ಅಭಿಪ್ರಾಯ / ಸಲಹೆಗಳು

Crime Reported in Mangalore West Traffic PS   

 ಪಿರ್ಯಾದಿ Mr ABHIJITH V KUMAR ದಾರರು ದಿನಾಂಕ: 21-10-2021 ರಂದು ಸಮಯ ಸುಮಾರು ಬೆಳಿಗ್ಗೆ 8.10 ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-EU-2088 ನೇ ದನ್ನು ಹಂಪನಕಟ್ಟೆ ಕಡೆಯಿಂದ ಪಿವಿಎಸ್ ಕಡೆಗೆ ಕೆ.ಎಸ್.ಆರ್ ರಸ್ತೆಯಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಪ್ರಭಾತ ಥಿಯೇಟರ್ ಮುಂಭಾಗ ತಲುಪುತ್ತಿದ್ದಂತೆ ನವಭಾರತ ಕಡಯಿಂದ ಸಿಟಿ ಸೆಂಟರ್ ಕಡೆಗೆ KA-19-ML-4615ನೇ ಕಾರನ್ನು ಅದರ ಚಾಲಕ ನಿರ್ಲಕ್ಷತನದಿಂದ ಹಾಗೂ ಅಜಾಗರೂತೆಯಿಂದ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಪ್ರಭಾತ ಥಿಯೇಟರ್ ಮುಂಭಾಗ ಡಿವೈಡರ್ ಬಳಿ ಒಮ್ಮೇಲೆ ಬಲಕ್ಕೆ ಯುಟರ್ನ್ ತೆಗೆದುಕೊಂಡ  ಪರಿಣಾಮ ಕಾರಿನ ಎಡಗಡೆಯ ಡೋರ್ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ಪಿರ್ಯಾದಿದಾರರು ಮೋಟರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಪಿರ್ಯಾದಿದಾರರ ಬೆನ್ನಿನ ಮೂಳೆ ಮುರಿತದ ಗಾಯವಾಗಿದ್ದು, ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಕಾರಿನ ಚಾಲಕರು ರಸ್ತೆ ಬದಿಗೆ ತಂದು ಉಪಚರಿಸಿ ಚಿಕಿತ್ಸೆಗೆ ನಗರದ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಸಿದ ವೈದ್ಯಾಧಿಕಾರಿಗಳು ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Crime Reported in Mangalore Rural PS

ಪಿರ್ಯಾದಿದಾರರಾದ ಶ್ರೀಮತಿ ಪ್ರಸಿಲ್ಲಾ ಡಿಸೋಜಾರವರು 2016 ನೇ ಇಸ್ವಿಯಲ್ಲಿ ಪ್ರಶಾಂತ್ ಪೌಲ್ ರಸ್ಕಿನ್ ಮತ್ತು ಜ್ಯೋಯ್ಸ್ ರೀನಾ ರಸ್ಕಿನ್ ಎಂಬವರ ರೆಡ್ ರಾಕ್ ಹೈಲೈಟ್ಸ್ ಕಟ್ಟಡದಲ್ಲಿ 250 Sqft ಪ್ಲಾಟ್ ನಂಬ್ರ 409 ನ್ನು ಮತ್ತು 710 Sqft ನ ಪ್ಲಾಟ್ ನಂಬ್ರ 410 ನ್ನು ಖರೀಧಿಸುರವರೇ ರೂಪಾಯಿ 32 ಲಕ್ಷ ಹಣವನ್ನು ಪಾವತಿಸಿರುತ್ತಾರೆ. ಪ್ಲಾಟ್ ನಂಬ್ರ 409 ಪಿರ್ಯಾದಿದಾರರ ಹೆಸರಿಗೆ ನೊಂದಾವಣೆಯಾಗಿದ್ದು ಪ್ಲಾಟ್ ನಂಬ್ರ 410 ನ್ನು ಆರೋಪಿತನಾದ ಪ್ರಶಾಂತ್ ಪೌಲ್ ರಸ್ಕಿನ್ ಮತ್ತು ಜ್ಯೋಯ್ಸ್ ರೀನಾ ರಸ್ಕಿನ್ ರವರು ಬೇರೆಯವರ ಹೆಸರಿಗೆ ನೋಂದಾವಣೆ ಮಾಡಿ ಮೋಸ ಮಾಡಿರುತ್ತಾರೆ. ಎಂಬಿತ್ಯಾದಿ

