ಅಭಿಪ್ರಾಯ / ಸಲಹೆಗಳು

Crime Reported in Traffic North PS

ದಿನಾಂಕ; 20-09-2021 ರಂದು ಪಿರ್ಯಾದಿದಾರರಾದ ಸುರೇಶ್ ಕುಮಾರ್ ರವರು ತನ್ನ ಬಾಬ್ತು KA-19-HG-4648 ನಂಬ್ರದ ಮೋಟಾರ್ ಸೈಕಲಿನಲ್ಲಿ ಬೊಂದೆಲ್ ಕಡೆಯಿಂದ ವಾಮಂಜೂರು ಕಡೆಗೆ ಹೋಗುತ್ತಾ ಮಧ್ಯಾಹ್ನ ಸಮಯ 2:00 ಗಂಟೆಗೆ ಬೊಂದೆಲ್ ನ ಮಂಜೆಲ್ ಪಾದೆ ಎಂಬಲ್ಲಿ ತಲುಪಿದಾಗ ಎದುರಿನಿಂದ ಅಂದರೆ ವಾಮಂಜೂರು ಕಡೆಯಿಂದ KA-19-HE-2531 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರನಾದ ಶ್ರೀನಿವಾಸ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ, ಮೋಟಾರು ಸೈಕಲಗಳ ಸಮೇತ ಪಿರ್ಯಾದಿದಾರರು ಹಾಗೂ ಅಪಘಾತ ಪಡಿಸಿದ ಮೋಟಾರ್ ಸೈಕಲ್ ಸವಾರ ಶ್ರೀನಿವಾಸ್ ರವರು ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಬಲ ಕೈ ರಿಸ್ಟ್ ಬಳಿ ಮೂಳೆ ಮುರಿತದ ಗಾಯ, ಗಲ್ಲಕ್ಕೆ ತರಚಿತ ರೀತಿಯ ರಕ್ತಗಾಯ ಹಾಗೂ ಎಡಕಾಲಿನ ಹೆಬ್ಬೆರಳ ಬುಡದ ಬಳಿ ತರಚಿದ ರೀತಿಯ ಗಾಯವಾಗಿರುತ್ತದೆ, ಅಲ್ಲದೇ ಅಪಘಾತ ಪಡಿಸಿದ ಮೋಟಾರ ಸೈಕಲ್ ಸವಾರ ಶ್ರೀನಿವಾಸ್ ರವರಿಗೆ ಎದೆಗೆ ಗುದ್ದಿದ ರೀತಿಯ ಗಾಯವಾಗಿರುತ್ತದೆ ಎಂಬಿತ್ಯಾದಿ.

 

2) ದಿನಾಂಕ: 20-09-2021 ರಂದು ಪಿರ್ಯಾದಿದಾರರಾದ ಲಕ್ಷವ್ವ ಮಣ್ಣೂರು ರವರು ಅವರ ಗಂಡನ ದೊಡ್ಡಪ್ಪನ ಮಗನಾದ ಹನಮಂತ ಮಣ್ಣೂರು (33) ರವರು ತನ್ನ ಬಾಬ್ತು KA-19-EW-0478 ನಂಬ್ರದ ಮೋಟಾರು ಸೈಕಲಿನಲ್ಲಿ ಪಣಂಬೂರಿನ ಕೆ.ಕೆ. ಗೇಟ್ ಕಡೆಯಿಂದ ಯಂಗ್ ಸ್ಟಾರ್ ಸರ್ಕಲ್ ಕಡೆಗೆ ಹೋಗುತ್ತಾ ರಾತ್ರಿ ಸಮಯ 7:30 ಗಂಟೆಗೆ ಮೀನಕಳಿಯ ಸರಕಾರಿ ಶಾಲೆಯ ಸಮೀಪ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಎಮ್ಮೆಯೊಂದು ರಸ್ತೆ ದಾಟುತ್ತಿರುವುದನ್ನು ಗಮನಿಸದೇ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಎಮ್ಮೆಗೆ ಡಿಕ್ಕಿಯಾಗುವುದನ್ನು ತಪ್ಪಿಸುವ ಸಲ್ಲುವಾಗಿ ಮೋಟಾರು ಸೈಕಲಿಗೆ ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಲು ಪ್ರಯತ್ತಿಸಿದ ವೇಳೆ ಮೋಟಾರು ಸೈಕಲ್ ಎಮ್ಮೆಗೆ ಡಿಕ್ಕಿಯಾಗಿ ಹನಮಂತ ಮಣ್ಣೂರು ರವರು ಮೋಟಾರು ಸೈಕಲಿನಿಂದ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಬಳಿಕ ಹನಮಂತನ ಸಹೊದರನಾದ ಭೀಮಪ್ಪ ರವರು ಎ.ಜೆ.ಆಸ್ಪತ್ರೆಗೆ ಬಂದಿದ್ದು, ತಲೆಗೆ ಗಂಭೀರ ಗಾಯಗೊಂಡಿದ್ದ ಹನಮಂತನನ್ನು ಎ.ಜೆ.ಆಸ್ಪತ್ರೆಯಿಂದ ವೈದ್ಯಕೀಯ ಸಲಹೆಯ ವಿರುದ್ದ ಆಸ್ಪತ್ರೆಯಲ್ಲಿ ಸಹಿ ಮಾಡಿ ಅವರ ಸ್ವಂತ ಊರಾದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕು ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಹನಮಂತ ಮಣ್ಣೂರುನು ಮೃತಪಟ್ಟಿರುತ್ತಾನೆಂಬುದಾಗಿ ಪಿರ್ಯಾದಿ ಸಾರಾಂಶ.

