ಅಭಿಪ್ರಾಯ / ಸಲಹೆಗಳು

Crime Reported in Moodabidre PS

ಪಿರ್ಯಾದಿ RANJAN ದಾರರು ನಿನ್ನೆ ದಿನ ದಿನಾಂಕ: 19-05-2022 ರಂದು ಧಮೇಂದ್ರ ಪೂಜಾರಿಯವರ ಬಾಬ್ತು ಮೋಟಾರ್ ಸೈಕಲ್ ನಂ: ಕೆಎ-19-ಹೆಚ್ ಜೆ-7550 ರಲ್ಲಿ ಅಗತ್ಯ ಕೆಲಸದ ನಿಮಿತ್ತ ಮೂಡಬಿದ್ರೆ ಬಂದಿದ್ದು, ಮೂಡಬಿದ್ರೆಯ ಖಾಸಗಿ ಬಸ್ಸು ನಿಲ್ದಾಣದಲ್ಲಿರುವ ಸರದಿ ಹೋಟೆಲ್ ಗೆ ತನ್ನ ದ್ವೀಚಕ್ರ ವಾಹನದಲ್ಲಿ ಹೋಗಿ  ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಚಾ ಕುಡಿದು ವಾಪಾಸು ಬರುವ ಸಮಯ ಸಂಜೆ 5.45 ಗಂಟೆಗೆ  ಕೆಎ-51-ಎಎಫ್-7301 ನೇ ನಂಬ್ರದ ಬಸ್ಸುವೊಂದನ್ನು ಅದರ ಚಾಲಕ ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ನಿರ್ಲಕ್ಷ್ಯತನದಿಂದ ಏಕಾಏಕಿಯಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರು ನಿಲ್ಲಿಸಿದ ಮೋಟಾರ್ ಸೈಕಲ್ ಗೆ ಅಲ್ಲದೇ ಪಿರ್ಯಾದುದಾರರ ಹತ್ತಿರವೇ ನಿಲ್ಲಿಸಿದ ಇನ್ನೊಂದು ಮೋಟಾರ್ ಸೈಕಲ್ ನಂ: ಕೆಎ-19-ಇವಿ-2158 ಗೆ ಬಸ್ಸು ಡಿಕ್ಕಿ ಹೊಡೆದು ಅಪಘಾತದ ಪರಿಣಾಮ ಎರಡೂ ಮೋಟಾರ್ ಸೈಕಲ್ ಕೂಡಾ ಜಖಂ ಆಗಿರುತ್ತದೆ ಎಂಬಿತ್ಯಾದಿ.

Crime Reported in Surathkal PS

ದಿನಾಂಕ: 20-05-2022  ರಂದು ಫಿರ್ಯಾಧಿದಾರರಾದ ಸುರತ್ಕಲ್ ಠಾಣಾ ಪಿ. ಸಿ ಅಂಜಿನಪ್ಪ ಇವರು  ಠಾಣಾ ಹೋಯ್ಸಳ -16  ನೇದರಲ್ಲಿ ರಾತ್ರಿ ಕರ್ತವ್ಯದ ಬಗ್ಗೆ ಚಾಲಕರಾದ ಎ. ಹೆಚ್. ಸಿ.  ಭೀಮಶಂಕರ ಜೊತೆ ರಾತ್ರಿ ಸಮಯ 8:50 ಗಂಟೆಗೆ ಸುರತ್ಕಲ್  ಜಂಕ್ಷನ್ ನಲ್ಲಿರುವಾಗ ಅಲ್ಲಿನ  ಶ್ರೀಕಾಂತೇಶ್ವರಿ ದೈವಸ್ಥಾನ ದ್ವಾರದ ಬಳಿ ಯ ಸಾರ್ವಜನಿಕ  ರಸ್ತೆಯಲ್ಲಿ ಆರೋಪಿಗಳಾದ  ಗಿರಿಧರ,  ನಿಶಾಂತ್ ,  ಲಿಖಿತ್, ಹಾಗೂ ಅಜೀತ್ ಇವರು ಒಟ್ಟು ಸೇರಿ ವೈಯಕ್ತಿಕ ದ್ವೇಷದಿಂದ ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡಿಕೊಂಡು ಸಾರ್ವಜನಿಕರಿಗೆ ನಡೆದಾಡಲು ಹಾಗೂ ಸಂಚರಿಸಲು ಅಡ್ಡಿಪಡಿಸುತ್ತಿರುವವರುಗಳ ಮೇಲೆ ಕಾನೂನು ಕ್ರಮ ಜರಗಿಸಿರುವುದು ಎಂಬಿತ್ಯಾದಿಯಾಗಿರುತ್ತದೆ.

 

Crime Reported in Bajpe PS

“ಫಿರ್ಯಾದಿ Kishor ದಾರರ ಪತ್ನಿ ಶ್ರೀಮತಿ ಭವ್ಯಶ್ರೀ (26 ವರ್ಷ) ಎಂಬಾಕೆಯು ದಿನಾಂಕ 17.05.2022 ರಂದು ಬೆಳಿಗ್ಗೆ ಸುಮಾರು 10:00 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು, ಬಜಪೆ ಗ್ರಾಮದ, ಸೌಹಾರ್ದನಗರ ಕೋರಬ್ದು ದೇವಸ್ಥಾನದ ಬಳಿ ತನ್ನಮನೆಯಿಂದ ತನ್ನ ಮಕ್ಕಳ ಆಧಾರ್ ಕಾರ್ಡ್ ಮಾಡುತ್ತೇನೆಂದು ತನ್ನ ತಾಯಿಗೆ ಹೇಳಿ ತನ್ನ 8  ವರ್ಷದ ಹಾಗೂ 2.5 ವರ್ಷದ ಮಕ್ಕಳನ್ನು ಕರೆದುಕೊಂಡು ಹೋದವರು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಇವರ ಬಗ್ಗೆ ಸಂಬಂಧಿಕರಲ್ಲಿ ನೆರೆಕರೆಯವರಲ್ಲಿ ವಿಚಾರಿಸಿ ಹುಡುಕಾಡಿದರೂ ಪತ್ತೆಯಾಗದೇ ಇದ್ದು ಈ ದಿನ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿದೆ” ಎಂಬಿತ್ಯಾದಿ.

