ಅಭಿಪ್ರಾಯ / ಸಲಹೆಗಳು

Crime Reported in Ullal PS

ಫಿರ್ಯಾದಿದಾರರಾದ ರೇವಣಸಿದ್ಧಪ್ಪ ಪಿಎಸ್ಐ ರವರು ಸಿಬ್ಬಂದಿಯವರೊಂದಿಗೆ ದಿನಾಂಕ. 23-10-2021 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಖಚಿತ ಮಾಹಿತಿ ಮೇರೆಗೆ ಮದ್ಯಾಹ್ನ 12:50 ಗಂಟೆಯ ಸಮಯಕ್ಕೆ ಉಳ್ಳಾಲ ಗ್ರಾಮದ ಮುಕ್ಕಚೇರಿ ಕಡಪರ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್ ಅಝ್ವಿದ್ ಎಂಬಾತನು ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾವನ್ನು ಸೇವಿಸಿ ನಶೆಯ ಅಮಲಿನಲ್ಲಿ ತೂರಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿದ್ದವರನ್ನು ಪತ್ತೆ ಮಾಡಿ ಈತನನ್ನು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರಿಂದ ತಪಾಸಣೆಗೊಳಪಡಿಸಿದಾಗ ಈತನು ಮಾದಕ ವಸ್ತು ಗಾಂಜಾ ಸೇವನೆ  ಮಾಡಿರುವುದು ದೃಢಪಟ್ಟಿರುವ ಕಾರಣ ಮೊಹಮ್ಮದ್ ಅಝ್ವಿದ್್ನ ವಿರುದ್ಧ ದಾಖಲಿಸಿಕೊಂಡ ಪ್ರಕರಣದ ಸಾರಾಂಶ.

Crime Reported in Moodabidre PS

 ಪಿರ್ಯಾದಿ AKIB PASHA ದಾರರು ಮಂಗಳೂರು ನಗರದ ಬಜ್ಪೆ  ಗಂಜಿಮಠ ಎಂಬಲ್ಲಿರುವ ದಿಲೀಪ್ ಬಿಲ್ಡ್ ಖಾನ್ ಕಂಪನಿಯಲ್ಲಿ ತಮ್ಮ ಬೊಲೇರೊ ವಾಹನ ನಂಬ್ರ ಕೆಎ-13-ಎ-4880 ನ್ನು ಬಾಡಿಗೆಗೆ ಇಟ್ಟು ತಾವೇ ಚಾಲಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ, ಪ್ರತಿ ದಿ ನ ಬೆಳ್ಳಗ್ಗೆ 07.30 ಗಂಟೆಗೆ ಬೊಲೇರೊ ವಾಹನವನ್ನು ಕೆಲಸಕ್ಕೆಂದು  ತೆಗೆದುಕೊಂಡು ಹೋದವರು ರಾತ್ರಿ 09.00 ಗಂಟೆ ಸಮಯಕ್ಕೆ ಮೂಡಬಿದ್ರೆಯ ಗಾಂದಿನಗರದ ಚಾರ್ಕೋಲ್ಸ್ ಹೋಟೆಲ್ ಮಹಡಿಯ ವಾಸ್ತವ್ಯ ಕಟ್ಟಡದ ಎದುರುಗಡೆಯಿರುವ ಅಮ್ಮ ಕ್ಯಾಂಟಿನ್ ಬಳಿಯಲ್ಲಿ ವಾಹನವನ್ನು ಪಾರ್ಕ ಮಾಡುತ್ತಿರುವುದಾಗಿದೆ, ನಿನ್ನೆ ದಿನಾಂಕ 21-10-2021 ರಂದು 20.30 ಗಂಟೆಗೆ ಬೋಲೆರೋ ವಾಹನವನ್ನು ಸದ್ರಿ ಸ್ಥಳದಲ್ಲಿ ಪಾರ್ಕ ಮಾಡಿದ್ದು,  ದಿನಾಂಕ 22-10-2021 ರಂದು ಬೆಳ್ಳಗ್ಗೆ ಸಮಯ ಸುಮಾರು 06.30 ಗಂಟೆಗೆ ಪಾರ್ಕ ಮಾಡಿದ ಸ್ಥಳಕ್ಕೆ ಹೋಗಿ ನೋಡಲಾಗಿ ಯಾರೋ ಕಳ್ಳರು ಪಿರ್ಯಾದಿದಾರರ ಬೊಲೇರೊ ವಾಹನವನ್ನು ರಾತ್ರಿ 10.30 ಗಂಟೆಯಿಂದ ಬೆಳ್ಳಗ್ಗೆ 06.30 ಗಂಟೆಯ ಮದ್ಯಾವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಬೊಲೇರೊ ವಾಹನದ ಅಂದಾಜು ಮೌಲ್ಯ 2,50,000/- ಆಗಿರುತ್ತದೆ, ಕಂಪನಿಯವರಿಗೆ ಮಾಹಿತಿಯನ್ನು ನೀಡಿ ಹುಡುಕಾಡಿ ಪತ್ತೆಯಾಗದ ಕಾರಣ ಠಾಣೆಗೆ ಬಂದು ದೂರು ನೀಡಿರುವುದಾಗಿದೆ, ಕಳೆದು ಹೋದ ಬೋಲೇರು ಜೀಪು ಪತ್ತೆ ಮಾಡಿಕೋಡಬೇಕಾಗಿ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 23-10-2021 08:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080