ಅಭಿಪ್ರಾಯ / ಸಲಹೆಗಳು

Crime Reported in Mangalore North PS

ಪಿರ್ಯಾದಿದಾರರಾದ  ರಿನ್ಸ್ ಮೋನು ಕ್ಷೇವಿಯರ್ ರವರು  ಮೂಲತ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ವಾಸಿಯಾಗಿದ್ದು ಮಂಗಳೂರು ನಗರದಲ್ಲಿರುವ  ನಾಗುರಿ ಪಂಪ್ ಹೌಸ್ ಬಳಿ ಇರುವ  ಬೆನೆಡಿಕ್ಟ್ ಡಿಸೋಜಾರವರ  ಬಾಡಿಗೆ ಮನೆಯಲ್ಲಿ ನನ್ನ ಸ್ನೇಹಿತ ನಾಗೇಶ್ ಎಂಬಾತನ ಜೊತೆ ವಾಸವಿದ್ದು ಮಂಗಳೂರು ನಗರದ  ಪಂಪುವೆಲ್ ನ ಒಮೇಗಾ ಆಸ್ಪತ್ರೆಯ ಎದುರುಗಡೆ  ಇರುವ ಕಟ್ಟಡದ  ಮುರಳಿ ಘೋಷ್ ಎಂಬ ಮಾಲಕತ್ವದ  ಕ್ಲಾಸಿಕ್ ಅಟೋಮೊಬೈಲ್ಸ್ ಎಂಬ  ವಾಹನಗಳ ಬಿಡಿಭಾಗಗಳ ಮಾರಾಟದ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಅಂಗಡಿಯಲ್ಲಿ ಬಿಡಿಭಾಗಗಳ ಪಾರ್ಸಲ್‌ ನೀಡುವರೇ ಮತ್ತು ಮಾರಾಟದ ಹಣ ಕಲೆಕ್ಷನ್  ಬಗ್ಗೆ ಹೋಗಿ ಬರಲು ಅಂಗಡಿಯಲ್ಲಿ KA-19 HH-1286 ನೊಂದಣಿ ನಂಬ್ರದ ಗ್ರೇ ಬಣ್ಣದ ಹೊಂಡಾ ಆಕ್ಟಿವಾ 125 ಸ್ಕೂಟರ್ ಇರುತ್ತದೆ. ಅವರು ಎಂದಿನಂತೆ ಅಂಗಡಿಯಲ್ಲಿ ಕೆಲಸದಲ್ಲಿ ಇದ್ದು ದಿನಾಂಕ:07-01-2022 ರಂದು ಅಂಗಡಿಯ ಹೆಸರಿನಲ್ಲಿರುವ KA-19 HH-1286 ನೊಂದಣಿ ನಂಬ್ರದ ಹೊಂಡಾ ಆಕ್ಟಿವಾ 125 ಸ್ಕೂಟರಿನಲ್ಲಿ ಕಾರ್ಕಳದ ಗ್ಯಾರೇಜ್ ಗೆ ಬಿಡಿಭಾಗಗಳ ಪಾರ್ಸಲ್ ನೀಡುವರೇ ಮಂಗಳೂರು ನಗರದ ಜ್ಯೋತಿ ವೃತ್ತದ ಸ್ವಲ್ಪ ಮುಂದುಗಡೆ ಇರುವ ಮಹರಾಜ ಹೋಟೆಲ್ ಇರುವ ಕಟ್ಟಡದ ಎದುರುಗಡೆ ಬೆಳಿಗ್ಗೆ ಸುಮಾರು 11-30 ಗಂಟೆಗೆ ಪಾರ್ಸಲ್ ನೀಡಲು ಬಸ್ಸಿನ ಬಳಿಗೆ ಬಂದು ಬಸ್ಸು ಕಾಯುತ್ತಾ ಇದ್ದಾಗ,  ಬೆಳಿಗ್ಗೆ ಸುಮಾರು 11-45 ಗಂಟೆಗೆ ಬಸ್ಸು ಬಾರದೇ ಇದ್ದು ಸ್ಕೂಟರ್ ಕಡೆ ನೋಡುವಾಗ  ಸ್ಕೂಟರ್ ಅಲ್ಲಿ ಇರದೇ ಇದ್ದು ಸ್ವಲ್ಪ ಮುಂದುಗಡೆ ಉದ್ದ ಕೂದಲಿನ ಒಬ್ಬಾತ ವ್ಯಕ್ತಿ ಪಾರ್ಕ್ ಮಾಡಿ ನಿಲ್ಲಿಸಿದ್ದ ಸ್ಕೂಟರನ್ನು ತೆಗೆದುಕೊಂಢು ಹೋಗುತ್ತಿದ್ದುದನ್ನು ಕಂಡು ಕೂಡಲೇ  ಬೊಬ್ಬೆ ಹಾಕಿದೆನು. ಆದರೆ ಅಷ್ಟು ಹೊತ್ತಿಗೆ ಪಿರ್ಯಾದಿದಾರರ ದ್ವಿಚಕ್ರ ವಾಹನವನ್ನು ಸದರಿ ವ್ಯಕ್ತಿ ಕಳವು ಮಾಡಿಕೊಂಡು ಹೋಗಿದ್ದು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಎಂಬಿತ್ಯಾದಿ ದೂರಿನ ಸಾರಾಂಶವಾಗಿರುತ್ತದೆ.