ಹೆಸರು :ಭವ್ಯಶ್ರೀ (26 ವರ್ಷ)

ಎತ್ತರ : 5”2” ಮೈ ಬಣ್ಣ : ಗೋಧಿ ಮೈ ಬಣ್ಣ ಕಪ್ಪು ಗುಂಗುರು ಕೂದಲು

ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.

 

2)“ಫಿರ್ಯಾದಿ Deviprasad ದಾರರ ಅಣ್ಣ ಸಂದೀಪ್ ರೈ (45 ವರ್ಷ) ಎಂಬವರು ದಿನಾಂಕ 14.05.2022 ರಂದು ಬೆಳಿಗ್ಗೆ ಸುಮಾರು 09-30 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು, ಕೊಳಂಬೆ ಗ್ರಾಮದ, ನಂದನಾ ಮನೆ, ಎಂಬಲ್ಲಿಂದ ಬ್ಯಾಗ್ ಸಮೇತ ಹೊರಟು ಹೋದವನು ವಾಪಾಸು ಮನೆ ಬಾರದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಸಂದೀಪ್ ರೈ ರವರ ಬಗ್ಗೆ ಸಂಬಂಧಿಕರಲ್ಲಿ ಮತ್ತು ಸ್ನೇಹತರಲ್ಲಿ ವಿಚಾರಿಸಿದಲ್ಲಿ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ಈ ದಿನ ಠಾಣೆಗೆ ಬಂದು ಫಿರ್ಯಾದಿ ನೀಡಿರುವುದಾಗಿದೆ” ಎಂಬಿತ್ಯಾದಿ.

ಕಾಣೆಯಾದವ ಚಹರೆ

ಹೆಸರು :ಸಂದೀಪ್ ರೈ (45 ವರ್ಷ)

ಎತ್ತರ : 5”8”, ದುಂಡು ಮುಖ ಗುಂಗುರು ಕೂದಲು ಕನ್ನಡಕ್ಕ ಧರಿಸಿರುತ್ತಾರೆ. 

ಧರಿಸಿದ ಬಟ್ಟೆ: ಶರ್ಟ್ ಮತ್ತು ಪ್ಯಾಂಟ್

ಕನ್ನಡ, ತುಳು, ಹಿಂದಿ ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ

Crime Reported in Barke PS

ಪಿರ್ಯಾದಿದಾರರ ಗಂಡ ಮಂಜುನಾಥ (ಪ್ರಾಯ 30) ಇವರು ದಿನಾಂಕ 16-05-2022 ರಂದು ಪಿರ್ಯಾದಿದಾರರ ತವರು ಮನೆಯಾದ  ಮಂಗಳೂರು ನಗರದ ಬರ್ಕೆ ಜಂಕ್ಷನ್ ಬಳಿ ಇರುವ ಮನೆಗೆ ಬಂದವರು ನಂತರ ದಿನಾಂಕ 17-05-2022 ರಂದು ಸಮಯ ಬೆಳಿಗ್ಗೆ 11-00 ಗಂಟೆಗೆ ವಾಪಾಸ್ಸು ತನ್ನ ಮನೆಯಾದ ಶಿಕಾರಿಪುರ ಬೇಗೂರಿಗೆ ಹೋಗುವರೇ ಮಂಗಳೂರು ಕೆ.ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣದಿಂದ ಶಿವಮೊಗ್ಗ ಬಸ್ಸು ಹತ್ತಿದವರಿಗೆ ಪಿರ್ಯಾದಿದಾರರು ಟಿಕೇಟ್ ಮಾಡಿಸಿ ಬಸ್ಸು ತೆರಳುವ ತನಕ ನಿಂತಿದ್ದು,  ನಂತರ ಪಿರ್ಯಾದಿದಾರರ ಗಂಡನಾದ ಮಂಜುನಾಥರವರು ಶಿಕಾರಿಪುರ ಬೇಗೂರಿಗೆ ಈವರೆಗೆ ತಲುಪದೇ ಕಾಣೆಯಾಗಿರುತ್ತಾರೆ.ನಂತರ ಶಿವಮೊಗ್ಗ, ಶಿಕಾರಿಪುರ ಕಡೆಗಳಲ್ಲಿ ಹುಡುಕಾಡಿ ಈವರೆಗೆ ಪತ್ತೆಯಾಗದೇ ಇದ್ದುದ್ದರಿಂದ ಕಾಣೆಯಾದ ಗಂಡ ಮಂಜುನಾಥರವರನ್ನು ಪತ್ತೆ ಹಚ್ಚಿ ಕೊಡಬೇಕು ಎಂಬಿತ್ಯಾದಿ ಸಾರಾಂಶ.

 

ಇತ್ತೀಚಿನ ನವೀಕರಣ​ : 21-05-2022 06:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080