Crime Reported in CEN Crime PS :
ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಿಗೆ ದಿನಾಂಕ : 19-12-2021ನೇ ಅದಿತ್ಯವಾರ ಸುಮಾರು ಬೆಳಿಗ್ಗೆ 10.42 ಕ್ಕೆ 8147067812 ನಂಬರ್ ನಲ್ಲಿ ಪ್ಲಿಪ್‌ಕಾರ್ಟ್ ( Fikt9.com ) ನಿಂದ ಬಂದ ವಾಟ್ಸಾಪ್ ಮೆಸೇಜ್ ನಲ್ಲಿ ಪ್ಲಿಪ್‌ಕಾರ್ಟ್ ರಿಕ್ರೂಟ್ ಮೆಂಟ್ ಪಾರ್ಟ್ ಟೈಂ ಜ್ವಾಬ್ ಅವರ ವೈಬ್ ಸೈಟ್ ಆದ ( https://t.me/EdithMam ) ಎಂದು ಮೆಸೇಜ್ ಬಂತು . ಆ ಲಿಂಕ್ ನ್ನು ಪಿರ್ಯಾದಿದಾರರು ಓಪನ್ ಮಾಡಿದಾಗ ಟೆಲಿಗ್ರಾಂ ನಲ್ಲಿ ಮೆಸೇಜ್ ಬಂದು, ಪಿರ್ಯಾದಿದಾರರು ಪ್ಲಿಪ್‌ಕಾರ್ಟ್ ರಿಕ್ರುಪ್‌ಮೆಂಟ್ ಪಾರ್ಟ್ ಟೈಂ ಜಾಬ್ ಗಾಗಿ .ವಿವರವಾಗಿ ಮೇಸೇಜ್ ಅವರು & ಟೆಲಿಗ್ರಾಂhttps://fikt9.com/register? code Number = 448329 ಲಿಂಕ್ ನ್ನು ಕಳುಹಿಸಿದರು ತದ ನಂತರ ಪಿರ್ಯಾದಿದಾರರು ಆ ಲಿಂಕ್ ನ್ನು ಓಪನ್ ಮಾಡಿ ರಿಜಿಸ್ಟರ್ ಆಗಿದ್ದು, ತದ ನಂತರ ಅವರು ರೂ .100 / ನ್ನು ನನ್ನ Flipkart A / c ಗೆ ಜಮಾ ಮಾಡಿದರು ತದನಂತರ Flipkart ಪೇಜ್ ಓಪನ್ ಆಗಿ ಅದರಲ್ಲಿ GRAB AN ORDER ಕ್ಲಿಕ್ ಮಾಡಿದಾಗ,ಅದರಲ್ಲಿ ರೂ . 200 / - ರಿಚಾರ್ಜ್ ಮಾಡಿದರೇ ನಾವು ನಿಮಗೆ ಹಣವನ್ನು ಹೇಗೆ ಮಾಡುವುದು ಎಂದು ಹೇಳಿಕೊಡುತ್ತೇವೆ ತಿಳಿಸಿ, ನಂತರ ಪಿರ್ಯಾದಿದಾರರು ರೂ . 200 / anasx013 @ icici ( Muhammedanassr ) Phone Pay ಮುಖಾಂತರ ರಿಚಾರ್ಜ್ ಮಾಡಿರುತ್ತಾರೆ. ನಂತರ ಅವರು ಪಿರ್ಯಾದಿದಾರರ Flipkart ಎಕೌಂಟ್‌ಗೆ ರೂ. 200 / ನ್ನು ಜಮಾ ಮಾಡಿದರು. ನಂತರ ಪಿರ್ಯಾದಿದಾರರು ಪ್ಲಿಪ್ ಕಾರ್ಟ್ನವರು ಕೊಟ್ಟ ಟಾಸ್ಕ್ ನ್ನು ಕಂಪೀಟ್ ಮಾಡಿದಾಗರೂ. 350 / - Flipkart ಎಕೌಂಟ್‌ಗೆ ಜಮಾ ಆಯಿತು. ಆಗ ಪಿರ್ಯಾದಿದಾರರು ರೂ. 350 /- ನ್ನು ಡ್ರಾ ಮಾಡಿರುತ್ತಾರೆ. ನಂತರ ಪುನಃ ಅವರಿಂದ ಮೇಸೆಜ್ ಬಂತು ನೀವು ಮನಃ ಕಮೀಶನ್ ಮಾಡಲು ಬಯಸುತ್ತೀರಾ ಎಂದು ತಿಳಿಸಿದಾಗ, ಪಿರ್ಯಾದಿದಾರರು ಒಪ್ಪಿದಾಗ, ನಂತರ ಟಾಸ್ಕ್ VIP2 ನ್ನು ಕ್ಲಿಕ್ ಮಾಡಿ ಅದರಲ್ಲಿ ರೂ. 