3) ದಿನಾಂಕ:19-09-2021 ರಂದು ಪಿರ್ಯಾದಿ ಇಸ್ಮಾಯಿಲ್ ಕೆ ರವರ ತಮ್ಮ ಇಯಾಜ್ (18) ಎಂಬಾತನು KA-19-HE-6892 ನಂಬ್ರದ ಸ್ಕೂಟರಿನಲ್ಲಿ ಹಳೆಯಂಗಡಿಯಿಂದ ಕೊಲ್ನಾಡಿಗೆ ಹೋಗುತ್ತಾ ಸಮಯ 19:30 ಗಂಟೆಗೆ ಕೊಲ್ನಾಡು ಜಂಕ್ಷನ್ ಬಳಿ ತೆರೆದ ಡಿವೈಡರ್ ಬಳಿ ಇಂಡಿಕೇಟರ್ ಹಾಕಿ ಬಲಬದಿಗೆ ಹೋಗುತ್ತಿದ್ದಂತೆ ರಾ ಹೆ 66 ರ ಮುಲ್ಕಿ ಜಂಕ್ಷನ್ ಕಡೆಯಿಂದ ಮಂಗಳೂರು ಕಡೆಗೆ KA-19-MK-3772 ನಂಬ್ರದ ನೀಲಿ ಬಣ್ಣದ BMW ಕಾರನ್ನು ಅದರ ಚಾಲಕನಾದ ಯೋಗೀಶ್ ಗೋಯಲ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಇಯಾಜ್ ನು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಯಾಜ್ನ ತಲೆಗೆ ಗಂಭೀರ ಸ್ವರೂಪದ ಒಳಗಾಯವಾಗಿದ್ದು ಅಲ್ಲದೆ ಮೂಗಿಗೆ ಹಾಗೂ ಎಡ ಕೆನ್ನೆ  ಎಡಭಾಗದ ರಕ್ತಗಾಯವಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಹಾಗೂ ಅಪಘಾತ ಪಡಿಸಿದ ಕಾರು ಚಾಲಕ ಅಪಘಾತದ ವೇಳೆ ಅಮಲು ಪದಾರ್ಥ ಸೇವಿಸಿರುವುದಾಗಿದೆ.ಎಂಬಿತ್ಯಾದಿ.

4) ದಿನಾಂಕ:20-09-2021 ರಂದು ಪಿರ್ಯಾದಿ ಅಬ್ದುಲ್ ಹಕೀಂ ರವರ ಅಣ್ಣನಾದ ಆಸೀಫ್ ಎಂಬಾತನು KA-19-HG-3540 ನಂಬ್ರದ ಸ್ಕೂಟರಿನಲ್ಲಿ ಕಾನ ಜಂಕ್ಷನ್ ಕಡೆಯಿಂದ ಮನೆಯಾದ ಜೋಕಟ್ಟೆ ಕಡೆಗೆ ಹೋಗುತ್ತಾ ಮದ್ಯಾಹ್ನ 2-00 ಗಂಟೆಗೆ ತೋಕೂರು ಸಮಾಜ ಸೇವಾ ಸಂಘಕ್ಕೆ ಸಂಬಂಧಿಸಿದ ಕಛೇರಿ ಕಟ್ಟಡದ ಎದುರಿನ ಡಾಮರು ರಸ್ತೆಯಲ್ಲಿ ಹೋಗುತ್ತಿದ್ದಂತೆ ಜೋಕಟ್ಟೆ ಕಡೆಯಿಂದ ಕಾನಾ ಕಡೆಗೆ KA-19-AC-0964 ನಂಬ್ರದ ಪಿಕಪ್ ವಾಹನವನ್ನು ಅದರ ಚಾಲಕನಾದ ಅಶೋಕ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಆಸೀಫ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಆಸೀಫ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಹೊಟ್ಟೆಯ ಬಲಭಾಗಕ್ಕೆ ಗುದ್ದಿದ ಗಂಭೀರ ಸ್ವರೂಪದ ಒಳಗಾಯ, ಸೊಂಟಕ್ಕೆ ಗುದ್ದಿದ ರೀತಿಯ ಗಾಯ, ಎರಡು ಕೈಗಳಿಗೆ ಹಾಗೂ ಬಲಕಾಲಿನ ಮೊಣಗಂಟಿಗೆ ಅಲ್ಲಲ್ಲಿ ತರಚಿದ ಗಾಯವಾಗಿ ಆಸೀಪ್ ರವರು ಚಿಕಿತ್ಸೆಯ ಬಗ್ಗೆ ಮಂಗಳೂರು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಎಂಬಿತ್ಯಾದಿ.

