ಅಭಿಪ್ರಾಯ / ಸಲಹೆಗಳು

Crime Reported in Surathkal PS

1) ದಿನಾಂಕ:  23-01-2022 ರಂದು ಬೆಳಿಗ್ಗೆ 07.00 ಗಂಟೆಗೆ ಸಮಯಕ್ಕೆ  ಬಾಳ ಗ್ರಾಮದ ಸಮುದಾಯ ಭವನದ ಹತ್ತಿರ, ಆರೋಪಿ ಕೆಎ-19-ಎಸಿ-5378 ನೇ ಲಾರಿ ಚಾಲಕನು ನಿರ್ಲಕ್ಷತನದಿಂದ ತನ್ನ ವಾಹನವನ್ನು ರೀವರ್ಸ್ ತೆಗೆಯುವ ಸಮಯ ವಿದ್ಯುತ್ ಕಂಬಕ್ಕೆ ತಾಗಿಸಿ ಎರಡು ವಿದ್ಯುತ್ ಕಂಬಗಳನ್ನು ಜಖಂಗೊಂಡಿರುತ್ತದೆ ಇದರಿಂದ MESCOM ಸಂಸ್ಥೆಗೆ ಸುಮಾರು 25.000/- ನಷ್ಟವುಂಟಾಗಿರುವುದಾಗಿ ಎಂಬಿತ್ಯಾಧಿಯಾಗಿರುತ್ತದೆ.

 

2) ದಿನಾಂಕ: 19/01/2022 ರಂದು ಪಿರ್ಯಾದಿದಾರರಾದ PADMANABHA SHETTIGAR ರವರ ಮಗಳ ಮದುವೆಯ ನಿಶ್ಚಿತಾರ್ಥದ ಬಗ್ಗೆ ಪಿರ್ಯಾದಿದಾರರ ಅಕ್ಕನ ಗಂಡ ಗಂಗಾಧರ ಬಿ ಶೆಟ್ಟಿಗಾರ ಪ್ರಾಯ 73 ವರ್ಷ ಬಂದಿದ್ದು.ಕಾರ್ಯಕ್ರಮದಲ್ಲಿ ಹಾಜರಾಗಿರುತ್ತಾರೆ ಗಂಗಾಧರ ಶೆಟ್ಟಿಗಾರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ದಿನಾಂಕ: 20-01-2022 ರಂದು ಬೆಳಿಗ್ಗೆ 11-00 ಗಂಟೆಗೆ ಸುರತ್ಕಲ್ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೂ ಮನೆಗೆ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಸಂಭಂದಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂಬಿತ್ಯಾದಿಯಾಗಿರುತ್ತದೆ.

ಕಾಣೆಯಾದವರ ಚಹರೆ:

ಹೆಸರು: ಗಂಗಾಧರ ಬಿ ಶೆಟ್ಟಿಗಾರ್ ಪ್ರಾಯ 73 ವರ್ಷ

ಎತ್ತರ: 5-65 ಇಂಚು

ಮೈಬಣ್ಣ: ಬಿಳಿ ಮೈಬಣ್ಣ ,ಸಾಧಾರಣ ಮೈಕಟ್ಟು

ಧರಿಸಿರುವ ಬಟ್ಟೆ : ಕೇಸರಿ ಲುಂಗಿ ಮತ್ತು ಉದ್ದ ತೋಳಿನ ಕಪ್ಪು,ಹಸಿರು ಮಿಶ್ರೀತ್ ಪ್ಲೇನ್ ಬಟ್ಟೆ

ಒಳ ಬಟ್ಟೆಯಾಗಿ ಕೆಂಪು ಮತ್ತು ಬಿಳಿ ಬನಿಯಾನ್ ಗ್ರೇ ಕಲರ್ ಉದ್ದ ಚಡ್ಡಿ ಧರಿಸಿರುತ್ತಾರೆ.

 

Crime Reported in Konaje PS

1) ದಿನಾಂಕ 25-01-2022 ರಂದು ಪಿರ್ಯಾದಿದಾರರಾದ PSI  Shanaranappa Bhandari ರವರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮದ್ಯಾಹ್ನ ಸುಮಾರು 13-00 ಗಂಟೆಗೆ  ಬಂಟ್ವಾಳ ತಾಲೂಕು  ನರಿಂಗಾನ ಗ್ರಾಮದ ನೆತ್ತಿಲಪದವು ಸೈಟ್  ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಹನೀಫ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತನು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿಯನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿದಲ್ಲಿ  ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

2) ದಿನಾಂಕ 25-01-2022 ರಂದು ಪಿರ್ಯಾದಿದಾರರಾದ PSI Shanaranappa Bhandari ರವರು  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಗ್ಗೆ ಸುಮಾರು 11-45 ಗಂಟೆಗೆ  ಬಂಟ್ವಾಳ ತಾಲೂಕು  ನರಿಂಗಾನ ಗ್ರಾಮದ ಕಲ್ಲರಕೋಡಿ  ಎಂಬಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ ಆರೋಪಿತರು ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಆರೋಪಿತರನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ 1.ಮಹಮ್ಮದ್ ಅಶ್ರಫ್ ನ ವೈದ್ಯಕೀಯ ವರದಿಯು ‘Positive for THC (ಗಾಂಜಾ) ಮತ್ತು 2.ಹಕೀಂ ನ ವೈದ್ಯಕೀಯ ವರದಿಯು ‘Positive for Amphatamine ಮತ್ತು THC (ಗಾಂಜಾ) ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Crime Reported in Mangalore East Traffic PS

