ಅಭಿಪ್ರಾಯ / ಸಲಹೆಗಳು

Crime Reported in Mangalore Rural PS

ದಿನಾಂಕ-21-04-2022 ರಂದು ರಾತ್ರಿ 20:30 ಗಂಟೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಠಾಣೆಯ ಸಿಬ್ಬಂದಿಯಯವರೊಂದಿಗೆ ಠಾಣಾ ವ್ಯಾಪ್ತಿಯ ಅಡ್ಯಾರ್ ಪದವು ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಫರಂಗಿಪೇಟೆಯ ಶಬೀರ್ ಹಾಗೂ ಸಿಯಾಬುದ್ದಿನ್ ಎಂಬವರು ಅಡ್ಯಾರ್ ಗ್ರಾಮದ ಕಾಂಬ್ಳಿ ಧಕ್ಕೆಯ ಸಮೀಪ ಅಕ್ರಮವಾಗಿ ಮರಳನ್ನು ಸಾಗಾಟಮಾಡುವರೇ ಸಂಗ್ರಹಿಸಿಟ್ಟಿರುತ್ತಾರೆ ಎಂಬುದಾಗಿ ಬಾತ್ಮಿದಾರರಿಂದ ಬಂದ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ 8.45 ಕ್ಕೆ ತಲುಪಿ ಪರಿಶೀಲಿಸಲಾಗಿ ಸರಕಾರಕ್ಕೆ ಯಾವುದೇ ರಾಜಸ್ವವನ್ನು ಪಾವತಿಸದೇ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುವರೇ ಸಂಗ್ರಹಿಸಿಟ್ಟಿದ್ದ ಸುಮಾರು 18,000/- ರೂ. ಮೌಲ್ಯದ 3 ಲೋಡಿನಷ್ಟು ಮರಳನ್ನು ಸ್ವಾಧೀನಪಡಿಸಿ, ಫರಂಗಿಪೇಟೆಯ ಶಬೀರ್ ಹಾಗೂ ಸಿಯಾಬುದ್ದಿನ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Crime Reported in Traffic North Police Station

ಪಿರ್ಯಾದಿ H Karunakar Poojary ದಾರರು KA-51-AA-2515 ನಂಬ್ರದ ಕೃಷ್ಣಾನಂದ ಎಂಬ ಹೆಸರಿನ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ನಿರ್ವಾಹಕನಾಗಿದ್ದು ಹಾಗೂ ಭಾಸ್ಕರ್ ಎಂಬವರು ಚಾಲಕರಾಗಿ ದಿನಾಂಕ 21-04-2022 ರಂದು ಸ್ಟೇಟ್ ಬ್ಯಾಂಕಿನಿಂದ ಪ್ರಯಾಣಿಕರನ್ನು ಹೇರಿಕೊಂಡು ಉಡುಪಿ/ಕುಂದಾಪುರ ಕಡೆಗೆ ಹೋಗುತ್ತಾ ರಾತ್ರಿ ಸಮಯ ಸುಮಾರು 8:45 ಗಂಟೆಗೆ ಪಾವಂಜೆ ಜಂಕ್ಷನಿನ ತೆರದ ಡಿವೈಡರ್ ಕಳೆದು ಸ್ವಲ್ಪ ಎದುರು ಹೋಗುತ್ತಿದ್ದಂತೆ ಎದುರಿನಿಂದ ಅಂದರೆ ಮಂಗಳೂರಿನಿಂದ ಉಡುಪಿ ಕಡೆಗೆ ಹಾದು ಹೋಗುವ ವಾಹನಗಳು ಸಾಗುವ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅಂದರೆ ಹಳೆಯಂಗಡಿ ಕಡೆಯಿಂದ ಸುರತ್ಕಲ್ ಕಡೆಗೆ KA-19-P-9917 ನಂಬ್ರದ ಮಾರುತಿ ಓಮಿನಿ ಕಾರನ್ನು ಅದರ ಚಾಲಕನಾದ ಭುಜಂಗ ದೇವಾಡಿಗ ಎಂಬಾತನು ತನ್ನ ಕಾರಿನಲ್ಲಿ ವಸಂತ್ ಕುಂದರ್ ಎಂಬಾತನನ್ನು ಕಾರಿನ ಎದುರಿನ ಎಡಬದಿ ಸೀಟಿನಲ್ಲಿ ಹಾಗೂ ಬಾಲಕೃಷ್ಣ ದೇವಾಡಿಗ ಎಂಬಾತನನ್ನು ಕಾರಿನ ಹಿಂದಿನ ಸೀಟಿನಲ್ಲಿ ಕುಳ್ಳಿರಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ NH 66ನೇ ಡಾಮಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಸ್ಸಿಗೆ ಮುಖಾಮುಖಿಯಾಗಿ ಡಿಕ್ಕಿ ಪಡಿಸಿದ ಪರಿಣಾಮ ಕಾರಿನ ಚಾಲಕ ಭುಜಂಗ ದೇವಾಡಿಗ ಹಾಗೂ ಕಾರಿನ ಎದುರಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ವಸಂತ್ ಕುಂದರ್ ಎಂಬವರುಗಳು ತಲೆಗೆ ಹಾಗೂ ಎದೆಗೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆ ಬಗ್ಗೆ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದು, ಅಲ್ಲದೇ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಲಕೃಷ್ಣ ದೇವಾಡಿಗ ಎಂಬಾತನಿಗೆ ತಲೆಗೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ರಕ್ತ ಗಾಯವಾಗಿ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Traffic South Police Station