Crime Reported in Mangalore South PS

ಪಿರ್ಯಾದಿದಾರರಾದ Sheetal Algur ರವರು ದಿನಾಂಕ 21-01-2022 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ (ಕಾ&ಸು-1) ಶೀತಲ್ ಅಲಗೂರ ಆದ ನಾನು ಮೇಲಾಧಿಕಾರಿಗಳ ಆದೇಶದಂತೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಮಂಗಳೂರು ನಗರದ ಫಳ್ನೀರ್ ರಸ್ತೆಯ ಫೈಲ್ಯಾಂಡ್ ಪ್ಲಾಜಾ ಕಟ್ಟಡದ 2 ನೇ ಮಹಡಿಯಲ್ಲಿ ರಿಕ್ರಿಯೇಶನ್ ಕ್ಲಬ್ ಒಂದನ್ನು ತೆರೆದು, ಹೆಚ್ಚು ಜನರನ್ನು ಗುಂಪು ಸೇರಿಸಿರುವುದಾಗಿ ಭಾತ್ಮೀದಾರರಿಂದ ಮಾಹಿತಿ ಬಂದಿರುತ್ತದೆ. ಅದರಂತೆ ನಾವುಗಳು ಕೂಡಲೇ ಸಮಯ ಸುಮಾರು 15-00 ಗಂಟೆಗೆ ಫಳ್ನೀರ್ ರಸ್ತೆಯ ಪೈಲ್ಯಾಂಡ್ ಪ್ಲಾಜಾ ಕಟ್ಟಡದ 2 ನೇ ಮಹಡಿಗೆ ಹೋಗಿ ನೋಡಲಾಗಿ, ಅಲ್ಲಿ ಸ್ಕಂದ ರಿಕ್ರಿಯೇಶನ್ ಎಂಬ ಹೆಸರಿನ  ಕ್ಲಬ್ ನಲ್ಲಿ ಸುಮಾರು 70-80 ಜನರು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಮುಖಕ್ಕೆ ಮಾಸ್ಕ್ ಧರಿಸದೆ ರಮ್ಮಿ ಆಟದಲ್ಲಿ ನಿರತರಾಗಿದ್ದು, ಸಮವಸ್ತ್ರದಲ್ಲಿದ್ದ ನಾವುಗಳು ಬರುವುದನ್ನು ನೋಡಿ ಅಲ್ಲಿಂದ ಓಡಿ ಹೋಗಿರುತ್ತಾರೆ. ಕೋವಿಡ್ 19 ಸಾಂಕ್ರಾಮಿಕ ರೋಗ ಒಬ್ಬರಿಂದ ಒಬ್ಬರಿಗೆ ಹರಡಿ ಮಾನವ ಜೀವಕ್ಕೆ ಹಾನಿಯಾಗುವ ಬಗ್ಗೆ ತಿಳಿದೂ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ರಿಕ್ರಿಯೇಶನ್ ಕ್ಲಬ್ ಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಹೊರಡಿಸಿರುವ ಆದೇಶದ ಬಗ್ಗೆ ತಿಳಿದೂ ಸಹಾ, ಸ್ಕಂದ ರಿಕ್ರಿಯೇಶನ್ ಕ್ಲಬ್ ನ ಮೇಲ್ವಿಚಾರಕರು ಕ್ಲಬ್ ಅನ್ನು ತೆರೆದು ಹೆಚ್ಚು ಜನರನ್ನು ಗುಂಪು ಸೇರಿಸಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲಿಸದೇ ನಿರ್ಲಕ್ಷ್ಯ ವಹಿಸಿರುತ್ತಾರೆ.  ಎಂಬಿತ್ಯಾದಿಯಾಗಿರುತ್ತದೆ.

