ಅಭಿಪ್ರಾಯ / ಸಲಹೆಗಳು

 

Crime Reported in CEN Crime PS

ಪಿರ್ಯಾದಿದಾರರು ಮಂಗಳೂರು ನಗರದ ಪಾಂಡೇಶ್ವರ ಯೂನಿಯನ್ ಬ್ಯಾಂಕ್ ನಲ್ಲಿ ಖಾತೆ ಸಂಖ್ಯೆ  ಯನ್ನು ಹೊಂದಿರುತ್ತಾರೆ.  ದಿನಾಂಕ 25-01-2022 ರಂದು ಪಿರ್ಯಾದಿದಾರರು flipkart app ನಲ್ಲಿ key bunch ಒಂದನ್ನು  ಆರ್ಡರ್ ಮಾಡಿದ್ದು 12 ದಿನಗಳಾದರು ಸದ್ರಿ ಆರ್ಡರ್ ಬರದೇ ಇದ್ದುದರಿಂದ  ಪಿರ್ಯಾದಿದಾರರು ದಿನಾಂಕ 06-02-2022 ರಂದು ಸಂಜೆ 5.00 ಗಂಟೆ ಸಮಯಕ್ಕೆ ರೀಫಂಡ್ ಸಲುವಾಗಿ google ನಲ್ಲಿ flipkart helpline ದೂರವಾಣಿ ಸಂಖ್ಯೆಯನ್ನು ಹುಡುಕಾಡಿದ್ದು ಅದರಲ್ಲಿ 8609560494ನೇ ಮೊಬೈಲ್ ನಂಬ್ರ ದೊರೆತಿದ್ದು ಅದಕ್ಕೆ ತನ್ನ ಮೊಬೈಲ್ ನಂಬ್ರ ದಿಂದ ಕರೆ ಮಾಡಿದಾಗ ಮೊಬೈಲ್ ರಿಂಗ್ ಆಗಿ ಕಟ್ ಆಗಿರುತ್ತದೆ. ಕೂಡಲೇ ಪಿರ್ಯಾದಿದಾರರಿಗೆ ಪುನಃ ಅದೇ ನಂಬರಿನಿಂದ ಕರೆ ಬಂದಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೋರ್ವರು ಪಿರ್ಯಾದಿದಾರರಲ್ಲಿ  ನಿಮ್ಮ key bunch ಆರ್ಡರ್ ಬರುವುದಿಲ್ಲ ಆದುದರಿಂದ ನಾವು ಅದನ್ನು ರೀಫಂಡ್ ಮಾಡುತ್ತೇವೆ ಅದಕ್ಕಾಗಿ ನೀವು  any desk app ನ್ನು ಡೌನ್ ಲೋಡ್ ಮಾಡಿ ಎಂದು ತಿಳಿಸಿದ್ದು ಅದರಂತೆ ಪಿರ್ಯಾದಿದಾರರು  any desk app ನ್ನು ಡೌನ್ ಲೋಡ್ ಮಾಡಿದಾಗ ವೆಬ್ ಪೇಜ್ ಒಂದು ಓಪನ್ ಆಗಿರುತ್ತದೆ ಆಗ  ಸದ್ರಿ ವ್ಯಕ್ತಿಯು ಪಿರ್ಯಾದಿದಾರರಲ್ಲಿ  flipkart app ನ್ನು ಓಪನ್ ಮಾಡಲು ತಿಳಿಸಿದಂತೆ ಪಿರ್ಯಾದಿದಾರರು ಓಪನ್ ಆಗಿರುವ flipkart app ನ ಪೇಜ್ ಒಂದರಲ್ಲಿ ತನ್ನ  debit card number  ಹಾಗೂ cvv number  ನ್ನು ಹಾಕಿದ್ದು ಕೂಡಲೇ ಪಿರ್ಯಾದಿದಾರರ ಬ್ಯಾಂಕ್ ಖಾತೆ ಯಿಂದ ರೂ.20,354, ರೂ.3000 ಹೀಗೆ ಹಂತ ಹಂತವಾಗಿ ಒಟ್ಟು ರೂ.48,354/- ಕಡಿತವಾದ ಸಂದೇಶ ಬಂದಿರುವುದಾಗಿದೆ. ಹೀಗೆ  ತನ್ನನ್ನು flipkart customer care helpline ನಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿ ಮೋಸದಿಂದ ಪಿರ್ಯಾದಿದಾರರ  debit card number ಹಾಗೂ cvv number ನ್ನು ಪಡೆದುಕೊಂಡು ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ತನ್ನ ಬ್ಯಾಂಕ್ ಖಾತೆಗೆ ರೂ.48,354/- ನ್ನು ವರ್ಗಾಯಿಸಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಎಂಬಿತ್ಯಾದಿ