Crime Reported in Mangalore East PS

ಈ ಪ್ರಕರಣದ ಸಾರಂಶವೇನೆಂದರೆ ದಿನಾಂಕ:21-09-2021 ರಂದು ಪ್ರಕರಣದ ಪಿರ್ಯಾದಿದಾರರು ಇಲಾಖಾ ವಾಹನ ಕೆಎ-19-ಜಿ-552 ನೇದರಲ್ಲಿ ಸಿಬ್ಬಂದಿಗಳ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು 10-15 ರ ವೇಳೆಗೆ ಶೇಖ್ ಮಹಮ್ಮದ್ ನಿಹಾಲ್ ಎಂಬಾತನು ಪಂಪುವೆಲ್ ನಿಂದ ಕರ್ನಾಟಕ ಬ್ಯಾಂಕ್ ಹೋಗುವ ದಾರಿ ಮಧ್ಯೆ  ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದುದನ್ನು ಕಂಡು ಆತನ ಬಳಿ ಹೋಗುತಿದ್ದಾಗ ಆತನು ನಮ್ಮನ್ನು ಕಂಡು ಸಿಗರೇಟನ್ನು ದೂರ ಬಿಸಾಡಿದ್ದು, ಆತನನ್ನು ವಿಚಾರಿಸಲಾಗಿ ಆತನ ಮಾತು ತೊದಲುತ್ತಿದ್ದು, ಬಾಯಿಯಿಂದ ಅಮಲು ಪದಾರ್ಥ ಸೇದಿದ ವಾಸನೆ ಬರುತ್ತಿದ್ದರಿಂದ, ಆತನನ್ನು ಕೂಲಂಕುಷವಾಗಿ ವಿಚಾರಸಿದ್ದಲ್ಲಿ ಆತನು ಸಿಗರೇಟಿನ ಜೊತೆ ಗಾಂಜಾ ಸೇರಿಸಿ ಸೇದಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಆತನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ದೃಡಪಟ್ಟಿರುವುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

Crime Reported in Bajpe PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, “ಫಿರ್ಯಾದಿದಾರರು  ದಿನಾಂಕ 20.09.2021 ರಂದು ಸಂಜೆ ಕೆಲಸ ಮುಗಿಸಿ  ಕೈಕಂಬ ಪೆಟ್ರೋಲ್ ಪಂಪು ಬಳಿ ಎಟಿಎಮ್ ಗೆ ತೆರಳಿ ವಾಪಾಸು ಕೈಕಂಬ ಜಂಕ್ಷನ್ ಕಡೆಗೆ  ರಸ್ತೆ ಬದಿ ನಡೆದುಕೊಂಡು ಬರುತ್ತಿರುವಾಗ ಸಂಜೆ 18.00 ಗಂಟೆಗೆ ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಕೈಕಂಬದ ಗುಜರಿ ಅಂಗಡಿ ಬಳಿ ತಲುಪುತ್ತಿದ್ದಂತೆಯೇ  ಪಿರ್ಯಾದಿದಾರರ ಹಿಂದಿನಿಂದ ಕಾರು ನಂಬ್ರ ಕೆಎ-19 ಎಮ್ ಹೆಚ್-4443  ನೇಯದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು  ಅವರ ಎಡಕಾಲಿನ  ಮಣಿಗಂಟಿಗೆ  ಬಲವಾದ ಗುದ್ದಿದ ನೋವು, ಬಲಕಾಲ ಮೊಣಗಂಟಿಗೆ, ಎಡಕಾಲಿನ ಮೊಣಗಂಟಿಗೆ ಗುದ್ದಿದ ನೋವಾಗಿದ್ದು, ಗಾಯಾಳು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

