ಅಭಿಪ್ರಾಯ / ಸಲಹೆಗಳು

Crime Reported in Traffic South PS

ದಿನಾಂಕ: 20-12-2021 ರಂದು ಪಿರ್ಯಾದಿ MOHAMMOD IMTHIYAZ ದಾರರು ಕಣ್ಣೂರು ಹತ್ತಿರ ರಾ.ಹೆ. 73 ರ ರಸ್ತೆ ಬದಿಯಲ್ಲಿ ಇರುವ ಬದ್ರಿಯಾ ಹೋಟೆಲ್ ನಲ್ಲಿ ತಿಂಡಿ ಮಾಡಿಕೊಂಡು ವಾಪಸ್ಸು ಮನೆಯ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಣ್ಣೂರು ಮಸೀದಿಯ ಬಳಿ ತಲುಪಿದಾಗ ಆ ಸಮಯ  ಅವರ ಸಂಭಂದಿಯಾದ ಖತೀಜಮ್ಮ [55 ವರ್ಷ] ಎಂಬವರು ಬಿ.ಸಿ.ರೋಡ್ ಕಡೆಯಿಂದ ಬಸ್ಸೊಂದರಲ್ಲಿ ಬಂದು ಕಣ್ಣೂರು ಮಸೀದಿಯ ಬಳಿ ಬಸ್ಸಿನಿಂದ ಇಳಿದು ನಂತರ ಬಿ,ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಾ. ಹೆ. 73 ರ ರಸ್ತೆಯನ್ನು ದಾಟಿ ನಂತರ ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹಾದು ಹೋಗಿರುವ ರಾ. ಹೆ. 73 ರ ಏಕಮುಖ ಡಾಮಾರು ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11-10  ಗಂಟೆಗೆ ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಹೋಗುತ್ತಿದ್ದ ಕಾರು ನಂಬ್ರ: KA-19-MJ-7028 ನೇದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಖತೀಜಮ್ಮನವರಿಗೆ ಕಾರನ್ನು ಡಿಕ್ಕಿ ಪಡಿಸಿದ ಪರಿಣಾಮ ಖತೀಜಮ್ಮನವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ. ಕೂಡಲೇ ಅದೇ ರಸ್ತೆಯಲ್ಲಿ ವಾಹನ ಸವಾರಿ ಮಾಡಿಕೊಂಡು ಹೊಗುತ್ತಿದ್ದ ವಾಹನ ಸವಾರರು ಅಲ್ಲಿ ಸೇರಿದ್ದು ಪಿರ್ಯಾದಿದಾರರು ಅಪಘಾತ ಸ್ಥಳಕ್ಕೆ ಹೋಗಿ ಅಲ್ಲಿ ಸೇರಿದ ಜನರೊಂದಿಗೆ ರಸ್ತೆಯಲ್ಲಿ ಬಿದ್ದಿದ್ದ ಖತೀಜಮ್ಮನವರನ್ನು ರಸ್ತೆ ಬದಿಯಲ್ಲಿ ತಂದು ಉಪಚರಿಸಿ ನೋಡಲಾಗಿ ಅಪಘಾತದಿಂದ  ಅವರಿಗೆ ತಲೆಯ ಹಿಂಬದಿಗೆ ಗಂಭೀರ ಸ್ವರೂಪದ ರಕ್ತ ಗಾಯ ಹಾಗೂ ಕೈ ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕೂಡಲೇ ಅವರನ್ನು ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಜನರು ಅವರನ್ನು ಅದೇ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಖತೀಜಮ್ಮನವರನ್ನು ಪರಿಕ್ಷೀಸಿ ಆಸ್ಪತ್ರೆಗೆ ಕರೆ ತರುವ ಮೊದಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಎಂಬಿತ್ಯಾದಿ.

Crime Reported in Surathkal PS

 ಪಿರ್ಯಾದಿ NAGARAJAದಾರರು ಕುತ್ತೆತ್ತೂರು ಗ್ರಾಮದ MRPL ಕಂಪನಿಯ CISF ಯುನಿಟ್ ನಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು.ಸದ್ರಿ ಯುನಿಟ್ ನ ಕಾನ್ಸ್ ಟೇಬಲ್   DIGHE D S ಪ್ರಾಯ 34 ವರ್ಷ ಎಂಬುವರು ನಿನ್ನೆ ದಿನಾಂಕ: 19/12/2021 ರಂದು CISF ಕ್ಯಾಂಪಸ್ ನ ಬ್ಯಾಚುಲರ್ ಬ್ಯಾರಕ್ ನಲ್ಲಿದ್ದವರು ದಿನಾಂಕ: 20/12/2021 ರಂದು 00-25 ಗಂಟೆಗೆ ನೋಡುವಾಗ ಬ್ಯಾರಕನಲ್ಲಿರದೇ ಕಾಣೆಯಾಗಿರುತ್ತದೆ. ಎಲ್ಲಾ ಕಡೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 20-12-2021 04:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080