ಅಭಿಪ್ರಾಯ / ಸಲಹೆಗಳು

Crime Reported in : Mangalore East Traffic PS                      

ದಿನಾಂಕ: 21-03-2022 ರಂದು ಪಿರ್ಯಾದಿದಾರರಾದ ಕುಮಾರಿ ರಾಫಿಯ (24) ರವರು ತನ್ನ ತಂದೆ ಕಾಸಿಂ ತಾಯಿ ಜೊಹರಾ ಮತ್ತು ತಮ್ಮ ರಮೀಯ್ ನೊಂದಿಗೆ ಕಾರಿನಲ್ಲಿ ಸಕಲೇಶಪುರ ದಿಂದ ರಾತ್ರಿ     ಮಂಗಳೂರು ಕಡೆಗೆ  ಹೊರಟು ಪಡೀಲ್ ಕಡೆಯಿಂದ ನಂತೂರು ಕಡೆಗೆ ಬಂದು ಅಲ್ಲಿಂದ ಶಿವಭಾಗ್ ಕಡೆಗೆ ಮಾರ್ಗವಾಗಿ  ಬೆಂಗ್ರೆ ಕಡೆಗೆ ಸಾಗಲು ಫಿರ್ಯಾದಿದದಾರರ ತಮ್ಮನಾದ ರಮೀಝ್ ನು ಚಾಲನೆ ಮಾಡುತ್ತಿದ್ದ  ಕೆ.ಎ-19-ಎಮ್.ಜೆ-4102 ನೊಂದಣಿ ನಂಬ್ರದ ಕಾರಿನಲ್ಲಿ  ನಿಧಾನವಾಗಿ ಬರುತ್ತಾ ಬೆಳಗ್ಗಿನ ಜಾವ 3.20 ಗಂಟೆಗೆ ನಂತೂರು ಜಂಕ್ಷನ್ ತಲುಪಿ ಅಲ್ಲಿಂದ ಶಿವಭಾಗ್  ರಸ್ತೆ ಕಡೆಗೆ ಸಾಗುತ್ತಿದ್ದಂತೆ ಎನ್.ಹೆಚ್-66 ರಸ್ತೆಯಲ್ಲಿ ಪದುವ ಪಡೆಯಿಂದ ಪಂಪ್ ವೆಲ್ ಕಡೆಗೆ ಕೆ.ಎಲ್- 84 5554 ನೊಂದಣಿ ನಂಬ್ರದ  ಕಾರನ್ನು ಅದರ ಚಾಲಕ ರಮೀಸ್ ಅಲಿ ಸಿ.ಕೆ ರವರು ನಿರ್ಲಕ್ಷ್ಯತನದಿಂದ ಅಪಾಯಕಾರಿಯಾಗಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಾಲನೆ ಮಾಡಿಕೊಂಡು ಬಂದು ಫಿರ್ಯಾದಿದಾರರಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸುಮಾರು 20 ಮೀಟರ್ ವರೆಗೆ ರಸ್ತೆಯಲ್ಲಿ  ಎಳೆದುಕೊಂಡು ಹೋಗಲಾಗಿ ಬಲಗಡೆಯ ಮುಂದಿನ ಚಕ್ರದ ಭಾಗಕ್ಕೆ, ಬಲಭಾಗದ ಎಂಜಿನ್ ಭಾಗಕ್ಕೆ ಜಖಂ ಉಂಟಾಗಿದ್ದು ಕಾರಿನಲ್ಲಿದ್ದ ಚಾಲಕ  ರಮೀಝ್ ಗೆ ಬಲ ಹುಬ್ಬಿನ ಬಳಿ ರಕ್ತ ಗಾಯ, ಎಡ ಕಂಕುಳಿನಲ್ಲಿ ಚರ್ಮ ಹರಿದ ರಕ್ತ ಗಾಯ ಎಡಕಾಲಿನ ಪಾದದ ಮೇಲೆ ಚರ್ಮ ಹರಿದ ರಕ್ತ ಗಾಯವಾಗಿದ್ದು , ಜೊಹರಾ ರವರಿಗೆ ಗುದ್ದಿದ ನಮೂನೆಯ ಗಾಯ ಮತ್ತು ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ  ಕಾಸಿಂ ರವರಿಗೆ ಬಲ ಹುಬ್ಬಿನ ಬಳಿ ರಕ್ತ ಗಾಯ ಎಡಕಣ್ಣಿನ ಮೇಲೆ, ಬಲ ಕೆನ್ನೆಯ ಮೇಲೆ ಗಾಯ, ಬಲ ಕಾಲಿನ ಪಾದದ ಮೇಲೆ ಚರ್ಮ ಹರಿದ ರಕ್ತ ಗಾಯ ತಲೆ ಭಾಗಕ್ಕೆ ಗುದ್ದಿದ ನಮೂನೆಯ ಗಾಯ ಉಂಟಾಗಿದ್ದು  ಗಾಯಾಳುಗಳನ್ನು ಇಂಡಿಯಾನ ಆಸ್ಪತ್ರೆಗೆ  ಸಾರ್ವಜನಿಕರ ಸಹಾಯದಿಂದ ಸಾಗಿಸಲಾಗಿದ್ದು ವೈದ್ಯರು ಗಾಯಾಳು ಖಾಸಿಂ ಮತ್ತು ರಮೀಝ್  ರನ್ನು ಒಳರೋಗಿಯಾಗಿ  ದಾಖಲು ಮಾಡಿಕೊಂಡಿಡುತ್ತಾರೆ. ಅಪಘಾತ ಪಡಿಸಿದ ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ.

