ಅಭಿಪ್ರಾಯ / ಸಲಹೆಗಳು

Crime Reported in Traffic South Police   :

ಈ ಪ್ರಕರಣದ ಸಾರಾಂಶವೆನೆಂದರೆ ದಿನಾಂಕ: 20-12-2021 ರಂದು ಪಿರ್ಯಾದಿದಾರರು ಮಗ ತನ್ವೀಲಾನು ಅವರ ಮನೆಯ ಹೊರಗಡೆ ರಸ್ತೆ ಬದಿಯಲ್ಲಿರುವ ಕಸದ ಬುಟ್ಟಿಗೆ ಕಸವನ್ನು ಹಾಕಿ ವಾಪಾಸ್ಸು ಮನೆಯ ಕಡೆಗೆ ಬರುತ್ತಾ ರಸ್ತೆ ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 9-30 ಗಂಟೆಗೆ ಉಳ್ಳಾಲ ಅಬ್ಬಕ್ಕ ಸರ್ಕಲ್ ಕಡೆಯಿಂದ ಕೋಟೆಪುರ ಕಡೆಗೆ ಹೋಗುತ್ತಿದ್ದ ಮೋಟಾರ್ ಸೈಕಲ್ ನಂಬ್ರ: KA-19-EM-1983 ನೇದರ ಸವಾರ ಮಹಮ್ಮದ್ ಶಹಾನ್ ವಾಜ್ ಎಂಬಾತನು ಮೋಟಾರ್ ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ತನ್ವೀಲಾನಿಗೆ ಡಿಕ್ಕಿ ಪಡಿಸಿದ ಪರಿಣಾಮ ತನ್ವೀಲಾ ಹಾಗೂ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ತನ್ವೀಲಾನಿಗೆ ಮುಖಕ್ಕೆ ಗುದ್ದಿದ ಗಾಯ ಹಾಗೂ ಹಲ್ಲಿಗೆ ಗುದ್ದಿದ ಗಾಯ ,ಕೈ ಕಾಲುಗಳಿಗೆ ತರಚಿದ ರಕ್ತ ಗಾಯವಾಗಿದ್ದು   ಕೂಡಲೇ ಅಲ್ಲಿ ಸೇರಿದ ಪಿರ್ಯಾದಿದಾರರ ಮನೆಯವರು  ತನ್ವೀಲಾನನ್ನು  ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ದೇರಳಕಟ್ಟೆಯ ಯೆನೆಪೋಯ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಡಿಕ್ಕಿ ಪಡಿಸಿದ ಬೈಕ್ ಸವಾರ ಮಹಮ್ಮದ್ ಶಹಾನ್ ವಾಜ್ ನಿಗೆ ಎಡಗೈ ಮತ್ತು ಎಡ ಕಾಲುಗಳಿಗೆ ಗಾಯವಾಗಿದ್ದು ಆತನು ಚಿಕಿತ್ಸೆ ಬಗ್ಗೆ ಉಳ್ಳಾಲದ ಸಹರಾ ಆಸ್ಪತ್ರೆಗೆ ಹೋಗಿ ದಾಖಲಾಗಿರುತ್ತಾರೆ .ಡಿಕ್ಕಿ ಪಡಿಸಿದ ಬೈಕ್ ಸವಾರ ಮಹಮ್ಮದ್ ಶಹಾನ್ ವಾಜ್ ತನ್ವೀಲಾ ನಚಿಕಿತ್ಸಾ ವೆಚ್ಚ ಭರಿಸುವುದಾಗಿ ತಿಳಿಸಿದ್ದು ನಂತರ ಚಿಕಿತ್ಸಾ ವೆಚ್ಚ ಜಾಸ್ತಿಯಾಗಿದ್ದರಿಂದ ಚಿಕಿತ್ಸಾ ವೆಚ್ಚ ಕೊಡಲು ನಿರಾಕರಿಸಿರುತ್ತಾನೆ.ಎಂಬಿತ್ಯಾದಿ.

Crime Reported in Mulki PS :