2) ಫಿರ್ಯಾದಿ Sanath Kumar Shetty ರವರು “ದಿನಾಂಕ: 16-09-2021 ರಂದು ಬೆಳಗ್ಗೆ 10-01 ಗಂಟೆಗೆ ಮಂಗಳೂರು ತಾಲೂಕು ಕೊಂಡೆಮೂಲ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯ ಒಳಗಡೆ ಆರೋಪಿ ಹರಿಶ್ಚಂದ್ರ ಸಿ ಎಂಬಾತನು ಪ್ರವೇಶ ಮಾಡಿ ಆಡಳಿತ ಮಂಡಳಿಯ ಅನುಮತಿ ಇಲ್ಲದೇ ಕಪಾಟುಗಳನ್ನು ತೆರೆದು ಅದರಲ್ಲಿದ್ದ ಮುಖ್ಯ ದಾಖಲಾತಿಗಳನ್ನು ಕಳವು ಮಾಡಿರುತ್ತಾರೆ” ಎಂಬಿತ್ಯಾದಿ

Crime Reported in Barke PS

 ಫಿರ್ಯಾದಿ MANJUNATHA  K ರವರು ಹಾಗೂ ಸಹೋದ್ಯೋಗಿಗಳು ಡಯಟ್ ಸಂಸ್ಥೆಯಲ್ಲಿ  ಕರ್ತವ್ಯದಲ್ಲಿದ್ದಾಗ ಮದ್ಯಾಹ್ನ ಸುಮಾರು 12-10 ಗಂಟೆಯ ಸಮಯಕ್ಕೆ  ನವೀನ ಎಂಬಾತನು ಬ್ಯಾಗಿನೊಂದಿಗೆ ಕಚೇರಿಗೆ ಬಂದು ಕಚೇರಿಯ ಮಹಿಳಾ ಉಪನ್ಯಾಸಕಿ ವೀಣಾ ಎಂಬವರನ್ನು ಕೇಳಿದ್ದು  ಕಚೇರಿಯಲ್ಲಿದ್ದ  ಇತರ ಮಹಿಳಾ ಉದ್ಯೋಗಿಗಳಾದ ನಿರ್ಮಲ , ರೀನಾ,ಮತ್ತು ಗುಣವತಿಯವರು  ವೀಣಾ ಮೇಡಂ ರವರು ಶಾಲಾ ಸಂದರ್ಶನಕ್ಕಾಗಿ ಹೊರ ಹೋಗಿರುತ್ತಾರೆ, ಎಂದು ಹೇಳಿದಾಗ ಕೋಪಗೊಂಡ ಆರೋಪಿತನು ಅವರಿಗೆ ಒಂದು ಗಿಫ್ಟ್ ಕೊಡಲಿಕ್ಕೆ ಇದೆ, ಎಂದು ತಿಳಿಸಿ ತನ್ನ ಬ್ಯಾಗಿನಲ್ಲಿದ್ದ ಕತ್ತಿಯೊಂದನ್ನು  ಹೊರತೆಗೆದು ಸರಕಾರಿ ಕರ್ತವ್ಯ ನಿರತರಾಗಿದ್ದ ಡಯಟ್ ಸಂಸ್ಥೆಯ ಉದ್ಯೋಗಿಗಳಾದ ನಿರ್ಮಲ, ರೀನಾ ಮತ್ತು ಗುಣವತಿಯವರಿಗೆ  ಕತ್ತಿಯಿಂದ ಯದ್ವ-ತದ್ವ ಹಲ್ಲೆನಡೆಸಿ ರಕ್ತಗಾಯ ಗೊಳಿಸಿ ಕೊಲೆಯತ್ನ ನಡೆಸಿರುವುದಾಗಿ ಎಂಬಿತ್ಯಾದಿ.

