ಅಭಿಪ್ರಾಯ / ಸಲಹೆಗಳು

Crime Reported in Urva PS

ದಿನಾಂಕ 21-04-2022 ರಂದು ಬೆಳಿಗ್ಗೆ 11.00 ಗಂಟೆಗೆ VINAY KUMAR ASI  ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ಪರಿಸರದಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿದ್ದ ಸಮಯ ಮಂಗಳೂರು ನಗರದ ಕೊಟ್ಟಾರ ಚೌಕಿ ಫ್ಲೈಓವರ್ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಓರ್ವ ವ್ಯಕ್ತಿಯು ನಿಂತುಕೊಂಡು ಸಿಗರೇಟನ್ನು ಸೇದುತ್ತಿದ್ದು, ಆತನ ಬಳಿ ತೆರಳಿ ವಿಚಾರಿಸಿದಾಗ ಅಸ್ಪಷ್ಟವಾಗಿ ಮಾತನಾಡಿದ್ದು, ಆತನ ಬಾಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬಂದಿದ್ದರಿಂದ, ಆತನ ಹೆಸರು ವಿಳಾಸ ಕೇಳಲಾಗಿ ಪ್ರಜ್ವಲ್ (25),  ವಾಸ: 6-149/1ಎ, ಜೆ ಬಿ ಲೋಬೋ ರಸ್ತೆ, ಸುಭ್ರಮಣ್ಯಪುರ, ಕೊಟ್ಟಾರ, ಮಂಗಳೂರು ಎಂಬುದಾಗಿ ತಿಳಿಸಿದನು. ನಂತರ ಆತನನ್ನು ವಶಕ್ಕೆ ಪಡೆದು ಎ ಜೆ  ಆಸ್ಪತ್ರೆಯ  ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ಆತನ ಬಾಬ್ತು ಡ್ರಗ್ ಸ್ಕ್ರೀನಿಂಗ್ ಟೆಸ್ಟ್ ವರದಿಯಲ್ಲಿ OPINION: Tetraydracannabinoid (Marijuana):  POSITIVE ಎಂಬುದಾಗಿ ಅಭಿಪ್ರಾಯ ನೀಡಿದ್ದು, ಆತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಆತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಎಂಬಿತ್ಯಾದಿ

 

Crime Reported in CEN Crime PS

ಪಿರ್ಯಾದಿದಾರರ ಮಾಲಕರು ಪಿರ್ಯಾದಿದಾರರಿಗೆ ಕರೆ ಮಾಡಿ, ಅವರ ಗೆಳೆಯ ಮೊಬೈಲ್ ನಂಬ್ರ+917284085869 ನೇದ್ದರಿಂದ ಕರೆ ಮಾಡಿದ್ದು, ಅವನ ಕಾರು ವಯಾನಾಡಲ್ಲಿ ಅಪಘಾತವಾಗಿದ್ದು, ಗೆಳೆಯನ ಹೆಂಡತಿ ಮತ್ತು ಮಗಳು ತುಂಬಾ ಗಂಭೀರ ಸ್ಥಿತಿಯಲಿದ್ದು ಅವರಿಗೆ ಮುಂಬೈಗೆ ಏರ್ ಲಿಪ್ಟ್ ಮಾಡಬೇಕಾಗಿರುವದರಿಂದ ಅವರಿಗೆ ಹಣದ ಅಗತ್ಯವಿರುವ ಕಾರಣ ಅವರ ಖಾತೆ ನಂಬ್ರ ಮತ್ತು IFSC CODE ಕೋಡ್ ನ್ನು ಫಿರ್ಯಾದಿದಾರರಿಗೆ ಕಳುಹಿಸಿದ್ದು, ಸದ್ರಿ ಬ್ಯಾಂಕ್ ಖಾತೆಗೆ ಕಂಪೆನಿಯ ಬ್ಯಾಂಕ್ ಖಾತೆ ಯಿಂದ ಹಣ ವರ್ಗಾವಣೆ ಮಾಡುವಂತೆ ತಿಳಿಸಿದ್ದು, ಅದರಂತೆ ಫಿರ್ಯಾದಿದಾರರು ಅವರ ಮಾಲಕರು ನೀಡಿದ ಗೆಳೆಯನ ಎಸ್.ಬಿ.ಐ ಬ್ಯಾಂಕ್ IFSC CODE:SBIN0002171 ರ ಎಸ್.ಬಿ.ಖಾತೆ ನಂಬ್ರ 32610030592 ನೇದ್ದಕ್ಕೆ ದಿನಾಂಕ:14-04-2022 ರಂದು 11-25 ಗಂಟೆಗೆ ರೂ.2,80,000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ತದನಂತರ ವಿಚಾರಿಸಿ ನೋಡಿದಾಗ ಅವರ ಗೆಳೆಯನಿಗೆ ಯಾವುದೇ ಅಪಘಾತವಾಗದೇ ಇದ್ದು, ಯಾರೋ ಅಪರಿಚಿತ ವ್ಯಕ್ತಿ ಫಿರ್ಯಾದಿದಾರರ ಮಾಲಕಕರಿಗೆ ಅವರ ಗೆಳೆಯನಂತೆ ಬಿಂಬಿಸಿ, ಮೋಸದಿಂದ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುತ್ತಾರೆ ಎಂಬಿತ್ಯಾದಿಯಾಗಿದೆ.