Crime Reported in Ullal PS

1) ಪಿರ್ಯಾದಿ Sahira Banu ದಾರರ ಗಂಡ ರಹಮತ್ತುಲ್ಲಾ (55)ರವರು ದಿನಾಂಕ 01-01-2022 ರಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಈತನಕ ಮನೆಗೆ ಬಾರದೇ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ ಇದ್ದು ಅವರು ಕೆಲಸ ಮಾಡುವ ಬಂದರು ಮೀನಿನ ದಕ್ಕೆಯಲ್ಲಿ ವಿಚಾರಿಸಿಕೊಂಡಾಗ 12,000/- ರೂ. ಗಳನ್ನು ತೆಗೆದುಕೊಂಡು ಹೋಗಿರುವುದಾಗಿಯೂ ತಿಳಿದು ಬಂದಿದ್ದು ಇವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿರುವುದು ಎಂಬಿತ್ಯಾದಿ

2) ಪಿರ್ಯಾದಿ Ahammad Shakeeb ದಾರರ ಅಣ್ಣನಾದ ಅಹಮ್ಮದ್ ಸಾದ್ ಸಲ್ಮಿ ರವರ ಹೆಸರಿನಲ್ಲಿರುವ ಬಾಬ್ತು KA-19 HA-6109 ನಂಬ್ರದ SUZUKI ACCESS 125 ನೇ ದ್ವಿಚಕ್ರ ವಾಹನವನ್ನು ಪಿರ್ಯಾದಿದಾರರು ಯೆನೆಪೋಯಾ ಕಾಲೇಜಿಗೆ ಹೋಗಲು ತೆಗೆದುಕೊಂಡು ಹೊರಟಿದ್ದು, ದಿನಾಂಕ 09-11-2021 ರಂದು ಬೆಳಿಗ್ಗೆ 08-00 ಗಂಟೆಗೆ  ತೊಕ್ಕೊಟ್ಟು ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ನ್ನು ಪಾರ್ಕ್ ಮಾಡಿ ಕಾಲೇಜಿಗೆ ಹೋಗಿದ್ದು, ವಾಪಾಸ್ಸು ಸಂಜೆ 04-00 ಗಂಟೆಗೆ ಸ್ಕೂಟರ್  ಪಾರ್ಕ್ ಮಾಡಿದ್ದ ಸ್ಥಳಕ್ಕೆ ಬಂದಾಗ ಸ್ಕೂಟರ್ ಬಳಿಗೆ ಬಂದಾಗ ಸ್ಕೂಟರ್ ಕಾಣದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಕಂಡು ಬಂದಿರುವುದಿಲ್ಲ. ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ಕೂಟರ್ ನ್ನು ಅಂದಿನಿಂದ ಇಂದಿನ ತನಕ ಬೇರೆ ಬೇರೆ ಕಡೆಗಳಲ್ಲಿ ಹುಡುಕಾಡಿದ್ದು, ವಿಚಾರಿಸಿಕೊಂಡಿದ್ದು ಆದರೆ ಸ್ಕೂಟರ್ ಪತ್ತೆಯಾಗಿರುವುದಿಲ್ಲ. ಕಳವಾದ ಸ್ಕೂಟರ್ ನ್ನು ಪತ್ತೆ ಮಾಡಿ ಕೊಡಬೇಕಾಗಿ ನೀಡಿದ ಪಿರ್ಯಾದಿ.ಕಳವಾದ ಸ್ಕೂಟರ್ ನ ಅಂದಾಜು ಮೌಲ್ಯ 40,000/- ಆಗಬಹುದು ಎಂಬಿತ್ಯಾದಿ.

