ಅಭಿಪ್ರಾಯ / ಸಲಹೆಗಳು

Crime Reported  in Mangalore South PS

ದಿನಾಂಕ: 20-08-2021 ರಂದು ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ ಶೀತಲ್ ಆಲಗೂರ ರವರು ಠಾಣೆಯಲ್ಲಿರುವ ಸಮಯ 17-50 ಗಂಟೆಗೆ ಮಂಗಳೂರು ನಗರದ ಫುಟ್ ಬಾಲ್ ಮೈದಾನದ ಪಶ್ಚಿಮ ಬದಿಯ ಗ್ಯಾಲರಿ ಬಳಿ ಮರೆಯಲ್ಲಿ ನಿಂತುಕೊಂಡು ಓರ್ವ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾನೆ ಎಂಬುದಾಗಿ  ಖಚಿತ   ವರ್ತಮಾನ ಬಂದಂತೆ, ಸದ್ರಿ ಸ್ಥಳಕ್ಕೆ  18-15  ಗಂಟೆಗೆ  ಸಿಬ್ಬಂಧಿ ಜೊತೆ  ಹೋಗಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿ ಶರತ್ ಗಟ್ಟಿ, ಪ್ರಾಯ 24 ವರ್ಷ,  ವಾಸ : ಸಿ.ಬಿ ಕಂಪೌಂಡ್, ಭವಂತಿ ಸ್ಟ್ರೀಟ್, ಕಾರ್ ಸ್ಟ್ರೀಟ್, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದುಕೊಂಡು   ವಿಚಾರಿಸಿದಾಗ, ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ  ಒಪ್ಪಿಕೊಂಡಿದ್ದು,  ಆರೋಪಿಯನ್ನು ಮಂಗಳೂರು ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ನಡೆಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ  ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

Crime Reported  in Moodabidre PS  

 ಪಿರ್ಯಾಧಿ VASANTHI ರವರ  ಮಗನಾದ ಸಂಧೀಪ ಎಂಬಾತನು ಮಧ್ಯಪಾನ ಮಾಡುವ ಚಟವುಳ್ಳವನಾಗಿದ್ದು,  ನಿನ್ನೆ ದಿನ ದಿನಾಂಕ 19-08-2021ರಂದು ಸಂಜೆ 5:30 ಗಂಟೆಗೆ ಪಿರ್ಯಾಧಿ ಮತ್ತು ಸಂಧೀಪನ ಪತ್ನಿ ವಿನೋದ ಹಾಗು ಪಿರ್ಯಾಧಿಧಾರರ ಮಗಳಾದ ಶಂಕರಿ ಮನೆಯಲ್ಲಿದ್ದ ಸಮಯ ಸಂದೀಪನು ಬಂದು `ಬೇವರ್ಷಿ …ಬಾಲೆಲೆ ನಿಗೆಲೆನು ಮಾತೆರೆನುಲ ಕೇರ್ಪೆ` ಎಂದು ಹೇಳಿ ಪಿರ್ಯಾಧಿದಾರರನ್ನು ತಡೆದು ನಿಲ್ಲಿಸಿ ಮೈಗೆ ಕೈ ಹಾಕಿ ಕೈಯಿಂದ ಆಕೆಯ  ಕೆನ್ನೆಗೆ ಹೊಡೆದಿರುತ್ತಾನೆ. ಆ ಸಮಯ ತಡೆಯಲು ಬಂದ ವಿನೋದಳಿಗೆ ಚಪ್ಪಲಿಯಿಂದ ಹೊಡೆದು ಪಿರ್ಯಾಧಿದಾರರಿಗು ಕೂಡಾ ಚಪ್ಪಲಿಯಿಂದ ಹೊಡೆದ  ಸಮಯದಲ್ಲಿ ಅವರುಗಳು ಜೋರಾಗಿ ಕೂಗಾಡಿದಾಗ ನೆರೆ ಕರೆಯವರಾದ ಸತೀಶ ಮತ್ತು ಹರೀಶ್ ಬರುವುದನ್ನು ನೋಡಿ ಆತನು `ಇನಿ ಬದುಕಿಯರು` ಎಂದು ಹೇಳಿ ಅಲ್ಲಿಂದ ಹೊರಟು ಹೋಗಿರುತ್ತಾನೆ. ಸಂದೀಪನು ಈ ಹಿಂದೆಯೂ ಮನೆಯ ಕಿಟಕಿ ಬಾಗಿಲನ್ನು ಒಡೆದು ನಷ್ಟ ಉಂಟು ಮಾಡಿದ್ದಲ್ಲದೆ ಮನೆಯ ವಿದ್ಯುತ್ ಸಂಪರ್ಕದ ಮೀಟರ್ ಬಾಕ್ಸನ್ನು ಗುದ್ದಿ ಒಡೆದು ಹಾಕಿರುತ್ತಾನೆ. ಅಲ್ಲದೆ ವಿನೋದಳ ಮತ್ತು ಮಕ್ಕಳ ಆಧಾರ್ ಕಾರ್ಡನ್ನು ಹರಿದು ಸುಟ್ಟು ಹಾಕಿರುತ್ತಾನೆ. ಎಂಬಿತ್ಯಾದಿ.

2) ದಿನಾಂಕ: 21-08-2021 ರಂದು ಪಿರ್ಯಾದಿ WHC SARASWATHI ರವರು ಹಾಗೂ ಪಿಸಿ ಜಗದೀಶ್‌ರವರು ಹೊಯ್ಸಳ-19 ವಾಹನದಲ್ಲಿ ಠಾಣಾ ಸರಹದ್ದಿನಲ್ಲಿ ಕರ್ತವ್ಯದಲ್ಲಿರುವಾಗ ಸಮಯ ಸುಮಾರು 12-00 ಗಂಟೆಗೆ ಮೂಡಬಿದರೆ ತಾಲೂಕು ಕಲ್ಲಬೆಟ್ಟು ಗ್ರಾಮದ ‘ರಿಲಾಕ್ಸ್ ಸೆಲೂನ್ ಎಂಬ ಸೆಲೂನ್ ಅಂಗಡಿಯು ವಾರಾಂತ್ಯ ಕರ್ಫ್ಯೂ ಇದ್ದರೂ ಅಂಗಡಿಯನ್ನು ತೆರೆದಿಟ್ಟಿದ್ದು ಸ್ಥಳಕ್ಕೆ ಹೋಗಿ ನೋಡಲಾಗಿ ಅಂಗಡಿಯ ಮಾಲೀಕನು ಅಂಗಡಿಯನ್ನು ತೆರೆದಿಟ್ಟು ಆರೋಪಿಯು ಕೋವಿಡ್ ಮಾರಕ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಕುರಿತಾದ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಮಾರಕ ಕೋವಿಡ್ ಸೋಂಕು ಜನರಿಂದ ಜನರಿಗೆ ಹರಡಿ ಜನರ ಪ್ರಾಣಹಾನಿಯಾಗುವ ಸಾಧ್ಯತೆಯಿದೆ ಎಂಬ ಸ್ಪಷ್ಟ ಅರಿವಿದ್ದರೂ ಕೂಡಾ ಹಾಗೂ ಸರಕಾರ ನಿಗಧಿಪಡಿಸಿದ ಮಾನದಂಡಗಳನ್ನು ಪಾಲಿಸದೇ ಅಂಗಡಿಯನ್ನು ತೆರೆದಿಟ್ಟು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದು ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2021 05:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080