ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಪಿರ್ಯಾದಿದಾರರು ಗೂಗಲ್ ನಲ್ಲಿ shine.com ಎಂಬ ವೆಬ್ ಸೈಟ್ ನಲ್ಲಿ ನೌಕರಿಯ ಬಗ್ಗೆ ವೈಯಕ್ತಿಕ ವಿವರಗಳನ್ನು ಹಾಕಿದ್ದು,ಹೀಗಿರುವಾಗ ದಿನಾಂಕ 06-04-2021 ರಂದು ಅಂಕುರ್ ದೇಸಾಯಿ ಎಂಬ ವ್ಯಕ್ತಿ 9311847201 ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪಿರ್ಯಾದಿದಾರರಿಗೆ SECURE CAREER.COM ಎಂಬ ವೆಬ್ ಸೈಟ್ ನಲ್ಲಿ ಹೋಗಿ ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ ನೋಂದಾಯಿಸಿಕೊಳ್ಳುವಂತೆ ತಿಳಿಸಿರುತ್ತಾರೆ ಅದರಂತೆ ಪಿರ್ಯಾದಿದಾರರು  ರೂ.2,358/- ರೂಗಳನ್ನು ಪಾವತಿಸಿ ನೋಂದಾಯಿಸಿಕೊಂಡಿರುತ್ತಾರೆ, ನಂತರದಲ್ಲಿ SECURE CAREER.COM ಕಂಪನಿಯವರು ವಿವಿಧ ಉದ್ಯೋಗ ಖಾಲಿ ಇರುವ ಕಂಪನಿಗಳ ವಿವರಗಳನ್ನು ನೀಡಿರುತ್ತಾರೆ,ಇದಕ್ಕಾಗಿ ಪಿರ್ಯಾದಿದಾರರು ದಾಖಲಾತಿ ಪರಿಶೀಲನೆಗಾಗಿ ಸಂಸ್ಕರಣಾ ಶುಲ್ಕ ಪಾವತಿಸುವಂತೆ ತಿಳಿಸುತ್ತಾರೆ ಅದರಂತೆ ಪಿರ್ಯಾದಿದಾರರು ದಿನಾಂಕ 07-04-2021 ರಂದು ರೂ.4,130/- ರೂಗಳನ್ನು ತನ್ನ ಐಸಿಐಸಿಐ ಬ್ಯಾಂಕ್ ಖಾತೆ ಯಿಂದ ವರ್ಗಾವಣಿ ಮಾಡಿರುತ್ತಾರೆ. ಇದೇ ರೀತಿ ದಿನಾಂಕ 07-04-2021 ರಿಂದ 18-01-2022 ರವರೆಗೆ ಪಿರ್ಯಾದಿದಾರರ ತನ್ನ ಐಸಿಐಸಿಐ ಖಾತೆಯಿಂದ ಹಂತ ಹಂತವಾಗಿ  ಒಟ್ಟು ರೂ,10,65,065/- ರೂಪಾಯಿ ಹಣವನ್ನು  UPI ಮುಖಾಂತರ ವರ್ಗಾವಣಿ ಮಾಡಿರುತ್ತಾರೆ.ನಂತರದಲ್ಲಿ ಸದ್ರಿ ಕಂಪನಿಯವರು ಇನ್ನೂ ಹೆಚ್ಚಿನ ಹಣವನ್ನು ಪಾವತಿಸಿವಂತೆ ಹಾಗೂ ಪಾವತಿಸಿದ ಹಣ ಮರುಪಾವತಿ ಆಗುತ್ತದೇ ಎಂತಲೂ ತಿಳಿಸಿದಾಗ ಪಿರ್ಯಾದಿದಾರರು ಅದನ್ನು ನಂಬಿ ತನ್ನ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ,ಸುರತ್ಕಲ್ ಶಾಖೆ ಯಿಂದ ದಿನಾಂಕ 27-08-2021 ರಿಂದ ದಿನಾಂಕ 21-01-2022 ರವರೆಗೆ ಹಂತ ಹಂತವಾಗಿ ಒಟ್ಟು ರೂ.14,84,014/- ರೂ ಗಳನ್ನು UPI ಮುಖಾಂತರ ವರ್ಗಾವಣಿ ಮಾಡಿರುತ್ತಾರೆ.ಈ ರೀತಿಯಾಗಿ ಸದ್ರಿ ಕಂಪನಿಯವರೆಂದು ತಿಳಿಸಿ ಆರೋಪಿಗಳಾದ ಅಂಕುರ್ ದೇಸಾಯಿ,ಅನಾಮಿಕಾ ಶರ್ಮಾ,ಅನುರಾಧಾ,ಸೋನಿಯಾ,ಪ್ರೀಯಾಂಕ ರೆಡ್ಡಿ,ರಾಜೀವ,ಪೂಜಾ,ಲಕ್ಮೀ,ಪಲ್ಲವಿ ಎಂಬುವವರು ಪಿರ್ಯಾದಿದಾರರಿಗೆ ಉದ್ಯೋಗ ಕೊಡಿಸುತ್ತೇನೆಂದು ತಿಳಿಸಿ ಪಿರ್ಯಾದಿದಾರರ ಐಸಿಐಸಿಐ ಬ್ಯಾಂಕ್ ಖಾತೆ ಮತ್ತು ಪಿರ್ಯಾದಿದಾರರ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ,ಸುರತ್ಕಲ್ ಶಾಖೆ ಯಿಂದ ಹಂತ ಹಂತವಾಗಿ ಒಟ್ಟು ರೂ.25,49,079/- ರೂಪಾಯಿ  ಹಣವನ್ನು ಮೋಸದಿಂದ ಪಡೆದುಕೊಂಡು ವಂಚಿಸಿರುತ್ತಾರೆ ಎಂಬಿತ್ಯಾದಿಯಾಗಿದೆ.