Crime Reported in Urva PS

 ದಿನಾಂಕ 22-01-2022 ರಂದು 12-00 ಗಂಟೆಗೆ Smt Bharathi G  ಇಲಾಖಾ ವಾಹನದಲ್ಲಿ ಸಿಬ್ಬಂಧಿಗಳೊಂದಿಗೆ ಮಂಗಳೂರು ನಗರದ ಉರ್ವಾ ಪೊಲೀಸ್ ಠಾಣಾ ಪರಿಸರದಲ್ಲಿ ವಿಶೇಷ ರೌಂಡ್ಸ್‌ ಕರ್ತವ್ಯದಲ್ಲಿದ್ದ ಸಮಯ ಅಶೋಕನಗರ ಈರಿ ಕೊರ್ದಬ್ಬು ದೈಸ್ಥಾನದ ಬಳಿ ಇರುವ ಮೈಧಾನದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಕುಳಿತುಕೊಂಡು ಸಿಗರೇಟನ್ನು ಸೇದುತ್ತಿದ್ದು, ಆತನ ಬಳಿ ಹೋಗಿ ವಿಚಾರಿಸಿದಾಗ ಅಸ್ಪಷ್ಟವಾಗಿ ಮಾತನಾಡಿದ್ದು, ಆತನ ಬಾಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬಂದಿದ್ದರಿಂದ, ಸದ್ರಿಯವರನ್ನು ವಶಕ್ಕೆ ಪಡೆದು ಆತನ ಹೆಸರು ವಿಳಾಸ ಕೇಳಲಾಗಿ ಪ್ರಥಮೇಶ್, ಪ್ರಾಯ: 20 ವರ್ಷ,  ವಾಸ: ಹೊಯಿಗೆ ಬೈಲ್ 1ನೇ ಕ್ರಾಸ್, ದೈವಜ್ಞ ಕಲ್ಯಾಣ ಮಂಟಪ ಬಳಿ, ಅಶೋಕನಗರ, ಮಂಗಳೂರು ಎಂಬುದಾಗಿ ತಿಳಿಸಿದ್ದು ನಂತರ ಆತನನ್ನು ಕುಂಟಿಕಾನ ಎ.ಜೆ ಆಸ್ಪತ್ರೆಯ  ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದಲ್ಲಿ, ವೈದ್ಯರು ಈತನ ಬಾಬ್ತು ಡ್ರಗ್ ಸ್ಕ್ರೀನಿಂಗ್ ಟೆಸ್ಟ್ ವರದಿಯಲ್ಲಿ OPINION : Tetraydracannabinoid : POSITIVE ಎಂಬುದಾಗಿ ಅಭಿಪ್ರಾಯ ನೀಡಿರುವುದರಿಂದ ಈತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ ಆದುದ್ದರಿಂದ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ, ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 22-01-2022 07:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080