮದ ಪೆರಿ ಬೈಲ್ ಎಂಬಲ್ಲಿಂದ ಸಾಮನ್ಯ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ ಸಮುದ್ರದಿಂದ   ತೆಗೆದು ಸಾಗಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ನೀಡಿದ್ದು,  ರಾತ್ರಿ ಸುಮಾರು 01-00 ಗಂಟೆಗೆ ಸದರಿ ಸ್ಥಳಕ್ಕೆ ತೆರಳಿದಾಗ ಸೋಮೇಶ್ವರ ಉಚ್ಚಿಲ ಪೆರಿ ಬೈಲಿನ ಸಮುದ್ರ ತೀರ ಪ್ರದೇಶದಲ್ಲಿ  ಸಾಮನ್ಯ ಮರಳನ್ನು ತೆಗೆದು  ಟಿಪ್ಪರ ಲಾರಿಗೆ 7-8 ಜನ  ತುಂಬಿಸುತ್ತಿರುವುದು ಕಂಡು ಬಂದಿರುತ್ತದೆ.. ಸಮವಸ್ತ್ರದಲ್ಲಿ ಇದ್ದ ಪಿರ್ಯಾದಿ ಹಾಗೂ ಸಿಬ್ಬಂದಿಯವರನ್ನು  ನೋಡಿ ಮರಳು ತುಂಬಿಸುತ್ತಿದ್ದ ಸುಮಾರು 7-8  ಜನ ಓಡಿ ಹೋಗಿದ್ದು ಅವರುಗಳ ಪೈಕಿ ಕೆ ಎ 19 ಇವಿ 9208 ಮೋಟಾರ ದ್ವಿಚಕ್ರ ವಾಹನದಲ್ಲಿದ್ದ  ವ್ಯಕ್ತಿಯೊಬ್ಬನನ್ನು   ಹಿಡಿದುಕೊಂಡು ವಿಚಾರಿಸಲಾಗಿ   ರಾಯಲ್ ಡಿ ಸೋಜ (21) ಎಂಬವರಾಗಿದ್ದು   ಸಮುದ್ರ  ತೀರದಿಂದ  ಮರಳನ್ನು ತುಂಬಿಸಿ ಸಾಗಾಟ ಮಾಡುವ ಲಾರಿಗಳಿಗೆ ಬೆಂಗಾವಲುವಾಗಿ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿದಂತೆ  ಲಾರಿಯಲ್ಲಿ ತುಂಬಿಸಿರುವ ಮರಳನ್ನು ಪರಿಶೀಲಿಸಿದಾಗ ಸುಮಾರು 15-20 ಬುಟ್ಟಿ ಮರಳು ಕಂಡು ಬಂದಿರುತ್ತದೆ.  ಸದ್ರಿ ಸ್ಥಳದಲ್ಲಿ ಮರಳು ತುಂಬುತ್ತಿದ್ದ ಟಿಪ್ಪರ ಲಾರಿ ನಂಬ್ರ ಕೆ ಎ 19 ಡಿ 4160 ಆಗಿರುತ್ತದೆ. ಮತ್ತು ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಗಳ ಎರಡು ದ್ವಿಚಕ್ರ ವಾಹನಗಳು ಕಂಡು ಬಂದಿದ್ದು ವಾಹನಗಳ  ನಂಬ್ರ ಕೆಎ 19 ಹೆಚ್ ಎ 9357 ಮತ್ತು ಕೆಎ 19 ಇ ಎಕ್ಸ್ 2658 ಆಗಿರುತ್ತದೆ. ಅಕ್ರಮ ಮರಳುಗಾರಿಕೆಗೆ ಬೆಂಗಾವಲು ಆಗಿ ಕೆಲಸ ಮಾಡುತ್ತಿದ್ದ ಸದ್ರಿ ಸ್ಥಳದಲ್ಲಿ ವಶಕ್ಕೆ ಪಡೆದ ವ್ಯಕ್ತಿ  ರಾಯಲ್ ಡಿಸೋಜ್ ಎಂಬವನನ್ನು     ಸಾಮನ್ಯ ಮರಳನ್ನು ಸಮುದ್ರದ ತೀರದಿಂದ ಕಳವು ಮಾಡಿ  ಮರಳುಗಾರಿಕೆ ಮಾಡುತ್ತಿದ್ದ  ವ್ಯೆಕ್ತಿಗಳ ಬಗ್ಗೆ ವಿಚಾರಿಸಲಾಗಿ  ಅವರುಗಳು 1) ಇಲ್ಯಾಸ ಕೆ ಸಿ ರೋಡ್. 