Crime Reported in Barke PS

ಪಿರ್ಯಾದಿದಾರರಾದ Mohammed Yusuf ರವರು ಪ್ರಾಯ 44 ವರ್ಷ ಇವರ ತಂದೆ-ತಾಯಿ ಹೆಸರಿನಲ್ಲಿ ಕುದ್ರೋಳಿ ರಹಮತ್ ನಗರ ಎಂಬಲ್ಲಿ 5 ಸೆಂಟ್ಸ್ ಜಾಗವಿದ್ದು ಪಿರ್ಯಾದಿದಾರರ ತಂದೆಯವರಿಗೆ 9 ಜನ ಮಕ್ಕಳಿರುತ್ತಾರೆ. ಪಿರ್ಯಾದಿದಾರರು ದಿನಾಂಕ: 24-01-2022 ರಂದು ಬೆಳಿಗ್ಗೆ ಸಮಯ 10-00 ಗಂಟೆಗೆ ಕುದ್ರೋಳಿಯಲ್ಲಿರುವ ಮನೆಗೆ ಬಂದು ಮನೆಯ ಕಂಪೌಂಡ್ ಒಳಗಡೆ ಸ್ವಚ್ಚಗೊಳಿಸುತ್ತಿರುವ ಸಮಯ ಪಿರ್ಯಾದಿದಾರರ ಅಣ್ಣನಾದ ಅಬ್ದುಲ್ ಸಮದ್ ನು ಕಂಪೌಂಡಿನ ಒಳಗೆ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು ಈ ಜಾಗಕ್ಕೆ ಯಾಕೇ ಒಂದಿದ್ದಿಯಾ ಎಂದು ಏಕಾಏಕಿ ಕಂಪೌಂಡ್ ನಲ್ಲಿದ್ದ ಅಲ್ಯುಮಿನಿಯಂ ರಾಡ್ ನ್ನು ತೆಗೆದು ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ಪಿರ್ಯಾದಿಯ ಎಡ ಕೈಗೆ ರಾಡ್ ನಿಂದ ಜೋರಾಗಿ ಹೊಡೆದು ಗಂಬೀರವಾಗಿ ಗುದ್ದಿದ ಗಾಯವನ್ನುಂಟು ಮಾಡಿದಲ್ಲದೇ ಪಿರ್ಯಾದಿದಾರರ ಬಟ್ಟೆಗಳನ್ನು ಹರಿದು ಹಾಕಿ ಕೈಯಿಂದ ಕಾಲಿನಿಂದ ತುಳಿದು ನೆಲಕ್ಕೆ ಬಿಳಿಸಿ ಹಲ್ಲೆಯನ್ನು ಮಾಡಿದ್ದು ಅಕ್ಕಪಕ್ಕದ ಜನರು ಗಲಾಟೆಯನ್ನು ಬಿಡಿಸಿ, ಪಿರ್ಯಾದಿದಾರರು ಬಲವಾದ ಗಾಯಗೊಂಡವರನ್ನು ಆಟೋ ರಿಕ್ಷಾ ಒಂದರಲ್ಲಿ ಮಂಗಳೂರು ನಗರದ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ತೆರೆಳಿ, ಹೋರ ರೋಗಿಯಾಗಿ ಚಿಕಿತ್ಸೆ ಪಡೆದಿರುವುದು ಎಂಬಿತ್ಯಾದಿ ಸಾರಾಂಶ.