ಪಿರ್ಯಾದಿದಾರರಾದ ಪುರುಷೋತ್ತಮ ಶೆಟ್ಟಿ (61) ರವರು ನಿನ್ನೆ ದಿನಾಂಕ: 24-01-2022 ರಂದು ನಂತೂರು ಪದವು ಬಳಿ ರಿಯಲ್ ಲೇಬಲ್ ಪ್ಲಾಟಿನಲ್ಲಿ ಇಂಟಿರಿಯರ್ ಕೆಲಸ ಮುಗಿಸಿಕೊಂಡು ತಮ್ಮ ಬಾಬ್ತು KA-19-ES-2658 ನಂಬ್ರದ ಸ್ಕೂಟರ್ ನಲ್ಲಿ ತಮ್ಮ ಮನೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸಮಯ ಸುಮಾರು ಸಂಜೆ 18.30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66  ನೇ ನಂತೂರು ಜಂಕ್ಷನ್ ತಲುಪುತ್ತಿದ್ದಂತೆ ಪಿರ್ಯಾದಿದಾರರ ಹಿಂದಿನಿಂದ TN-03-Y-1389 ನಂಬ್ರದ ಲಾರಿಯ ಚಾಲಕ ಮರಿಯಪ್ಪನ್ ಎಂಬವರು ತನ್ನ ಲಾರಿಯನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಬಲಬದಿಯಿಂದ ಓವರ್ ಟೇಕ್ ಮಾಡುವ ಸಂದರ್ಭ ಸ್ಕೂಟರಿನ ಬಲ ಬದಿಗೆ ಡಿಕ್ಕಿ ಪಡಿಸಿದ್ದು,ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ಸ್ಕೂಟರಿನ ನಿಯಂತ್ರಣ ತಪ್ಪಿ ಸದ್ರಿ ಅಪಘಾತ ಪಡಿಸಿದ ಲಾರಿಯ 4ನೇ ಚಕ್ರದ ಅಡಿಯಲ್ಲಿ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ತನ್ನ ತಲೆ ಹಾಗೂ ಬಲಗಾಲನ್ನು ಹೊರಕ್ಕೆ ತೆಗೆದು ಎಡಗಾಲನ್ನು ಹೊರಕ್ಕೆ ತೆಗೆಯುವಷ್ಟರಲ್ಲಿ ಸದ್ರಿ ಲಾರಿಯ ಹಿಂಬದಿಯ ಚಕ್ರವು ಪಿರ್ಯಾದಿದಾರರ ಎಡಗಾಲಿನ ಕೋಲು ಕಾಲಿನ ಮೇಲೆ ಹಾಗೂ ಪಾದದ ಮೇಲೆ ಹರಿದು ಮಾಂಸಖಂಡ ಕಿತ್ತು ಹೋದ ರಕ್ತಗಾಯವಾಗಿರುತ್ತದೆ. ಸದ್ರಿ ಅಪಘಾತ ಪಡಿಸಿದ TN-03-Y-1389 ಲಾರಿ ಹಾಗೂ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೇ ಕೋರಿಕೆ ಎಂಬಿತ್ಯಾದಿ.

 

Crime Reported in Bajpe PS

“ಫಿರ್ಯಾದಿದಾರರಾದ Mahammed Mustafa ರವರು ದಿನಾಂಕ 24-01-2022 ರಂದು ತನ್ನ ಬಾಬ್ತು ಆಟೋ ರಿಕ್ಷಾ ನಂಬ್ರ ಕೆಎ 19 ಎಸಿ 1272 ನೇಯದರಲ್ಲಿ ತನ್ನ ಸಂಬಂಧಿಕರಾದ ಶ್ರೀಮತಿ ರೆಹಾನ(45) ಮತ್ತು ಅವರ ಮಗಳು ಆಯಿಷಾ ಅಸ್ನಾ(18) ಎಂಬವರನ್ನು ಕರೆದುಕೊಂಡು ಅಡ್ಡೂರಿನಿಂದ ಪೊಳಲಿದ್ವಾರದ ಕಡೆಗೆ ಬರುತ್ತಿರುವಾಗ ಸಮಯ ಸುಮಾರು 13.30 ಗಂಟೆಗೆ  ಮಂಗಳೂರು ತಾಲೂಕು, ತೆಂಕುಳಿಪಾಡಿ ಗ್ರಾಮದ, ನೂಯಿ ಮತ್ತು ಕಾಜಿಲದ ಮಧ್ಯೆ ತಲುಪುತ್ತಿದ್ದಂತೆಯೇ ಎದುರಿನಿಂದ ಅಂದರೆ ಪೊಳಲಿದ್ವಾರದ  ಕಡೆಯಿಂದ ಅಡ್ಡೂರು ಕಡೆಗೆ ಟಿಪ್ಪರ್ ನಂಬ್ರ ಕೆಎ 03 ಸಿ 4461 ನೇಯದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಮುಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರ ತಲೆಗೆ, ಬಲಭುಜ, ಬೆನ್ನು ಮತ್ತು ಎರಡೂ ಕಾಲುಗಳಿಗೆ ಗಾಯವಾಗಿದ್ದು, ರಿಕ್ಷಾದಲ್ಲಿದ್ದ ಪ್ರಯಾಣಿಕರಿಬ್ಬರಿಗೂ ತೀವ್ರ ತರಹದ  ರಕ್ತಗಾಯ ಉಂಟಾಗಿರುತ್ತದೆ. ಗಾಯಾಳುಗಳು ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ” ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 25-01-2022 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080