Crime Reported in Mangalore East PS

ದಿನಾಂಕ 21-10-2021 ರಂದು 00-30ರ  ವೇಳೆಗೆ ಇಲಾಖಾ ವಾಹನ ದರಲ್ಲಿ ಪಿರ್ಯಾದಿ Jagannath K ದಾರರು ಹಾಗೂ ಸಿಬ್ಬಂಧಿಯವರು ಠಾಣಾ ವ್ಯಾಪ್ತಿಯಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಯೆಯ್ಯಾಡಿ ಹರಿಪದವು ಕ್ರಾಸ್ ನ  ಬಳಿ ಸಾರ್ವಜನಿಕ ಸ್ಥಳದಲ್ಲಿ ಮೂವರು ಯುವಕರು ನಿಂತು ಸಿಗರೇಟು ಸೇದುತ್ತಿದ್ದು  ಅವರ ಬಳಿಗೆ ಹೋಗಿ ವಿಚಾರಿಸಿದಲ್ಲಿ ಬಾಯಿಯಿಂದ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವ ವಾಸನೆ ಬರುತ್ತಿದ್ದುದರಿಂದ ಅವರುಗಳನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಲ್ಲಿ , ಗಾಂಜಾ ತುಂಬಿಸಿದ ಒಂದು ಸಿಗರೇಟನ್ನು ಇಬ್ಬರು ಜೊತೆಯಾಗಿ ಸೇವನೆ ಮಾಡಿರುವುದಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಅವರನ್ನು ರಾತ್ರಿ 1-30 ರ ವೇಳೆಗೆ ವಶಕ್ಕೆ ಪಡೆದುಕೊಂಡು ಗಾಂಜಾ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆರೋಪಿಗಳು ಗಾಂಜಾ ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ದ್ರಡಪಟ್ಟಿರುವುದರಿಂದ ಇವರ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.             

Crime Reported in Bajpe PS             

ಫಿರ್ಯಾದಿ VISHNARAJ ದಾರರ ತಂದೆ ಸೋಮಯ್ಯ 50 ವರ್ಷ ಎಂಬವರು  ತನ್ನ ಮನೆಯಾದ ಲತ್ರೊಟ್ಟು ಹೌಸ್ ಬಡಗ ಎಡಪದವು  ಎಂಬಲ್ಲಿಂದ ದಿನಾಂಕ 18-10-2021 ರಂದು ರಾತ್ರಿ 4-00 ಗಂಟೆಗೆ ಮನೆಯಿಂದ ಅಂಗಡಿಗೆ ಹೋಗಿ ಬರುತ್ತೆನೆಂದು ಹೇಳಿ ಹೋದವರು ಈವರೆಗೂ ಬಾರದೇ ಕಾಣೆಯಾಗಿದ್ದು ತಂದೆಯವರು ಮನೆಗೆ ಬಾರದೇ ಇದ್ದುದರಿಂದ ಎಲ್ಲಾ ಕಡೆ ಹುಡುಕಾಡಿ ಮತ್ತು ಸಂಭಂಧಿಕರಲ್ಲಿ ವಿಚಾರಿಸಿ ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

 

ಕಾಣೆಯಾದವರ ಚಹರೆ ವಿವರ:

ಹೆಸರು:ಸೋಮಯ್ಯ

ಪ್ರಾಯ:50 ವರ್ಷ

ಎತ್ತರ:5ಅಡಿ 5ಇಂಚು

ಮೈ ಬಣ್ಣ:ಕಪ್ಪು ಮೈ ಬಣ್ಣ

ಕೂದಲು:ಕಪ್ಪ ತಲೆ ಕೂದಲು

ಧರಿಸಿದ ಬಟ್ಟೆ:ಕಪ್ಪು ಗೆರೆಗಳಿರುವ ಬಿಳಿ ಬಣ್ಣದ ಶರ್ಟ,ಬಿಳಿ ಗೆರೆಗಳಿರುವ ನೀಲಿ ಲುಂಗಿ

 

ಇತ್ತೀಚಿನ ನವೀಕರಣ​ : 21-10-2021 07:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080