ಅಭಿಪ್ರಾಯ / ಸಲಹೆಗಳು

Crime Reported in : : CEN Crime PS Mangaluru City                                                       

ಪಿರ್ಯಾದಿದಾರರಾದ LATHA  K N ರವರು ದಿನಾಂಕ 22-03-2022 ರಂದು ಠಾಣಾ  ಹೆಚ್.ಸಿ  ಸಂತೋಷ್ ಕುಮಾರ್ ಮತ್ತು ಪಿ.ಸಿ  ರಾಜಪ್ಪ  ರವರೊಂದಿಗೆ ಬೆಳಿಗ್ಗೆ 11-00  ಗಂಟೆಗೆ ರೌಂಡ್ಸ್ ಕರ್ತವ್ಯದ ಬಗ್ಗೆ ಖಾಸಗಿ ವಾಹನದಲ್ಲಿ ಹೊರಟು ಕೊಟ್ಟಾರ ಚೌಕಿ, ಕೋಡಿಕಲ್ ಕ್ರಾಸ್ ,ಕೂಳೂರು  ಕಡೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಿಗ್ಗೆ 11-05 ಗಂಟೆಗೆ ಬಾತ್ಮೀದಾರರೊಬ್ಬರು ಪಿರ್ಯಾದಿದಾರರಿಗೆ ಕರೆ ಮಾಡಿ ಮಂಗಳೂರು ನಗರದ  ಕೂಳೂರುನಿಂದ  ಕಾವೂರು ಕಡೆಗೆ ಹೋಗುವ ಎಡಬದಿಯಲ್ಲಿರುವ   ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಒಬ್ಬ ಯುವಕನು ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಸದ್ರಿ ರಸ್ತೆಯಲ್ಲಿ ನಡೆದಾಡುವ ನಾಗರಿಕರಿಗೆ ಮತ್ತು ಓಡಾಡುವ  ವಾಹನಗಳಿಗೆ  ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವುದಾಗಿ ಬಂದ ಮಾಹಿತಿಯಂತೆ ತಕ್ಷೀರು ಸ್ಥಳಕ್ಕೆ 11-25 ಗಂಟೆಗೆ ದಾಳಿ ನಡೆಸಿ ಮಾದಕ ವಸ್ತು ಸೇವನೆ ಮಾಡಿ ನಶೆಯಲ್ಲಿ ರಸ್ತೆಯಲ್ಲಿ ನಡೆಡಾಡುವ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದ ಜೋಸ್ಲಯನ್ ಡಿಸೋಜಾ ಪ್ರಾಯ 24 ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ ಮೇರೆಗೆ ಆತನ ಮಂಗಳೂರು ಎ.ಜೆ ವೈದಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ವೈದಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು ಮಾದಕ ವಸ್ತುವಾದ ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಾಧಿಕಾರಿಯವರು ನೀಡಿದ ವೈದ್ಯಕೀಯ ಧೃಢಪತ್ರ ಮೇರೆಗೆ ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

 