Crime Reported in Kankanady Town PS

ಪಿರ್ಯಾದುದಾರರಾದ Vasanth ರವರು ತಮ್ಮ ಸಂಸಾರದೊಂದಿಗೆ ಸೌಜನ್ಯ ರೋಡ್, ಬಿಕರ್ನಕಟ್ಟೆ, ಪದವು ಗ್ರಾಮ, ಮಂಗಳೂರು ಎಂಬಲ್ಲಿ ವಾಸವಾಗಿದ್ದು, ನಿವೃತ್ತ ಜೀವನ ನಡೆಸುತ್ತೀರುವುದಾಗಿದೆ. ಪಿರ್ಯಾದುದಾರರಿಗೆ ಉಮೇಶ್ ನಾಯ್ಕ್ (53) ಎಂಬ ಸಹೋದರನಿದ್ದು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುವುದಾಗಿದೆ. ಉಮೇಶ್ ನಾಯ್ಕ್ ಕಳೆದ 05-06 ತಿಂಗಳಿನಿಂದ ಅಸೌಖ್ಯದಲ್ಲಿದ್ದು, ಕೆಲಸವಿಲ್ಲದೆ ಮನೆಯಲ್ಲಿಯೆ ಇರುವುದಾಗಿದೆ. ದಿನಾಂಕ 21-01-2022 ರಂದು ಪಿರ್ಯಾದುದಾರರ ತಮ್ಮನಾದ ಉಮೇಶ್ ನಾಯ್ಕ್ ಎಂಬುವರು ಮದ್ಯಾಹ್ನ 03 ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಸಂಜೆಯ ವೇಳೆಯ ತನಕ ಮನೆಗೆ ಬಾರದೇ ಇದ್ದವರನ್ನು ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲಿಯು ಸಿಗದೇ ಕಾಣೆಯಾಗಿರುತ್ತಾರೆ. ಉಮೇಶ್ ನಾಯ್ಕ್ ರವರು ಮನೆಯಿಂದ ಹೋಗುವಾಗ ಕಂದು ಬಣ್ಣದ ಅಂಗಿ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ದರಿಸಿದ್ದು ಎಣ್ಣೆ ಕಪ್ಪು ಮೈ ಬಣ್ಣವನ್ನು ಹೊಂದಿದ್ದು 5 ಅಡಿ 8 ಇಂಚು ಎತ್ತರವನ್ನು ಹೊಂದಿದ್ದು ಇವರನ್ನು ಪತ್ತೇ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

