ಅಭಿಪ್ರಾಯ / ಸಲಹೆಗಳು

Crime Reported in Mangalore East Traffic PS        

ದಿನಾಂಕ:23-03-2022 ರಂದು ಪಿರ್ಯಾದದಾರರಾದ ಪ್ರಫುಲ್ ಪ್ರಕಾಶ್ ಪಿ ಕೆ (21) ರವರು ತನ್ನ ಬಾಬ್ತು KL-60-C-9127 ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ವೆಲೆನ್ಸಿಯಾದಲ್ಲಿರುವ ತನ್ನ ಬಾಡಿಗೆ ಮನೆಯಿಂದ ಹೊರಟು ಕರಾವಳಿ ಸರ್ಕಲ್ ಬಳಿರುವ ಮ್ಯಾಕ್ ಮಾಲ್ ಬಳಿ ಹೊರಟು ಸಂಜೆ ಸಮಯ ಸುಮಾರು 6.45 ಗಂಟೆಗೆ ಕಂಕನಾಡಿ ಸರ್ಕಲ್ ಬಳಿ ಬಂದು ತಲುಪುತ್ತಿದ್ದಂತೆ ಕರಾವಳಿ ಸರ್ಕಲ್ ಕಡೆಯಿಂದ ಕಂಕನಾಡಿ ಸರ್ಕಲ್  ಕಡೆಗೆ KA-19-MJ-0865 ನೊಂದಣಿ ನಂಬ್ರದ ಕಾರನ್ನು ಅದರ ಚಾಲಕ ರಿಜ್ವೀಲ್ ರೆಹಮಾನ್ ರವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಕಾರನ್ನು ಚಲಾಯಿಸಿಕೊಂಡು ಕಂಕನಾಡಿ ಸರ್ಕಲ್ ಜಂಕ್ಷನ್ ಬಳಿ ನಿಲ್ಲಿಸದೇ  ಫಳ್ನೀರ್ ಕಡೆ ಸಾಗಿರುವ  ರಸ್ತೆ ಕಡೆಗೆ ಓಮ್ಮಲೇ ಮುನ್ನುಗಿಸಿ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದ್ರಿಯವರ ಬಲಕಾಲಿನ ಕೋಲು ಕಾಲಿಗೆ ಮೂಳೆ ಮುರಿತ ಗಾಯವಾಗಿದ್ದು ಗಾಯಾಳುವನ್ನು ಅಪಘಾತ ಪಡಿಸಿದ ಕಾರಿನ ಚಾಲಕ ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ಅಲ್ಲಿ ವೈದ್ಯರ ಪರೀಕ್ಷಕೆಗೆ ಒಳಪಟ್ಟು ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Crime Reported in Konaje PS    

ಪಿರ್ಯಾದಿ Sharanappa Bhandari ದಾರರು ದಿನಾಂಕ 24.03.2022 ರಂದು ಪಿಸಿ ಶಿವಕುಮಾರ್ ರವರೊಂದಿಗೆ ಕೊಣಾಜೆ ಠಾಣಾ ಸರಹದ್ದಿನಲ್ಲಿ ಮಾರ್ನಿಂಗ್ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ     ಮಂಗಳೂರು ಉತ್ತರ ಠಾಣೆಯ ಪೊಲೀಸ್ ಉಪನಿರೀಕ್ಷಕರು ಕರೆ ಮಾಡಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ  ಸಂಬಂಧಿಸಿದ ಪ್ರಕರಣದ ಆರೋಪಿಗಳಾದ ಪಶವತ್ ನುಸೈರ್ @ ನಸೀರ್ ಮತ್ತು ಮಹಮ್ಮದ್ ಸಾಧಿಕ್ ಎಂಬವರು ನುಸೈರ್ @ ನಸೀರ್ ನ ಹೆಂಡತಿ ಮನೆಯಾದ ಪಜೀರು ಗ್ರಾಮದ ಆರ್ಕಾನ ಎಂಬಲ್ಲಿ ಖಚಿತವಾಗಿ ಇದ್ದಾರೆ ವಶಕ್ಕೆ ಪಡೆಯುವಂತೆ ಮಾಹಿತಿ  ನೀಡಿದ ಮೇರೆಗೆ ಪಿರ್ಯಾದಿದಾರರು  ಸದ್ರಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು   ವಶಕ್ಕೆ ಪಡೆದುಕೊಂಡು  ಬರುತ್ತಿರುವಾಗ  ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳ ವಸತಿ ಗೃಹದ ಬಳಿ ಅವರ ವಾಹನ  ತಲುಪುತ್ತಿದ್ದಂತೆ ಬೆಳಗಿನ ಜಾವ ಸುಮಾರು 06-20 ಗಂಟೆಯ ಸಮಯಕ್ಕೆ  ಆರೋಪಿಗಳ ಪೈಕಿ ನುಸೈರ್ ನು ಪಿರ್ಯಾದಿದಾರರ  ಬಲಕೈ ರೆಟ್ಟೆಗೆ ಕಚ್ಚಿದಾಗ ಅವರು ಪ್ರತಿಭಟಿಸುತ್ತಿದ್ದಂತೆ ಅವರ  ಮಧ್ಯೆ ಕುಳಿತ್ತಿದ್ದ ಸಾಧಿಕ್ ನು ಆತನ  ವಶದಲ್ಲಿದ್ದ ಚಾಕುವನ್ನು ಒಮ್ಮಿಂದೊಮ್ಮೆಲೆ ತೆಗೆದು   ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಎದೆಗೆ ತಿವಿಯಲು ಹೋದಾಗ ಪಿರ್ಯಾದಿದಾರರು  ಬಲಗೈಯನ್ನು ಅಡ್ಡ ಹಿಡಿದಾಗ ಆತನು ಚೂರಿಯಿಂದ ಪಿರ್ಯಾದಿದಾರರ  ಕೋಲುಕೈಗೆ, ಎಡಗೈ ಮೊಣ ಗಂಟಿಗೆ ಹಾಗೂ ಎಡಗೈ ಹೆಬ್ಬೆಟ್ಟಿನ ಮೇಲ್ಬಾಗಕ್ಕೆ ತಿವಿದು ರಕ್ತಗಾಯ ಮಾಡಿ ಪೊಲೀಸು ವಶದಿಂದ ತಪ್ಪಿಸಿಕೊಂಡು ಹೋಗಿರುತ್ತಾನೆ.    ಹಾಗೂ ಆರೋಪಿ ನುಸೈರ್ ಎಂಬಾತನು ಕಚ್ಚಿದ ಪರಿಣಾಮ ಬಲಗೈಗೆ ಗಾಯವಾಗಿರುತ್ತದೆ.ನಂತರ ಆರೋಪಿ ನುಸೈರ್ ನನ್ನು ಠಾಣೆಗೆ ಕರೆದುಕೊಂಡು ಬಂದು ಠಾಣಾಧಿಕಾರಿಯವರ ವಶಕ್ಕೆ ಒಪ್ಪಿಸಿ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ತೆರಳಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