500 /- ನ್ನು ರಿಚಾರ್ಜ್ ಮಾಡಲು ಹೇಳಿದರು. ನಂತರ ಪಿರ್ಯಾದಿದಾರರು ರೂ. 500 /- ನ್ನು ಮೊದಲು apaianasx013@icici ( Muhammedanassr ) Phone Pay ರಿಚಾರ್ಜ್ ಮಾಡಿದಾಗ ಪಿರ್ಯಾದಿದಾರರ Flipkart ಎಕೌಂಟ್‌ಗೆ ರೂ. 500 /- ಜಮಾ ಆಯಿತು. ಇದನ್ನು ತಿಳಿದ ಪಿರ್ಯಾದಿದಾರರು Phone Pay ಮುಖಾಂತರ ಕ್ರಮವಾಗಿ ರೂ . 808/- , 2,012 , 4,255 , 9,309 , 22,273 , 47,737 , 47,660 , ಗಳನ್ನು ಒಟ್ಟು ಮೊತ್ತ 1,34,554 ವರ್ಗವಣೆಯಾಗಿದೆ . ಇಷ್ಟು ಮೊತ್ತವನ್ನು order complete ಮಾಡಲು ಕಳಿದ್ದು, ಟಾಸ್ಕ್ VIP2 ನಲ್ಲಿದ್ದ ಎಲ್ಲಾ ಟಾಸ್ಕ್ ನ್ನು ಕಂಪೀಟ್ ಮಾಡಿದಾಗ . ಪಿರ್ಯಾದಿದಾರರಿಗೆ ರೂ . 4,13,992 / - Flipkart ಎಕೌಂಟ್‌ಗೆ ಬಂದಂತೆ ತೋರಿಸಿದ ಆರೋಪಿ ಆ ಹಣವನ್ನು ವಿತ್ ಡ್ರಾ ಮಾಡಲು ರೂ . 82,798 / ಟ್ಯಾಕ್ಸ್ ಕಟ್ಟಲು ಒತ್ತಾಯಿಸಿದಾಗ ಪಿರ್ಯಾದಿದಾರರು ಮೋಸ ಹೋಗಿರುವುದು ತಿಳಿಯಿತು. ಈ ರೀತಿಯಾಗಿ ಆರೋಪಿಗಳು ಆನ್ ಲೈನ್ ಮೂಲಕ ಮೋಸದಿಂದ ಹಣವನ್ನು ವರ್ಗಾಯಿಸಿಕೊಂಡು ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ
Crime Reported in Mangalore East Traffic PS :
ಪಿರ್ಯಾದಿದಾರರಾದ ವಿಜೇಶ್ ಶೆಟ್ಟಿ ಎಂಬವರು ಕೆಲಸ ಮುಗಿಸಿ ತನ್ನ ಬಾಬ್ತು KA-19-HB-6865 ನಂಬ್ರದ ಮೋಟಾರ್ ಸೈಕಲಿನಲ್ಲಿ ಸವಾರನಾಗಿ ಮಂಗಳೂರು ನಗರದ ಬಿಕರ್ನಕಟ್ಟೆ ಮುಖ್ಯ ರಸ್ತೆ ಕಡೆಯಿಂದ ಶಕ್ತಿನಗರ ಕಡೆಗೆ ಹಾದು ಹೋಗಿರುವ ಕಂಡೆಟ್ಟು ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಾ ಇಳಿಜಾರು ರಸ್ತೆಗೆ ಬಂದು ತಲುಪುತ್ತಿದ್ದಂತೆ ದಿನಾಂಕ: 21-12-2021 ರಂದು ರಾತ್ರಿ ಸಮಯ ಸುಮಾರು 00:30 ಗಂಟೆಗೆ ಕಂಡೆಟ್ಟು ನಾಗಬನ ಒಳ ರಸ್ತೆಯಿಂದ KA-21-Y-4377 