  

Crime Reported in Mangalore South PS

ಪಿರ್ಯಾದಿದಾರರು ಮಡಿಕಲ್ ಸರ್ವೀಸಸ್  ಹಾಗೂ ಸರ್ಜಿಕಲ್ ಮೆಡಿಕಲ್ ಸ್ಟೋರ್ಸ್ ಶಸ್ತ್ರ ಚಿಕಿತ್ಸಾ ಹಾಗೂ ಔಷದೀಯ ಉತ್ಪನ್ನಗಳ ವಿತರಕರು ಆಗಿರುತ್ತಾರೆ.  ಪಿರ್ಯಾದಿದಾರರು 2012 ನೇ ವರ್ಷದಿಂದ 2016 ನೇ ವರ್ಷದ ವರೆಗೆ  ಅಹಮದಬಾದಿನ ಶ್ರೀ ಕೃಷ್ಣ ಕೇಶವ ಲ್ಯಾಬೋರೇಟರೀಸ್ ಲಿಮಿಟೆಡ್ ( SKKL) ರವರೊಂದಿಗೆ ವ್ಯವಹಾರ ನಡೆಸಿಕೊಂಡಿದ್ದರು. ಆ ಸಮಯ ಉಮೇಶ್ ಮೆಹ್ತಾ ರವರು ಆ ಕಂಪೆನಿಯ ಡೈರೆಕ್ಟರ್ ಹಾಗೂ ವಿಷ್ಣು ಬಾಯಿರವರು ಮ್ಯಾನೇಜರ್ ಆಗಿದ್ದರು. ಅವರು F PHARMA ಪ್ರಕಾರ ಉತ್ಪನ್ನಗಳನ್ನು ಕಳುಹಿಸಿಕೊಡುತ್ತಿದ್ದರು. ಆರೋಪಿತರುಗಳು 2016 ನೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತಮ್ಮ ಉತ್ಪನ್ನಗಳನ್ನು ಮಂಗಳೂರಿನಲ್ಲಿ ಮಾರಾಟ ಮಾಡಲು ಬೇರೆ ವಿತರಕರನ್ನು ನೇಮಿಸಿದ್ದರಿಂದ ಪಿರ್ಯಾದಿದಾರರು ಆರೋಪಿತ ಸಂಸ್ಥೆಯವರೊಂದಿಗಿನ ವ್ಯವಹಾರವನ್ನು ನಿಲ್ಲಿಸಿರುತ್ತಾರೆ. ಇತ್ತೀಚೆಗೆ ಶ್ರೀ ಕೃಷ್ಣ ಕೇಶವ ಲ್ಯಾಬೋರೇಟರೀಸ್ ಲಿಮಿಟೆಡ್ (S.K.K.L.)  ಡೈರೆಕ್ಟರ್ ಆದ 1 ನೇ ಆರೋಪಿತ ಕುನಾಲ್ ಮೆಹ್ತಾ ರವರು  ಪಿರ್ಯಾದಿದಾರರನ್ನು ಫೋನ್ ಮೂಲಕ ಸಂಪರ್ಕಿಸಿ IV FLUID ಹಾಗೂ ಇತರ ಉತ್ಪನ್ನಗಳನ್ನು ತಮ್ಮ ಕಂಪೆನಿಯಿಂದ ಖರೀದಿಸುವಂತೆ ಹಾಗೂ ಉತ್ತಮ ಬೆಲೆಗೆ ನೀಡುವುದಾಗಿ ತಿಳಿಸಿರುತ್ತಾರೆ. 1 ನೇ ಆರೋಪಿತನು ದಿನಾಂಕ 05-07-2021 ರಂದು ಪಿರ್ಯಾದಿದಾರರ ಇ- ಮೇಲ್ ಐಡಿಗೆ ಸಂದೇಶ ಕಳುಹಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ದಿನಾಂಕ 21-09-2021 ರಂದು  IV FLUIDS ಖರೀದಿಸಲು ತನ್ನ ಈ ಮೇಲ್ ಐಡಿ ಮೂಲಕ ಪರ್ಚೇಸ್ ಆರ್ಡರನ್ನು ಆರೋಪಿತನ ಸಂಸ್ಥೆಯ ಈ ಮೇಲ್ ಐಡಿಗಳಾದ Minaxi Maheriya<sales@Krishna Keshava.com  ಹಾಗೂ sklkunal@gmail.com ನೇದಕ್ಕೆ ಈ ಮೇಲ್ ಸಂದೇಶ ಕಳುಹಿಸಿರುತ್ತಾರೆ.  ಅದೇ ದಿನ ಆರೋಪಿತನು ರೂ. 