ಅಭಿಪ್ರಾಯ / ಸಲಹೆಗಳು

Crime Reported in:Mangalore North PS

ಪಿರ್ಯಾದಿದಾರರ MOTHILALA M REHAMAN  ಮೂರನೇ ಮಗಳಾದ ರಾಬಿಯಾ ಪರ್ವೀನ್ ಳು (22) ಮಂಗಳೂರು ಲೇಡಿಗೋಶನ್ ಎದುರುಗಡೆ ಇರುವ ಲಿಂಕಿಂಗ್ ಟವರ್ ಕಟ್ಟಡದ ಒಂದನೇ ಮಹಡಿಯಲ್ಲಿರುವ ಟೈಲರಿಂಗ್ ಮೆಶಿನ್ ನ ರಿಪೇರಿ/ ಸೇಲ್ಸ್  ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಸುಮಾರು 8 ತಿಂಗಳಿನಿಂದ ಕೆಲಸ ಮಾಡಿಕೊಂಡಿರುತ್ತಾಳೆ. ರಾಬಿಯಾ ಪರ್ವೀನ್ ಪ್ರತೀ ದಿನ ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 8-00 ಗಂಟೆ ವರೆಗೆ ಕೆಲಸ ಮಾಡಿಕೊಂಡಿದ್ದಳು. ದಿನಾಂಕ 18-07-2022 ರಂದು ರಬಿಯಾ ಪರ್ವೀನ್ ಳು ಎಂದಿನಂತೆ ಬೆಳಿಗ್ಗೆ 10-00 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿದ್ದು, ಸಂಜೆ ಸಮಯ 4-30 ಗಂಟೆಗೆ ಕೆಲಸ ಮಾಡುವ ಸ್ಥಳದಿಂದ ಬಂದರಿನಲ್ಲಿರುವ ಸ್ನೇಹಿತರ ಮದುವೆಗೆ ಹೋಗಿಬರುತ್ತೇನೆಂದು ಹೇಳಿ ಹೋದವಳು ವಾಪಾಸ್ಸು ಬಂದಿರುವುದಿಲ್ಲ ಎಂದು ಅಂಗಡಿ ಮಾಲಕರಾ ರಹಮತ್ ರವರು ರಾತ್ರಿ 9-00 ಗಂಟೆಗೆ ತಿಳಿಸಿರುತ್ತಾರೆ.  ಪಿರ್ಯಾದಿದಾರರು ಕೂಡಲೇ ಮಗಳು ರಬಿಯಾ ಪರ್ವೀನ್ ಳಿಗೆ ಫೋನ್ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿರುತ್ತದೆ. ನಂತರ ಸದ್ರಿ ಪರಿಸರದ ಆಸುಪಾಸಿನಲ್ಲಿ ಮತ್ತು ಸಂಬಂಧಿಕರು ಹಾಗೂ ಸ್ನೇಹಿತರಲ್ಲಿ ವಿಚಾರಿಸಿದಲ್ಲಿ ರಬಿಯಾ ಪರ್ವೀನ್ ಳು ಬಂದ ಬಗ್ಗೆ ಯಾರಿಗೂ ಮಾಹಿತಿ ದೊರಕಿರುವುದಿಲ್ಲ ಕಾಣೆಯಾದ ರಬಿಯಾ ಪರ್ವೀನ್ ಳನ್ನು ಪತ್ತೆ ಮಾಡಿಕೊಡಬೇಕಾಗಿ ಎಂದು ನೀಡಿದ ದೂರಿನ ಸಾರಾಂಶ.

 

Crime Reported in: Moodabidre PS

 ದಿನಾಂಕ 20-07-2022 ರಂದು 12.40 ಗಂಟೆಯ ಸಮಯ ಮೂಡಬಿದ್ರೆಯ ಅಲಂಗಾರಿನ ಲತಾ ಬಾರಿನ ಎದುರು ಕಾರ್ಕಳ - ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಆರೋಪಿ ಬಸ್ಸು ನಂಬ್ರ ಕೆಎ-20-ಡಿ-3954 ರ ಚಾಲಕ ಶೈಲೇಶ್ ಶೆಟ್ಟಿ ಎಂಬವನು ಬಸ್ಸನ್ನು ಕಾರ್ಕಳ ಕಡೆಯಿಂದ ಮೂಡಬಿದ್ರೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅದೇ ದಿಕ್ಕಿನಲ್ಲಿ ಬಸ್ಸಿನ ಮುಂದಿನಿಂದ ಪಿರ್ಯಾದಿ Marita Mathais ಸಹಸವಾರರಾಗಿ ಹೋಗುತ್ತಿದ್ದ ಸ್ಕೂಟರ್ ನಂಬ್ರ ಕೆಎ-20-ಇಎಸ್-9791 ನ್ನು ಬಸ್ಸಿನ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಬಸ್ಸು ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನ ಸಹಸವಾರರಾಗಿದ್ದ ಪಿರ್ಯಾದಿದಾರರಿಗೆ ಬಲ ಕೈಯ ಮೂಳೆ ಮುರಿತದ ಗಾಯವಾಗಿದ್ದು ಸ್ಕೂಟರಿನ ಸವಾರ ಸಿಂಥಿಯಾ ಪೌಲ್ ರವರಿಗೆ ಕೂಡ ಗಾಯ ನೋವುಗಳಾಗಿದ್ದು ಇಬ್ಬರು ಗಾಯಾಳುಗಳು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-07-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080