ಅಭಿಪ್ರಾಯ / ಸಲಹೆಗಳು

Crime Reported in:Ullal PS

ದಿನಾಂಕ.23-6-2022 ರಂದು ಉಳ್ಳಾಲ ತಾಲೂಕು, ಕೋಟೆಕಾರು ಗ್ರಾಮದ ಮಾಡೂರು ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಯಾವುದೋ ಮಾದಕ ವಸ್ತುವನ್ನು ಸೇವಿಸಿ ನಶೆ ಹೊಂದಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾನೆ ಎಂಬುದಾಗಿ ಭಾತ್ಮೀದಾರರಿಂದ ಮಾಹಿತಿ ದೊರೆತ ಮೇರೆಗೆ ಬೆಳಿಗ್ಗೆ 11-45 ಗಂಟೆಯ ಸಮಯಕ್ಕೆ ಮಾಹಿತಿ ದೊರೆತ ಸ್ಥಳಕ್ಕೆ ತಲುಪಿ ನೋಡಿದಾಗ ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಅಮಲಿನಲ್ಲಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವ  ಶಾಮಿಲ್ (21) ವಾಸ. ಇಮಾಮುದ್ಧೀನ್ ಜುಮ್ಮಾ ಮಸೀದಿ ಬಳಿ, ಶಾರದಾ ನಗರ, ಮಾಡೂರು, ಕೋಟೆಕಾರು ಗ್ರಾಮ, ಉಳ್ಳಾಲ ತಾಲೂಕು. ಎಂಬವನನ್ನು  ವಶಕ್ಕೆ ಪಡೆದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಮದ  ವೈದ್ಯಕೀಯ ತಪಾಸಣೆಗೆ ಒಳಪಡಿಸಿದಂತೆ ಶಾಮಿಲ್ ನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದಾಗಿ ಸದ್ರಿ ಆಸ್ಪತ್ರೆಯ ವೈದ್ಯಾಧಿಕಾರಿಯವರು ಅಭಿಪ್ರಾಯದೊಂದಿಗೆ ದೃಢಪತ್ರ ನೀಡಿದಂತೆ ಸದ್ರಿ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Crime Reported in:Traffic North Police Station                                                        

ದಿನಾಂಕ: 22-06-2022 ರಂದು ಸಂಜೆ ಸಮಯ ಸುಮಾರು 4:45 ಗಂಟೆಗೆ ಪಿರ್ಯಾದಿದಾರರು Mohan Kumar A N  KSRTC Volvo Malti Axil KA-57- F-269 ನಂಬ್ರದ ವಾಹನದಲ್ಲಿ ಚಾಲಕರಾಗಿ ಹಾಗೂ ನಿರ್ವಾಹಕರಾಗಿ ಈರಪ್ಪ ನಾಯ್ಕ ಇವರು ಮಂಗಳೂರಿನಿಂದ ಕಾರವಾರಕ್ಕೆ ರಾ.ಹೆ 66 ರ ಕುಳಾಯಿ ಹೊನ್ನಕಟ್ಟೆ ಜಂಕ್ಷನಿನಿಂದ ಸ್ವಲ್ಪ ಮುಂದೆ ಹೋಗುತ್ತಿರುವಾಗ ಏಕಾಏಕಿ 02 ದನಗಳು ರಸ್ತೆಯಲ್ಲಿ ಅಡ್ಡಬಂದ ಪರಿಣಾಮ ಪಿರ್ಯಾದಿದಾರರ ವಾಹನದ ಮುಂದೆ ಹೋಗುತ್ತಿದ್ದ ಕಾರು ಒಮ್ಮೆಲೇ ಬ್ರೇಕ್ ಹಾಕಿ ನಿಲ್ಲಿಸಿದ್ದು, ಇದೇ ವೇಳೆ ಪಿರ್ಯಾದಿದಾರರು ಕೂಡ ತಮ್ಮ ವಾಹನವನ್ನು ನಿಲ್ಲಿಸಿದ್ದು, ಈ ವೇಳೆ ಅವರ ವಾಹನದ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ KA20-D-9837 ನಂಬ್ರದ ಬಸ್ಸಿನ ಚಾಲಕ ಹ್ಯಾರಿ ವಿಲಿಯಂ ರವರು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಬಸ್ಸನ್ನು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ವಾಹನದ ಹಿಂಬದಿಯ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ವಾಹನದ ಹಿಂದಿನ ಬಲಬದಿಯ ಬಾಡಿ ಹಾಗೂ ಸ್ಟೇರಿಂಗ್ ಅಸೆಂಬ್ಲಿ ಹಾನಿಗೊಂಡಿದ್ದು, ಯಾರಿಗೂ ಯಾವುದೇ ರೀತಿಯ ಗಾಯವಾಗಿರುವುದಿಲ್ಲ ಎಂಬಿತ್ಯಾಧಿ

 

Crime Reported in:Surathkal PS    

ದಿನಾಂಕ 22-06-2022 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಕುತ್ತೇತ್ತೂರು ಗ್ರಾಮದ MRPL  ವರ್ಕ್ ಶಾಫ್ ಬಳಿ ಪಿರ್ಯಾದಿದಾರರ Shonith ತಂದೆ ಪ್ರಾಯ ಸುಮಾರು 47 ವರ್ಷದ ಕೇಶವ ಇವರು ರಿಗ್ಗರ್ ಆಗಿ ಸುನೀಲ್ ಜೊತೆ ಕೆಲಸವನ್ನು ಮಾಡುತ್ತಿರುವಾಗ ಟ್ರೇಲರ್ ನಂ KA-19-D-9001 ನೇಯದರಲ್ಲಿ ಇದ್ದ ಕೌಂಟರ್ ವೇಟ್ ನ್ನು ಕ್ರೇನ್ ಮುಖೇನ ಆತ ಅನ್ ಲೌಡ್ ಮಾಡುವಾಗ ಕ್ರೇನ್ ಅಪರೇಟರ್ ರಿಕಿಲ್ ಇವರು ಹಾಗೂ ಮಂಜುನಾಥ್ ಕ್ರೇನ್ ಕಾಂಟ್ರಾಕ್ಟರ್ ಹಾಗೂ ಸದ್ರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಇತರರ ನಿರ್ಲಕ್ಷ್ಯತನದಿಂದ ಹಾಗೂ ಸದ್ರಿ ಸ್ಥಳದಲ್ಲಿ ಕೆಲಸ ಮಾಡಿದರೇ ಮರಣ ಊಂಟಾಗುವ ಸಂಭವ ಇದೆ ಎಂದು ತಿಳಿದು ಕೆಲಸ ಮಾಡಿಸಿದ ಪರಿಣಾಮ ಕೇಶವ ರವರಿಗೆ ಕೌಂಟರ್ ವೇಟ್ ತಾಗಿ ರಕ್ತಗಾಯಗೊಂಡು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತ ಪಟ್ಟಿದ್ದಾಗಿರುತ್ತದೆ ಎಜೆ ಆಸ್ಪತ್ರೆ ವೈದ್ಯಾಧಿಕಾರಿಯವರು ಮಧ್ಯಾಹ್ನ 1:00 ಗಂಟೆಗೆ ಪರಿಕ್ಷೀಸಿ ಕರೆ ತರುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಖಾತ್ರಿ ಪಡಿಸಿದ್ದು ಆರೋಪಿಗಳ ವಿರುದ್ಧ ಕ್ರಮ ಜರಗಿಸುವರೇ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 23-06-2022 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080