ಅಭಿಪ್ರಾಯ / ಸಲಹೆಗಳು

Crime Reported in: Kavoor PS

ಪಿರ್ಯಾದಿ SHRI V S ALGUR  ಮೂಲತ: ಯಾದಗಿರಿ ಜಿಲ್ಲೆಯವರಾಗಿದ್ದು ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿರುತ್ತಾರೆ. ಪಿರ್ಯಾದಿದಾರರ ಹಿರಿಯ ಮಗನಾದ ಆದಿತ್ಯ ವಿ ಅಲಗೂರು(27) ಎಂಬಾತನು ಮಂಗಳೂರಿನ ಪಣಂಬೂರಿನಲ್ಲಿರುವ MCF ಫ್ಯಾಕ್ಟರಿಯಲ್ಲಿ ಪ್ರೊಡೆಕ್ಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 16-07-2022 ರಂದು ಪಿರ್ಯಾದಿದಾರರು ಮತ್ತು ಹೆಂಡತಿ ಅಗತ್ಯ ಕೆಲಸದ ನಿಮಿತ್ತ ಊರಿಗೆ ಹೋಗಿದ್ದು ಮನೆಯಲ್ಲಿ ಇಬ್ಬರು ಗಂಡು ಮಕ್ಕಳು ಮಾತ್ರ ಇದ್ದರು. ದಿನಾಂಕ: 17-07-2022 ರಂದು ಬೆಳಿಗ್ಗೆ 2ನೇ ಮಗನಾದ ಅಭಿಷೇಕ್ ಪಿರ್ಯಾದಿದಾರರಿಗೆ ಪೋನ್ ಮಾಡಿ “ಅಣ್ಣ ಆದಿತ್ಯನು ನಿನ್ನೆ ದಿನಾಂಕ: 16-07-2022 ರಂದು ರಾತ್ರಿ ಮನೆಗೆ ಬಂದಿಲ್ಲ ಸಂಜೆ ಸುಮಾರು 07.20 ಗಂಟೆಗೆ ಆದಿತ್ಯನೇ ನನಗೆ ಫೋನ್ ಮಾಡಿ ಮನೆಗೆ ಬರಲು ಸ್ವಲ್ಪ ತಡವಾಗುತ್ತದೆಂದು ತಿಳಿಸಿದ್ದನು, ನಂತರ ನಾನು ಡ್ಯೂಟಿ ಮುಗಿಸಿ ಮನೆಗೆ ಹೋಗಿ ಫೋನ್ ಮಾಡಿದಾಗ  ಕೂಡ ಮನೆಗೆ ಬರುತ್ತೇನೆಂದು ಹೇಳಿದ್ದನು, ಆದರೆ ನಾನು ಸುಮಾರು 7.45 ಗಂಟೆಗೆ ಪೋನ್ ಮಾಡಿದಾಗ  ಅವನ ಪೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ಆದಿತ್ಯನು ಮನೆಗೆ ಬರಲಿಲ್ಲ” ಎಂಬುದಾಗಿ ತಿಳಿಸಿದನು. ಪಿರ್ಯಾದಿದಾರರ ಮಗನಿಗೆ ವೀಕೆಂಡ್ ನಲ್ಲಿ ಸುತ್ತಾಡಲು ಹೋಗುವ ಅಭ್ಯಾಸ ಇರುವುದರಿಂದ ವೀಕೆಂಡ್ ಮುಗಿಸಿ ಬರುತ್ತಾನೆಂದು ತಿಳಿದಿದ್ದು ಆದರೆ ಮಗನ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇದ್ದುದರಿಂದ ದಿನಾಂಕ: 20-07-2022 ರಂದು ಪಿರ್ಯಾದಿದಾರರು ಮಂಗಳೂರಿಗೆ ಬಂದು ಮಗನ ಸ್ನೇಹಿತರನ್ನು ಬೇಟಿ ಮಾಡಿ ಮಗನ ಬಗ್ಗೆ ವಿಚಾರಿಸಲಾಗಿ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಪಿರ್ಯಾದಿದಾರರು ಮತ್ತು ಅಭಿಷೇಕ್ ಸೇರಿ ಆದಿತ್ಯನ ಪತ್ತೆಗಾಗಿ ಕಾವೂರು, ಮರವೂರು ಮುಂತಾದ ಕಡೆಗಳಲ್ಲಿ ಹುಡುಕಾಡುತ್ತಿದ್ದಾಗ  ದಿನಾಂಕ: 21-07-2022 ರಂದು ಮದ್ಯಾಹ್ನ ಸುಮಾರು 1.00 ಗಂಟೆಗೆ ಮರವೂರಿನ ಅಣೆಕಟ್ಟೆ ಬಳಿ  ಮಗ ಆದಿತ್ಯನು ಬಳಸುತ್ತಿದ್ದ ಸ್ಕೂಟರ್ ನಂಬ್ರKA-04 JJ-3513ಕಂಡುಬಂದಿದ್ದು ಆದುದರಿಂದ ಕಾಣೆಯಾಗಿರುವ ಮಗನನ್ನು ಪತ್ತೆ ಮಾಡಿಕೊಡಬೇಕಾಗಿ, ಎಂಬಿತ್ಯಾದಿ.

