ಅಭಿಪ್ರಾಯ / ಸಲಹೆಗಳು

Crime Reported in: Traffic South Police Station

ಪಿರ್ಯಾದಿ VINOD ರವರು  ದಿನಾಂಕ;20-06-2022 ರಂದು ಅಸೈಗೋಳಿ ಕಡೆಯಿಂದ ನಾಟೆಕಲ್ ಕಡೆಗೆ ಬಸ್ಸಿಗೆ ಹತ್ತಲು ಎಡ ಬದಿಯಲ್ಲಿ ನಡೆದುಕೊಂಡು ಬರುತ್ತಿರುವ ಸಮಯ ಸುಮಾರು ಸಂಜೆ 6-00 ಗಂಟೆಗೆ ಅಸೈಗೋಳಿ ತಲುಪುತ್ತಿದ್ದಂತೆ ಅಸೈಗೋಳಿ ಕಡೆಯಿಂದ ನಾಟೆಕಲ್ ಕಡೆಗೆ ಬರುತ್ತಿದ್ದ ಸ್ಕೂಟರ್ ನಂಬ್ರ:KA-19-ET-0954 ನೇದರ ಸವಾರ ಜೇರಾಲ್ಡ್ ಡಿಸೋಜಾ ಎಂಬಾತನು ಸ್ಕೂಟರ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ತಲೆಗೆ ಮತ್ತು ಬಲಕಾಲಿನ ಹಿಂಬದಿಯ ಪಾದಕ್ಕೆ ಮೂಳೆ ಮುರಿತದ ಗಾಯ,ಬಲ ಕೈ ಭುಜದ ಒಳ ಭಾಗದ ಮೂಳೆಗೆ ಗುದ್ದಿದ  ಗಾಯವಾಗಿದ್ದ ಪಿರ್ಯಾದಿದಾರರನ್ನು ಅಲ್ಲಿ ಸೇರಿದ ಜನರು ಉಪಚರಿಸಿ ಚಿಕಿತ್ಸೆ ಬಗ್ಗೆ ಆಟೋರಿಕ್ಷಾವೊಂದರಲ್ಲಿ ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Crime Reported in:        Bajpe PS                                                 

ದಿನಾಂಕ 20-06-2022 ರಂದು ರಾತ್ರಿ ಸುಮಾರು 10-00 ಗಂಟೆಗೆ ಪಿರ್ಯಾದಿ Richard perara ಮಗ ಲಿಯೋನೆಲ್ ಪಿರೇರಾ ಎಂಬಾತನು ಸ್ಕೂಟರ್ ನಂ KA 19 EX 7336 ನ್ನು ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಎನ್ ಹೆಚ್  169 ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಬಡಗುಳಿಪಾಡಿ ಗ್ರಾಮದ ಗಂಜಿಮಠದಲ್ಲಿರುವ ಗಣಪತಿ ದೇವಸ್ಥಾನ ತಲುಪುವಾಗ ಮಂಗಳೂರು ಕಡಯಿಂದ ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ KA 20 M 9589  ನೇ ನಂಬ್ರದ ಇನೋವಾ ಕಾರ್ ಪಿರ್ಯಾದಿದಾರರ ಮಗನ ಸ್ಕೂಟರ್ ನಂ KA 19 EX 7336 ನೇದಕ್ಕೆ  ಡಿಕ್ಕಿ ಹೊಡೆದ ಪರಿಣಾಮ ಲಿಯೋನೆಲ್ ಪಿರೇರಾ ಸ್ಕೂಟರ್ ಸಮೇತಾ ರಸ್ತೆಗೆ ಬಿದ್ದು ಬಲ ಕಾಲಿಗೆ ಪಕ್ಕೆಲುಬುಗಳಿಗೆ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಗಳು ಉಂಟಾಗಿದ್ದು ಅಪಘಾತ ನಂತರ ಕಾರು ಚಾಲಕನು ಗಾಯಾಳುವನ್ನು ಉಪಚರಿಸಿದೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಅಪಘಾತ ಸ್ಥಳದಿಂದ ಪರಾರಿಯಾಗಿರುತ್ತಾನೆ ಎಂಬಿತ್ಯಾದಿಯಾಗಿದೆ

 