6,45,790/- ನೇ ಮೊತ್ತದ proforma invoice no. P1/001/2021 ನೇದನ್ನು ಪಿರ್ಯಾದಿದಾರರ ಶ್ರೀನಿವಾಸ್ ಸರ್ಜಿಕಲ್ ಮೆಡಿಕಲ್ ಸ್ಟೋರ್ಸ್ ಪಡೀಲ್ ಕಣ್ಣೂರು ಮಂಗಳೂರು ಹೆಸರಿಗೆ ಕಳುಹಿಸಿಕೊಟ್ಟಿರುತ್ತಾರೆ. ಪಿರ್ಯಾದಿದಾರರು ಪ್ರೋಫಾರ್ಮ ಇನ್ ವಾಯ್ಸ್ ಒಪ್ಪಿ ರೂ. 6,44.748/- ನೇದನ್ನು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅತ್ತಾವರ ಬ್ರಾಂಚಿನ ತನ್ನ ಖಾತೆ ನಂಬ್ರ  ನೇದರಿಂದ ಆರೋಪಿತರ ಕಲುಪುರ್ ಕಮರ್ಶಿಯಲ್ ಕೋ ಅಪರೇಟಿವ್ ಬ್ಯಾಂಕ್ ಲಿಮಿಟೆಡ್ ಆಶ್ರಮ್ ರಸ್ತೆ, ಅಹಮದಾಬಾದ್ ನ ಖಾತೆ ನಂಬ್ರ 01020109072 ನೇದಕ್ಕೆ ವರ್ಗಾಯಿಸಿರುತ್ತಾರೆ.  ಬಳಿಕ ಆರೋಪಿತರುಗಳು ಪಿರ್ಯಾದಿದಾರರಿಗೆ ಯಾವುದೇ ಉತ್ಪನ್ನಗಳನ್ನು ಸರಬರಾಜು ಮಾಡಿರುವುದಿಲ್ಲ. ಈ ಬಗ್ಗೆ ಪಿರ್ಯಾದಿದಾರರು ಹಲವಾರು ಬಾರಿ 1 ನೇ ಆರೋಪಿತನ ಮೊಬೈಲ್ ನಂಬ್ರ 09574277707, 2 ನೇ ಆರೋಪಿತನ ಮೊಬೈಲ್ ನಂಬ್ರ 09924203089 ನೇದಕ್ಕೆ ಕರೆ ಮಾಡಿ ಉತ್ಪನ್ನಗಳನ್ನು ಸರಬರಾಜು ಮಾಡುವಂತೆ ವಿನಂತಿಸಿಕೊಂಡರೂ ಆರೋಪಿತರು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ತನ್ನ ಹಣವನ್ನು ಹಿಂತಿರುಗಿಸುವಂತೆ ಪಿರ್ಯಾದಿದಾರರು ವಿನಂತಿಸಿಕೊಂಡಾಗ ಆರೋಪಿತರುಗಳು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಹಾಗೂ ಗೂಂಡಾಗಳನ್ನು ಕಳುಹಿಸಿ ಪಿರ್ಯಾದಿದಾರರನ್ನು ಮುಗಿಸುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆ. ಆರೋಪಿತರು purchase order (ಖರೀದಿ ಆದೇಶ) ಪ್ರಕಾರ ದಿನಾಂಕ 30-09-2021 ರ ಒಳಗೆ ಪಿರ್ಯಾದಿದಾರರಿಗೆ ಉತ್ಪನ್ನಗಳನ್ನು ಸರಬರಾಜು ಮಾಡಬೇಕಿದ್ದರೂ, ಈ ವರೆಗೆ ಯಾವುದೇ ಉತ್ಪನ್ನಗಳನ್ನು ಸರಬರಾಜು ಮಾಡಿರುವುದಿಲ್ಲ ಹಾಗೂ ಹಣವನ್ನು ಕೂಡಾ ಈ ವರೆಗೆ ಹಿಂತಿರುಗಿಸಿರುವುದಿಲ್ಲ. ಆರೋಪಿತರುಗಳು ಪಿರ್ಯಾದಿದಾರರಿಂದ ಹಣ ಪಡೆದು ಉತ್ಪನ್ನಗಳನ್ನು ಸರಬರಾಜು ಮಾಡದೇ ಪಿರ್ಯಾದಿದಾರರಿಗೆ ನಂಬಿಕೆ ದ್ರೋಹ ಎಸಗಿ,  ಮೋಸ ಮಾಡಿ ಪಿರ್ಯಾದಿದಾರರಿಗೆ ಅಕ್ರಮ ನಷ್ಠ ಉಂಟು ಮಾಡಿರುತ್ತಾರೆ ಹಾಗೂ ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