ದಿನಾಂಕ 18-04-2022 ರಂದು  ಪಿರ್ಯಾದಿ IBRAHIM ದಾರರು   ಕೆಲಸ  ಮಾಡಿತ್ತಿರುವ ಪ್ರಿನ್ಸ್ ಟ್ರಾವೆಲ್ಸ್ ಎಜೆನ್ಸಿ ಕಂಪನಿಯ  ಸ್ಕೂಟರ್ ನಂಬ್ರ  KA-19-ER-6902  ನೇದನ್ನು ಉಳ್ಳಾಲ ಕಡೆಯಿಂದ ಮಂಗಳೂರು  ಕಡೆಗೆ  ರಾಷ್ಟ್ರೀಯ ಹೆದ್ದಾರಿ 66 ರ  ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವ  ಸಮಯ  ಸುಮಾರು  14:30 ಗಂಟೆಗೆ  ಕುದ್ರು ಕಲ್ಲಾಪು ಎಂಬಲ್ಲಿಗೆ  ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ   ಅವರ ಹಿಂದಿನಿಂದ  ಪಂಪ್ ವೆಲ್ ಕಡೆಗೆ  ಸ್ಕೂಟರ್ ನಂಬ್ರ   KA-19-EW-1531  ನೇದನ್ನು   ಅದರ  ಸವಾರಳಾದ   ಬದ್ರುನಿಶಾ ಎಂಬವರು ದುಡುಕುತನ ಹಾಗೂ   ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು  ಪಿರ್ಯಾದಿದಾರರ  ಸ್ಕೂಟರ್ ಗೆ   ಹಿಂದಿನಿಂದ  ಡಿಕ್ಕಿಪಡಿಸಿದ  ಪರಿಣಾಮ  ಪಿರ್ಯಾದಿದಾರರು ಸ್ಕೂಟರ್ ಸಮೇತ  ಡಾಮಾರು ರಸ್ತೆಗೆ  ಬಿದ್ದು ಅವರ  ಎಡಕಾಲಿನ ಮೂಳೆ ಮುರಿತದ ಗಾಯ ಮತ್ತು  ಸೊಂಟಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು ,ಚಿಕಿತ್ಸೆ ಬಗ್ಗೆ   ಅವರನ್ನು   ಅಲ್ಲಿ  ಸೇರಿದ   ಸಾರ್ವಜನಿಕರು ಕರೆದುಕೊಂಡು  ಹೋಗಿ  ಮಂಗಳೂರಿನ ಹೈಲ್ಯಾಂಡ್  ಆಸ್ಪತ್ರೆಗೆ ದಾಖಲಿಸಿ ನಂತರ  ಹೆಚ್ಚಿನ ಚಿಕಿತ್ಸೆ  ಬಗ್ಗೆ  ದೇರಳಕಟ್ಟೆ ಕಣಚೂರು  ಆಸ್ಪತ್ರೆಗೆ ದಾಖಲಿಸಿರುತ್ತಾರೆ . ಈ ಅಪಘಾತದ  ಸಮಯ ಅಪಘಾತ   ಪಡಿಸಿದ   ಸ್ಕೂಟರ್  ಸವಾರೇ  ಚಿಕಿತ್ಸಾ ವೆಚ್ಚ ಭರಿಸುವುದಾಗಿ  ತಿಳಿಸಿದ್ದು ,ನಂತರ  ನಿರಾಕರಿಸಿರುತ್ತಾರೆ. ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 22-04-2022 04:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080