Crime Reported in Surathkal PS

ದಿನಾಂಕ : 23-01-2022 ರಂದು ಸಂಜೆ ಸುಮಾರು 5-00 ಗಂಟೆ ಸಮಯಕ್ಕೆ ಸುರತ್ಕಲ್ ಗ್ರಾಮದ ಮುಕ್ಕ ಎಂಬಲ್ಲಿನ ಪಿರ್ಯಾದಿದಾರರ ಬಾಬ್ತು ವಾಸದ ಮನೆಯ ಪಕ್ಕದಲ್ಲಿರುವ ಮುಕ್ಕಾ ಸೀ ಪುಡ್ ಎಂಬ ಹೆಸರಿನ ಕಂಪನಿಯ ಪೀಶ್ ಮಿಲ್ ಕಾರ್ಖಾನೆಯಿಂದ ಹೊಗೆಯ ಜೊತೆಗೆ ಬೆಂಕಿಯ ಉಂಡೆಗಳು ಬಂದು ಪಿರ್ಯಾದಿದಾರರ ಮನೆಯ ಅಂಗಳದ ಕಟ್ಟಿಗೆಗೆ,ಟರ್ಪಲ್ ಗೆ ಬಿದ್ದು ಅಲ್ಪ ಸ್ವಲ್ಪ ಹಾನಿಯಾಗಿರುತ್ತದೆ. ಅಲ್ಲದೇ ಪಿರ್ಯಾದಾರರ ಒಂದುವರೆ ವರ್ಷದ ಮಗು ಅಂಗಳದಲ್ಲಿ ಆಟವಾಡುತ್ತಿದ್ದು ಈ ಅವಘಡದಿಂದ ಅಲ್ಪದರಲ್ಲಿ ಪಾರಾಗಿರುವುದಾಗಿದೆ. ಸದ್ರಿ ಪಿಶ್ ಮಿಲ್ ಗೆ ಸಂಭಂದಿಸಿದ ತಾಳೆಯ ಮರಕ್ಕೆ ಬೆಂಕಿ ತಗುಲಿ ಅದರ ಕೊಂಬೆಗಳು ಮೇಲ್ಕಾಣಿಸಿದ ಅವಘಡದಿಂದ ಬಾಗಶ: ಸುಟ್ಟು ಹೋಗಿರುತ್ತದೆ. ಸದ್ರಿ ಪೀಶ್ ಮಿಲ್ ನ ಬಾಯ್ಲರ್ ರಾತ್ರಿ ಹಗಲು ಕೆಲಸದಿಂದ ಬಾಯ್ಲರ್ ವೈಬ್ರೆಷೇನ್ ನಿಂದ ಪಿರ್ಯಾದಿದಾರರಿಗೆ ತೊಂದರೆಯಾಗಿದ್ದು.ಆರೋಪಿ ಮಿಶ್ ಮಿಲ್ ನ ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸುವರೇ ಎಂಬಿತ್ಯಾದಿಯಾಗಿರುತ್ತದೆ.

Crime Reported in Moodabidre PS      

ಪಿರ್ಯಾದಿದಾರರಾದ SATHISH AMIN ರವರು ದಿನಾಂಕ:23-01-2022 ರಂದು 19.20 ಗಂಟೆಗೆ ಕಲ್ಲಮುಂಡ್ಕೂರು ಪೇಟೆಯಲ್ಲಿರುವ ನವೀನ್ ಚಂದ್ರ ಪ್ರಭು ಎಂಬ ಕ್ಲಿನಿಕ್ ನಲ್ಲಿರುವ ಸಮಯ ಪಿರ್ಯಾದಿಯ ಸಂಬಂಧಿ ಹರೀಶ್ ಪೂಜಾರಿ (48) ರವರು ಕಲ್ಲಮುಂಡ್ಕೂರು ಜಂಕ್ಷನ್ ಕಡೆಯಿಂದ ರಸ್ತೆಯ ಎಡಬದಿಯಲ್ಲಿ ಪಾದಾಚಾರಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಮುಲ್ಕಿ ಕಡೆಯಿಂದ ಬಿಳಿ ಬಣ್ಣದ ರಿಡ್ಜ್ ಕಾರು ಒಂದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರುಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಪಾದಾಚಾರಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಹರೀಶ್ ಪೂಜಾರಿಯವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಂಬೀರ ಗಾಯಗೊಂಡು ಹರೀಶ್ ಪೂಜಾರಿರವರು ಸ್ಥಳದಲ್ಲಿ ಮೃತಪಟ್ಟಿದ್ದು, ಡಿಕ್ಕಿಪಡಿಸಿದ ಕಾರನ್ನು ಚಾಲಕನು ನಿಲ್ಲಿಸದೇ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 24-01-2022 07:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080