ಅಭಿಪ್ರಾಯ / ಸಲಹೆಗಳು

Crime Reported in Panambur PS   

ಪಿರ್ಯಾದಿ NAGARAJAPPA ದಾರರ ಮಗ ವಿಜಯ ಕುಮಾರ ಪ್ರಾಯಾ 32 ವರ್ಷ ಎಂಬಾತನು ಕಳೆದ 09 ವರ್ಷಗಳಿಂದ ಮಂಗಳೂರಿನ  ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಸೊಲಾರ್ ಆ್ಯಕ್ಟಿವ್ ಫಾರ್ಮ ಸೈನ್ಸ ಲಿಮಿಟೇಡ್ ಎಂಬ ಖಾಸಗಿ ಕಂಪನಿಯಲ್ಲಿ ಅಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದವನು ಕಳೆದ 2 ತಿಂಗಳಿನಿಂದ ಕಂಪನಿಯ ಕೆಲಸಕ್ಕೆ ಹೊಗದೆ ಮನೆಗೊ ಬಾರದೆ ಕಣೆಯಾಗಿರುತ್ತಾನೆ ಆತನು 15 ದಿನಗಳ ಹಿಂದೆ ಆತನ ಸ್ನೆಹಿತ ಹರೀಶ ಎಂಬವರ ಮಂಗಳೂರಿನ ಹೊಸಬೆಟ್ಟುವಿನ ರೊಮಿಗೆ ಬಂದು ಹೊಗಿರುವ ವಿಚಾರ ಪಿರ್ಯಾದಿದಾರರಿಗೆ ತಿಳಿದು ಮಂಗಳೂರಿಗೆ ಬಂದು ಎಲ್ಲಾ ಕಡೆ ಪತ್ತೆ ಬಗ್ಗೆ ಹುಡುಕಾಡಿ ಪತ್ತೆಯಾಗದೆ ಇದುದರಿಂದ ಹಾಗೂ ಆತನ ಮೊಬೈಲ್ ಸ್ವೀಚ್ ಆಫ್ ಆಗಿರುವುದಿಂದ ಕಾಣೆಯಾಗಿರುವ ಪಿರ್ಯಾದಿದಾರರ ಮಗನನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Crime Reported in CEN Crime PS

 ಪಿರ್ಯಾದಿದಾರರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, “ GADGET FACTORY”  ಎಂಬ  ಇನ್ಸ್ ಸ್ಟಾ ಗ್ರಾಮ್ ಖಾತೆಯಲ್ಲಿ  ಆನ್ ಲೈನ್ ನಲ್ಲಿ ಮೊಬೈಲ್ ಖರೀದಿ ಮಾಡುವ ಬಗ್ಗೆ ಮಾಹಿತಿಯಿದ್ದು, ಸದ್ರಿ ನಕಲಿ ಇನ್ಸ್ ಸ್ಟಾ ಗ್ರಾಮ್ ಖಾತೆಯ ಮೆಸೆಂಜರ್ ನಲ್ಲಿ ಪಿರ್ಯಾದಿದಾರರು ಮೊಬೈಲ್ ಖರೀದಿ ಮಾಡುವ ಬಗ್ಗೆ ಇಚ್ಚೆ ವ್ಯಕ್ತ ಪಡಿಸಿ ಮೆಸೇಜ್ ಮಾಡಿದಾಗ, ಸದ್ರಿ ಇನ್ಸ್ ಸ್ಟಾ ಗ್ರಾಮ್ ಖಾತೆಯ ಮೆಸೆಂಜರ್ ನಿಂದ ಗೂಗಲ್ ಪೇ  ನಂಬ್ರ  ವಾಟ್ಸಾಫ್ ನಂಬ್ರನೇದನ್ನು ಕಳುಹಿಸಿದ್ದು, ಪಿರ್ಯಾದಿದಾರರು ನಂಬಿ ಐ ಫೋನ್ 13 ಪ್ರೋ ಮ್ಯಾಕ್ಸ್ ನ್ನು ಬುಕ್ ಮಾಡಿ, ದಿನಾಂಕ 13-03-2022 ರಿಂದ 17-03-2022 ರ ಮದ್ಯ ಅವಧಿಯಲ್ಲಿ ಹಂತ ಹಂತವಾಗಿ ರೂಪಾಯಿ 66,000/- ಪಿರ್ಯಾದಿದಾರರು ಹೊಂದಿರುವ ಕೆನರಾ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಖಾತೆಯಿಂದ ವರ್ಗಾವಣೆಗೊಳಿಸಿದ್ದು, ಇಲ್ಲಿಯವರೆಗೂ ಆನ್ ಲೈನ್ ನಲ್ಲಿ ಬುಕ್ ಮಾಡಿದ ಮೊಬೈಲ್  ಆಗಲೀ ಹಾಕಿದ ಹಣವಾಗಲೀ ವಾಪಾಸ್ಸು ಬಾರದೇ ಇದ್ದುದರಿಂದ ಈ ದಿನ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