 

Crime Reported in: Mangalore East PS

ದಿನಾಂಕ 22-07-2022 ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ಬೆಂದೂರವೆಲ್ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ KA-19-C-6287 ನೇ ನಂಬ್ರದ 15 ನಂಬ್ರದ ಪ್ರೀತಮ್  ಎಂಬ ಬಸ್ಸಿನ ಚಾಲಕ ಹಾಗೂ ನಿರ್ವಾಹಕ ಹಾಗೂ KA-20- A A-6012  ನೇ ನವದುರ್ಗಾ ಎಂಬ ಹೆಸರಿನ ಸರ್ವೀಸ್ ಬಸ್ಸಿನ ಚಾಲಕ ಹಾಗೂ ನಿರ್ವಾಹಕರು ಬಸ್ಸುಗಳನ್ನು ನಿಲ್ಲಿಸಿಕೊಂಡು ಟೈಮಿಂಗ್  ವಿಚಾರವಾಗಿ ಒಬ್ಬರನೊಬ್ಬರು ಬೈದಾಡಿ  ಒಬ್ಬರನೊಬ್ಬರು ದೂಡಾಡಿ ಕೈ ಯಿಂದ ಹೊಡೆದಾಡಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವ ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡಿರುವುದರಿಂದ ಸದ್ರಿಯವರುಗಳ ವಿರುದ್ಧ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿಯಾಗಿರುತ್ತದೆ.

 

Crime Reported in: Mulki PS

  “ಪಿರ್ಯಾದಿ Smt Chandravathi ರವರ  ಮಗಳು ಶ್ರೀಮತಿ ಶರ್ಮಿಳಾ ಪ್ರಾಯ: 27 ವರ್ಷ, ಹಾಗೂ ಆಕೆಯ ಮಗ, ಪ್ರಾಯ 4 ವರ್ಷ ಇವರು ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಮರಿಯಾ ಗ್ಲಾಸ್ ಹೌಸ್ ಬಳಿಯ  ಕುದ್ರು ಹೌಸ್  ಎಂಬಲ್ಲಿ ಮನೆಯಲ್ಲಿದ್ದವರು  ದಿನಾಂಕ: 19-07-2022 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆ ಮಧ್ಯೆ ಮನೆಯಿಂದ ಕಾಸರಗೋಡಿಗೆಂದು ಹೋದವಳು, ಬಳಿಕ  ವಾಪಾಸು  ಮನೆಗೂ ಬಾರದೇ  ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿವುದಾಗಿದೆ. ಕಾಣೆಯಾದ ಶರ್ಮಿಳಾ ಹಾಗೂ ಆಕೆಯ ಮಗ ಇವರನ್ನು ಪತ್ತೆಮಾಡಿಕೊಡಬೇಕಾಗಿ ಕೋರಿಕೆ” ಎಂಬಿತ್ಯಾದಿಯಾಗಿದೆ.