Crime Reported in Ullal PS

ಪಿರ್ಯಾದಿ Manoj (36) ದಾರರ ಚಿಕ್ಕಮ್ಮನ ಮಗನಾದ ಸುನೀಲ್(21) ಎಂಬವರು ಸುಮಾರು 6 ತಿಂಗಳಿನಿಂದ ಪಿರ್ಯಾದಿದಾರರ ಮನೆಯಲ್ಲಿ ವಾಸವಾಗಿದ್ದು  ಪೈಂಟಿಂಗ್ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 19-03-2022 ರಂದು ಪಿರ್ಯಾದಿದಾರರ ತಮ್ಮ ಮನೆಯಿಂದ ಪೈಂಟಿಂಗ್ ಕೆಲಸದ ಬಗ್ಗೆ 8-30 ಗಂಟೆಗೆ ಮನೆಯಿಂದ ಹೋಗಿದ್ದವನು ಈವರೆಗೂ ಬಾರದೇ ಇದ್ದು ಈತನ ಬಗ್ಗೆ ಆತನ ಅಕ್ಕನ ಮನೆಯಲ್ಲಿ, ಸಂಬಂಧಿಕರ ಮನೆಯಲ್ಲಿ ಹುಡುಕಾಡಿ ಪತ್ತೆಯಾಗದೇ ಇದ್ದುದರಿಂದ ಕಾಣೆಯಾದ ಸುನೀಲ್(21)  ರವರನ್ನು  ಪತ್ತೆ ಹಚ್ಚಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

Crime Reported in Traffic South P.S                      

ದಿನಾಂಕ 23-03-2022 ರಂದು ಪಿರ್ಯಾದಿದಾರರಾದ ಮನೀಶ್ ಶರ್ಮ(22)ಮತ್ತು ಅವರ ಸ್ನೇಹಿತ ರವಿ ರವರು ನಾಟೇಕಲ್ ನಿಂದ ಕೆ.ಸಿ ರೋಡ್ ಗೆ ಹೋಗುವ ರಸ್ತೆ ಮಾರ್ಗವಾಗಿ ರಸ್ತೆಯ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 21:15 ಗಂಟೆಗೆ ಕೆ.ಸಿ ರೋಡ್ ರಸ್ತೆಯಲ್ಲಿರುವ ಗ್ರೀಪನ್ಸ್ ಆಟದ ಮೈದಾನ ಹತ್ತಿರ ತಲುಪುತ್ತಿದ್ದಂತೆ  ನಾಟೇಕಲ್ ನಿಂದ ಕೆ.ಸಿ ರೋಡ್ ಕಡೆಗೆ ಹೋಗುತ್ತಿದ್ದ ಮೋಟರ್ ಸೈಕಲ್ ನಂಬ್ರ KA-19-ES-8845 ನೇದರ ಸವಾರ ಅತಿವೇಗ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಸ್ನೇಹಿತ ರವಿರವರಿಗೆ ಹಿಂಬದಿಯಿಂದ ಡಿಕ್ಕಿ ಪಡಿಸಿದ ಪರಿಣಾಮ ರವಿರವರು ರಸ್ತೆಗೆ ಬಿದ್ದಿದ್ದು ಅವರಿಗೆ ತಲೆಗೆ ಗಂಬೀರ ಸ್ವರೂಪದ ಗಾಯ ಹಾಗೂ ಎರಡು ಕಣ್ಣಿನ ಭಾಗಕ್ಕೆ ಮತ್ತು ಕೈಗೆ ರಕ್ತ ಗಾಯವಾಗಿದ್ದು ಅಲ್ಲಿಯ ಸ್ಥಳೀಯರು  ಚಿಕಿತ್ಸೆ ಬಗ್ಗೆ ಕಣಚೂರು ಆಸ್ವತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

 

ಇತ್ತೀಚಿನ ನವೀಕರಣ​ : 24-03-2022 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080