2) ಪಿರ್ಯಾದಿ Nagaraj B V ದಾರರು  ಬೊಟ್ ಜಾಸ್ಮೀನ್ ನಂಬ್ರ IND-KA 01-MM-2572 ನ ಮಾಲಿಕರಾಗಿದ್ದು ದಿನಾಂಕ 19-04-2022 ರಂದು ಬೆಳಿಗ್ಗೆ 06.00 ಗಂಟೆ ಸಮಯಕ್ಕೆ ಮಂಗಳೂರು ಹಳೆಯ ಮೀನುಗಾರಿಕಾ ಬಂದರಿನಿಂದ ಅರಬ್ಬೀ  ಸಮುದ್ರಕ್ಕೆ ಮೀನುಗಾರಿಕೆಗಾಗಿ ಬೋಟಿನ ಚಾಲಕ ವಲಸಂಗರಿ ರಾಮ್ ಬಾಬು  ಹಾಗೂ ಪೊರಪು ದಾಸು ಪ್ರಾಯ 46 ವರ್ಷ ಹಾಗೂ ಇತರ 7 ಮಂದಿ  ತೆರಲಿದ್ದು  ದಿನಾಂಕ 19-04-2022 ರಂದು ಸಂಜೆ 6.30 ಗಂಟೆಗೆ  ಮೀನುಗಾರಿಕೆ ನಡೆಸುತ್ತಿರುವಾಗ ಸಮುದ್ರ ನೀರಿನ ಅಲೆ ಅಪ್ಪಿಳಿಸಿದ ಪರಿಣಾಮ ಮೀನುಗಾರರ ಪೈಕಿ ಸದ್ರಿ ಪೋರಪು ದಾಸ ಪ್ರಾಯ  ಸುಮಾರು 46 ವರ್ಷ, ಯಾ ತಪ್ಪಿ ಸಮುದ್ರಕ್ಕೆ ಬಿದ್ದಿದ್ದರು ಮತ್ತು ಅವರನ್ನು ರಕ್ಷಿಸಲು ಸದ್ರಿ ಬೋಟಿನ ಎಲ್ಲ ಮೀನುಗಾರರು  ಹಾಗೂ ಸಮೀಪದಲ್ಲಯೇ ಮೀನುಗಾರಿಕೆ  ನಡೆಸುತ್ತಿದ್ದ ಡೈಕಿನ್ ಮೀನುಗಾರಿಕೆ ಬೋಟ್ ಮತ್ತು ಅಲ್ಮಕ್ಕಿ ಮೀನುಗಾರಿಕಾ ಬೊಟಿನ ಮೀನುಗಾರರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರೂ  ಸದ್ರಿ ಪೊರಪು ದಾಸು ಪತ್ತೆಯಾಗಿರುವುದಿಲ್ಲ. ಆತನನ್ನು ಹುಡುಕಿಕೋಡಬೇಕಾಗಿ  ಎಂಬಿತ್ಯಾದಿ ಪಿರ್ಯಾದಿ ಸಾರಾಂಶವಾಗಿದೆ.