Crime Reported in: Ullal PS  

ಪಿರ್ಯಾದಿದಾರರ MOHAMMED ASHFAQ V A ದೇರಳಕಟ್ಟೆ, ಯೆನೆಪೋಯಾ ಆಸ್ಪತ್ರೆಯ ಹಿಂಭಾಗದಲ್ಲಿರುವ ಸ್ವೀಟ್ ಹೋ ಅಪಾರ್ಟ್ ಮೆಂಟ್ ನಲ್ಲಿ ಬಾಡಿಗೆ ರೂಂ ನಲ್ಲಿ ವಾಸ್ತವ್ಯದಲ್ಲಿದ್ದು, ಪಿರ್ಯಾದಿದಾರರ ತಾಯಿ ಶ್ರೀಮತಿ ಖೈರುನ್ನಿಸಾ ರವರ ಹೆಸರಿನಲ್ಲಿ ನೊಂದಣಿಯಾಗಿರುವ ಕೆಎಲ್ 14-ಟಿ 4620 ನೇ ನಂಬ್ರದ ಯಮಹಾ ಎಫ್ ಝಡ್ ಮೋಟಾರು ಬೈಕ್ ನ್ನು ದಿನಾಂಕ:27-05-2022 ರಂದು ರಾತ್ರಿ 10-00 ಗಂಟೆಗೆ ಪಿರ್ಯಾದಿದಾರರ ಬಾಡಿಗೆ ರೂಂನ ಮುಂಭಾಗದಲ್ಲಿ ಹ್ಯಾಂಡ್ ಲಾಕ್ ಹಾಕಿ ಪಾರ್ಕ್ ಮಾಡಿದ್ದು, ದಿನಾಂಕ:28-05-2022 ರಂದು ಬೆಳಿಗ್ಗೆ 08-30 ಗಂಟೆಗೆ ನೋಡಿದಾಗ ಮೋಟಾರು ಬೈಕ್ ಪಾರ್ಕ್ ಮಾಡಿದ ಸ್ಥಳದಲ್ಲಿ ಇಲ್ಲದೇ ಇದ್ದು, ಮೋಟಾರು ಬೈಕ್ ನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗದೇ ಇರುವುದರಿಂದ ಮೋಟಾರು ಬೈಕ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರಗಿಸಬೇಕಾಗಿ ನೀಡಿದ ಪಿರ್ಯಾದಿ.ಎಂಬಿತ್ಯಾದಿಯಾಗಿರುತ್ತದೆ.

 

Crime Reported in: Traffic North Police Station      

ದಿನಾಂಕ: 20-06-2022 ರಂದು ಪಿರ್ಯಾದಿದಾರರಾದ ಶ್ರೀಮತಿ ಉಮಾ ಎನ್ ಶೆಟ್ಟಿ (70) ರವರು ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಹೋಗಿದ್ದವರು ಪೂಜೆ ಮುಗಿಸಿಕೊಂಡು ಮಂಗಳಾದೇವಿಯಿಂದ ರೂಟ್ ನಂಬ್ರ 15 ‘’ಸಿ’’ ನಂದನ ಟ್ರಾವೆಲ್ಸ್ ಹೆಸರಿನ KA-19-D-4283 ನಂಬ್ರದ ಬಸ್ಸಿನಲ್ಲಿ ಹತ್ತಿ ಅಪರಾಹ್ನ 01:30 ಗಂಟೆಗೆ ಗೋವಿಂದ ದಾಸ ಜಂಕ್ಷನಿನಲ್ಲಿ ಬಸ್ಸಿನಿಂದ ಇಳಿಯುವ ಸಲುವಾಗಿ ಬಸ್ ನ್ನು ನಿಲ್ಲಿಸಿದ್ದು ಇತರ ಪ್ರಯಾಣಿಕರು ಎದುರಿನ ಬಾಗಿಲಿನಿಂದ ಇಳಿದು ಬಳಿಕ ಪಿರ್ಯಾದಿದಾರರಾದ ಶ್ರೀಮತಿ ಉಮಾ ಎನ್ ಶೆಟ್ಟಿ ರವರು ಕೂಡಾ ಬಸ್ಸಿನಿಂದ ಇಳಿಯುತ್ತಾ ಒಂದು ಕಾಲನ್ನು ಬಸ್ಸಿನಿಂದ ಕೆಳಗೆ ಡಾಮಾರು ರಸ್ತೆಗೆ ಇಡುತ್ತಿದ್ದಂತೆ ಬಸ್ಸಿನ ಚಾಲಕ ಬಸ್ಸಿನ ನಿರ್ವಾಹಕನ ಯಾವುದೇ ಸೂಚನೆಗೆ ಕಾಯದೇ ಒಮ್ಮೇಲೆ ಬಸ್ಸನ್ನು ಮುಂದಕ್ಕೆ ಚಲಾಯಿಸಿದ ಪರಿಣಾಮ ಶ್ರೀಮತಿ ಉಮಾ ಎನ್ ಶೆಟ್ಟಿ ರವರು ಡಾಮಾರು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ ಇದರಿಂದ ಶ್ರೀಮತಿ ಉಮಾ ಎನ್ ಶೆಟ್ಟಿ ರವರಿಗೆ ಬಲ ಕೈ ಭುಜದ ಬಳಿ ಗುದ್ದಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಶ್ರೀಮತಿ ಉಮಾ ಎನ್ ಶೆಟ್ಟಿ ರವರನ್ನು ಪರೀಕ್ಷಿಸಿದ ವೈದ್ಯರು ಭುಜದ ಬಳಿ ಮೂಳೆ ಬಿರುಕು ಬಿಟ್ಟ ರೀತಿಯ ಗಂಬೀರ ಸ್ವರೂಪದ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-06-2022 06:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080