Crime Reported inTraffic North PS
ದಿನಾಂಕ:22-09-2021 ರಂದು ಪಿರ್ಯಾದಿದಾರರಾದ ಶಿವ ಪ್ರಸಾದ್ ಆಚಾರ್ಯರವರು ತಮ್ಮ ಬಾಬ್ತು KA-19-HB-6160 ನಂಬ್ರದ ಸ್ಕೂಟರಿನಲ್ಲಿ ಶಿವ ಪ್ರಸಾದ್ ಆಚಾರ್ಯರವರು ಸವಾರರಾಗಿ ಅವರ ಪತ್ನಿ ಸುಪ್ರಿಯ ಆಚಾರ್ಯರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಲ್ಮಠದಿಂದ ಬೊಂದೇಲ್ ಕಡೆಗೆ ಬರುತ್ತಾ ಸಮಯ ಸುಮಾರು 20-00 ಗಂಟೆಗೆ ಮೆರಿಹಿಲ್ ದಿನಾಂಕ:22-09-2021 ರಂದು ಪಿರ್ಯಾದಿದಾರರಾದ ಶಿವ ಪ್ರಸಾದ್ ಆಚಾರ್ಯರವರು ತಮ್ಮ ಬಾಬ್ತು KA-19-HB-6160 ನಂಬ್ರದ ಸ್ಕೂಟರಿನಲ್ಲಿ ಶಿವ ಪ್ರಸಾದ್ ಆಚಾರ್ಯರವರು ಸವಾರರಾಗಿ ಅವರ ಪತ್ನಿ ಸುಪ್ರಿಯ ಆಚಾರ್ಯರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬಲ್ಮಠದಿಂದ ಬೊಂದೇಲ್ ಕಡೆಗೆ ಬರುತ್ತಾ ಸಮಯ ಸುಮಾರು 20-00 ಗಂಟೆಗೆ ಮೆರಿಹಿಲ್ ಬಳಿ ತಲುಪಿದಾಗ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರಿನ ಹಿಂಬದಿಯಿಂದ KA-19-MK-9094 ನಂಬ್ರದ ಕಾರನ್ನು ಅದರ ಚಾಲಕ ಶ್ರೀನಿವಾಸ ಭಟ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಬಲಬದಿಯಿಂದ ಓವರ್ ಟೇಕ್ ಮಾಡಿಕೊಂಡು ಹೋಗಿ ಒಮ್ಮಲೇ ಎಡಕ್ಕೆ ಚಲಾಯಿಸಿದ ಪರಿಣಾಮ ಸ್ಕೂಟರಿನ ಹ್ಯಾಂಡಲ್ ಗೆ ಕಾರಿನ ಹಿಂಬದಿ ಡಿಕ್ಕಿಯಾಗಿ ಸವಾರರಿಬ್ಬರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸುಪ್ರಿಯ ಆಚಾರ್ಯರವರ ತಲೆಗೆ ರಕ್ತಗಾಯ ಹಾಗೂ ಬಲಕೈ ಮುಂಗೈಗೆ ಗುದ್ದಿದ ಗಾಯ ಮತ್ತು ಬಲಕಾಲಿಗೆ ಗುದ್ದಿದ ಮತ್ತು ತರಚಿದ ಗಾಯ, ಹಾಗೂ ಪಿರ್ಯಾದಿದಾರರ ಬಲಕೈಗೆ ಚರ್ಮ ಸುಲಿದ ರಕ್ತ ಗಾಯ ಮತ್ತು ದೇಹದ ಬಲಗಡೆಗೆ ಗುದ್ದಿದ ರೀತಿಯ ಗಾಯಗಳಾಗಿದ್ದು ಸವಾರರಿಬ್ಬರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಅಲ್ಲದೇ ಅಪಘಾತ ಪಡಿಸಿದ ಕಾರು ಚಾಲಕ ಅಪಘಾತದ ವೇಳೆ ಅಮಲು ಪದಾರ್ಥ ಸೇವಿಸಿದ ಹಾಗೆ ಕಂಡುಬಂದಿರುತ್ತದೆ. ಎಂಬಿತ್ಯಾದಿ.
.