 

Crime Reported in: Mangalore North

ಪಿರ್ಯಾದಿ MOHAN RAJ H  ಮಂಗಳೂರು ಸೆಂಟ್ರಲ್  ಮಾರ್ಕೆಟ್ ನಲ್ಲಿರುವ  ಎಂ.ಜೆ.ಪೈನಾನ್ಸ್ & ಇನ್ವೆಸ್ಟ್ ಮೆಂಟ್  ನ ಮಾಲಕರಾಗಿದ್ದು, ತಮ್ಮ ಸಂಸ್ಥೆಯ ಕೆಲಸ ಕಾರ್ಯಕ್ಕಾಗಿ  KA-19-EY -6276  ನೊಂದಣಿ ನಂಬ್ರದ ಸಿಲ್ವರ್ ಬಣ್ಣದ ಸುಜಿಕಿ ಆಕ್ಷಿಸ್ ಆಕ್ಟಿವಾ ಸ್ಕೂಟರ್ ನ್ನು 2018 ನೇ ಇಸವಿಯಲ್ಲಿ ಖರೀದಿ ಮಾಡಿ ಉಪಯೋಗಿಸುತ್ತಿದ್ದು,  ತಾವು ಎಂದಿನಂತೆ ದಿನಾಂಕ: 24-06-2022 ರಂದು ಸಂಜೆ  5.00  ಗಂಟೆಗೆ ತಮ್ಮ ಕಛೇರಿ  ಬಳಿ ಇರುವ ರೂಪವಾಣಿ ಟಾಕೀಸ್ ನ ರಸ್ತೆ ಬದಿಯಲ್ಲಿ  ತಮ್ಮ ಬಾಬ್ತು KA-19-EY -6276  ನೊಂದಣಿ ನಂಬ್ರದ ಸಿಲ್ವರ್ ಬಣ್ಣದ ಸುಜಿಕಿ ಆಕ್ಷಿಸ್ ಸ್ಕೂಟರ ನ್ನು  ಪಾರ್ಕ್ ಮಾಡಿ ಇಟ್ಟು ನಂತರ ಕೆಲಸಕ್ಕೆ  ತಮ್ಮ ಕಛೇರಿಗೆ  ಹೋಗಿದ್ದು, ನಂತರ ಪಿರ್ಯಾದಿದಾರರು ಕೆಲಸ  ಮುಗಿಸಿ  ರಾತ್ರಿ 7.30 ಗಂಟೆಗೆ ಸುಜಿಕಿ ಆಕ್ಷಿಸ್  ಸ್ಕೂಟರ್ ಇಟ್ಟಿದ್ದ ಸ್ಥಳಕ್ಕೆ ಬಂದು ನೋಡಿದಾಗ ಪಿರ್ಯಾದಿದಾರರ KA-19-EY -6276  ನೊಂದಣಿ ನಂಬ್ರದ ಸಿಲ್ವರ್ ಬಣ್ಣದ ಸುಜಿಕಿ ಆಕ್ಷಿಸ್ ಅಲ್ಲಿರದೇ ಇದ್ದು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಈ ಬಗ್ಗೆ ತಮ್ಮ ಸ್ನೇಹಿತರಲ್ಲಿ ವಿಚಾರ ತಿಳಿಸಿ  ಈವರೆಗೂ ಹುಡುಕಾಡಿದರೂ ಸ್ಕೂಟರ್ ಸಿಗದೇ ಇದ್ದುದರಿಂದ  ತಮ್ಮ ಬಾಬ್ತು KA-19-EY -6276  ನೊಂದಣಿ ನಂಬ್ರದ ಸ್ಕೂಟರ್ ನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಈ ದೂರನ್ನು ನೀಡಿರುವುದಾಗಿದೆ ಎಂಬಿತ್ಯಾದಿ ದೂರಿನ ಸಾರಾಂಶ.