ಹೆಸರು- ಪೊರಪು ದಾಸ , ಪ್ರಾಯ 46 ವರ್ಷ, ಎತ್ತರ-5 ಅಡಿ, 3ಇಂಚು,ಬಣ್ಣ-ಕಪ್ಪು ಮೈ ಬಣ್ಣ ,ಮೈ ಮೇಲೆ ಯಾವುದೇ ಆಭರಣ ರುವುದಿಲ್ಲ,ಕೂದಲು-2 ಇಂಚು ಉದ್ದದ ಕಪ್ಪು  ತಲೆ ಕೂದಲು, ಶರೀರ- ದಪ್ಪ ಶರೀರ, ಧರಿಸಿರುವ ಬಟ್ಟೆ-ಕೆಂಪು ಬಣ್ಣದ RCB ಜಾರ್ಸಿ, ನೀಲಿ ಬಣ್ಣದ ಚಕ್ಸ ರುವ ಬರ್ಮುಡಾ ಧರಿಸಿರುತ್ತಾರೆ, ಮಾತನಾಡುವ ಭಾಷೆ- ಹಿಂದಿ,ತಮಿಳು ಮಾತನಾಡುತ್ತಾರೆ

  

Crime Reported in Moodabidre PS

ದಿನಾಂಕ: 21-04-2022 ರಂದು ಸತೀಶ್ ಕುಲಾಲ್ ರವರು ತನ್ನ ಬಾಬ್ತು ಕೆ.ಎ-20-ಎಮ್-7576 ನೇ ನಂಬ್ರದ ಕಾರಿನಲ್ಲಿ ಚಾಲಕರಾಗಿ ನಿತ್ಯಾನಂದ ನಾಯ್ಕ್ ರವರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಹಿಂಬದಿ ಸೀಟಿನಲ್ಲಿ ಬಾಬು ಮತ್ತು ರಮೇಶ್ ರವರನ್ನು ಕುಳ್ಳಿರಿಸಿಕೊಂಡು ಮೂಡಬಿದರೆಯಿಂದ ತೋಡಾರು ಕಡೆಗೆ ಕೆಲಸಕ್ಕೆಂದು ರಾ.ಹೆ 169 ರಲ್ಲಿ ಹೋಗುತ್ತಾ ಮೂಡಬಿದರೆ ತಾಲೂಕು ಬಡಗಮಿಜಾರು ಗ್ರಾಮದ ಶ್ರೀದೇವಿ ನಗರ ಕ್ರಾಸ್ ರಸ್ತೆಯಿಂದ ಸ್ವಲ್ಪ ಮುಂದಕ್ಕೆ ಬೆಳಗ್ಗೆ 08-50 ಗಂಟೆಗೆ ಮಂಗಳೂರು ಕಡೆಯಿಂದ ಮೂಡಬಿದರೆ ಕಡೆಗೆ ಬರುತ್ತಿದ್ದ ಪಿಕಪ್ ವಾಹನ ನಂ: ಕೆ.ಎ-19-ಎ.ಡಿ-2615  ನೇದರ ಚಾಲಕನಾದ ಮೊಹಮ್ಮದ್ ಸುಹೇಲ್ ಎಂಬಾತನು  ಅತೀ ವೇಗ ಮತ್ತು ಅಜಾಗರೂಕತೆಯಿಂದ ರಸ್ತೆಯ ತೀರ ಬಲಬದಿಗೆ ವಾಹನವನ್ನುಚಲಾಯಿಸಿಕೊಂಡು ಬಂದು ಸತೀಶ್ ಕುಲಾಲ್ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಕೆ.ಎ-20-ಎಮ್-7576  ನಂಬ್ರದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ NITHYANANDA NAIK ದಾರರಿಗೆ ಗಡ್ಡದ ಕೆಳಗೆ, ತುಟಿಗೆ, ಬಲಕೈಯ ರಿಸ್ಟ್ ಬಳಿ ರಕ್ತ ಗಾಯ, ಬಲಪಕ್ಕೆಯ ಬಳಿ ತರಚಿದ ನಮೂನೆಯ ಗಾಯವಾಗಿದ್ದು, ಬಲಕಾಲಿನ ಮೊಣಗಂಟಿನ ಕೆಳಗೆ ಕಾಲು ಊದಿಕೊಂಡಿರುತ್ತದೆ. ಕಾರನ್ನು ಚಲಾಯಿಸುತ್ತಿದ್ದ ಸತೀಶ್ ರವರಿಗೆ ಬಲಮೊಣಗಂಟಿಗೆ ಬಲವಾದ ಗುದ್ದಿದ ನಮೂನೆಯ ಒಳನೋವು, ಎಡಕೈಯ ರಿಸ್ಟ್ ಬಳಿ, ಎಡಕಾಲಿನ ಮೊಣಗಂಟಿನಲ್ಲಿ ಎಡಕಾಲಿನ ಹೆಬ್ಬೆರಳಿಗೆ ತರಚಿದ ನಮೂನೆಯ ಗಾಯಗಳು ಗಡ್ಡದ ಬಳಿ ರಕ್ತ ಗಾಯ ಹಾಗೂ ದೇಹದ ಇತರ ಕಡೆಗಳಿಗೆ ಗಾಯದ ನೋವುಗಳಾಗಿರುತ್ತವೆ. ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ಬಾಬು ರವರಿಗೆ ಮೇಲ್ದವಡೆಯ ಹಲ್ಲು ಕಿತ್ತುಹೋಗಿರುತ್ತದೆ. ಬಲಕೈಯ ರಿಸ್ಟ್ ಬಳಿ ಮೂಳೆ ಮುರಿತದ ಗಾಯ ಹಾಗೂ ರಕ್ತಗಾಯ, ಗಡ್ಡದ ಬಳಿ ತರಚಿದ ನಮೂನೆಯ ಗಾಯವಾಗಿರುತ್ತದೆ. ಹಾಗೂ ರಮೇಶ್ ರವರ ಬಲಕೋಲು ಕಾಲಿನ ಮೂಳೆ ಮುರಿತವಾಗಿರುತ್ತದೆ. ಗಡ್ಡಕ್ಕೆ, ತಲೆಗೆ ಹಾಗೂ ಬಲಕಾಲಿನ ಮೊಣಗಂಟಿನ ಬಳಿ ರಕ್ತ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆಯ ಬಗ್ಗೆ ಮೂಡಬಿದರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಸತೀಶ್ ಕುಲಾಲ್ ರವರು ಬೆಳಗ್ಗೆ 09-48  ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಡಿಕ್ಕಿ ಪಡಿಸಿದ  ಕೆ.ಎ-19-ಎ.ಡಿ-2615 ನೇ ನಂಬ್ರದ ಪಿಕಪ್ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೆಕಾಗಿ  ಎಂಬಿತ್ಯಾದಿ.

                                   

ಇತ್ತೀಚಿನ ನವೀಕರಣ​ : 21-04-2022 07:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080