ಅಭಿಪ್ರಾಯ / ಸಲಹೆಗಳು

Crime Reported in: Mangalore East Traffic PS                                                   

 ದಿನಾಂಕ 17-07-2022 ರಂದು ಮದ್ಯಾಹ್ನ ಸಮಯ ಸುಮಾರು 12.50 ಗಂಟೆಗೆ  ಪ್ರಕರಣದ ಪಿರ್ಯಾದಿದಾರರಾದ ಯೋಗೀಶ ರವರು ಮನೆಗೆ ಅಡುಗೆ ಸಾಮಾನು ತರಲೆಂದು ಮುಳಿಹಿತ್ಲು ನಾಲ್ಕು ಮಾರ್ಗ ರಸ್ತೆಯ ಮೂಲಕ ಬೋಳಾರ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಬೋಳಾರ ಇಸ್ಲಾಮಿಕ್ ಸೆಂಟರ್ ಕಡೆಗೆ ಹೋಗುವ ಅಡ್ಡರಸ್ತೆಯನ್ನು ತಲುಪುತ್ತಿದ್ದಂತೆ ಶಾದಿಮಹಲ್ ಕಡೆಯಿಂದ ಇರುವ ಸಾರ್ವಜನಿಕ ರಸ್ತೆಯಲ್ಲಿ KA-20-Z-2453 ನಂಬರಿನ ಕಾರನ್ನು ಚಾಲಕ ಶೇಖ್ ತೌಸಿಫ್ ಅಹಮ್ಮದ್ ರವರು ದುಡುಕುತನ, ನಿರ್ಲಕ್ಷ್ಯತನದಿಂದ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತೀರಾ ಹತ್ತಿರದಿಂದ ಚಲಾಯಿಸಿಕೊಂಡು ಹೋದ ಪರಿಣಾಮ ಸದ್ರಿ ಕಾರಿನ ಬಲ ಮುಂಭಾಗದ ಚಕ್ರವು ಪಿರ್ಯಾದಿದಾರರ ಬಲ ಕಾಲಿನ ಪಾದದ ಮೇಲೆ ಚಲಿಸಿದ್ದರಿಂದ ಪಾದದಲ್ಲಿ ತರಚಿದ, ಗುದ್ದಿದ ರೀತಿಯ ಗಾಯವಾಗಿದ್ದು, ಅಲ್ಲಿದ್ದ ಸಾರ್ವಜನಿಕರು ಹಾಗೂ ಕಾರಿನ ಚಾಲಕ ಪಿರ್ಯಾದಿದಾರರನ್ನು ಉಪಚರಿಸಿ ಹೈಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಬಲ ಕಾಲಿನ ಪಾದದಲ್ಲಿ ಮೂಳೆ ಮುರಿತದ ಗಾಯವಾಗಿರುವುದಾಗಿ ತಿಳಿಸಿರುತ್ತಾರೆ. ಕಾರು ಚಾಲಕರು ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ತಿಳಿಸಿ ನಂತರ ನಿರಾಕರಿಸಿದ್ದರಿಂದ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿದೆ. ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ವಿನಂತಿ ಎಂಬಿತ್ಯಾದಿ.

Crime Reported in: Traffic North Police

 ಈ ದಿನ ದಿನಾಂಕ: 21-07-2022 ರಂದು ಪಿರ್ಯಾದಿದಾರರ Shashidhar Tantry Padur ಪತ್ನಿಯ ಅಕ್ಕನ ಮಗನಾದ ಅಕ್ಷಯ (33) ಎಂಬಾತನು ಅಗತ್ಯ ಕೆಲಸದ ಬಗ್ಗೆ ಆತನ ಬಾಬ್ತು KA-20-EF-8828 ನಂಬ್ರದ ಮೋಟಾರ್ ಸೈಕಲಿನಲ್ಲಿ ಮಂಗಳೂರಿಗೆ ಬಂದಿದ್ದವನು ಕೆಲಸ ಮುಗಿಸಿಕೊಂಡು ವಾಪಾಸು ಮಂಗಳೂರಿನಿಂದ NH66 ರಲ್ಲಿ ಆತನ ಮನೆಯಾದ ಉಡುಪಿಯ ಕಟಪಾಡಿ ಎಂಬಲ್ಲಿಗೆ ಬರುತ್ತಾ ರಾತ್ರಿ ಸಮಯ ಸುಮಾರು 7:20 ಗಂಟೆಗೆ ಸುರತ್ಕಲಿನ ಗೋವಿಂದದಾಸ ಕಾಲೇಜು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಹಿಂದಿನಿಂದ ಅಂದರೆ ಬೈಕಂಪಾಡಿ ಕಡೆಯಿಂದ ಉಡುಪಿ ಕಡೆಗೆ KA-20-AA-2399 ನಂಬ್ರದ 12 ಚಕ್ರದ ಗೂಡ್ಸ್ ಲಾರಿಯನ್ನು ಅದರ ಚಾಲಕ ಕೆ ಮೊಹಮದ್ ಆಲಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ NH66 ನೇ ಡಾಮಾರು ರಸ್ತೆಯ ತೆರದ ಡಿವೈಡರ್ ಜಾಗದಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅಕ್ಷಯನು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲಿನ ಬಲಬದಿ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಅಕ್ಷಯನು ತನ್ನ ಮೋಟಾರ್ ಸೈಕಲ್ ಸಮೇತ NH66 ನೇ ಡಾಮಾರು ರಸ್ತಗೆ ಬಿದ್ದ ವೇಳೆ ಅಪಘಾತ ಪಡಿಸಿದ ಲಾರಿಯ ಹಿಂದಿನ ಎಡಬದಿ ಚಕ್ರ ಅಕ್ಷಯನ ತಲೆ ಹಾಗೂ ಎಡಕಾಲಿನ ಪಾದದ ಮೇಲೆ ಚಲಿಸಿ ಗಂಭೀರ ಸ್ವರೂಪದ ಗಾಯಗೊಂಡು ಅಕ್ಷಯನು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 22-07-2022 08:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080