ಅಭಿಪ್ರಾಯ / ಸಲಹೆಗಳು

Crime Reported in : Konaje PS

ದಿನಾಂಕ 24.02.2022 ರಂದು ಬೆಳಿಗ್ಗೆ 10.50 ಗಂಟೆಗೆ ಉಪ್ಪಿನಂಗಡಿ ಕಡೆಯಿಂದ ಮೆಲ್ಕಾರ್-ಬೋಳಿಯಾರ್- ಕಂಬಳಪದವು ಮಾರ್ಗವಾಗಿ ಕಾರು ನಂಬ್ರ ಕೆಎಲ್-14-ವಿ-1717 ನೇದರಲ್ಲಿ ನಿಷೇದಿತ ಮಾದಕ ವಸ್ತುವನ್ನು ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಪಿರ್ಯಾದಿ Mallikarjun Biradar ದಾರರಿಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಪಿಎಸ್ಐ ಶರಣಪ್ಪ ಭಂಡಾರಿ ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು ಕೊಣಾಜೆ ಗ್ರಾಮ ಮಂಗಳೂರು ವಿಶ್ವವಿದ್ಯಾಲಯದ ಮುಖ್ಯ ದ್ವಾರದ ಬಳಿ ತಲುಪಿ ಕಾಯುತ್ತಿದ್ದಾಗ ಸುಮಾರು 13:15 ಗಂಟೆಗೆ ಕಂಬಳಪದವು ಜಂಕ್ಷನ್ ಕಡೆಯಿಂದ ಬಂದ ಕಾರು ನಂಬ್ರ ಕೆಎಲ್-14-ವಿ-1717ನೇ ಬಿಳಿ ಬಣ್ಣದ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ಅಮೀರ್, ಮಹಮ್ಮದ್ ಪರ್ವೀಜ್, ಮತ್ತು ಅನ್ಸಿಫ್ ಎಂಬವರನ್ನು ವಿಚಾರಿಸಲಾಗಿ ಕೇರಳದಲ್ಲಿ ಮಾರಾಟದ ಸಲುವಾಗಿ ಎಂಡಿಎಂಎ ಯನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರಿಂದ ಆರೋಪಿಗಳ ವಶದಲ್ಲಿದ್ದ ಒಟ್ಟು 60 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತು ಎಂಡಿಎಂಎ , 2 ಸ್ಮೋಕ್ ಟ್ಯೂಬ್ , ಲೈಟರ್-1, ಡಿಜಿಟಲ್ ತೂಕ  ಮಾಪನ-1 ನ್ನು  ಸ್ವಾಧೀನ ಪಡಿಸಿಕೊಂಡು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನ ಪಡಿಸಿಕೊಳ್ಳಲಾದ ಒಟ್ಟು 60 ಗ್ರಾಂ ತೂಕದ ಎಂಡಿಎಂಎ ನ ಅಂದಾಜು ಮೌಲ್ಯ -3,60,000 ರೂಪಾಯಿಗಳು ಹಾಗೂ ಕಾರಿನ ಅಂದಾಜು ಮೌಲ್ಯ- 5 ಲಕ್ಷ ರೂಪಾಯಿ ಆಗಬಹುದು ಎಂಬಿತ್ಯಾದಿ.

