ಅಭಿಪ್ರಾಯ / ಸಲಹೆಗಳು

Crime Reported in:Mulki PS

ಪಿರ್ಯಾದಿದಾರರು Ronald Kashmir Sequiera ಪೂನಾದಲ್ಲಿ ವಾಸವಾಗಿದ್ದು ಅಲ್ಲಿಯೇ ವ್ಯಾಪಾರ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಪಿರ್ಯಾದಿದಾರರ ಊರಾದ ಮಂಗಳೂರು ತಾಲೂಕು, ಮಾರಿಗುಡಿ ಬಳಿಯ ಮೆನ್ನಬೆಟ್ಟು ಗ್ರಾಮದ ಮಾರಡ್ಕ ಹೌಸ್ ಎಂಬಲ್ಲಿ ಹೊಸಮನೆ ಕೆಲಸ ನಡೆಯುತ್ತಿರುವುದರಿಂದ ದಿನಾಂಕ 22-06-2022 ರಂದು ಪೂನಾದಿಂದ ಊರಿಗೆ ಬಂದಿದ್ದು, ದಿನಾಂಕ: 23-06-2022 ರಂದು ಪಿರ್ಯಾದಿದಾರರು ಹೊಸ ಮನೆಯ ಬಳಿ  ಕೆಲಸಗಾರರ ಜೊತೆ  ಇದ್ದಾಗ ಮಧ್ಯಾಹ್ನ 3.25 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಣ್ಣ ವಿಕ್ಟರ್  ರೇನ್ಸಿ ಸಿಕ್ವೇರಾ ಎಂಬಾತನು ಮದ್ಯ ಸೇವಿಸಿಕೊಂಡು ಬಂದು ಪಿರ್ಯಾದಿದಾರರಲ್ಲಿ, “ನಿನಗೆ ಈ ಮನೆ ಯಾಕೆ? ನೀನು ಪೂನಾದಲ್ಲೇ ಸೆಟಲ್ ಆಗಿದ್ದೀಯಲ್ಲಾ? ಇಲ್ಲಿಗೆ ಏನೂ ಬರುವುದಿಲ್ಲ, ಮತ್ತೆ ಯಾಕೆ ನಿನಗೆ ಮನೆ? ಎಂದು ಪ್ರಶ್ನಿಸಿದ್ದು ಅದಕ್ಕೆ ಪಿರ್ಯಾದಿದಾರರು ಆತನಲ್ಲಿ ನಿನಗೋಸ್ಕರ ನಾನು ಮನೆ ಮಾಡಿಲ್ಲ. ನನಗೋಸ್ಕರ ಮಾಡುತ್ತಿದ್ದೇನೆ. ಎಂದು ಹೇಳಿದ್ದು, ಆ ಸಮಯ ಆತನು ಪಿರ್ಯಾದಿಗೆ “ ಬೇವರ್ಸಿ, ನಾಯಿದ ಮಗ”  ಎಂದು ಅವಾಚ್ಯ ಶಬ್ಧಗಳಿಂದ ಬೈದು, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ, ಮನೆಯ ಬಳಿ ಇದ್ದ ಕತ್ತಿಯಿಂದ ಪಿರ್ಯಾದಿದಾರರ ಬಲ ಬದಿಯ ಹಣೆಗೆ ಹೊಡೆದಿದ್ದು, ರಕ್ತಗಾಯ ಆಗಿರುತ್ತದೆ. ತಕ್ಷಣ ಪಿರ್ಯಾದಿದಾರರು ಆತನ ಕೈಯನ್ನು ಹಿಡಿದು ತಡೆದಿದ್ದು, ಅಲ್ಲೇ ಕೆಲಸ ಮಾಡುತ್ತಿದ್ದ ಕೆಲಸಗಾರರು ಬೊಬ್ಬೆ ಕೇಳಿ ಓಡಿ ಬಂದು ಬಿಡಿಸಿದ್ದು, ಆ ಸಮಯ ಆತನು ಅಲ್ಲಿಂದ ಓಡಿ ಹೋಗಿರುತ್ತಾನೆ. ನಂತರ ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕಿನ್ನಿಗೋಳಿಯ ಕನ್ಸೆಟ್ಟಾ ಆಸ್ಪತ್ರೆಗೆ  ಹೋಗಿದ್ದು ಅಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಎಂಬಿತ್ಯಾದಿಯಾಗಿದೆ.

 

Crime Reported in: Mangalore North PS                

ಪಿರ್ಯಾದಿ  SANDEEP M/s GTL INFRASTRUCTURE LMTD ಬೆಂಗಳೂರು ಸಂಸ್ಥೆಯ ಅದೀಕೃತ ಪ್ರತಿನಿಧಿಯಾಗಿದ್ದು, ದಿನಾಂಕ 06.04.2009 ರಂದು ಪಿರ್ಯಾದಿದಾರರ ಸಂಸ್ಥೆಯು ಮಂಗಳೂರು ನಗರದ ಕಸಬಾ ಬಜಾರ್ ನ ವಾಸಿ ಮೀನಾಕ್ಷಿ ಎನ್ ಶೆಣೈ ಎಂಬವ ಬಾಬ್ತು ಸೈಟ್ ನಂಬ್ರ 13/10/1279/2 SARVEY NO 469-1 KASABA BAZAR ನಲ್ಲಿ ಮೊಬೈಲ್ ಟವರ್ ನ್ನು ಸ್ಥಾಪಿಸಿದ್ದು, ದಿನಾಂಕ 31.05.2021 ರಂದು ಸದ್ರಿ ಸ್ಥಳಕ್ಕೆ ಟೆಕ್ಷಿಷಿಯನ್ ರವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ನೋಡಲಾಗಿ ಸಂಸ್ತೆಯವರು ನಿರ್ಮಿಸಿದ ಮೊಬೈಲ್ ಟವರ್ ಕಳವಾಗಿರುವುದು ಕಂಡುಬಂದಿದ್ದು, ಇದನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಕಳವಾದ ಸೊತ್ತಿನ ಮೌಲ್ಯ 22,45,339 ರೂ ಆಗಿರುವುದಾಗಿ ದೂರಿನ ಸಾರಾಂಶ.

ಇತ್ತೀಚಿನ ನವೀಕರಣ​ : 24-06-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080