 ದಿನಾಂಕ: 22-12-2021 ರಂದು ಪಿರ್ಯಾದಿದಾರರು ಸಿಬ್ಬಂದಿಯರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದ ಬಗ್ಗೆ ಖಾಸಗಿ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 20:30 ಗಂಟೆಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಆಶ್ರಯ ಕಾಲೊನಿ ಬಳಿ ಇರುವ ಸಾರ್ವಜನಿಕ ರಸ್ತೆಯ ಬದಿಗೆ ಕಟ್ಟಿರುವ ಮೋರಿಯ ಮೇಲೆ ಮೆಹರಾಜ್ ಪ್ರಾಯ: 29 ವರ್ಷ ತಂದೆ: ಕೆ. ಹಸೈನಾರ್‌, ವಾಸ: ಇಂದಿರಾ ನಗರ, ಹಳೆಯಂಗಡಿ ಗ್ರಾಮ, ಮಂಗಳೂರು ತಾಲೂಕು ಎಂಬಾತನು ಕುಳಿತುಕೊಂಡು ಹೊಗೆಬತ್ತಿಯನ್ನು ಸೇದುತ್ತಿರುವುದು ಕಂಡುಬಂದಿದ್ದು, ವಾಹನವನ್ನು ನಿಲ್ಲಿಸಿ ಆತನ ಬಳಿ ತೆರಳುತ್ತಿದ್ದಂತೆ ಆತನು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು  ಕಂಡು ಆತನ ಕೈಯಲ್ಲಿದ್ದ ಹೊಗೆಬತ್ತಿಯನ್ನು ಮೋರಿಯ ಕೆಳಗಡೆ ಹರಿಯುತ್ತಿರುವ ನೀರಿಗೆ  ಬಿಸಾಡಿರುತ್ತಾನೆ. ಆತನನ್ನು ವಿಚಾರಿಸಿದಾಗ ಆತ ಹೊಗೆ ಬತ್ತಿಯೊಂದಿಗೆ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈ ಬಗ್ಗೆ ಆರೋಪಿಯ ವಿರುದ್ದ ಕಲಂ: 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆಯಂತೆ ಪ್ರಕರಣ ದಾಖಲಿಸಿರುವುದಾಗಿ ಎಂಬಿತ್ಯಾದಿಯಾಗಿದೆ.

 

Crime Reported in Urva PS          :

ಈ  ಪ್ರಕರಣದ  ಸಾರಾಂಶವೇನೆಂದರೆ  ಪಿರ್ಯಾದಿದಾರರು ತನ್ನ  ಮಗಳು  ಸೊನಾಲಿ ಜಾಸ್ಮಿನ್ ಡಿಸೋಜಾ  ಪ್ರಾಯ 27 ವರ್ಷ ಎಂಬಾಕೆಯ ಜೊತೆಯಲ್ಲಿ ಲೋಬೋ ಕಾಂಪೌಂಡ್ ಆನೆಗುಂಡಿ 4 ನೇ ಅಡ್ಡ ರಸ್ತೆ ಬಿಜೈ ನ್ಯೂ ರೋಡ್ ಮಂಗಳೂರು ಎಂಬಲ್ಲಿ ವಾಸವಾಗಿದ್ದು ನಿನ್ನೆ ದಿನ ದಿನಾಂಕ 22-12-2021  ರಂದು  ಸಂಜೆ  06.00  ಗಂಟೆಗೆ  ಪಿರ್ಯಾದಿದಾರರು ಸ್ನಾನಕ್ಕೆ ತೆರಳಿದವರು 06.15 ಗಂಟೆಗೆ ಸ್ನಾನದ ಕೋಣೆಯಿಂದ ವಾಪಾಸು ಬಂದು ನೋಡಿದಾಗ ತನ್ನ ಮಗಳು ಕಾಣದೇ ಇದ್ದುದ್ದರಿಂದ ಮನೆಯಲ್ಲಿ ಹುಡುಕಾಡಿದಾಗ ಮನೆಯ ಮುಖ್ಯ ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಿ ಹೋಗಿರುತ್ತಾರೆ ನೆರೆಮನೆಯವರ ಸಹಾಯದಿಂದ ಬಾಗಿಲನ್ನು ತೆಗೆಸಿ ಬಳಿಕ ಸುತ್ತಾಮುತ್ತಾ ಹಾಗೂ  ಸಂಭಂಧಿಕರ ಮನೆಯಲ್ಲಿ ಹುಡುಕಾಡಿ ಎಲ್ಲಿಯೂ ಸಿಗದೇ ಇದ್ದ ಕಾರಣ ಈ ದಿನ ದಿನಾಂಕ 23-12-2021 ರಂದು ತಡವಾಗಿ ದೂರು ನೀಡಿ ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

ಕಾಣೆಯಾದವರ ಚಹರೆ ವಿವರ ಸೊನಾಲಿ ಜಾಸ್ಮಿನ್ ಡಿಸೋಜಾ  ಪ್ರಾಯ 27 ವರ್ಷ, ಎತ್ತರ-5 ಅಡಿ, ಗೋಧಿ ಮೈ ಬಣ್ಣ, ಬಲಗೈಯಲ್ಲಿ ಸೋನು ಎಂದು ಟ್ಯಾಟು ಇರುತ್ತದೆ, ಗೊತ್ತಿರುವ ಭಾಷೆ ಕನ್ನಡ,ಹಿಂದಿ, ಇಂಗ್ಲೀಷ್, ಕೊಂಕಣಿ, ಹೋಗುವಾಗ ನೀಲಿ ಬಣ್ಣದ ಟೀ-ಶರ್ಟ್, ಮೆರುನ್ ಬಣ್ಣದ ಪ್ಯಾಂಟ್ ಧರಿಸಿರುತ್ತಾಳೆ, ಹಾಗೂ ಇದೇ ರೀತಿ ಎರಡು ಮೂರು ಬಾರಿ ಮಾಡಿರುವುದಾಗಿದೆ.

ಇತ್ತೀಚಿನ ನವೀಕರಣ​ : 23-12-2021 08:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080