Crime Reported in : Mangalore South PS                              

 ದಿನಾಂಕ: 20-03-2022 ರಂದು ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಹೆಚ್ ಸಿ ಪ್ರಕಾಶ್ ರವರು ರವರು ಪಿ ಸಿ ಹರೀಶ್ ರವರ ಜೊತೆ  ಖಾಸಗಿ ಮೋಟಾರ್ ಸೈಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು, ಠಾಣಾ ವ್ಯಾಪ್ತಿಯ ಎ.ಬಿ ಶೆಟ್ಟಿ ಸರ್ಕಲ್,ಸರ್ವೀಸ್ ಬಸ್ಟಾಂಡ್,ಸ್ಟೇಟ್ ಬ್ಯಾಂಕ್ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿ 18-20 ಗಂಟೆ ಸುಮಾರಿಗೆ ಕ್ಲಾಕ್ ಟವರ್ ಬಳಿ ಇದ್ದಾಗ, ಪುಟ್ ಬಾಲ್ ಮೈದಾನದ ಗ್ಯಾಲರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮರೆಯಲ್ಲಿ   ಓರ್ವ ಯುವಕ  ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ  ಖಚಿತ ವರ್ತಮಾನ ಬಂದಂತೆ, ಸದ್ರಿ ಸ್ಥಳಕ್ಕೆ  ತೆರಳಿ, ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಪಡಿಸುತ್ತಿದ್ದ, ಅಬ್ದುಲ್ ಅಮೀರ್, ಪ್ರಾಯ: 20 ವರ್ಷ,  ವಾಸ: ಕಟ್ಟೆಪುಣಿ, ವೈದ್ಯನಾಥ ನಗರ, ಅತ್ತಾವರ, ಮಂಗಳೂರು ಎಂಬಾತನನ್ನು, 18-30 ಗಂಟೆಗೆ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,    ವೈದ್ಯಕೀಯ  ತಪಾಸಣೆಗೆ ಬಗ್ಗೆ ಮಂಗಳೂರು ಎಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ

  

Crime Reported in : Mulki PS

ಪಿರ್ಯಾದಿ Swathiದಾರರ ತಂದೆ ಹರೀಶ್ ಸಾಲಿಯಾನ್ (47) ರವರು ದಿನಾಂಕ 19.03.2022 ರಂದು ಬಪ್ಪನಾಡು ದೇವಸ್ಥಾಕ್ಕೆ   ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವರು  ಮನೆಗೆ ಬಾರದೇ ಇದ್ದು ರಾತ್ರಿ ಸುಮಾರು 8 ಗಂಟೆಗೆ ಬಪ್ಪನಾಡು ದೇವಸ್ಥಾನದಲ್ಲಿರುವುದಾಗಿ ಪಿರ್ಯಾದಿದಾರರಿಗೆ ಫೋನ್ ಮಾಡಿ ತಿಳಿಸಿರುತ್ತಾರೆ. ದಿನಾಂಕ  20.03.2022 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಅವರನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ಪಿರ್ಯಾದಿದಾರರಿಗೆ ಕರೆ ಮೂಲಕ ದೊರೆತ  ಮಾಹಿತಿಯನ್ವಯ ಪಿರ್ಯಾದಿದಾರರು ಬಪ್ಪನಾಡು ಗ್ರಾಮದ ಮುಲ್ಕಿ ಪೆಟ್ರೋಲ್ ಪಂಪ್ ನ ಎದುರಿನ ಟೂರಿಸ್ಟ್ ಕಾರು ಪಾರ್ಕ್ ಬಳಿ ಭೇಟಿ ನೀಡಿದಾಗ  ದಿನಾಂಕ 19.03.2022 ರಂದು ರಾತ್ರಿ ಸುಮಾರು 8 ಗಂಟೆಯಿಂದ ದಿನಾಂಕ 20.03.2022 ರಂದು ಬೆಳಿಗ್ಗೆ ಸುಮಾರು 9 ಗಂಟೆಯ ನಡುವೆ ಯಾರೋ ದುಷ್ಕರ್ಮಿಗಳು ಪಿರ್ಯಾದಿದಾರರ ತಂದೆಯ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 21-03-2022 07:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080