 

 

Crime Reported in Urva PS

ದಿನಾಂಕ: 24.05.2022  ರಂದು ಬೆಳಿಗ್ಗೆ  ಸುಮಾರು  6:00 ಗಂಟೆಯಿಂದ  ಪ್ರಕರಣದ ಸಾಕ್ಷೀದಾರರಾದ ಪ್ರಮೋದ್   ಹೆಚ್ ಸಿ    ಉರ್ವಾ  ಪೊಲೀಸ್   ಠಾಣೆ  ರವರು  ಠಾಣಾ  ಸರಹದ್ದಿನಲ್ಲಿ  ಖಾಸಗಿ ಮೋಟಾರ್ ಸೈಕಲಿನಲ್ಲಿ  ಗಸ್ತು  ಕರ್ತವ್ಯದಲ್ಲಿದ್ದಾಗ    ಸಮಯ ಸುಮಾರು  ಬೆಳಿಗ್ಗೆ  6:30  ಗಂಟೆಗೆ  ಠಾಣಾ  ವ್ಯಾಪ್ತಿಯ  ಉರ್ವಾ  ಚರ್ಚ್   ಬಳಿ  ಅನುಮಾನಾಸ್ಪದವಾಗಿ   ತಿರುಗಾಡುತ್ತಿದ್ದ ಆರೋಪಿಯನ್ನು  ಕಂಡು  ಆತನ  ಬಳಿ ಹೋಗಿ  ವಿಚಾರಿಸಿದಾಗ     ಆತನು   ತನ್ನ ಇರುವಿಕೆಯ ಕುರಿತು ಸ್ಪಷ್ಟವಾದ ಕಾರಣ ನೀಡಿರುವುದಿಲ್ಲ ಹಾಗೂ   ಆತನು  ಮಾತನಾಡುತ್ತಿರುವಾಗ  ನಶೆಯಲ್ಲಿರುವ ಕುರುಹುಗಳು   ಕಂಡು ಬಂದ ಕಾರಣ  ಆತನನ್ನು  ಬೆಳಿಗ್ಗೆ ಸುಮಾರು 06:40 ಗಂಟೆಗೆ  ವಶಕ್ಕೆ ಪಡೆದು ಮಂಗಳೂರಿನ  ಎಜೆ ಆಸ್ಪತ್ರೆಯಲ್ಲಿ ಅಮಲು ಪದಾರ್ಥ ಸೇವನೆಯ ಬಗ್ಗೆ  ತಪಾಸಣೆಗೆ ಒಳಪಡಿಸಿದಾಗ  ಆರೋಪಿಯು  ಟೆಟ್ರಹೈಡ್ರಕೆನಬಿನಾಯ್ಡ್  (ಮಾರಿಜುವಾನ) ಎಂಬ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ದೃಡಪತ್ರ ನೀಡಿರುವ ಮೇರೆಗೆ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ಕೈಗೊಂಡಿರುವುದು ಎಂಬಿತ್ಯಾದಿ

 