2) ದಿನಾಂಕ:22-09-2021 ರಂದು ಪಿರ್ಯಾದಿದಾರರಾದ ದೇವಿ ಪ್ರಸಾದ್ ಶೆಟ್ಟಿರವರ ತಾಯಿ ಶೋಭಾರವರು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಕಂಪೆನಿಯಲ್ಲಿ ಕೆಲಸ ಮುಗಿಸಿ ಸಂಜೆ ಮನಗೆ ಬರುವರೇ ಬಸ್ಸಿಗಾಗಿ ಉಡುಪಿ-ಮಂಗಳೂರು ರಾಹೆ 66 ರಸ್ತೆಯನ್ನು ದಾಟಿ ರಸ್ತೆಯ ವಿಭಾಜಕ ಹತ್ತಿ ರಸ್ತೆಯ ಆಚೆ ಬದಿಗೆ ಹೋಗುವರೇ ರಸ್ತೆ ವಿಭಾಕದಿಂದ ಕೆಳಗೆ ಇಳಿದ ಸಮಯ 17-30 ಗಂಟೆಗೆ ಪಣಂಬೂರು ಕಡೆಯಿಂದ ಬೈಕಂಪಾಡಿ ಕಡೆಗೆ KA-19-EY-9469 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಅದಿತ್ಯ ಸಾಲ್ಯಾನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಚ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಶೋಭಾರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಶೋಭಾರವರು ರಸ್ತೆಗೆ ಬಿದ್ದು ಅವರ ಎಡಕೈಭುಜ, ಎಡಕೈ ಮೊಣಗಂಟು, ಹಣೆಯ ಮೇಲೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಯಲ್ಲಿ ಒಳರೋಗಿ ದಾಖಲಾಗಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಎಂಬಿತ್ಯಾದಿ.
Crime Reported in Mulki PS
ಪಿರ್ಯಾದಿ Mrs. Indrani ದಾರರ ಮಗಳು ವೀಣಾ (ಪ್ರಾಯ 21 ವರ್ಷ) ಎಂಬುವಳು ತನ್ನ ಎರಡು ವರ್ಷದ ಗಂಡು ಮಗನನ್ನು ಕರೆದುಕೊಂಡು ದಿನಾಂಕ 20.09.2021 ರಂದು 14.30 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು ಕೋಯಿಕುಡೆ ಗ್ರಾಮದ ಹರಿಪಾದೆ ಎಂಬಲ್ಲಿಂದ ಅಂಗನವಾಡಿಗೆಂದು ಹೋದವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು ಪಿರ್ಯಾದಿದಾರರು ಈ ದಿನದ ವರೆಗೆ ತನ್ನ ಮಗಳನ್ನು ಮತ್ತು ಮಗನನ್ನು ಸಂಬಂಧಿಕರ ಮತ್ತು ಸ್ನೇಹಿತರ ಮನೆಯಲ್ಲಿ ಹುಡುಕಾಡಿ ಪತ್ತೆಯಾಗದೆ ಇರುವುದರಿಂದ ತಡವಾಗಿ ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಎಂಬಿತ್ಯಾದಿಯಾಗಿ ಸಾರಾಂಶ
ಕಾಣೆಯಾದವರ ಚಹರೆ:-
1) ಹೆಸರು: ವೀಣಾ ಪ್ರಾಯ 21 ವರ್ಷ
ಧರಿಸಿದ ಬಟ್ಟೆ: ಕಪ್ಪು ಡಿಸೈನ್ ಇರುವ ಚೂಡಿದಾರದ ಟಾಪ್, ಬಿಳಿ ಬಣ್ಣದ ಲೆಂಗ್ಗಿಂಗ್ಸ್ ಪ್ಯಾಂಟ್
ಗೋಧಿ ಮೈಬಣ್ಣ, ಸಪೂರ ಶರೀರ
ಗೊತ್ತಿರುವ ಭಾಷೆ: ಕನ್ನಡ, ತುಳು, ತಮಿಳು, ತೆಲುಗು
