ಅಭಿಪ್ರಾಯ / ಸಲಹೆಗಳು

Crime Reported in : Ullal PS

ದಿನಾಂಕ 22- 02-2022 ರಂದು ಉಳ್ಳಾಲ ಗ್ರಾಮದ ಉಳ್ಳಾಲ ದರ್ಗಾದಲ್ಲಿ ನಡೆಯುತ್ತೀರುವ ಉರೂಸ್ ಕಾರ್ಯಕ್ರಮಕ್ಕೆ ಪಿರ್ಯಾದಿ Hameed ರವರು ಅವರ ಮಗಳಾದ ಮಾಸಿತಾ(18) ಮತ್ತು ತನ್ನ ಹೆಂಡತಿಯ ತಂಗಿಯಾದ ಶೇಲಿಕಾ(28) ಎಂಬುವರೊಂದಿಗೆ ಉಳ್ಳಾಲ ದರ್ಗಾ ರೋಡನಲ್ಲಿರುವ ಜೈನ ಬಸದಿಯ ಬಳಿ ಇದ್ದ, ಮಕ್ಕಳ ಆಟದ ತೋಟ್ಟಿಲ ವಿಕ್ಷಣೆಗೆಂದು ಹೋಗಿದ್ದಾಗ ತೋಟ್ಟಿಲು ತಿರುಗುತ್ತಿದ್ದು ಸಮಯ ಸುಮಾರು ರಾತ್ರಿ 09-00 ಗಂಟೆಗೆ ಪಿರ್ಯಾದಿ  ಮಾಸಿತಾ ಮತ್ತು ಶೇಲಿಕಾ ರೊಂದಿಗೆ ಪಕ್ಕದಲ್ಲಿ ನಿಂತು ನೊಡುತ್ತಿದ್ದಾಗ ತೋಟ್ಟಿಲು ಏಕಾ ಏಕಿ ಆಗಿ ಅದರ ಬೋಲ್ಟ ಕಳಚಿ ತಿರುಗುತ್ತಿದ್ದ ತೋಟ್ಟಿಲು ಕೆಳಗಡೆ ಬಿದ್ದಾಗ ಅಲ್ಲಿಯೇ ನಿಂತು ವಿಕ್ಷೀಸುತ್ತಿದ್ದ ಸಾರ್ವಜನಿಕರ ಮೇಲೆ ಬಿದ್ದ ಪರಿಣಾಮ, ಮಾಸಿತಾರ ಬಲಗೈಗೆ ಮತ್ತು ಶೇಲಿಕಾಳ ತೆಲೆಗೆ ಗುದ್ದಿದ ನೋವಾಗಿರುತ್ತದೆ. ಮತ್ತು ಅಲ್ಲಿಯೇ ನಿಂತು ನೋಡುತ್ತಿದ್ದ ನೂರ್ ಜಾನ್, ಉಮ್ಮರ್ ಫಾರೂಕ್ , ಸಮೀರ್ ಎಂಬವರಿಗೂ ತಾಗಿರುತ್ತದೆ. ನಂತರ ಗಾಯಾಳುಗಳನ್ನು ಮಂಗಳೂರಿನ ಹೈಲಾಂಡ್ ಆಸ್ಪತ್ರೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಿರುತ್ತಾರೆ.  ಆದುದರಿಂದ ಈ ಘಟನೆಗೆ ಕಾರಣರಾದ ಸದ್ರಿ ತೊಟ್ಟಿಲನ್ನು ನಡೆಸುತ್ತಿದ್ದ ಫಾರೂಕ್ ಮತ್ತು ಇತರರು ತೊಟ್ಟಿಲನ್ನು ಸರಿಯಾಗಿ ಅಳವಡಿಸದೇ ನಿರ್ಲಕ್ಷತನ ತೋರಿರುವುದರಿಂದ ಮತ್ತು ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೋಳ್ಳದೆ ಇದ್ದುದರಿಂದ ಈ ಘಟನೆ ನಡೆದಿರುವುದಾಗಿದೆ.ಆದುದರಿಂದ ಸದ್ರಿ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ಕೈಗೋಳ್ಳ ಬೇಕಾಗಿ ವಿನಂತಿ ಎಂಬುದಾಗಿ ನೀಡಿದ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

 

Crime Reported in Bajpe PS

“ಪಿರ್ಯಾದಿ ASI Rama Poojary ರವರು ದಿನಾಂಕ 22-02-2022 ರಂದು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ 18-00  ಗಂಟೆಗೆ ಠಾಣಾ ವ್ಯಾಪ್ತಿಯ ಬಡಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ ಬಳಿ ಇರುವ ಅಸರಾರುದ್ದೀನ್ ಜುಮ್ಮ ಮಸೀದಿಯ ಹತ್ತಿರ ಬಂದಾಗ ಯುವಕನೊಬ್ಬನು ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದವರನ್ನು ಸದ್ರಿಯವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತನ್ನ ಹೆಸರು ರಾಹಿಶ್ ಮೊಯಿದ್ದೀನ್ (26) ವಾಸ:- ಎಸ್.ಆರ್ ಕಂಪೌಂಡ, ಅಸರುದ್ದೀನ್ ರಸ್ತೆ, ಮಸೀದಿಯ ಬಳಿ, ಕೈಕಂಬ, ಕಿನ್ನಿಕಂಬ್ಳ ಅಂಚೆ, ಬಡಗುಳಿಪಾಡಿ ಗ್ರಾಮ, ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂಬುದಾಗಿ ಮತ್ತು ತಾನು ಸಿಗರೇಟಿನ ಒಳಗೆ ಮಾದಕ ವಸ್ತು ಗಾಂಜಾ ತುಂಬಿಸಿ ಸೇದಿರುವುದಾಗಿ ತಿಳಿಸಿದಂತೆ ಸದ್ರಿಯವರನ್ನು ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿದಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 2)“ಪಿರ್ಯಾದಿ ASI Rama Poojary ರವರು ದಿನಾಂಕ 22-02-2022 ರಂದು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಾ 18-30 ಗಂಟೆಗೆ ಠಾಣಾ ವ್ಯಾಪ್ತಿಯ ಕಂದಾವರ ಗ್ರಾಮದ ಚರ್ಚದ್ವಾರದ ಬಳಿ ಬಂದಾಗ ಯುವಕನೊಬ್ಬನು ಅಮಲು ಪದಾರ್ಥ ಸೇವಿಸಿದಂತೆ ಕಂಡು ಬಂದಿದ್ದವರನ್ನು ಸದ್ರಿಯವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತನ್ನ ಹೆಸರು ಮಹಮ್ಮದ್ ಶೌಹಾನ್ (25) ವಾಸ:- ಮನೆ ನಂಬ್ರ 2-80, ಬೆಳನಡೆ ಹೌ ಸ್, ಪಂಚಾಯತಿ ಕಛೇರಿಯ ಬಳಿ, ಕೂಳೂರು ಅಂಚೆ, ಪಡುಕೋಡಿ ಗ್ರಾಮ, ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂಬುದಾಗಿ ಮತ್ತು ತಾನು ಸಿಗರೇಟಿನ ಒಳಗೆ ಮಾದಕ ವಸ್ತು ಗಾಂಜಾ ತುಂಬಿಸಿ ಸೇದಿರುವುದಾಗಿ ತಿಳಿಸಿದಂತೆ ಸದ್ರಿಯವರನ್ನು ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿದಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

 

 

ಇತ್ತೀಚಿನ ನವೀಕರಣ​ : 23-02-2022 04:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080