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಅಜಯಾನಂದ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಒಮ್ಮೇಲೆ ಮುಖ್ಯ ರಸ್ತೆಗೆ ಮುನ್ನುಗ್ಗಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿನ ಎಡ ಮುಂಭಾಗಕ್ಕೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದು, ಬಲಭುಜಕ್ಕೆ ಮತ್ತು ತಲೆಯ ಬಲ ಹಿಂಬದಿಗೆ ಗುದ್ದಿದ ಗಾಯ, ಎಡ ಮೊಣಕೈಗೆ , ಎರಡೂ ಕಾಲಿನ ಮೊಣಕಾಲಿಗೆ ತರಚಿದ ಗಾಯಗಳಾಗಿ ಚಿಕಿತ್ಸೆ ಬಗ್ಗೆ ಎಸ್. ಸಿ. ಎಸ್. ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಬಳಿಕ ಅಪಘಾತ ಪಡಿಸಿದ ಮೋಟಾರು ಸೈಕಲ್ ಸವಾರ ಚಿಕಿತ್ಸಾ ವೆಚ್ಚವನ್ನು ಹಾಗೂ ವಾಹನದ ರಿಪೇರಿ ವೆಚ್ಚವನ್ನು ನೀಡುವುದಾಗಿ ತಿಳಿಸಿದ್ದು, ಈಗ ಭರಿಸಲು ನಿರಾಕರಿಸುತ್ತಿರುವುದರಿಂದ ತಡವಾಗಿ ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.
Crime Reported in Mangalore Rural PS :
ಈ ಪ್ರಕರಣದ ಸಾರಂಶವೇನೆಂದರೆ ಈ ದಿನ ದಿನಾಂಕ 21-12-2021 ರಂದು ಪಿರ್ಯಾದಿದಾರರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಮದ್ಯಾಹ್ನ ಸುಮಾರು 13.00 ಗಂಟೆಗೆ ಮಂಗಳೂರು ತಾಲೂಕು ಬೊಂಡಂತಿಲ ಗ್ರಾಮದ ಕೆಲರಾಯ್ ಜಂಕ್ಷನ್ ಬಳಿ ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಮಿಧುನ್ (20 ವರ್ಷ) ವಾಸ: ಜಾನಕಿ ಕುದೀರ್, ಪಾರಿಕ್ಕದೇವ್ ಪೋಸ್ಟ್, ಧರ್ಮದಮ್ ಕಣ್ಣೂರು, ಕೇರಳ ರಾಜ್ಯ ಎಂಬಾತನನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆರೋಪಿತನು ಗಾಂಜಾ ಸೇವನೆ ಮಾಡಿದ ಬಗ್ಗೆ ದೃಢಪಟ್ಟಂತೆ ಆರೋಪಿತನ ವಿರುದ್ದ ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿದೆ
Crime Reported in Traffic South Police :
