ಅಭಿಪ್ರಾಯ / ಸಲಹೆಗಳು

Crime Reported  in Traffic North PS     

ಪಿರ್ಯಾದಿ Krishnamurthy J  ಹಾಗೂ ಅವರ ಗೆಳೆಯರಾದ ಸುನೀಲ್, ಸಂತೋಷ್ ಮತ್ತು ಪುನೀತ್ ರವರೊಂದಿಗೆ ನಿನ್ನೆ ದಿನಾಂಕ 23-08-2021 ರಂದು ಮುಕ್ಕ ಬೀಚ್ ಗೆ ಹೋಗಿದ್ದವರು ರಾತ್ರಿ ಅಲ್ಲಿಯೇ ಊಟ ಮುಗಿಸಿ ಬೀಚ್ ನಲ್ಲಿಯೇ ತಂಗಿಕೊಂಡಿದ್ದು, ದಿನಾಂಕ 24-08-2021 ರಂದು ಬೆಳಗಿನ ಜಾವ 04:00 ಗಂಟೆಗೆ ಮುಕ್ಕ ಬೀಚ್ ನಿಂದ ತಮ್ಮ-ತಮ್ಮ ಮನೆಗಳಿಗೆ ಹೋಗುವ ಸಲುವಾಗಿ ಪಿರ್ಯಾದಿದಾರರು ಪುನೀತನ ಬಾಬ್ತು KA-19-HF-5414 ನಂಬ್ರದ ಜಿಕ್ಸರ್ ಮೋಟಾರ್ ಸೈಕಲಿನಲ್ಲಿ ಹಾಗೂ ಗೆಳೆಯರಾದ ಸಂತೋಷ್ ಹಾಗೂ ಪುನೀತನು ಸಂತೋಷ ನ ಬಾಬ್ತು KA-19-EN-6718 ನಂಬ್ರದ ಮೋಟಾರ್ ಸೈಕಲಿನಲ್ಲಿ ಸಂತೋಷನು ಸವಾರನಾಗಿಯೂ ಪುನಿತನು ಸಹ ಸವಾರನಾಗಿಯೂ ಮತ್ತು ಸುನೀಲನು ಆತನ ಬಾಬ್ತು KA-19-EF-6366 ನಂಬ್ರದ ಪಲ್ಸರ್ ಮೋಟಾರ್ ಸೈಕಲಿನಲ್ಲಿ ಹೊರಟಿದ್ದು ಬೆಳಿಗಿನ ಜಾವ ಸುಮಾರು 04:15 ಗಂಟೆಗೆ ತಡಂಬೈಲು ಸಮೀಪದ ದುರ್ಗಾಂಬ ದೇವಸ್ಥಾನದ ಬಳಿ ಸಮೀಪಿತ್ತಿದ್ದಂತೆ ಸುನೀಲನು ತನ್ನ ಬಾಬ್ತು KA-19-EF-6366 ನಂಬ್ರದ ಮೋಟಾರ್ ಸೈಕಲನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸಂತೋಷನು ಸವಾರಿ ಮಾಡುತ್ತಿದ್ದ KA-19-EN-6718 ನಂಬ್ರದ ಮೋಟಾರ್ ಸೈಕಲಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಸಂತೋಷ್ ಹಾಗೂ ಪುನೀತನು ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಈ ವೇಳೆ ಸದ್ರಿ ಮೋಟಾರ್ ಸೈಕಲ್ ಡಾಮಾರು ರಸ್ತೆಯಲ್ಲಿ ಮಗುಚಿ ಬಿದ್ದು ಮುಂದಕ್ಕೆ ಚಲಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ KA-19-HF-5414  ನಂಬ್ರದ ಮೋಟಾರ್ ಸೈಕಲಿಗೆ ಡಿಕ್ಕಿಯಾಗಿದ್ದು ಇದರ ಪರಿಣಾಮ ಪಿರ್ಯಾದಿದಾರರ ಹಣೆಯ ಎಡಬದಿ, ಎಡಕಣ್ಣಿನ ಎಡಬದಿ ಮೂಗಿಗೆ, ಎಡ ಕೈ ಮೊಣಗಂಟು ಹಾಗೂ ಬೆರಳ ಬುಡಕ್ಕೆ, ಬಲಕೈ ತುಟ್ಟಿಗೆ ಹಾಗೂ ಎರಡೂ ಕಾಲಿನ ಮೊಣಗಂಟಿನ ಬಳಿ ಅಲ್ಲಲ್ಲಿ ತರಚಿತ ರೀತಿಯ ಗಾಯವಾಗಿದ್ದು, ಸಂತೋಷ್ ಹಾಗೂ ಪುನೀತನಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಮೈ ಕೈಗಳಿಗೆ ತರಚಿದ ರೀತಿಯ ಗಾಯವಾಗಿ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Crime Reported  in Surathkal PS