 

Crime Reported in: Traffic North Police

ದಿನಾಂಕ: 21-07-2022 ರಂದು ಪಿರ್ಯಾದಿದಾರರು ANKULA SWARGIARY ಪಿಲಿಕುಳದ ಸಯನ್ಸ್ ಪಾರ್ಕ್ ನಲ್ಲಿ ಸೆಕ್ಯೂರಿಟಿ ಆಗಿ ಕೆಲಸ ಮಾಡಿಕೊಂಡಿದ್ದಾಗ ಸಾಯಂಕಾಲ ಸಮಯ ಸುಮಾರು 6.55 ಗಂಟೆಗೆ ರಸ್ತೆಯ ಹೊರ ಭಾಗದಲ್ಲಿ ನಿಂತುಕೊಂಡು ರಸ್ತೆಯನ್ನು ಗಮನಿಸುತ್ತಿದ್ದಂತೆ KA-19-ER-1180 ನಂಬ್ರದ ಕಪ್ಪು ಬಣ್ಣದ ಸ್ಕೂಟರನ್ನು ಅದರ ಸವಾರನಾದ ಕರಣ್ ಎಂಬಾತನು  ಪಿಳಿಕುಳ ಪ್ರಾಣಿ ಸಂಗ್ರಹಾಲಯ ಕಡೆಯಿಂದ ಟಿಕೆಟ್ ಕೌಂಟರ್ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಡಾಮಾರು ರಸ್ತೆಯ ಎಡಬದಿಯ ಅಂಚಿನಲ್ಲಿರುವ ಸಿಮೆಂಟ್ ದಿಂಡೆಗೆ ಡಿಕ್ಕಿಪಡಿಸಿದ ಪರಿಣಾಮ  ಸ್ಕೂಟರ್ ಸವಾರನು ಸ್ಕೂಟರ್ ಸಮೇತ ಎಸೆಯಲ್ಪಟ್ಟು ಡಾಮಾರು ರಸ್ತೆಗೆ ಬಿದ್ದು, ಮೂಗಿನ ತುದಿಯಿಂದ ಹಣೆಯ ಮಧ್ಯೆ ಭಾಗದವರೆಗೆ ಚರ್ಮ ಹರಿದ ಗಂಭೀರ ರಕ್ತ ಗಾಯವಾಗಿದ್ದು, ಎದೆಯ ಎಡಬದಿಗೆ ಗುದ್ದಿದ ರೀತಿಯ ಗಾಯವಾಗಿದ್ದು, ಬಲಕೋಲು  ಕೈ ಭಾಗಕ್ಕೆ ಚರ್ಮ ಹರಿದ ರಕ್ತಗಾಯವಾಗಿದ್ದು, ಎರಡೂ ಕಾಲುಗಳ ಮೊಣಗಂಟಿಗೆ ಹಾಗೂ ಕೋಲು ಕಾಲು ಭಾಗದಲ್ಲಿ ಚರ್ಮ ತರಚಿದ ಗಾಯವಾಗಿ ಸರಿಯಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೇ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾನೆ. ಅಲ್ಲದೇ ಅಫಘಾತ ಪಡಿಸಿದ ಸ್ಕೂಟರಿನ ನೊಂದಣಿ ಮಾಲಕ 16 ವರ್ಷದ ಬಾಲಕನಿಗೆ ಸ್ಕೂಟರ್ ಸವಾರಿ ಮಾಡಲು ಅನುವು ಮಾಡಿಕೊಟ್ಟಿರುತ್ತಾನೆ.  ಎಂಬಿತ್ಯಾದಿ.