ಈ ಪ್ರಕರಣದ ಸಾರಾಂಶವೆನೆಂದರೆ ಈ ದಿನ ದಿನಾಂಕ: 20-12-2021 ರಂದು ಪಿರ್ಯಾದಿದಾರರು ಬಾಬ್ತು ಮೋಟಾರ ಸೈಕಲ್ ನಂಬ್ರ KA-19-HG-8509 ನೇದರಲ್ಲಿ ವಾಮಂಜೂರಿನಿಂದ ಕುಲಶೇಖರ ಕಡೆಗೆ ಬರುತ್ತಿರುವ ಸಂಜೆ ಸಮಯ ಸುಮಾರು 06.15 ಗಂಟೆಗೆ ವಾಮಂಜೂರು ಚರ್ಚ್ ಬಳಿ ತಲುಪುತ್ತಿದಂತೆ ಮಂಗಳೂರು ಕಡೆಯಿಂದ ವಾಮಂಜೂರು ಕಡೆಗೆ ಬರುತ್ತಿದ್ದ ನೊಂದಣಿಯಾಗದ ಸ್ಕೂಟರನ ಸವಾರನು ವಾಹನವನ್ನು ಒಮ್ಮಲೆ ಯಾವುದೇ ಸೊಚನೆ ನೀಡದೆ ಬಲಕ್ಕೆ ತಿರುಗಿಸಿ ದುಡುಕುತನ ಹಾಗೂ ನಿರ್ಲಕ್ಷ್ಯತನ ದಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ ಸಮೇತ ಡಾಮಾರು ರಸ್ತಗೆ ಬಿದ್ದರು ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲಕೈ ಮೊಣಗಂಟಿಗೆ ಮೊಳೆ ಮುರಿತದ ಗಾಯ ಹಾಗೂ ಕೈ ಕಾಲುಗಳಿಗೆ ತೆರಚಿದ ಗಾಯವಾಗಿದ್ದು ಕೊಡಲೆ ಚಿಕಿತ್ಸೆ ಬಗ್ಗೆ ನಗರದ ಎ ಜೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.
Crime Reported in Bajpe PS :
ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 17.12.2021 ರಂದು ರಾತ್ರಿ ವೇಳಗೆ ಪಿರ್ಯಾದಿದಾರರ ಸಹೋದರ ಜೈವೀಕ್ ಎಂಬಾತನು ತನ್ನ ಗೆಳೆಯ ದಿನೇಶ್ ಎಂಬವರನ್ನು ಸ್ಕೂಟರ್ ನಂಬ್ರ ಕೆಎ-19ಹೆಚ್.ಎಫ್.-7732 ನೇಯದಲ್ಲಿ ಸಹಸವಾರನಾಗಿ ಕುಳ್ಳಿರಿಸಿಕೊಂಡು ಕಾವೂರು ಕಡೆಯಿಂದ ಮನೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ರಾತ್ರಿ ಸುಮಾರು 8:15 ಗಂಟೆಗೆ ಮಗಳೂರು ತಾಲೂಕು, ಬಜಪೆ ಗ್ರಾಮದ, ಪೊರ್ಕೋಡಿ ದ್ವಾರದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಬಜಪೆ ಕಡೆಯಿಂದ ಕಾರು ನಂಬ್ರ ಕೆಎ-19-ಎಂಎ-1896 ನೇಯದನ್ನು ಅದರ ಚಾಲಕನು ಅತೀವೇಗದಿಂದ ಚಲಾಯಿಕೊಂಡು ಬಂದು ಒಮ್ಮೆಲೇ ಕಾರನ್ನು ಬಲಕ್ಕೆ ಚಲಾಯಿಸಿದ ಪರಿಣಾಮ ಸ್ಕೂಟರಿಗೆ ಢಿಕ್ಕಿಯಾಗಿ ಇಬ್ಬರೂ ಕೂಡಾ ಕೆಳಗೆ ಬಿದ್ದುದರ ಪರಿಣಾಮ ಜೈವೀಕ್ ರವರ ಎಡ ಕಣ್ಣು, ಹಣೆ, ಮೂಗು ಮತ್ತು ಗದ್ದಕ್ಕೆ ರಕ್ತಗಾಯ ಮತ್ತು ದಿನೇಶ್ ರವರ ಮುಖಕ್ಕೆ, ಗದ್ದಕ್ಕೆ ಕಿವಿಗಳಿಗೆ ಗಾಯವಾಗಿರುತ್ತದೆ. ಎಂಬಿತ್ಯಾದಿ ಫಿರ್ಯಾದಿ ನೀಡಿರುವುದಾಗಿದೆ.