ಅಭಿಪ್ರಾಯ / ಸಲಹೆಗಳು

Crime Reported in Mangalore North PS

ಪಿರ್ಯಾದಿದಾರರಾದ ಐಶ್ವರ್ಯ ಶೇಟ್ ರವರು PANCHAMAHAL COMPOUND MPT ROAD, CARSTREET ವಿಳಾಸದಲ್ಲಿ ತಂದೆ ತಾಯಿ ಹಾಗೂ ತಂಗಿಯವರೊಂದಿಗೆ ವಾಸಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ತಂದೆಯವರಾದ ಉಮೇಶ್ ಶೇಟ್(63) ರವರು ಕಾರ್ ಸ್ಟ್ರೀಟ್ ನ ಫ್ಲವರ್ ಮಾರ್ಕೆಟ್ ನಳಿ ಉಮೇಶ್ ಜ್ಯುವೆಲ್ಲರಿ ಎಂಬ ಚಿನ್ನದ ಅಂಗಡಿಯಲ್ಲಿ ಸ್ವಂತ ಕೆಲಸವನ್ನು ಮಾಡಿಕೊಂಡಿರುತ್ತಾರೆ.  ಪಿರ್ಯಾದಿದಾರರ ತಂದೆ ಉಮೇಶ್ ಶೇಟ್ ರವರು ಎಂದಿನಂತೆ ನಿನ್ನೆ ದಿನ ದಿನಾಂಕ 24.05.2022 ರಂದು ಬೆಳಗ್ಗೆ 09:00 ಗಂಟೆಗೆ ಅಂಗಡಿಗೆ ಕೆಲಸಕ್ಕೆಂದು ಹೋಗಿದ್ದು, ವಾಪಾಸ್ಸು ಬೆಳಗ್ಗೆ 10:30 ಗಂಟೆಗೆ ಮನೆಗೆ ಬಂದು ತನ್ನ ಕೈಯಲ್ಲಿದ್ದ ಮೊಬೈಲ್ ಹಾಗೂ ಬೀಗದ ಕೀ ಹಾಕುತ್ತಿದ್ದಂತಹ ಬ್ಯಾಗ್ ನ್ನು ಮನೆಯ ಕಪಾಟಿನಲ್ಲಿ ಇಟ್ಟು ಈಗ ಬರುತ್ತೇನೆ ಎಂದು ಹೇಳಿ ಹೋದವರು ಈವರೆಗೆ ಮನೆಗೆ ಹಿಂತಿರುಗಿ ಬಂದಿರುವುದಿಲ್ಲ . ಸಂಬಂಧಿಕರ ಮನೆಗಳಲ್ಲಿ ಎಲ್ಲಾ ಕಡೆಗೆ ಪೋನ್ ಮಾಡಿ ವಿಚಾರಿಸಿದ್ದು, ಈವರೆಗೂ ಪತ್ತೆಯಾಗಿರುವುದಿಲ್ಲ. ಪಿರ್ಯಾದಿದಾರರ ತಂದೆ ಉಮೇಶ್ ಶೆಟ್ ರವರು ತಮ್ಮ ಮೊಬೈಲ್ ನ್ನು ಸ್ವಿಚ್ಚ್ ಆಫ್ ಮಾಡಿ ಮನೆಯಲ್ಲಿ ಇಟ್ಟು ಹೋಗಿರುತ್ತಾರೆ. ಆದ್ದರಿಂದ ಕಾಣೆಯಾದ ಪಿರ್ಯಾದಿದಾರರ ತಂದೆಯವರಾದ ಉಮೇಶ್ ಶೇಟ್ ರವರನ್ನು ಪತ್ತೆ ಹಚ್ಚಬೇಕಾಗಿ ಎಂಬಿತ್ಯಾದಿಯಾಗಿ ನೀಡಿದ ಲಿಖಿತ ದೂರಿನ ಸಾರಾಂಶ.

ಕಾಣೆಯಾದ ಉಮೇಶ್ ಶೇಟ್ ರವರ  ಚಹರೆ ಗುರುತುಗಳು.

1) ಬಿಳಿ ಮೈಬಣ್ಣ ಸಪೂರ ಶರೀರ . ಪ್ರಾಯ 63 ವರ್ಷ.