Crime Reported in Mangalore South PS
ದಿನಾಂಕ 24-08-2021ರಂದು ಸಂಜೆ 10-30 ಗಂಟೆಯಿಂದ 11-30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಇಂಟರ್ ಸಿಟಿ ಲಾರ್ಡ್ ಬಳಿಯ, ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರ ಆರ್. ಸಿ. ಮಾಲಕತ್ವದ ಟಿವಿಎಸ್ ಜೂಪಿಟರ್ 2018ನೇ ಮೊಡಲ್ ನ KA19EY2867 ನೊಂದಣಿ ಸಂಖ್ಯೆಯ MD626EG41J1D79949 ಚೆಸಿಸ್ ನಂಬ್ರದ, EG4DJ1912716 ಇಂಜಿನ್ ನಂಬ್ರದ, ಕಪ್ಪು ಬಣ್ಣದ, ಅಂದಾಜು ಮೌಲ್ಯ 40000/- ರೂಪಾಯಿ ಬೆಲೆಬಾಳುವ ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ದ್ಚಿಚಕ್ರ ವಾಹನವನ್ನು ಕಳವಾದ ದಿನದಿಂದ ಈ ದಿನ ದಿನಾಂಕ 23-09-2021ರ ವರೆಗೆ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ
Crime Reported inUrva PS
ಪಿರ್ಯಾದಿ HC Sathish ದಾರರು ದಿನಾಂಕ 22.09.2021 ರಂದು ಪಿಸಿ ಸುನೀಲ್ ಜೊತೆಯಲ್ಲಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಬೀಟ್ ಕರ್ತವ್ಯಕ್ಕೆ ನೇಮಿಸಿದಂತೆ ಸಮಯ ರಾತ್ರಿ 9: 00 ಗಂಟೆಯಿಂದ ಕರ್ತವ್ಯದಲ್ಲಿದ್ದು, ರಾತ್ರಿ 9:20 ಗಂಟೆ ವೇಳೆಗೆ ಮಂಗಳೂರು ನಗರದ ಕೊಟ್ಟಾರ ಚೌಕಿಯಲ್ಲಿರುವ ರಿಜ್ಕ್ ಎಂಬ ಹೆಸರಿನ ಹೊಟೇಲ್ ನ ಮಾಲಕರು ಹೊಟೇಲ್ ಗೆ ಬರುವ ಗಿರಾಕಿಗಳಿಗೆ ಯಾವುದೇ ರೀತಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡದೆ ಮಾಸ್ಕ್ ನ್ನು ಧರಿಸುವಂತೆ ತಿಳುವಳಿಕೆ ನೀಡದೆ ಪ್ರಸ್ತುತ ಇರುವ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಮಾನವ ಜೀವಕ್ಕೆ ಅಪಾಯಕಾರಿಯಾದ ಕೋವಿಡ್ -19 ವೈರಾಣುವನ್ನು ಹರಡಲು ಕಾರಣ ಕರ್ತರಾಗಿರುತ್ತಾರೆ. ಆದ್ದರಿಂದ ಸದ್ರಿ ಹೊಟೇಲ್ ನ ಮಾಲಕರು ಯಾವುದೇ ರೀತಿಯಲ್ಲಿ ತನ್ನ ಹೊಟೇಲ್ ಗೆ ಬರುವ ಗ್ರಾಹಕರಿಗೆ ಸಾಮಾಜಿಕ ಅಂತರವನ್ನು ಕಾಪಾಡಲು ತಿಳಿಸದೆ, ಮಾಸ್ಕನ್ನು ಧರಿಸಲು ತಿಳುವಳಿಕೆ ನೀಡದೆ, ವ್ಯಾಪಾರ ಮಾಡಿಕೊಂಡು , ಉದ್ದೇಶಪೂರ್ವಕವಾಗಿ, ಮಾನವ ಜೀವಕ್ಕೆ ಅಪಾಯಕಾರಿಯಾದ ಕೋವಿಡ್ -19, ಕೋರೋನಾ ವೈರಸ್ ಹರಡುವ ಸಾದ್ಯತೆಯನ್ನು ಉಂಟು ಮಾಡಿರುವುದರಿಂದ ಸದ್ರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.