ಪಿರ್ಯಾದಿ SMT MEROLIN RODRIGUES ರವರು ದಿನಾಂಕ 21-08-2021 ರಂದು ತನ್ನ ತವರು ಮನೆಯಾದ ಉಡುಪಿ ಬ್ರಹ್ಮಾವರದಲ್ಲಿರುವಾಗ ಪಿರ್ಯಾದಿದಾರರ ಗಂಡ ಬೆನ್ ಜೋಯ್ (30) ರವರು ಬ್ರಹ್ಮಾವರದ ಮನೆಗೆ ಬರುವುದಾಗಿ ತಿಳಿಸಿದ್ದವರು, ತನ್ನ ಮೊಬೈಲ್ ನ್ನು ಸ್ವೀಚ್ ಆಪ್ ಮಾಡಿಕೊಂಡಿದ್ದು  ಈ ಬಗ್ಗೆ ಪಿರ್ಯಾದಿದಾರರು ದಿನಾಂಕ 21-08-2021 ರಂದು ಸಂಜೆ 04.00 ಗಂಟೆಯವರೆಗೂ ಕಾದು, ಪಿರ್ಯಾದಿದಾರರು ತನ್ನ ಗಂಡನ ಮನೆಯಾದ ಸುರತ್ಕಲ್  ಜನತಾ ಕಾಲೋನಿಯಲ್ಲಿಗೆ ಬಂದು ಸಂಬಂಧಿಕರು ಮತ್ತು ಸ್ನೇಹಿತರುಗಳ ಮನೆಯಲ್ಲಿ ಹುಡುಕಾಡಿದ್ದು ಕಾಣೆಯಾದ ಬೆನ್ ಜೋಯ್ (30) ರವರು 23-08-2021 ರವರೆಗೂ  ಪತ್ತೆಯಾಗದೇ ಇದ್ದ ಕಾರಣ  ಕಾಣೆಯಾದ ಪಿರ್ಯಾದಿದಾರರ ಗಂಡನನ್ನು ಪತ್ತೆ ಮಾಡಿ ಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ :

ಹೆಸರು: ಬೆನ್ ಜೋಯ್ ಪ್ಲೇವಿಯನ್ ಜಾಬಿನ್ ಡಿಸೋಜ

ಪ್ರಾಯ : 30 ವರ್ಷ

ತಂದೆ: ದಿ.ಊರ್ಬನ್ ಡಿಸೋಜಾ

ಎತ್ತರ : 5 ಅಡಿ 11 ಇಂಚು

ಚಹರೆ : ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ, ತಲೆಯಲ್ಲಿ ಕಪ್ಪು ಕೂದಲು, ಗಡ್ಡ ಮೀಸೆ ತೆಗೆದಿರುತ್ತಾರೆ.

ಬಟ್ಟೆ ಬರೆ :  ಬಿಳಿ ನೀಲಿ ಟೀ-ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ ಹಾಗೂ ಕೆಂಪು ಬಣ್ಣದ ಬ್ಯಾಗ್ -1 ಬೂದು ಬಣ್ಣದ ಬ್ಯಾಗ್-1, ಹ್ಯಾಂಡ್ ಬ್ಯಾಗ್-1 ತೆಗೆದುಕೊಂಡು ಹೋಗಿರುತ್ತಾರೆ.

Crime Reported  in Bajpe PS   

 ದಿನಾಂಕ 23-08-2021 ರಂದು ಸಮಯ ಸುಮಾರು 14.00 ಗಂಟೆಗೆ ಪಿರ್ಯಾದಿ Ummar Farooq ರವರ ಪತ್ನಿ ಶಬ್ರಿನಾ, ಪ್ರಾಯ 33 ವರ್ಷ, ಎಂಬವರು ತಮ್ಮ ವಾಸದ ಮನೆಯಾದ ಮಂಗಳೂರು ತಾಲೂಕು, ಅಡ್ಡೂರು ಗ್ರಾಮದ, ಕಾಂಜಿಲಕೋಡಿ ಹೌಸ್, ಆಯಿಷಾ ಕಾಟೇಜ್  ಎಂಬಲ್ಲಿಂದ ಬಟ್ಟೆಯ ಬ್ಯಾಗನ್ನು ಹಿಡಿದುಕೊಂಡು ಮನೆಯ ಬಳಿ ಇರುವ ಟೈಲರ್ ಶಾಪ್ ಗೆಂದು ಹೋದವರು ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ ಎಂಬಿತ್ಯಾದಿ.

ಕಾಣೆಯಾದವರ ವಿವರಃ

ಹೆಸರು : ಶಬ್ರಿನಾ, ಪ್ರಾಯ 33 ವರ್ಷ

ಬಣ್ಣ: ಗೋಧಿ ಮೈಬಣ್ಣ, ಸದೃಡ ಶರೀರ

ಎತ್ತರ:  5.3 ಅಡಿ

ಧರಿಸಿದ್ದ ಬಟ್ಟೆಗಳು: ಕಪ್ಪು ಬಣ್ಣದ ಬುರ್ಖಾ ,ಹಳದಿ ಬಣ್ಣದ ಹಿಜಾಬ್ , ದಪ್ಪ ಕನ್ನಡಕ ಧರಿಸಿರುತ್ತಾರೆ.