 

Crime Reported in: Kankanady Town

ಪಿರ್ಯಾದಿ Chandrashekhar M  ಬೆಂಡೇಕೆರೆ, ಅರಸೀಕೆರೆ, ಹಾಸನ ಜಿಲ್ಲೆ ಎಂಬಲ್ಲಿ ವಾಸವಾಗಿದ್ದು, ವ್ಯವಸಾಯ ವೃತ್ತಿಯನ್ನು ಮಾಡಿಕೊಂಡಿರುವುದಾಗಿದೆ. ಪಿರ್ಯಾದುದಾರರಿಗೆ ನಾಲ್ಕು ವರ್ಷಗಳ ಹಿಂದೆ ಹಾವೇರಿ ನಗರದ ಶಿವಾಜಿನಗರ ಎಂಬಲ್ಲಿನ ಪುಷ್ಪಾ ಎಂಬುಬರೊಂದಿಗೆ ವಿವಾಹವಾಗಿದ್ದು, ಪಿರ್ಯಾದುದಾರರು  ಹೆಂಡತಿಯ ಅಣ್ಣನಾದ ಕೇದಾರಲಿಂಗ @ಶಂಕರ್ ಎಂಬುವರು ಹಾವೇರಿಯ ಶಿವಾಜಿನಗರದಲ್ಲಿ ತನ್ನ ತಾಯಿಯ ಜೊತೆ ವಾಸಮಾಡಿಕೊಂಡಿಕೊಂಡು ಹಾವೇರಿ ನಗರದ ಇಂಡಿಯನ್ ಗ್ಯಾಸ್ ಏಜೆನ್ಸಿಯಲ್ಲಿ  ಕೆಲಸ ಮಾಡಿಕೊಂಡಿದ್ದು, ಕೆಲಸದ ನಂತರ ಆಗಾಗ ಮನೆ ಹತ್ತಿರದ ಚನ್ನಬಸು ರವರ ದಿನಸಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟ ಹೊಂದಿರುವುದಾಗಿದೆ. ಪಿರ್ಯಾದುದಾರರ ಭಾವನಾದ ಕೇದಾರಲಿಂಗ @ಶಂಕರ್ ಎಂಬುವರು ದಿನಾಂಕ 10-07-2022 ರಂದು ಚೆನ್ನಬಸು ರವರ ಕಣ್ಣಿನ ಶಸ್ತ್ರಚಿಕಿತ್ಸೆಯ ಸಲುವಾಗಿ ಮಂಗಳೂರು ನಗರದ ಪಂಪವೆಲ್ ನ ಇಂಡಿಯಾನ ಆಸ್ಪತ್ರೆಗೆ ತೆರಳಿ ದಿನಾಂಕ 11-07-2022 ರಿಂದ ದಿನಾಂಕ 14-07-2022 ರ ವರೆಗೆ ಆಸ್ಪತ್ರೆಯಲ್ಲಿ ಚೆನ್ನಬಸುರವರ ಜೊತೆಗೆ ಇದ್ದು ಅವರ ಉಪಚಾರವನ್ನು ಮಾಡಿಕೊಂಡಿರುತ್ತಾರೆ. ದಿನಾಂಕ 14-07-2022 ರ ಮದ್ಯಾಹ್ನ ಸಮಯ ಸುಮಾರು 1:00 ಗಂಟೆಗೆ ಚೆನ್ನಬಸು ರವರು ವೈದ್ಯರಿಗೆ ಬೇಟಿಯಾಗಲು ಹೋದ ಸಮಯ ನನ್ನ ಭಾವನಾದ ಕೇದಾರಲಿಂಗ @ಶಂಕರ್ ಆಸ್ಪತ್ರೆಯಿಂದ ಹೊರಗಡೆ ಹೋದವರು ವಾಪಾಸ್ಸು ಬರದೇ ಇರುವವರನ್ನು ಪಿರ್ಯಾದುದಾರರು ಸಂಬಂದಿಕರ ಮನೆ ಹಾಗೂ ಬೇರೆ ಎಲ್ಲ ಕಡೆಗಳಲ್ಲಿ ಹುಡುಕಾಡಿರುವುದಾಗಿದೆ. ಆದುದರಿಂದ ನಾಪತ್ತೆಯಾಗಿರುವ ಪಿರ್ಯಾದಿದಾರರ ಗಂಡ ಹರೀಶ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 23-07-2022 02:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080