Crime Reported in Mangalore North PS                                

 ಪಿರ್ಯಾದಿದರರಾದ ವೇಣುಗೋಪಾಲರವರು  ದಿನಾಂಕ: 06-05-2022 ರಂದು ಮಂಗಳೂರು ನಗರದ ಸಿಟಿ ಸೆಂಟರ್ ಮಾಲ್ ಗೆ ಹೋಗಲು  ಅವರ ಬಾಬ್ತು KA-19, EC-6838 ನೊಂದಣಿ ನಂಬ್ರದ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ  ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌‌‌ನ  ಪಾರ್ಕಿಂಗ್ ಸ್ಥಳದಲ್ಲಿ  ಮೋಟಾರ್ ಸೈಕಲನ್ನು  ಮದ್ಯಾಹ್ನ 3-30 ಗಂಟೆಗೆ ಪಾರ್ಕ್ ಮಾಡಿ ಅಲ್ಲಿಂದ ಸಿಟಿ ಸೆಂಟರ್ ಮಾಲ್ ಗೆ ಹೋಗಿ ಕೆಲಸ ಮುಗಿಸಿ ವಾಪಾಸು ಸಂಜೆ 5-15 ಗಂಟೆಗೆ  ಮೋಟಾರ್ ಸೈಕಲ್ ಇಟ್ಟಿದ್ದ ಸ್ಥಳಕ್ಕೆ ಬಂದು ನೋಡಿದಾಗ  ಇರದೇ ಇದ್ದು ಸದರಿ ಪಿರ್ಯಾದಿದಾರರ ಮೋಟಾರ್ ಸೈಕಲನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಪಿರ್ಯಾದಿದಾರರು ಈ ತನಕ ಹುಡುಕಾಡಿ ಸಿಗದೇ ಇದ್ದು ಈ ದಿನ ತಡವಾಗಿ ದೂರು ನೀಡಿದ್ದು , ಕಳವಾದ  ಮೋಟಾರ್ ಸೈಕಲ್  KA-19, EC-6838 ನೊಂದಣಿ ನಂಬ್ರದ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್, ಕಪ್ಪು ಬಣ್ಣ ಮಾಡೆಲ್ 2011, ಅಂದಾಜು ಮೌಲ್ಯ ರೂ. 20,000/-, ಆಗಬಹುದು  ಎಂಬಿತ್ಯಾದಿ

 

Crime Reported in Mangalore East Traffic PS                

ದಿನಾಂಕ: 24-05-2022 ರಂದು ಬೆಳಿಗ್ಗೆ ಸಮಯ ಸುಮಾರು 10.30 ಗಂಟೆಗೆ ಪಿರ್ಯಾದಿದಾರರಾದ ನಿಶಾಲ್ ಹಸನ್ ರವರು ಮಂಗಳೂರು ನಗರದ ಶಿವಭಾಗ್ ಜಂಕ್ಷನ್ ಬಳಿಯಿರುವ ವೈನ್ಸ್ ಅಂಡ್ ಸ್ಪಿರಿಟ್ಸ್ ಎದುರುಗಡೆ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ತನ್ನ ಕಾರಿನ ಬಳಿಗೆ ಹೋಗಲು ಪಕ್ಕದಲ್ಲಿರುವ ಕೆ.ಎಫ್.ಸಿ ಎದುರುಗಡೆ ಬಂದು ತಲುಪುತ್ತಿದ್ದಂತೆ ಕೆ.ಎಫ್.ಸಿ ಎದುರುಗಡೆ ನಿಲ್ಲಿಸಿದ್ದ KA-19-MM-3900 ನಂಬ್ರದ ಕಾರನ್ನು ಅದರ ಚಾಲಕ ಯು.ಕೆ ಬಾವ ಎಂಬವರು ಅಕ್ಕಪಕ್ಕದಲ್ಲಿ ಗಮನಿಸದೇ ದುಡುಕುತನದಿಂದ ಹಿಂದಕ್ಕೆ ತೆಗೆದು ಬಳಿಕ ಒಮ್ಮೆಲೇ ಎಡಕ್ಕೆ ಚಲಾಯಿಸಿ ಇಂಟರ್ ಲಾಕ್ ಪಾರ್ಕಿಂಗ್ ಜಾಗದಲ್ಲಿ ಕುಳಿತಿದ್ದ ಅಪರಿಚಿತ ಭಿಕ್ಷುಕ ವ್ಯಕ್ತಿಗೆ ಢಿಕ್ಕಿಪಡಿಸಿದ್ದು, ಕಾರಿನ ಮುಂದಿನ ಎಡಬದಿಯ ಚಕ್ರವು ಆತನ ಮೇಲೆ ಹರಿದು ಹೋಗಿ ಆತನ ತಲೆಗೆ, ಮುಖಕ್ಕೆ ಮತ್ತು ಕಾಲಿಗೆ ತೀವ್ರ ತರದ ಗಾಯವಾಗಿ ಚಿಕಿತ್ಸೆ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಯಲ್ಲಿದ್ದವನು, ದಿನಾಂಕ: 24-05-2022 ರಂದು ಮಧ್ಯಾಹ್ನ 12-10 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ಆ ಅಪಘಾತಕ್ಕೆ ಕಾರು ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನ ಕಾರಣವಾಗಿದ್ದು, ಈ ಬಗ್ಗೆ ಕಾರು ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 24-05-2022 08:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080