ಅಭಿಪ್ರಾಯ / ಸಲಹೆಗಳು

Crime Reported in Traffic North PS              

ದಿನಾಂಕ:23-11-2021 ರಂದು ಪಿರ್ಯಾದಿದಾರರಾದ ಸುರೇಶ್ ಸಹಾಯಕ ಪೊಲೀಸ್ ಉಪ ನೀರಿಕ್ಷಕರು ಇಲಾಖಾ ವಾಹನ KA-19-G-0842 ನಂಬ್ರದ ಹೈವೇ ಪೆಟ್ರೋಲ್-05 ವಾಹನದಲ್ಲಿ ಎಪಿಸಿ ಆನಂದಪ್ಪ ಚಾಲಕನಾಗಿ, ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯ ಮಾಡುತಿದ್ದ ಸಮಯ ಮದ್ಯಾಹ್ನ ಸಮಯ ಸುಮಾರು 13:00 ಗಂಟೆಗೆ ಹಳೆಯಂಗಡಿ ಜಂಕ್ಷನ್ ನಿಂದ ಸ್ವಲ್ಪ ಮುಂದೆ ಕೊಲ್ನಾಡು ಜಂಕ್ಷನ್ ಕಡೆಗೆ ಹಾದು ಹೋಗುವ ರಾಹೆ 66 ನೇ ಡಾಮಾರು ರಸ್ತೆಯಲ್ಲಿ AP-01-V-9136  ನಂಬ್ರದ ಟ್ರಾಕ್ಟರ್ ವಾಹನವನ್ನು ಅದರ ಚಾಲಕ ಭಾರದ್ವಜ್ ಎಂಬಾತನು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸಿ ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುತ್ತಾರೆ ಎಂಬಿತ್ಯಾದಿ.

 

2) ದಿನಾಂಕ:22-11-2021 ರಂದು ಪಿರ್ಯಾದಿ Sudhakar S Gujaran ದಾರರ ತಂದೆಯಾದ ಸಂಜೀವ ಪೂಜಾರಿ ರವರು KA-19-MG-4267 ನಂಬ್ರದ ಕಾರಿನಲ್ಲಿ ಪಾವಂಜೆ ಜಂಕ್ಷನ್ ಕಡೆಯಿಂದ ರಾಹೆ 66 ರ ಡಾಮಾರು ರಸ್ತೆಯಲ್ಲಿ  ಚಲಾಯಿಸಿಕೊಂಡು ಬಂದು ಚೆಳ್ಯಾರು ಜಾರಂದಾಯ ಧೂಮಾವತಿ ದೈವಸ್ಥಾನದ ಕ್ರಾಸ್ ನ ತೆರೆದ ಡಿವೈಡರ್ ನಲ್ಲಿ ‘U’ ಟರ್ನ್ ಮಾಡುವ ಸಲುವಾಗಿ ತನ್ನ ಕಾರನ್ನು ನಿಧಾನಿಸುತ್ತಿದ್ದ ಸಮಯ ಮಧ್ಯಾಹ್ನ 12-30 ಗಂಟೆಗೆ ಕಾರಿನ ಹಿಂದಿನಿಂದ ಅಂದರೆ ಪಾವಂಜೆ ಜಂಕ್ಷನ್ ಕಡೆಯಿಂದ ಮುಕ್ಕ ಕಡೆಗೆ  ವಿಶಾಲ್ ಟ್ರಾವೆಲ್ಸ್ ಎಂಬ ಹೆಸರಿನ KA-19-AC-7922 ನಂಬ್ರದ ಬಸ್ಸನ್ನು ಅದರ ಚಾಲಕನಾದ JAMES HAMILTON ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಾಹೆ 66ರ ಡಾಮಾರು ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಯ ಕಾರಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿ ಮುಂದಕ್ಕೆ ತಳ್ಳಿಕೊಂಡು ಹೋದಂತಾಗಿ ತೆರೆದ ಡಿವೈಡರಿನ ಮಧ್ಯಭಾಗದಲ್ಲಿ ಕಾರು ಪಾವಂಜೆ ಜಂಕ್ಷನ್ ಕಡೆಗೆ ಮುಖಮಾಡಿ ನಿಂತದ್ದು ಇದರ ಪರಿಣಾಮ ಪಿರ್ಯಾದಿದಾರರ ತಂದೆ ಸಂಜೀವ ಪೂಜಾರಿಯವರು ತಲೆಯ ಮಧ್ಯಭಾಗದಲ್ಲಿ ಚರ್ಮ ಹರಿದ ರೀತಿಯ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ

 

3) ದಿನಾಂಕ 22-11-2021 ರಂದು ಪಿರ್ಯಾದಿ Oscar Pereira ದಾರರ ದೊಡ್ಡಮ್ಮನ ಮಗನಾದ ಆಲ್ವಿನ್ ಪಿರೇರಾ ರವರು ಅವರ ಬಾಬ್ತು KA-19-Y-8185 ನಂಬ್ರದ ಸ್ಕೂಟರಿನಲ್ಲಿ ಮನೆಯಿಂದ ಮುಲ್ಕಿ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 07:30 ಗಂಟೆಗೆ ಪೂನರೂರು ಕೇನರಾ ಲೈಟಿಂಗ್ಸ್ ಬಳಿ ಮುಲ್ಕಿ ಕಿನ್ನಿಗೋಳಿ ಡಾಮಾರು ರಸ್ತೆಗೆ ಬಂದು ಮುಲ್ಕಿ ಕಡೆಗೆ ತಿರುಗಿಸಿ ರಸ್ತೆಯ ಮಧ್ಯ ಭಾಗಕ್ಕೆ ತಲುಪಿದ ಸಮಯ ಮುಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ KA-19-EJ-5555 ನಂಬ್ರದ  ಸ್ಕೂಟರನ್ನು ಅದರ ಸವಾರನು ನಿರ್ಲಕ್ಷ್ಯತನದಿಂದ ಹಾಗೂ ದುಡುಕುತನದಿಂದ ಅಪಾಯಕಾರಿ ರೀತಿಯಲ್ಲಿ ಸವಾರಿ ಮಾಡಿಕೊಂಡು ಬಂದು ಆಲ್ವಿನ್ ಪಿರೇರಾ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಆಲ್ವಿನ್ ಪಿರೇರಾ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಕಿವಿ ಭಾಗಕ್ಕೆ ಗುದ್ದಿದ ರೀತಿಯ ರಕ್ತಗಾಯವಾಗಿದ್ದು ಹಾಗೂ ಹಣೆಯ ಎಡ ಭಾಗಕ್ಕೆ ರಕ್ತ ಗಾಯವಾಗಿ ಚಿಕಿತ್ಸೆಯ ಬಗ್ಗೆ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 23-11-2021 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080