2) ಪಿರ್ಯಾದಿದಾರರು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಸಾಮಾಜಿಕ ಜಾಲತಾಣ ನಿಗಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 21-02-2022 ರಂದು Manglore Muslims ಎಂಬ ಸಾಮಾಜಿಕ ಜಾಲ ತಾಣದಲ್ಲಿ ನಿನ್ನೆ ದಿನ ಶಿವಮೊಗ್ಗ ನಗರದಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಕೊಲೆಯಾದ ಶ್ರೀ ಹರ್ಷ ಎಂಬವರನ್ನು “ಉಲ್ಲೇಖಿಸಿ ಕೋಮುದ್ವೇಷ ಹರಡಿಸುವ ಸುಳ್ಳು ಪೋಸ್ಟನ್ನು  ಪೋಸ್ಟ ಮಾಡಿ ಧರ್ಮಗಳ ನಡುವೆ  ದ್ವೇಷವನ್ನು ಕೆರಳಿಸಿ ಪ್ರಚೋದಿಸಲು, ಸೌಹಾರ್ದತೆಗೆ ಭಾದಕವಾಗುವಂತೆ ಗಲಭೆಯನ್ನು ಉಂಟು ಮಾಡುವ ಉದ್ದೇಶದಿಂದ, ಹಾಗೂ ಸಾರ್ವಜನಿಕ ನೆಮ್ಮದಿಯನ್ನು ಕದಡಲು ಪ್ರಚೋದಿಸುವ ಪ್ರಯತ್ನವನ್ನು ನಡೆಸುತ್ತಿರುವುದು ಕಂಡು ಬಂದಿದ್ದು  Manglore Muslims ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ವಿರುದ್ಧ ನಕಲಿ ಫೇಸ್ಬುಕ್ ಅಕೌಂಟ್ಗಳನ್ನು ತೆರೆದು ನಿರ್ವಹಿಸುತ್ತಿರುವವರ ಹಾಗೂ ಮೇಲ್ಕಂಡ ಅಪರಾಧಗಳನ್ನು ಎಸಗುತ್ತಿರುವ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನೀಡಿದ ಪಿರ್ಯಾದಿಯಾಗಿರುತ್ತದೆ ಎಂಬಿತ್ಯಾದಿ

Crime Reported in Surathkal PS

ಸುರತ್ಕಲ್  ಟೋಲ್ ಗೇಟ್ ಬಳಿ ಆರೋಪಿ ಆಸೀಪ್ ಇವರು ಟೆಂಟ್ ಹಾಕಿ ಪ್ರತಿಭಟನೆ ನಡೆಸಿ ಸದ್ರಿ ಟೋಲ್ ಅನಧಿಕೃತ ಟೋಲ್ ಸುಂಕ ಹಣವನ್ನು ವಾಹನ ಚಾಲಕರು ಹೆಜಮಾಡಿಯ ಟೋಲ್ ಪ್ಲಾಜಾದಲ್ಲಿ ಪಾವತಿಸಿದ ಬಳಿಕ ವಾಹನ ಚಾಲಕರಿಂದ ಹಣ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ವಾಹನಗಳಿಗೆ ಸಂಚಾರ ನಿಯಮವನ್ನು ಪಾಲಿಸಲು ತೊಂದರೆ ಪಡಿಸಿರುವುದಾಗಿದೆ. ಅಲ್ಲದೇ ಆರೋಪಿಯು NHAI Mangaluru ಇವರ ಗಮನಕ್ಕೆ ಬಾರದೇ ಅವರಿಂದ ಅನುಮತಿಯನ್ನು ಪಡೆಯದೇ ಪ್ರತಿಭಟನೆಯ ಹೆಸರಿನಲ್ಲಿ ತಾತ್ಕಾಲಿವಾಗಿ ಟೆಂಟ್ ನಿರ್ಮಿಸಿ ಆತನ ವೈಯಕ್ತಿಕ ಕಾರ್ಯಗಳನ್ನು ನಡೆಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-02-2022 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080