Crime Reported in Urva PS

ಫಿರ್ಯಾದಿ NAGARAJA HALAPPA ರವರು ದಿನಾಂಕ 17-09-2021 ರಂದು ಅವರ ಊರಾದ ಗದಗ ಜಿಲ್ಲೆಯ ಹೆಬ್ಬಾಳಕ್ಕೆ ಹೋಗಿದ್ದು, ಈ ದಿನ ದಿನಾಂಕ 20-09-2021 ರಂದು ಬೆಳಿಗ್ಗೆ 05-30 ಗಂಟೆಗೆ ವಾಪಾಸು ಮಂಗಳೂರಿಗೆ ಬಂದು ಅವರು ವಾಸವಾಗಿದ್ದ ಅಶೋಕನಗರದ ಕಲ್ಬಾವಿ ಸಾಗರ ಕೋಟ್ ನ 5ನೇ ಅಡ್ಡ ರಸ್ತೆಯಲ್ಲಿರುವ ಶ್ರೀಮತಿ ಎಂ.ಕೆ. ವಿಮಲ ರವರ ಬಾಡಿಗೆ ಮನೆಗೆ ಬಂದು ನೋಡಲಾಗಿ ಅವರ ಹೆಂಡತಿಯಾದ ಶ್ರೀಮತಿ ರೇಣುಕಾ ಚೌವಡಾಳ (ಪ್ರಾಯ 30 ವರ್ಷ), 10 ವರ್ಷ ಪ್ರಾಯದ ಮಗಳು ಹಾಗೂ 6 ವರ್ಷ ಪ್ರಾಯದ ಮಗ ಮನೆಯಲ್ಲಿ ಕಾಣಿಸದೇ ಇದ್ದು, ಮನೆಯ ಮಾಲಿಕರಲ್ಲಿ ವಿಚಾರಿಸಿದಾಗ ದಿನಾಂಕ 18-09-2021 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾಧುದಾರರ ಹೆಂಡತಿಯವರಾದ ಶ್ರೀಮತಿ ರೇಣುಕಾ ಚೌವಡಾಳ ರವರು ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮನೆಯ ಎಲ್ಲಾ ಸಾಮಾಗ್ರಿಗಳೊಂದಿಗೆ ಆಕೆಯ ಚಿಕ್ಕಮ್ಮನ ಊರಿಗೆ ಹೋಗಿರುವುದಾಗಿ ತಿಳಿಸಿರುವುದಾಗಿದ್ದು, ಪಿರ್ಯಾಧುದಾರರು ಎಲ್ಲಾ ಕಡೆ ಹುಡುಕಾಡಿದ್ದು, ಇದುವರೆಗೂ ಪತ್ತೆಯಾಗದೆ ಇದ್ದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದು ಸಾರಾಂಶವಾಗಿರುತ್ತದೆ.

ಕಾಣೆಯಾದ ಹೆಂಗಸಿನ ಚಹರೆ ವಿವರ

1) ಹೆಸರು- ರೇಣುಕಾ ಚವಡಾಳ

2) ಪ್ರಾಯ-30 ವರ್ಷ

3) ಎತ್ತರ-5.5 ಅಡಿ

4) ಶರೀರ-ಸಾಧಾರಣ ಶರೀರ

5) ಮೈಬಣ್ಣ-ಗೋಧಿ ಮೈ ಬಣ್ಣ

6) ಗೊತ್ತಿರುವ ಭಾಷೆ-ಕನ್ನಡ.

Crime Reported in Surathkal PS

ಪಿರ್ಯಾದಿ KALANDER SAADATH ದಿನಾಂಕ 19-09-2021 ರಂದು ಸಂಜೆ ಸುಮಾರು 03-15 ಗಂಟೆಗೆ ಆರೆಂಜ್ ಮಾರ್ಟ್ಗೆ ತೆರಳುತ್ತಿರುವ ಸಮಯ ಆಪಾದಿತ ಜಿಯಾವುದ್ದೀನ್ ಮತ್ತು ಶ್ರೀಮತಿ ಅಪ್ರಾಜ್ ಫೌಜಿಯಾ ರವರುಗಳು ತಮ್ಮ ಕಾರ್ ರೇಂಜ್ ರೋವರ್ ನಂಬ್ರ ಕೆಎ-19-ಎಮ್ಎಲ್-6699 ನೇದ್ದರಲ್ಲಿ ಬಂದು ಆರೆಂಜ್ ಮಾರ್ಟ್ ಮುಂದಿನ ರಸ್ತೆಯಲ್ಲಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿ ನೋಡಿಕೊಳ್ಳುವುದಾಗಿ ಬೆದರಿಸಿರುತ್ತಾರೆ. ಆಪಾದಿತರು ಮತ್ತು ಪಿರ್ಯಾದಿದಾರರಿಗೆ ಕೌಟುಂಬಿಕ ವಿಚಾರವಾಗಿ ವೈಮನಸ್ಸು ಜಗಳವಿದ್ದು ಇದೇ ಕಾರಣದಿಂದ ಮತ್ತೆ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-09-2021 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080