Crime Reported in Urva PS        

ದಿನಾಂಕ 24-02-2022 ರಂದು ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಹರೀಶ್ ಹೆಚ್.ವಿ. ರವರು ಇಲಾಖಾ ವಾಹನದಲ್ಲಿ ಪಿ.ಸಿ ವಿವೇಕ್ ಹಾಗೂ ಹೆಚ್.ಸಿ. ಪುಷ್ಪರಾಜ್ ರವರ ಜೊತೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ, ಬೆಳಿಗ್ಗೆ 10-00 ಗಂಟೆ ಸಮಯಕ್ಕೆ ಮಂಗಳೂರು ನಗರದ ಉರ್ವಾಸ್ಟೋರ್ ಸಾರ್ವಜನಿಕ ಮೈದಾನದ ಬಳಿ ತಲುಪಿದಾಗ ಮೈದಾನದಲ್ಲಿ ಒರ್ವ ವ್ಯಕ್ತಿಯು ಕುಳಿತುಕೊಂಡು ಅನುಮಾನಾಸ್ಪದ ರೀತಿಯಲ್ಲಿ ಸಿಗರೇಟು ಸೇದುತ್ತಿರುವುದನ್ನು ಕಂಡು ವಾಹನವನ್ನು ನಿಲ್ಲಿಸಿ ಆತನ ಬಳಿ ತೆರಳಿ ಆತನನ್ನು ವಿಚಾರಿಸಿದಲ್ಲಿ ಆತನು ಅಸ್ಪಷ್ಟವಾಗಿ ತೊದಲು ನುಡಿಯಲ್ಲಿ ಉತ್ತರವನ್ನು ನೀಡಿದ್ದು, ಆತನು ಮಾತನಾಡುವಾಗ ಬಾಯಿಯಿಂದ ಗಾಂಜಾ ಸೇವನೆ ಮಾಡಿರುವ ವಾಸನೆ ಬರುತ್ತಿದ್ದು, ಸದ್ರಿಯವರನ್ನು ಕೂಲಂಕುಷವಾಗಿ ವಿಚಾರಿಸಿ ಹೆಸರು ವಿಳಾಸವನ್ನು ಕೇಳಿದಾಗ ಆತನು ತನ್ನ ಹೆಸರು ಶ್ರೀಧರ್, ಪ್ರಾಯ: 22 ವರ್ಷ,  ವಾಸ: ಅಂಬಲ್ ಹೌಸ್, ಭಟ್ರಕೆರೆ ಮಸೀದಿ ಬಳಿ, ಪೆರ್ಮುದೆ, ಬಜಪೆ ಮಂಗಳೂರು  ಎಂಬುದಾಗಿ ತಿಳಿಸಿದ್ದು, ಆತನನ್ನು ವಶಕ್ಕೆ ಪಡೆದುಕೊಂಡು ಕುಂಟಿಕಾನ ಎ ಜೆ  ಆಸ್ಪತ್ರೆಯ  ವೈಧ್ಯಾಧಿಕಾರಿಯವರಲ್ಲಿ ಪರೀಕ್ಷೆಗೊಳಪಡಿಸಿದ್ದು, ವೈದ್ಯರು ಈತನ ಬಾಬ್ತು ಡ್ರಗ್ ಸ್ಕ್ರೀನಿಂಗ್ ಟೆಸ್ಟ್ ವರದಿಯಲ್ಲಿ ಗಾಂಜಾ ಸೇವನೆ ಮಾಡಿರುವುದಾಗಿ   ಅಭಿಪ್ರಾಯ ನೀಡಿದ್ದು, ಈತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಈತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ. ಎಂಬಿತ್ಯಾದಿ.

 

