ಅಭಿಪ್ರಾಯ / ಸಲಹೆಗಳು

Crime Reported in Panambur PS   

ದಿನಾಂಕ 23-05-2022 ರಂದು ಠಾಣಾ ಪೊಲಿಸ್ ಉಪ  ನಿರೀಕ್ಷಕ ರಾಘವೇಂದ್ರ ನಾಯ್ಕ್ ರವರು ಠಾಣಾ ಸಿಬ್ಬಂದಿಗಳೊಂದಿಗೆ  ದಿನಾಂಕ: 23-05-2022 ರಂದು ಸಮಯ 10.30 ಗಂಟೆಗೆ ಇಲಾಖಾ ವಾಹನದಲ್ಲಿ ರೌಂಡ್ಸ್ ನಲ್ಲಿದ್ದ ಸಮಯ ತೋಟಾ ಬೆಂಗ್ರೆ ಫೇರಿ ಬಳಿ  ಯಾವುದೋ ಮಾದಕ ವಸ್ತು ಸೇವನೆ ಮಾಡಿ ಅದರ ನಶೆಯಲ್ಲಿ ಇದ್ದಂತೆ ಕಂಡುಬಂದಿದ್ದ ರಾಬಿನ್  ಪ್ರಾಯ: 20 ವರ್ಷ, ವಾಸ:  ಸರೋಜಿನಿ ನಿವಾಸ, ಸ್ಯಾಂಡ್ಸ್ ಪಿಟ್ ಬೆಂಗ್ರೆ, ಮಂಗಳೂರು ಎಂಬವನನ್ನು  ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಗೆ ಬಗ್ಗೆ ವೈದ್ಯಾಧಿಕಾರಿಗಳು, ಎ.ಜೆ.ಆಸ್ಪತ್ರೆ,  ಮಂಗಳೂರುರವರ  ಬಳಿ ಕಳುಹಿಸಿಕೊಟ್ಟಿದ್ದು ವೈದ್ಯರು The Urine Sample Tested For The Presence of Tetrahydracannabinoid (Marijuna) is Positive ಎಂದು ವರದಿ ನೀಡಿರುತ್ತಾರೆ. ಆಪಾದಿತನಾದ ರಾಬಿನ್  ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆತನ ವಿರುದ್ದ ಕಲಂ 27(ಬಿ) ಎನ್.ಡಿ.ಪಿ.ಎಸ್ ಕಾಯ್ದೆ 1985 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.  ಎಂಬಿತ್ಯಾದಿ

 

Crime Reported in Mangalore Rural PS                                  

 ದಿನಾಂಕ 23/05/2022  ರಂದು ಬೆಳಿಗ್ಗೆ 6.00  ಗಂಟೆ ಸಮಯಕ್ಕೆ ಪಿರ್ಯಾದಿ Johnson Dsouza ದಾರರು ಠಾಣಾ ವ್ಯಾಪ್ತಿಯಲ್ಲಿ  ವಿಶೇಷ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ವಾಮಂಜೂರಿನ ಆಳ್ವಾರೀಸ್ ಪೆಟ್ರೋಲ್ ಬಂಕ್ ಎದುರುಗಡೆಯಲ್ಲಿರುವ ತಗಡು ಶೀಟಿನಿಂದ ಮಾಡಿರುವ ಶೆಡ್ ನಲ್ಲಿ ಪೂವಪ್ಪ ಶೆಟ್ಟಿ  ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ 6.25  ಗಂಟೆ ಸಮಯಕ್ಕೆ ತಲುಪಿದಾಗ ಕೆಲವು ವ್ಯಕ್ತಿಗಳು ಓಡಿ ಹೋಗಿದ್ದು, ಶೆಡ್ ನೊಳಗಡೆಯಿಂದ ಓರ್ವ ವ್ಯಕ್ತಿಯು ಕೈಯಲ್ಲಿ ಚೀಲವನ್ನು ಹಿಡಿದು ಓಡಲು ಯತ್ನಿಸಿದವನನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದು ವಿಚಾರಿಸಲಾಗಿ ತನ್ನ ಹೆಸರು ಪೂವಪ್ಪ ಶೆಟ್ಟಿ (68 ವರ್ಷ) ವಾಸ: ವೀಣಾ ನಿಲಯ, ಅಮೃತ ನಗರ, 2ನೇ ಬ್ಲಾಕ್, ವಾಮಂಜೂರು, ತಿರುವೈಲ್ ಗ್ರಾಮ, ಮಂಗಳೂರು  ಎಂಬುದಾಗಿ ತಿಳಿಸಿದ್ದು ಹಾಗೂ ತಾನು ಗಂಜಿ ಊಟ ತಯಾರಿಸಿ ಮಾರಾಟ ಮಾಡುತ್ತಿರುವ ಇದೇ ಶೆಡ್ ನಲ್ಲಿ  ಮದ್ಯದ ಪಾಕೇಟ್ಗಳನ್ನು ಅಕ್ರಮವಾಗಿ ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿ ಆತನ ಕೈಯಲ್ಲಿದ್ದ ಚೀಲದಲ್ಲಿ  90  ಎಂ.ಎಲ್ ಪ್ರಮಾಣದ Original  Choice  Delux Whisky  ಎಂಬ ವಿಸ್ಕಿಯ ಟೆಟ್ರಾ ಪ್ಯಾಕ್ ಗಳಿರುವುದು ಕಂಡು ಬಂದಿದ್ದು,  ಸದ್ರಿ  ಟೆಟ್ರಾ ಪ್ಯಾಕ್ ಗಳನ್ನು ಗಿರಾಕಿಗಳಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿರುವುದಾಗಿ ಆಪಾದಿತನು  ತಿಳಿಸಿ  ಹಾಜರುಪಡಿಸಿದ ಚೀಲದ ಸಹಿತ  90 ಎಂ.ಎಲ್. ಪ್ರಮಾಣದ  Original  Choice  Delux Whisky  ಎಂಬುದಾಗಿ ಬರೆದಿರುವ ರೂಪಾಯಿ 1,620/- ಮೌಲ್ಯದ  ಒಟ್ಟು 45 ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳು   ಹಾಗೂ ವಿಸ್ಕಿ ಮಾರಾಟ ಮಾಡಿ ಸಂಗ್ರಹಿಸಿದ ಹಣವೆಂದು ತಿಳಿಸಿ ಹಾಜರುಪಡಿಸಿದ ನಗದು 200/- ರೂಪಾಯಿಯನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡು ಠಾಣೆಗೆ ತಂದು ಹಾಜರು ಪಡಿಸಿದ್ದನ್ನು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

