ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ : 20-01-2022 ರಂದು ಪಿರ್ಯಾದಿದಾರರಾದ ಶ್ರೀಮತಿ ಮಾಲ ರವರು ತನ್ನ ಬಾಬ್ತು KA-19-HG-0577 ನಂಬ್ರದ ಸ್ಕೂಟರಿನಲ್ಲಿ ತನ್ನ 7 ವರ್ಷದ ಮಗನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಮನೆಯಿಂದ ಮೂಲ್ಕಿಯ ಮೆಡಲಿನ್ ಶಾಲೆ ಕಡೆಗೆ ಹೋಗಲು ಸ್ಕೂಟರ್ ನಲ್ಲಿ ಸವಾರಿ ಮಾಡಿಕೊಂಡು ಬರುತ್ತಾ ಕೋಲ್ನಾಡು ಜಂಕ್ಷನ್ ನಿಂದ ಸ್ವಲ್ಪ ಮುಂದೆ ಪೆಟ್ರೋಲ್ ಪಂಪಿನ ಎದುರು ತಲುಪುತ್ತಿದ್ದಂತೆ ಬೆಳಿಗ್ಗೆ ಸಮಯ ಸುಮಾರು 09:45 ಗಂಟೆಗೆ ಪಿರ್ಯಾದಿದಾರರ ಸ್ಕೂಟರಿನ ಮುಂದಿನಿಂದ ಅಂದರೆ NH 66 ನೇ ಹಳೆಯಂಗಡಿಯಿಂದ ಮೂಲ್ಕಿ ಕಡೆಗೆ KA-20-EJ-3319 ನೇ ನಂಬ್ರದ ಮೋಟರ್ ಸೈಕಲ್ ನ್ನು ಅದರ ಸವಾರನಾದ ವಿಜಯ್ ಕುಮಾರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಒಮ್ಮೇಲೆ ರಸ್ತೆ ಎಡ ಬದಿಗೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾಗಿ ಪಿರ್ಯಾದಿದಾರರು ಹಾಗೂ ಅವರ ಮಗ ಬೆಂಜುಮನ್ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಮಗನಿಗೆ ಎಡ ಕೈ ಮೊಣಗಂಟಿನ ಬಳಿ, ಎಡ ಭುಜದ ಬಳಿ, ಎಡ ಕಾಲಿನ ಮುಂಗಾಲಿನ ಬಳಿ ಹಣೆಯ ಎಡ ಭಾಗ ರಕ್ತ ಗಾಯವಾಗಿದ್ದು ಹಾಗೂ ತಲೆಯ ಎಡ ಭಾಗದಲ್ಲಿ ಕತ್ತರಿಸಿದ ರೀತಿಯ ರಕ್ತ ಗಾಯವಾಗಿರುತ್ತದೆ ಮತ್ತು ಪಿರ್ಯಾದಿದಾರರಿಗೆ ಎಡ ಕೈ ಮೊಣಗಂಟು, ಎಡ ಕಾಲಿನ ಮೊಣಗಂಟಿನ ಬಳಿ, ಎಡ ಕಾಲಿನ ಪಾದದ ಬಳಿ ತರಚಿದ ರೀತಿಯ ರಕ್ತ ಗಾಯವಾಗಿ ಚಿಕಿತ್ಸೆಯ ಬಗ್ಗೆ ಗಾಯಾಳುಗಳು ಇಬ್ಬರು ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಾಲಾಗಿರುತ್ತಾರೆ ಎಂಬಿತ್ಯಾದಿ.

 