2)ನೌಶಾದ್ 3) ಪಯಾಜ್ ಕಲ್ಲಾಪು ಮತ್ತು ಇತರ  ವ್ಯೆಕ್ತಿಗಳು ಎಂಬುದಾಗಿ ತಿಳಿಸಿರುತ್ತಾನೆ.  ಹೀಗೆ ಸಮುದ್ರದ ತೀರದಿಂದ ಮರಳನ್ನು ಕಳವು ಮಾಡಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಕೆ.ಎ. 19-ಡಿ-4160,  ಟಿಪ್ಪರ್ ಲಾರಿಯ  ಚಾಲಕ ಮತ್ತು ಮಾಲಕ,  ಹಾಗು ಇದಕ್ಕೆ ಬೆಂಗಾವಲಾಗಿದ್ದ   ಕೆ.ಎ.19-ಇವಿ-9208   ದ್ವಿಚಕ್ರವಾಹನದಲ್ಲಿದ್ದ ರಾಯಲ್ ಡಿಸೋಜ, ಸ್ಥಳದಲ್ಲಿದ್ದ ದ್ವಿಚಕ್ರ ವಾಹನಗಳಾದ ಕೆ.ಎ. 19-ಹೆಚ್ ಎ- 9357 ಮತ್ತು ಕೆಎ. 19-ಇಎಕ್ಸ್ - 2658 ವಾರೀಸುದಾರರು  ಮತ್ತು ಇಲಿಯಾಸ್ ಕೆ.ಸಿ ರೋಡ್, ನೌಶದ್, ಫಯಾಜ್ ಕಲ್ಲಾಪು   ಮತ್ತು ಇತರ ವ್ಯಕ್ತಿಗಳು  ಕನರ್ಾಟಕ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ರಾಜ್ಯಸ್ವಕ್ಕೆ ನಷ್ಟವನ್ನುಂಟು ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ  ಸಮುದ್ರದ ತೀರದಿಂದ  ಸಾಮಾನ್ಯ ಮರಳನ್ನು ಕಳವು ಮಾಡಿಕೊಂಡು ಈ ಟಿಪ್ಪರ್ ಲಾರಿಗೆ ತುಂಬಿಸಿ  ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಖಚಿತವಾಗಿರುವುದರಿಂದ ಸುಮಾರು  ರೂ 5,56000/-  ಬೆಲೆ ಬಾಳುವ ಸ್ವತ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

  

2) ಉಳ್ಳಾಲ ಪೊಲೀಸ್ ಠಾಣೆಯ ಕಾನೂನು ಮತ್ತು ಸುವ್ಯೆವಸ್ಥೆಯ ಪೊಲೀಸ್ ಉಪ ನಿರೀಕ್ಷಕ ರೇವಣ ಸಿದ್ದಪ್ಪ  ರವರು  ದಿನಾಂಕ 20-10-2021 ರಂದು ಸಮಯ ಸುಮಾರು ರಾತ್ರಿ 12-30   ಗಂಟೆ ಸಮಯಕ್ಕೆ ಠಾಣಾ  ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಾನ್ಯ ಉಪ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರು ನೀಡಿದ ಮಾಹಿತಿಯೆಂತೆ  ಸೋಮೆಶ್ವರ್ ಗ್ರಾಮದ  ಪೆರಿಬೈಲ್ ರಸ್ತೆಯಲ್ಲಿರುವ ನ್ಯೂ ಉಚ್ಚಿಲ ಎಂಬ ಸ್ಥಳದ ರಸ್ತೆಯ ಬದಿಯಲ್ಲಿರುವ  ಸಮುದ್ರದ ಕಿನಾರೆಯಿಂದ   ಸಾಮನ್ಯ ಮರಳನ್ನು ಯಾವುದೇ ಪರವಾನಿಗೆ ಇಲ್ಲದೆ    ಸಮುದ್ರದ ಮರಳನ್ನು ತೆಗೆದು ಸಾಗಾಟ ಮಾಡುತ್ತಿದ್ದಾರೆ ಎಂದು ಖಚಿತ ಮಾಹಿತಿ ನೀಡಿದ್ದು,  ರಾತ್ರಿ ಸುಮಾರು 01- 15 ಗಂಟೆಗೆ ಸದರಿ ಸ್ಥಳಕ್ಕೆ ತೆರಳಿದಾಗ ಸೋಮೇಶ್ವರ    ಗ್ರಾಮದ  ನ್ಯೂ ಉಚ್ಚಿಲ ಎಂಬ ಪೆರಿಬೈಲ್ ರಸ್ತೆಯ ಬದಿಯಲ್ಲಿರುವ ಸಮುದ್ರದ ಕಿನಾರೆಯಿಂದ  ಸಾಮನ್ಯ ಮರಳನ್ನು ತೆಗೆದು  ಟಿಪ್ಪರ್ ಲಾರಿಗೆ  6-7 ಜನ  ತುಂಬಿಸುತ್ತಿರುವುದು ಕಂಡು ಬಂದಿರುತ್ತದೆ.. ಸಮವಸ್ತ್ರದಲ್ಲಿ ಇದ್ದ ಪಿರ್ಯಾದಿ ಹಾಗೂ ಸಿಬ್ಬಂದಿಗಳನ್ನು ಕಂಡು ಮರಳು ತುಂಬಿಸುತ್ತಿದ್ದ ಸುಮಾರು  6-7   ಜನ ಓಡಿ ಹೋಗಿದು, ಸದ್ರಿ ಸ್ಥಳದಿಂದ ಓಡಿ ಹೋಗುತ್ತಿದ್ದ ವ್ಯಕ್ತಿಗಳ ಪೈಕಿ  ಓರ್ವ  ವ್ಯಕ್ತಿಯೊಬ್ಬನನ್ನು   ಹಿಡಿದುಕೊಂಡು  ಆತನ  ಹೆಸರು ಮತ್ತು ವಿಳಾಸ ಕೇಳಲಾಗಿ  ಮಯ್ಯದಿ ( 45),  ಎಂಬುದಾಗಿ ತಿಳಿಸಿದ್ದು ಸಮುದ್ರದ ಕಿನಾರೆಯಿಂದ ಸಾಮಾನ್ಯ   ಮರಳನ್ನು ಅಕ್ರಮವಾಗಿ ತುಂಬಿಸಿ ಸಾಗಾಟ ಮಾಡುವ ಲಾರಿಗಳಿಗೆ ಬೆಂಗಾವಲುವಾಗಿ ಕೆಲಸವನ್ನು ಮಾಡುತ್ತಿರುವುದಾಗಿ ತಿಳಿಸಿರುತ್ತಾರೆ. ಲಾರಿಯಲ್ಲಿ ತುಂಬಿಸಿರುವ ಮರಳನ್ನು ಪರಿಶೀಲಿಸಿದಾಗ ಸುಮಾರು 10-15 ಬುಟ್ಟಿ ಮರಳು ಕಂಡು ಬಂದಿರುತ್ತದೆ. ಸದ್ರಿ ಸ್ಥಳದಲ್ಲಿ ಮರಳು ತುಂಬುತ್ತಿದ್ದ ಟಿಪ್ಪರ್ ಲಾರಿ ನಂಬ್ರ ಕೆಎಲ್ 10-ಝಡ್ -7018 ಆಗಿರುತ್ತದೆ.       