2) ಪಿರ್ಯಾದಿ HC Bharani Deekshith ದಾರರು ದಿನಾಂಕ 22.09.2021 ರಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಯ್ಸಳ-3 ನೇ ಕರ್ತವ್ಯಕ್ಕೆ ನೇಮಿಸಿದಂತೆ ಪಿಸಿ ವೆಂಕಟೇಶ್ ಜೊತೆಯಲ್ಲಿ ಕರ್ತ್ಯವ್ಯದಲ್ಲಿರುವ ಸಮಯ ರಾತ್ರಿ 10:30 ಗಂಟೆಯ ವೇಳೆಗೆ ನಗರ ನಿಸ್ತಂತು ಕೊಠಡಿಯಿಂದ ಕೊಟ್ಟಾರ ಚೌಕಿ ಹೋಗುವಂತೆ ತಿಳಿಸಿದ ಮಾಹಿತಿಯಂತೆ ಪಿರ್ಯಾದಿದಾರರು ಹೊಯ್ಸಳ ವಾಹನ ಸಮೇತ ಕೊಟ್ಟಾರ ಚೌಕಿ ಬಳಿ ಇರುವ ರಿಜ್ಕಿ ಎಂಬ ಹೆಸರಿನ ಹೊಟೇಲ್ ಮುಂಭಾಗದ ರಸ್ತೆ ಬದಿಗೆ ರಾತ್ರಿ 10:45 ಗಂಟೆಗೆ ತಲುಪಿದಾಗ ಸದ್ರಿ ಸ್ಥಳದಲ್ಲಿ ಮೂವರು ಸಾರ್ವಜನಿಕ ವ್ಯಕ್ತಿಗಳು ಬೀಯರ್ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕವಾಗಿ ಮದ್ಯಪಾನ ಮಾಡಿಕೊಂಡು, ಯಾವುದೇ ರೀತಿಯಲ್ಲಿ ಮಾಸ್ಕನ್ನು ಧರಿಸದೆ ಸಾಮಾಜಿಕ ಅಂತರವನ್ನು ಕಾಪಾಡದೆ ಪರಸ್ಪರ ಜೋರಾಗಿ ಕಿರುಚಾಡಿಕೊಂಡು ಪ್ರಸ್ತುತ ಇರುವ ಮಾನವ ಜೀವಕ್ಕೆ ಅಪಾಯಕಾರಿಯಾದ ಕೋವಿಡ್ -19 ವೈರಾಣುವನ್ನು ಹರಡಲು ಕಾರಣ ಕರ್ತರಾದ ಆರೋಪಿಗಳಾದ ಅಜಿತ್ ಕುಮಾರ್ ನಿತೀನ್ ಕುಲಾಲ್, ವಿನೋದ್ ಕುಲಾಲ್ ,ಈ ಮೂವರು ವ್ಯಕ್ತಿಗಳು ಯಾವುದೇ ರೀತಿಯಲ್ಲಿ ಮಾಸ್ಕನ್ನು ಧರಿಸದೆ, ಸಾಮಾಜಿಕ ಅಂತರವನ್ನು ಕಾಪಾಡದೆ ಉದ್ದೇಶಪೂರ್ವಕವಾಗಿ, ಮಾನವ ಜೀವಕ್ಕೆ ಅಪಾಯಕಾರಿಯಾದ ಕೋವಿಡ್ -19, ಕೋರೋನಾ ವೈರಸ್ ಹರಡುವ ಸಾದ್ಯತೆಯನ್ನು ಉಂಟು ಮಾಡಿರುವುದರಿಂದ ಸದ್ರಿಯವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವರದಿ ನೀಡಿರುವುದಾಗಿದೆ ಎಂಬಿತ್ಯಾದಿ.