2)  ಪಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರಾದ Mohammed Shareef K ರವರು ದಿನಾಂಕ:20-01-2022 ರಂದು ಸಾಮಾಜಿಕ ಜಾಲಾತಾಣ ಹಾಗೂ ಮಾಧ್ಯಮದಲ್ಲಿ ಸುರತ್ಕಲ್ ನಿಂದ ಮುಲ್ಕಿ/ಉಡುಪಿ ಕಡೆಗೆ ಆಂಬುಲೆನ್ಸ್ ವಾಹನದ ಎದುರು ಕೆಂಪು ಬಣ್ಣದ ಚವರ್ಲೆಟ್ ಬೀಟ್ ಕಾರೊಂದನ್ನು ದಿನಾಂಕ:19-01-2022 ರಂದು ಸಂಜೆ ಸಮಯ ಅದರ ಚಾಲಕ ಅತೀ ವೇಗವಾಗಿ ಆಂಬುಲೆನ್ಸ್ ವಾಹನಕ್ಕೆ ಅಡ್ಡಿಪಡಿಸಿಕೊಂಡು ಚಲಾಯಿಸಿಕೊಂಡು ಹೋದ ಬಗ್ಗೆ ಪ್ರಚಾರವಾಗಿದ್ದು ಈ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದುಕೊಂಡು  ಸದ್ರಿ ಕೆಂಪು ಬಣ್ಣದ ಚವರ್ಲೆಟ್ ಕಾರು ನಂಬ್ರದ KA-19-MD-6843 ನೇಯದನ್ನು ಅದರ ಚಾಲಕನನ್ನು ಪತ್ತೆ ಮಾಡಲು ಸಿಬ್ಬಂದಿಯವರನ್ನು ನೇಮಿಸಿದ್ದು ಅವರು ಈ ದಿನ ಸಂಜೆ 16-00 ಗಂಟೆಗೆ ಮಂಗಳೂರು ನಗರ ಪಾಂಡೇಶ್ವರ ಬಳಿ ಕಾರು ನಂಬ್ರದ KA-19-MD-6843 ನೇಯದನ್ನು ಅದರ ಚಾಲಕ ಮೊನೀಷ್ ಉರ್ ರೆಹಮಾನ್(21) ಎಂಬಾತನ್ನು ಪತ್ತೆ ಮಾಡಿ ಠಾಣೆಗೆ ತಂದು ನನ್ನ  ಮುಂದೆ ಹಾಜರುಪಡಿಸಿದವರನ್ನು ವಿಚಾರಿಸಿದಾಗ ಕಾರು ಚಾಲಕ ಮೊನೀಷ್ ಉರ್ ರೆಹಮಾನ್ ನು ನಿನ್ನೆ ದಿನಾಂಕ: 19-01-2022 ರಂದು 6-30 ಗಂಟೆ ಸುಮಾರಿಗೆ ಸುರತ್ಕಲ್ ನಿಂದ ಮುಲ್ಕಿ/ಉಡುಪಿ ಕಡೆಗೆ  ಕೆಂಪು ಬಣ್ಣದ ಚವರ್ಲೆಟ್ ಬೀಟ್ ಕಾರು ನಂಬ್ರ KA-19-MD-6843 ನೇಯದ್ದನ್ನು ಅತೀ ವೇಗವಾಗಿ ಮತ್ತು ಅಜಾಗರೂಕತೆಯಿಂದ NH 66 ನೇ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿರುವುದು ಕಂಡುಬಂದಿದ್ದು  ಈ ಬಗ್ಗೆ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ದೂರು ದಾಖಲಿಸಿಕೊಳ್ಳುತ್ತಿರುವುದಾಗಿದೆ.

Crime Reported in Mangalore Rural PS

ಪಿರ್ಯಾದಿದಾರರಾದರು ವೃತ್ತಿಯಲ್ಲಿ ಜ್ಯೋತಿಷ್ಯನಾಗಿದ್ದು ಸ್ವಂತ ಮನೆಯಲ್ಲಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿರುತ್ತಾರೆ. ಹೀಗಿರುವಾಗ ಮನೆಗೆ ಬಂದ ಮಂಗಳೂರು ಮೂಲದವಳೆನ್ನುವ ಭವ್ಯ ಎಂಬುವವಳು ಅವರ ಮತ್ತು ಅವರ ಗಂಡನ ನಡುವೆ ಸಮಸ್ಯೆಯಿದ್ದು ಅದಕ್ಕೆ ಪರಿಹಾರ ಮಾಡಿಕೊಡಬೇಕೆಂದು ಹೇಳಿಕೊಂಡು ಮನೆಗೆ ಬರುತ್ತಿದ್ದಳು ನಂತರ ಪಿರ್ಯಾದಿದಾರರನ್ನು 2020 ನೇ ಇಸ್ವಿಯ ನವೆಂಬರ್ ತಿಂಗಳಲ್ಲಿ ಪದವಿನಂಗಡಿಯಲ್ಲಿರುವ ಅವಳ ಮನೆಗೆ ದೋಷ ಪರಿಹಾರ ಮಾಡುವ ಬಗ್ಗೆ ಕರೆದುಕೊಂಡು ಹೋಗಿ ಪಿರ್ಯಾದಿದಾರರನ್ನು ಭವ್ಯಾಳು ತಬ್ಬಿಕೊಂಡು ಪಿರ್ಯಾದಿ ಜೊತೆ ಇರುವ ವಿಡಿಯೋ ಮತ್ತು ಫೋಟೊಗಳನ್ನು ಅವಳ ಜೊತೆ ಬಂದ ರಾಜು ಎಂಬುವವನು ತೆಗೆದಿರುತ್ತಾನೆ. ನಂತರ ಅವಳು ಸದ್ರಿ ವಿಡಿಯೋ ಮತ್ತು ಫೋಟೊಗಳನ್ನು ಇಟ್ಟುಕೊಂಡು ಹಲವು ಬಾರಿ ಪಿರ್ಯಾದಿದಾರರನ್ನು ಹೆದರಿಸಿ ಕೊಲ್ಲುತ್ತೇನೆಂದು ಜೀವ ಬೆದರಿಕೆ ಹಾಕಿ ಹಣದ ಬೇಡಿಕೆ ಇಟ್ಟ ಪರಿಣಾಮವಾಗಿ ಸುಮಾರು 34 ಲಕ್ಷ ರೂಪಾಯಿಯವರೆಗೆ ಬೇರೆ ಬೇರೆ ಖಾತೆಗಳಿಂದ ಬೇರೆ ಬೇರೆ ದಿನಾಂಕದಲ್ಲಿ ಹಣ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವರೇ ಎಂಬುವುದಾಗಿ ಪಿರ್ಯಾದಿ

 

ಇತ್ತೀಚಿನ ನವೀಕರಣ​ : 21-01-2022 08:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080