Crime Reported in Panambur PS

ಪಿರ್ಯಾದಿ JEHANGIR PERVEZ ರವರ  NEXSTAR EXTRUSIONS PVT LTD ಕಂಪನಿ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಇದ್ದು ಪಿರ್ಯಾದಿದಾರರ ಕಂಪನಿಯು  ಆರೋಪಿತ ಕಂಪನಿ ಶಿವಾಯಿ ಇಂಡಸ್ಟ್ರೀ ಮುಂಬೈಯ ಮಾಲಕ ಮನೀಶ್ ಶ್ರೀವಾತ್ಸವ ರವರನ್ನು ಸಂಪರ್ಕಿಸಿ ಜೂನ್ 2021 ರಲ್ಲಿ ಪಿಬಿಟಿ (ಪ್ಯಾಸ್ಟಿಕ್ ರಾ ಮೇಟಿರಿಯಲ್)ಕಚ್ಚಾ ಸಾಮಗ್ರಿಗಳನ್ನು ಖರೀದಿ ಮಾರಾಟದ ಬಗ್ಗೆ ಒಪ್ಪಂದ ಮಾಡಿಕೊಂಡು ಬಳಿಕ ಅದರ ಪೈಕಿ ಸ್ಯಾಂಪಲ್ ಅನ್ನು ಆರೋಪಿತನ ಕಂಪನಿಯಿಂದ ಸ್ವೀಕರಿಸಿಕೊಂಡು ಸ್ಯಾಂಪಲ್ ಸರಿಯಾಗಿದ್ದ ಬಗ್ಗೆ  ಪಿರ್ಯಾದಿದಾರರ ಕಂಪನಿಯು ಖಚಿತ ಪಡಿಸಿಕೊಂಡು ಆ ನಂತರ ಪಿರ್ಯಾದಿದಾರರ ಕಂಪನಿಗೆ ಅಗತ್ಯವಾಗಿ ಬೇಕಾಗಿದ್ದ 3000 ಕೆಜಿ ಪಿಬಿಟಿ ರಾ ಮೇಟಿರಿಯಲ್ ಅನ್ನು ಆರೋಪಿತನ ಕಂಪನಿಯಿಂದ  ಖರೀದಿಸಲು ಒಪ್ಪಂದ ಮಾಡಿಕೊಂಡು ಆರ್ಡರ್  ಮಾಡಿರುತ್ತಾರೆ.ಒಪ್ಪಂದದಂತೆ ಆರೋಪಿತ ಕಂಪನಿಯ ಮಾಲಕ ಪಿರ್ಯಾದಿದಾರರ ಕಂಪನಿಗೆ 3000 ಕೆಜಿ ಪ್ಲಾಸ್ಟಿಕ್ ರಾ ಮೇಟಿರಿಯಲ್  ಗಳನ್ನು ಸರಬರಾಜು ಮಾಡುವುದಾಗಿ ದಿನಾಂಕ:23-06-2021 ರಂದು ಪಿರ್ಯಾದಿದಾರರ ಕಂಪನಿಯಿಂದ 746000 ರೂ, ಹಣವನ್ನು ಬ್ಯಾಂಕ್ ಖಾತೆಯ ಮೂಲಕ ಪಡೆದುಕೊಂಡು ಒಪ್ಪಂದದಂತೆ  3000 ಕೆಜಿ ಪ್ಲಾಸ್ಟಿಕ್ ರಾ ಮೇಟಿರಿಯಲ್ ಗಳ ಪೈಕಿ 1000 ಕೆಜಿ ಮಾತ್ರ  ಕಳುಹಿಸಿಕೊಟ್ಟಿದ್ದು ಉಳಿದ 2000 ಕೆಜಿ ಪಿಬಿಟಿ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡದೇ ಪಿರ್ಯಾದಿದಾರರ ಕಂಪನಿಗೆ ನಂಬಿಕೆ ದ್ರೋಹ ಮಾಡಿ ಮೋಸ ಮಾಡಿರುತ್ತಾರೆ. ಆರೋಪಿತನು ಪಿರ್ಯಾದಿದಾರರ ಕಂಪನಿಗೆ 3000 ಕೆಜಿ ಪಿಬಿಟಿ  ಕಚ್ಚಾ ವಸ್ತುಗಳನ್ನು ರವಾನಿಸಿರುವುದಾಗಿ ಪಿರ್ಯಾದಿದಾರರನ್ನು ನಂಬಿಸಲು ಆರೋಪಿಯ ಜೊತೆಗೆ ಸಹ ಆರೋಪಿ NATIONAL X PRESS SERVICES ರವರು ಕೂಡಾ  ಭಾಗಿಯಾಗಿರುತ್ತಾನೆ. ಇದರಿಂದಾಗಿ ಪಿರ್ಯಾದಿದಾರರ ಕಂಪನಿಗೆ 450000 ರೂ. ವಂಚನೆ ಮಾಡಿರುವುದು  ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 24-02-2022 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080