Crime Reported in Mangalore Rural PS
ದಿನಾಂಕ 22-09-2021 ರಂದು ಸಂಜೆ 07 ಗಂಟೆಗೆ ಪಿರ್ಯಾದಿದಾರರಾದ ದಿನೇಶ್ ಎಂಬುವವರು ವಾಮಂಜೂರು ಕಡೆಯಿಂದ ಪೆರ್ಮಂಕಿಯಲ್ಲಿರುವ ತನ್ನ ಮನೆಕಡೆ ತೆರಳುತ್ತಿರುವ ದಾರಿಮದ್ಯದಲ್ಲಿರುವ ಪೆರ್ಮಂಕಿಯ ದರಿಬಾಗಿಲಲ್ಲಿರುವ ನ್ಯಾಯಬೆಲೆ ಅಂಗಡಿಯಿಂದ ಅಕ್ರಮವಾಗಿ ಅಕ್ಕಿ ಮೂಟೆಯನ್ನು ಪಿಕ್ಅಪ್ ವಾಹನ ನಂಬ್ರ KA-19 AC-8665 ನೇ ದರಲ್ಲಿ ತುಂಬಿಸುತ್ತಿದ್ದದನ್ನು ಕಂಡು ಅದನ್ನು ತಡೆದು ವಿಚಾರಿಸಿದಾಗ ನ್ಯಾಯ ಬೆಲೆ ಅಂಗಡಿ ವಿತರಕರಾದ ವಿಠ್ಠಲ್ ಅಮೀನ್ ಮತ್ತು ಗಾಡಿ ಚಾಲಕರು ನನ್ನನ್ನು ತಡೆದು ದೂಡಿ ಹಾಕಿ ನನಗೆ ಅವಾಚ್ಯಶಬ್ದಗಳಿಂದ ಬೈದು ವಾಹನದ ಚಾಲಕನು ವಾಹನವನ್ನು ಸ್ಥಳದಿಂದ ಚಲಾಯಿಸಿಕೊಂಡು ಹೋಗಿರುತ್ತಾನೆ.ಎಂಬಿತ್ತ್ಯಾದಿ ಪಿರ್ಯಾದಿಯ ಸಾರಾಂಶವಾಗಿದೆ
Crime Reported in Kankanady Town PS
ಪಿರ್ಯಾದು Smt. Nirmala ದಾರರು ಮಂಗಳೂರು ಮಹಾನಗರಪಾಲಿಕೆ ಆರೋಗ್ಯ ನಿರೀಕ್ಷಕರಾಗಿದ್ದು ,ಈ ದಿನ ದಿನಾಂಕ 22-09-2021 ರಂದು ಮಧ್ಯಾಹ್ನ ಸುಮಾರು 13:00 ಗಂಟೆಗೆ KA-01-AH-6779 ನೇ ನಂಬ್ರದ ಲಾರಿಯಲ್ಲಿ ಹೋಗುತ್ತಿದ್ದವರು ಮಂಗಳೂರು ನಗರದ ಜಪ್ಪಿನಮೊಗರು ಗ್ರಾಮದ ನೇತ್ರಾವತಿ ಬ್ರಿಡ್ಜ್ ನ ಸಮೀಪ ಮೇಲೆ ಲಾರಿಯನ್ನು ನಿಲ್ಲಿಸಿ, ಲಾರಿಯಲ್ಲಿದ್ದ ತ್ಯಾಜ್ಯ ವಸ್ತುಗಳನ್ನು ನದಿಯ ಪಕ್ಕದ ರಸ್ತೆಯ ಬದಿಯಲ್ಲಿ ಬಿಸಾಡುವುದನ್ನು ಪರಿಸರವಾದಿ ಒರ್ವರು ತಮ್ಮ ಮೊಬೈಲ್ ಪೋನ್ ನಲ್ಲಿ ಚಿತ್ರೀಕರಣ ಮಾಡಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೆ ವಾಟ್ಸ್ ಆಫ್ ಮೂಲಕ ಕಳುಹಿಸಿದ್ದು,ಮಾನ್ಯ ಆಯುಕ್ತರು ಸದ್ರಿ ವಿಡಿಯೋವನ್ನು ಪಿರ್ಯಾದಿದಾರರಿಗೆ ಫಾರ್ವಡ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು ತ್ಯಾಜ್ಯ ವಸ್ತುಗಳನ್ನು ನದಿಗೆ ಬಿಸಾಡಿ ಪರಿಸರ ಹಾಗೂ ಜಲ ಮಾಲಿನ್ಯ ವಾಗುವ ಹಾಗೂ ರೋಗರುಜಿನ ಹಬ್ಬುವ ಮತ್ತು ಇನ್ನಿತರ ಕಾಯಿದೆ ಅನುಗುಣವಾಗಿ ಅಪರಾಧವೆಸಗಿರುವುದರಿಂದ ಸದ್ರಿ ನೇತ್ರಾವತಿ ನದಿ ನೀರಿಗೆ ತ್ಯಾಜ್ಯವನ್ನು ಬಿಸಾಡಿದ ವಾಹನ ಹಾಗೂ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿ ಎಂಬಿತ್ಯಾದಿ