ಅಭಿಪ್ರಾಯ / ಸಲಹೆಗಳು

Crime Reported in Traffic South Police Station       

ದಿನಾಂಕ :24-04-2022 ರಂದು ಪಿರ್ಯಾದಿ MITHUNA KUMARA SHETTY ದಾರರು ಅಶೋಕನಗರದ ಕಡೆಯಿಂದ ಕೊಲ್ಯ ಕಡೆಗೆ ರಾ. ಹೆ. 66 ಡಾಮಾರು ರಸ್ತೆಯಲ್ಲಿ ಕಾರು ನಂಬ್ರ KA -19-MK -5010 ನೇದನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ10-45 ಗಂಟೆಗೆ  ಜೆಪ್ಪಿನ ಮೋಗೆರು ಜಂಕ್ಷನ್ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಲಾರಿ ನಂಬ್ರ TS-07-UA-2889  ನೇದನ್ನು ಅದರ ಚಾಲಕ ಶ್ರೀನಿವಾಸ ಗೌಡ ಎಂಬಾತನು ಅಮಲು ಪದಾರ್ಥವನ್ನು ಸೇವಿಸಿ ದುಡುಕುತನ ಹಾಗೂ ತೀರಾ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಪಿರ್ಯಾದಿದಾರರ ಕಾರಿನ ಬಲಬದಿಗೆ ಡಿಕ್ಕಿ ಪಡಿಸಿ ನಂತರ ಪಿರ್ಯಾದಿದಾರರ ಮುಂದಿನಿಂದ ಹೋಗುತ್ತಿದ ಸ್ಕೂಟರ ನಂಬ್ರ KA-19-EM-8469 ನೇದಕ್ಕೆ  ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಲಾರಿಯ ಮುಂದಿನ ಎಡಬದಿ ಚಕ್ರದ ಅಡಿಗೆ ಬಿದ್ದು ಸ್ಕೂಟರ್ ಸವಾರ ರೊನಾಲ್ಡೋ ಸುಕುಮಾರ್ ಕರ್ಕಡ ರವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಪಿರ್ಯಾದಿದಾರರು ಗಾಯಾಳುವನ್ನು  ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾತದಿಂಧ ಪಿರ್ಯಾದಿದಾರರ ಕಾರು  ಜಖಂಗೊಂಡಿದ್ದು ಕಾರಿನಲ್ಲಿದ್ದವರಿಗೆ ಯಾವುದೇ ಗಾಯವಾಗಿರುವುದಿಲ್ಲ.ಎಂಬಿತ್ಯಾದಿ.

 

2) ದಿನಾಂಕ:23-04-2022 ರಂದು ಪಿರ್ಯಾದಿ SREEJA ದಾರರು ಹಾಗೂ ಪಿರ್ಯಾದಿದಾರರ ಮಗಳು ಆದರ್ಶ ಮತ್ತು ಅವರ ಅಣ್ಣ ಸುರೇಶ ಟಿ.ಪಿ ಹಾಗೂ ಅಣ್ಣನ ಮಗಳು ಅರ್ಚನಾರವರೊಂದಿಗೆ ಮಂಗಳೂರಿನಿಂದ ದೇರಳಕಟ್ಟೆ ಕಡೆಗೆ KA-19-AC-7190 ನಂಬ್ರದ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿಕೊಂಡು ಹೋಗುತ್ತಾ ಬೆಳಗ್ಗೆ ಸಮಯ ಸುಮಾರು 10:00 ಗಂಟೆಗೆ ಪಂಪ್ ವೆಲ್ ಪ್ಲೈ ಓವರ್ ಬಳಿ ಪಂಪ್ ವೆಲ್ ನಿಂದ ತೊಕ್ಕೊಟ್ಟು ಕಡೆಗೆ ಹೋಗುವ ರಸ್ತೆಯಲ್ಲಿ ತಲುಪುತ್ತಿದ್ದಂತೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ಅದರ ಚಾಲಕ ಶಾಬು ಎಂಬಾತನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಾಗುರಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ KA-19-AC-6214 ನಂಬ್ರದ ಆಟೋರಿಕ್ಷಾದ ಬಲಭಾಗದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಮಗಚಿ ಬಿದ್ದು ಆಟೋರಿಕ್ಷಾದಲ್ಲಿದ್ದ  ಪಿರ್ಯಾದಿದಾರ ಅಣ್ಣ ಸುರೇಶ ಟಿ.ಪಿ ರವರಿಗೆ ಎಡಗೈ ಮೂಳೆ ಮುರಿತದ ಗಾಯವಾಗಿದ್ದು ಪಿರ್ಯಾದಿದಾರರು ಮತ್ತು ಸಹ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ, ಗಾಯಾಳು ಸುರೇಶ  ಟಿ.ಪಿ ರವರನ್ನು ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ್ದ ಸಾರ್ವಜನಿಕರು ಕಂಕನಾಡಿ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಗೆ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ,

 

Crime Reported in Moodabidre PS

ಪಿರ್ಯಾದಿ MUDDAYYA M G ದಾರರ ಮಗಳು ದೇಚಮ್ಮ ಪ್ರಾಯ 21 ವರ್ಷ ಎಂಬುವರು ಮೂಡಬಿದ್ರೆಯ ಖಾಸಗೀ ಕಾಲೇಜಿನಲ್ಲಿ ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್  ವ್ಯಾಸಂಗ ಮಾಡುತ್ತಿದ್ದವರು, ದಿನಾಂಕ: 23-04-2022 ರಂದು ಬೆಳಿಗ್ಗೆ ಸುಮಾರು 9-30 ಗಂಟೆಗೆ ಹಾಸ್ಟೆಲಿನಿಂದ ಮೂಡಬಿದ್ರೆ ಪೇಟೆಗೆ ಹೋಗಿ ಬರುವುದಾಗಿ ಹಾಸ್ಟೆಲಿನಿಂದ ಅನುಮತಿ ಪಡೆದುಕೊಂಡು ಹೋದವರು ಮರಳಿ ಕಾಲೇಜಿಗೂ ಬಾರದೇ ತನ್ನ ಮನೆಗೂ ಹೋಗದೇ ಕಾಣೆಯಾಗಿದ್ದು, ಕಾಣೆಯಾದ ದೇಚಮ್ಮಳನ್ನು ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡಕಾಡಿ ತಡವಾಗಿ ಬಂದು ದೂರು ನೀಡಿರುವುದಾಗಿದೆ.

ಕಾಣೆಯದಾದವರ ಚಹರೆ:

  1. ದೇಚಮ್ಮ ಪ್ರಾಯ: 21 ವರ್ಷ

ಎತ್ತರ: 5.5 ಅಡಿ 

ಮೈಬಣ್ಣ: ಬಿಳಿ  ಮೈ ಬಣ್ಣ

ಶರೀರ: ಸಾಧರಣ ಶರೀರ

ಮುಖ: ಕೋಲು ಮುಖ

ಕೂದಲು: ಕಪ್ಪು ಗುಂಗುರು ಕೂದಲು

ಬಟ್ಟೆ:  ಹಸಿರು ಬಣ್ಣದ ಟಿಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಶೂ ಧರಿಸಿರುತ್ತಾಳೆ 

ಭಾಷೆ: ಕನ್ನಡ ಇಂಗ್ಲೀಷ್, ಹಿಂದಿ, ಕೊಡವ

ಇತ್ತೀಚಿನ ನವೀಕರಣ​ : 25-04-2022 04:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080