Crime Reported in Traffic North PS

ದಿನಾಂಕ; 21-03-2022 ರಂದು ಪಿರ್ಯಾದಿದಾರಾದ ಶ್ರೀ ವಲ್ಸನ್ ರವರು ಮೂಡಶೆಡ್ಡೆ ಯಿಂದ ಮಂಗಳೂರಿನ ಅಳಕೆಗೆ ಸ್ವೀಟ್ ಡೆಲಿವರಿ ಕೊಡಲು ಬೋಂದೆಲ್ ಮಾರ್ಗವಾಗಿ ತಮ್ಮ ಬಾಬ್ತು KA-19-EH-2652 ನಂಬ್ರದ ಸ್ಕೂಟರ್ ನಲ್ಲಿ ಹೋಗುತ್ತಾ ಸಮಯ 15-25 ಗಂಟೆಗೆ ಹಳೆಯ ರೈಲ್ವೆ ಲೆವೆಲ್ ಕ್ರಾಸ್ ನಿಂದ ಸ್ವಲ್ಪ ಮುಂದೆ ಏರು ರಸ್ತೆಯ ತಿರುವಿನಲ್ಲಿ ತಲುಪಿದಾಗ ಎದುರಿನಿಂದ ಅಂದರೆ ಬೋಂದೆಲ್ ಕಡೆಯಿಂದ ಮೂಡುಶೆಡ್ಡೆ ಕಡೆಗೆ ಬರುವ KA-19-B-7353 ನಂಬ್ರದ ಟಿಪ್ಪರ್ ಲಾರಿಯನ್ನು ಅದರ ಚಾಲಕ ರಾಜೇಶ್ ಸುವಾರ್ಣ ಎಂಬಾತನು ನಿರ್ಲಕ್ಷತನ ಹಾಗೂ ದುಡುಕುತನದಿಂದ ಅಪಾಯಕಾರಿ ರೀತಿಯಲ್ಲಿ ಚಾಲಾಯಿಸಿಕೊಂಡು ಬಂದು ಪಿರ್ಯಾದಿದಾರಾದ ಶ್ರೀ ವಲ್ಸನ್ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲಭಾಗಕ್ಕೆ ಟಿಪ್ಪರ್ ಲಾರಿಯ ಎದುರಿನ ಚಕ್ರ ಡಿಕ್ಕಿ ಪಡಿಸಿದ ಪರಿಣಾಮ ಶ್ರೀ ವಲ್ಸನ್ ರವರು ಸ್ಕೂಟರ್ ಸಮೇತ ಎಡಭಾಗಕ್ಕೆ ಡಮಾರು ರಸ್ತೆಗೆ ಬಿದ್ದ ಪರಿಣಾಮ ಶ್ರೀ ವಲ್ಸನ್ ರವರ ಬಲಗೈ, ಭುಜಕ್ಕೆ ಮೂಳೆ ಕೀಲು ತಪ್ಪಿದ ರೀತಿಯ ಗಾಯ, ಬಲ ಮುಂಗೈಗೆ ತರಚಿದ ಗಾಯ, ಎಡಕೋಲುಕಾಲಿಗೆ ಮೂಳೆಮುರಿತದ ರೀತಿಯ ಗಾಯ ಹಾಗೂ ಎರಡು ಕಾಲಿನ ಮಣಿಗಂಟಿಗೆ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಎಂಬಿತ್ಯಾದಿ

Crime Reported in Mangalore East Traffic PS

ಪಿರ್ಯಾದಿದಾರರಾದ ನಿತಿನ್ ರವರು ದಿನಾಂಕ: 21/03/2022 ರಂದು ತಮ್ಮ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಹಂಪನಕಟ್ಟೆಯಿಂದ ಕೆ.ಬಿ ಕಟ್ಟೆ ಕಡೆಗೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಮಯ ಸುಮಾರು ಬೆಳಿಗ್ಗೆ 11-30 ಗಂಟೆ ವೇಳೆಗೆ ಅವರ ಎಡ ಭಾಗದಿಂದ ಹೋಗುತ್ತಿದ್ದ ಕಾರು ನೊಂದಣಿ ಸಂಖ್ಯೆ: KA-19-MH-4556 ನೇಯದನ್ನು ಅದರ ಚಾಲಕ ಕೀತ್ ಪೈಸ್ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿ ಪಿರ್ಯಾಧಿದಾರರ ಮುಂದುಗಡೆಯಿಂದ ಶೇಖರ್ ಕರ್ಕೇರಾ ರವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ನೊಂದಣಿ ಸಂಖ್ಯೆ; KA-19-EJ-5666 ನೇಯದಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರರು ಸದ್ರಿ ರಸ್ತೆಗೆ ಬಿದ್ದು ತಲೆಗೆ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳು ಶೇಖರ್ ಕರ್ಕೆರಾ ರವರಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿರುವ ಬಗ್ಗೆ ತಿಳಿಸಿದ್ದು ವಿಷಯ ತಿಳಿದು ಅವರ ಮಗ ವಿನಯ್ ಎಂಬುವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಗಾಯಾಳು ಶೇಖರ್ ಕರ್ಕೇರಾ (76 ವರ್ಷ) ರವರು ದಾರಿಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. 

ಇತ್ತೀಚಿನ ನವೀಕರಣ​ : 22-03-2022 07:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080