Crime Reported  in Mangalore South PS

ಪಿರ್ಯಾದಿ Vineetha Jeevitha Raj ರವರ ಗಂಡ ರೂಪೇಶ್ ಪವನ್ ರಾಜ್ ರವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ದಿನಾಂಕ : 18-08-2021 ರಂದು ಪಿರ್ಯಾದಿದಾರರು ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕಲಂ 174 ಸಿ.ಆರ್.ಪಿ.ಸಿಯಂತೆ  ಯು.ಡಿ.ಆರ್ ಪ್ರಕರಣ ದಾಖಲಾಗಿರುತ್ತದೆ. ಆ ನಂತರ ಪಿರ್ಯಾದಿದಾರರಿಗೆ ಅವರ ಮನೆಯಲ್ಲಿ ತನ್ನ ಗಂಡ ಬರೆದಿಟ್ಟಿದ್ದ ಡೆತ್ ನೋಟ್ ಸಿಕ್ಕಿದ್ದು, ಇದರಲ್ಲಿ ತನ್ನ ಸಾವಿಗೆ ಮಂಜನಾಯ್ಕ್, ನಯನ, ಹರೀಶ್ ಹಾಗೂ ಯಶವಂತ ರವರೇ ಕಾರಣರಾಗಿರುವ ಬಗ್ಗೆ ವಿವರವಾಗಿ ಬರೆದಿರುತ್ತಾರೆ. ದಿನಾಂಕ : 02-07-2021 ರಿಂದ ಆರೋಪಿಗಳು,  ಪಿರ್ಯಾದಿದಾರರ ಗಂಡನ ತಮ್ಮನಲ್ಲಿ, ಸಂಬಂಧಿಕರಲ್ಲಿ, ಸ್ನೇಹಿತರಲ್ಲಿ ಪಿರ್ಯಾಧಿದಾರರ ಗಂಡ ಸಾಲಗಾರ, ಆತನ ಮೇಲೆ ಹತ್ತು ಹಲವಾರು ಕೇಸುಗಳಿದೆ. ಆತನು ಬದುಕುವುದೇ ವೇಸ್ಟ್ ಎಂದು ವಿನಾ ಕಾರಣ ಪ್ರಚಾರ ಮಾಡಿ,  ಮಾನ ಹಾನಿ ಮಾಡಿರುವುದಲ್ಲದೇ, ಮನೆಯ ಹತ್ತಿರ ಬಂದು ಹಣವನ್ನು ವಾಪಾಸು ಕೊಡುವಂತೆ ಬೆದರಿಕೆ ಹಾಕಿ,  ಸಾರ್ವಜನಿಕವಾಗಿ ಬೊಬ್ಬೆ ಹಾಕಿ ಬೇವರ್ಸಿ ನಾಯಿ ಎಂಬುದಾಗಿ ಬೈದು, ನಿನಗೆ ಹಣ ಕೊಡಲು ಸಾಧ್ಯವಾಗದಿದ್ದರೆ ಎಲ್ಲಿಯಾದರು ಹೋಗಿ ಸಾಯಿ, ನೀನು ಬದುಕುವುದಕ್ಕಿಂತ ಸಾಯುವುದೇ ಒಳ್ಳೆಯದು. ನೀನು ಎಲ್ಲಿಯಾದರು ಆತ್ಮಹತ್ಯೆ ಮಾಡಿಕೊಂಡು ಸಾಯಿ ಎಂಬುದಾಗಿ ಪಿರ್ಯಾದಿದಾರರ ಗಂಡನನ್ನು ಉದ್ದೇಶಿಸಿ ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿರುತ್ತಾರೆ ಹಾಗೂ ಆರೋಪಿ ಮಂಜನಾಯ್ಕ  ರವರು ಪಿರ್ಯಾದಿದಾರರ ಗಂಡನ ಫೋಟೊ, ಹೆಸರು, ವಿಳಾಸ ಹಾಕಿ  ಈತ ತನಗೆ 25 ಲಕ್ಷದಷ್ಟು ಮೋಸ ಮಾಡಿದ್ದಾನೆ, ಇವನ ಮೇಲೆ ಸುಮಾರು 10 ಕೇಸು ಮಾಡಿದ್ದೀನಿ, ಇದು ನಿಮಗೆ ತಿಳಿದಿರಲಿ ಎಂಬುದಾಗಿ ಮೊಬೈಲ್ ನಲ್ಲಿ ವಾಟ್ಸಪ್ ಮುಖಾಂತರ ಕಳುಹಿಸಿ ಮಾನ ಹಾನಿ ಮಾಡಿ ಪಿರ್ಯಾದಿದಾರರ ಆತ್ಮಹತ್ಯೆಗೆ ಪ್ರೇರಣೆ ನೀಡಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 24-08-2021 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080