ಸಮುದ್ರದ ಕಿನಾರೆಯಿಂದ   ಕಳವು ಮಾಡಿ ಮರಳುಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳ ಬಗ್ಗೆ  ಸದ್ರಿ ಸ್ಥಳದಲ್ಲಿ ವಶಕ್ಕೆ ಪಡೆದ ವ್ಯಕ್ತಿ ಮಯ್ಯದಿ ಕಲ್ಲಾಪು ಎಂಬಾತನನ್ನು ವಿಚಾರಿಸಲಾಗಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವವರು     1) ಬದ್ರುದ್ದಿನ್ ಪಜೀರ್ , 2) ಬಶೀರ್ ಮಂಜನಾಡಿ 3) ರಶೀದ್ ತೌಡುಗೋಳಿ 4) ಶಫೀಕ್  ಕೆ.ಸಿ.ರೋಡ್  5) ಉಮನಾಥ್ ಸೊಮೇಶ್ವರ ನ್ಯೂ ಉಚ್ಚಿಲ ಮತ್ತು ಇತರ ವ್ಯಕ್ತಿಗಳು ಎಂಬುದಾಗಿ ಮಯ್ಯದಿ ಕಲ್ಲಾಪು ತಿಳಿಸಿರುತ್ತಾನೆ. ಹೀಗೆ   ಸೊಮೆಶ್ವರ ಗ್ರಾಮದ  ನ್ಯೂ ಉಚ್ಚಿಲ ಎಂಬಲ್ಲಿರುವ ಪೆರಿಬೈಲ್ ರಸ್ತೆಯಲ್ಲಿರುವ ನ್ಯೂ ಉಚ್ಚಿಲ ರಸ್ತೆಯ ಬದಿಯಲ್ಲಿರುವ   ಸ್ಥಳದ  ಸಮುದ್ರದ  ಕಿನಾರೆಯಿಂದ ಮರಳನ್ನು ಕಳವು ಮಾಡಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ  ಕೆಎಲ್ -10-ಝಡ್ - 7018, ,  ಟಿಪ್ಪರ್ ಲಾರಿಯ  ಚಾಲಕ ಮತ್ತು ಮಾಲಕ,  ಹಾಗು ಇದಕ್ಕೆ ಬೆಂಗಾವಲಾಗಿದ್ದ    ಮಯ್ಯದಿ ಕಲ್ಲಾಪು, ಬದ್ರುದ್ದೀನ್ ಪಜೀರ್, ಬಶೀರ್ ಮಂಜನಾಡಿ, ರಶೀದ್ ತೌಡುಗೋಳಿ, ಶಫೀಕ್  ಕೆ.ಸಿ.ರೋಡ್  ಮತ್ತು ಉಮನಾಥ್ ಸೊಮೇಶ್ವರ ನ್ಯೂ ಉಚ್ಚಿಲ  ಮತ್ತು ಇತರ ವ್ಯಕ್ತಿಗಳು  ಕನರ್ಾಟಕ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೆ ರಾಜ್ಯಸ್ವಕ್ಕೆ ನಷ್ಟವನ್ನುಂಟು ಮಾಡಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ  ಸಮುದ್ರದ   ಸಾಮಾನ್ಯ ಮರಳನ್ನು ಕಳವು ಮಾಡಿಕೊಂಡು ಟಿಪ್ಪರ್ ಲಾರಿಗೆ ತುಂಬಿಸಿ  ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಖಚಿತವಾಗಿರುವುದರಿಂದ  ಸುಮಾರು  ರೂ 500,800/- ಬೆಲೆ ಬಾಳುವ ಸ್ವತ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 20-10-2021 08:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080