Crime Reported in  Mangalore East PS

ದಿನಾಂಕ:22-05-2022 ರಂದು ಪ್ರಕರಣದ ಪಿರ್ಯಾದಿ Rosamma ದಾರರು ತಮ್ಮ ಠಾಣಾ ಸಿಬ್ಬಂದಿಗಳ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಸುಮಾರು ರಾತ್ರಿ 8.45 ರ ವೇಳೆಗೆ ಕ್ಯಾಲಿವನ್ ಅಗಸ್ಟಿನ್ ಮತ್ತು ಅರವಿಂದ್ ಎಂಬವರುಗಳು ಸೈಂಟ್ ಆಗ್ನೇಸ್- ಕದ್ರಿ ಕಡೆಯ ಸಾರ್ವಜನಿಕ ರಸ್ತೆಯಲ್ಲಿ ಕಟ್ಟೆಯೊಂದರಲ್ಲಿ ಸಾರ್ವಜನಿಕವಾಗಿ ಸಿಗರೇಟ್ ಸೇದುತ್ತಿದ್ದುದನ್ನು ಕಂಡು ಸದ್ರಿಯವರುಗಳು ಬಳಿಗೆ ಹೋಗುತಿದ್ದಾಗ ಅವರಿಬ್ಬರೂ ಸಮವಸ್ತ್ರದಲ್ಲಿದ್ದ ನಮ್ಮನ್ನು ಓಡಿ ತಪ್ಪಿಕೊಳ್ಳಲು ಪ್ರಯತ್ನಿಸಿದವನನ್ನು ವಶಕ್ಕೆ ಪಡೆದುಕೊಂಡಿದ್ದು, ಇವರುಗಳನ್ನು ವಿಚಾರಿಸಲಾಗಿ ಇವರು ಮಾತುಗಳು ತೊದಲುತ್ತಿದ್ದು ಬಾಯಿಯಿಂದ ಅಮಲು ಪದಾರ್ಥ ಸೇವಿಸಿದ ವಾಸನೆ ಬರುತ್ತಿದ್ದರಿಂದ, ಇವರಿಬ್ಬರನ್ನು ಕೂಲಂಕುಷವಾಗಿ ವಿಚಾರಿಸಿದ್ದಲ್ಲಿ ಸಿಗರೇಟಿನ ಜೊತೆ ಗಾಂಜಾ ಎಂಬ ಅಮಲು ಪದಾರ್ಥವನ್ನು ಸೇರಿಸಿ ಸೇವಿಸಿದ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಇವರುಗಳನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ, ಗಾಂಜಾ ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ದ್ರಡಪಟ್ಟಿರುವುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ

ಇತ್ತೀಚಿನ ನವೀಕರಣ​ : 23-05-2022 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080