2) ಎತ್ತರ- 5 .6 ಅಡಿ

3) ಕನ್ನಡ, ತುಳು,  ಕೊಂಕಣಿ,ಹಿಂದಿ, ಇಂಗ್ಲೀಷ್ ಮಾತಾಡುತ್ತಾನೆ 

04) ವಿದ್ಯಾಬ್ಯಾಸ: ಪಿ ಯು ಸಿ

 

Crime Reported in Mangalore South PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 23-05-2022 ರಂದು ಪ್ರಕರಣದ ಪಿರ್ಯಾದಿದಾರರಾದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪಿಸಿ  ಭಾಸ್ಕರ್ ಹಾಲಾಡಿ ರವರು, ಪಿ ಸಿ  ಜಗದೀಶ್ ರವರ ಜೊತೆ  ಖಾಸಗಿ ಮೋಟಾರ್ ಸೈಕಲ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು, ಠಾಣಾ ವ್ಯಾಪ್ತಿಯ ಪಾಂಡೇಶ್ವರ, ಸುಭಾಷ ನಗರ, ಹೊಯಿಗೆ ಬಜಾರ್, ಮುಳಿಹಿತ್ಲು ಕಡೆಗಳಲ್ಲಿ  ರೌಂಡ್ಸ್ ಕರ್ತವ್ಯ ನಿರ್ವಹಿಸಿ 19-30 ಗಂಟೆ ಸುಮಾರಿಗೆ ಬೋಳಾರ ಮಾರಿಗುಡಿ ಬಳಿ ಇರುವಾಗ ಜ್ವಾಯಲ್ಯಾಂಡ್ ಶಾಲೆಯ ಮೈದಾನದ  ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕ ಗಾಂಜಾ ಸೇವನೆ ಮಾಡುತ್ತಿದ್ದಾನೆ  ಎಂಬುದಾಗಿ  ಖಚಿತ ವರ್ತಮಾನ ಬಂದಂತೆ, ಸದ್ರಿ ಸ್ಥಳಕ್ಕೆ  ತೆರಳಿ, ಗಾಂಜಾ ಸೇವನೆ ಮಾಡುತ್ತಿದ್ದ, ಥೋಮಸ್ ಪ್ರಾಯ: 21 ವರ್ಷ,  ವಾಸ: ಕೊಡೆಕನ್ ಹೌಸ್, ಚೆರುವರ್ ಕಣ್ಣೂರು, ಕೇರಳ ರಾಜ್ಯ  ಎಂಬಾತನನ್ನು, 19-50 ಗಂಟೆಗೆ ವಶಕ್ಕೆ ಪಡೆದುಕೊಂಡು ವಿಚಾರಿಸಿದಾಗ  ಆರೋಪಿಯು  ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು,    ವೈದ್ಯಕೀಯ  ತಪಾಸಣೆಗೆ ಒಳಪಡಿಸಿದಾಗ, ಆರೋಪಿಯು ಗಾಂಜಾ ಸೇವನೆ ನಡೆಸಿರುವುದು ದೃಢಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ-27 (ಬಿ) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

Crime Reported in Moodabidre PS

ಪಿರ್ಯಾದಿ NIRANJAN KUMAR K E PI ದಾರರು ಠಾಣಾ ಸಿಬ್ಬಂದಿಯವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 12.30 ಗಂಟೆಗೆ ಮೂಡಬಿದ್ರೆ ತಾಲೂಕು ಮಾರ್ಪಾಡಿ ಗ್ರಾಮದ ಕೋಟೆಬಾಗಿಲು ಬಳಿಯಲ್ಲಿರುವ ನಿರ್ಜನ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಗಾಂಜಾ ಸೇವನೆ ಮಾಡುತ್ತಿದ್ದಾರೆ ಎಂಬುದಾಗಿ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿದಾಗ 1) ಮೊಹಮ್ಮದ್ ಆಶಿಕ್ ಪ್ರಾಯ 19 ವರ್ಷ ವಾಸ: ಕೋಟೆಬಾಗಿಲು ಮಾರಿಗುಡಿ ದೇವಾಸ್ಥಾನ ಬಳಿ ಮಾರ್ಪಾಡಿ ಗ್ರಾಮ ಮೂಡಬಿದ್ರೆ ತಾಲೂಕು ಎಂಬವರನ್ನು ದಿನಾಂಕ: 24-05-2022 ರಂದು 12.45 ಗಂಟೆಯ ಸಮಯಕ್ಕೆ ವಶಕ್ಕೆ ಪಡೆದಲ್ಲಿ ಇವನು ಯಾವುದೋ ಅಮಲು ಪದಾರ್ಥ ಸೇವಿಸಿದ ರೀತಿಯಲ್ಲಿ ಕಂಡು ಬಂದುದರಿಂದ ಇವರನ್ನು ವೈದ್ಯಾಧಿಕಾರಿಯವರು, ಎ. ಜೆ ಆಸ್ಪತ್ರೆ ಕುಂಟಿಕಾನ, ಮಂಗಳೂರು ತಾಲೂಕು ಇಲ್ಲಿ ತಪಾಸಣೆಗೊಳಪಡಿಸಿದಾಗ ಈತನು ಗಾಂಜಾ ಸೇವಿಸಿರುವ ಬಗ್ಗೆ ದೃಡಪಟ್ಟಿದ್ದರಿಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ  ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 25-05-2022 08:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080