Crime Reported in : CEN Crime PS
M/S Yash World Habitat and Projects PVT Ltd ಕಂಪೆನಿಯಾ ಚೇರ್ ಮೆನ್ ಸುರೇಶ್ ರೈ ಹಾಗೂ ನಿರ್ಧೇಶಕರುಗಳಾದ ಪ್ರವೀಣ್ ಕುಮಾರ್ ಶೆಟ್ಟಿ, ಜಯಂತ್.ಜೆ.ಕೋಟ್ಯಾನ್, ತಾರನಾಥ ತೇವು, ವೇಣುಗೋಪಾಲ ಮಾರ್ಲ, ರವಿಚಂದ್ರ ಅಗರಿ, ಕೊಡ್ಲಮೊಗರು, ಪುರುಷೋತ್ತಮ ಎಂಬವರು ಮಂಗಳೂರು ತಾಲೂಕು ಪಚ್ಚನಾಡಿ ಗ್ರಾಮದ ಸರ್ವೇ ನಂಬ್ರ:122-2ಎ ರಲ್ಲಿ 0-37.00, & 122-2ಬಿ1ರಲ್ಲಿ 0-35.00 & 122-4ಎರಲ್ಲಿ 0-13.00 & 122-4ಎರಲ್ಲಿ 0-07.00 & 122-4ಎರಲ್ಲಿ 0-06.55 ಒಟ್ಟು 0.98.55 ಎಕ್ರೆ ಜಾಗದಲ್ಲಿ ವಾಸ್ತವ್ಯ ಯೋಗ್ಯ ಅಪಾರ್ಟ್ ಮೆಂಟ್ ನಿರ್ಮಾಣದ ಬಗ್ಗೆ ಈ ಪ್ರಕರಣದ ಫಿರ್ಯಾದಿ ದೂರುದಾರರಾದ ಸದಾನಂದ ರೈ ಎಂಬವರೊಂದಿಗೆ ದಿನಾಂಕ:04-06-2015 ರಂದು M/S Yash World Habitat and Projects PVT Ltd ಕಂಪೆನಿಯಾ ಜೊತೆ ಡೆವಲಪರ್ ಆಗಿ Joint Development Agreement ಮಾಡಿಕೊಂಡ ಬಳಿಕ ಆರೋಪಿತರೆಲ್ಲಾ ಫಿರ್ಯಾದಿಗೆ ಅರಿವಿಗೆ ಬಾರದಂತೆ ಅಪಾರ್ಟ್ ಮೆಂಟ್ ಕಟ್ಟಲು ಇಚ್ಚಿಸಿದ ಸ್ಥಿರಾಸ್ತಿಯನ್ನು ಸುರೇಶ್ ರೈ ಅಧ್ಯಕ್ಷರಾಗಿರುವ ಮಂಗಳೂರಿನ ಶ್ರೀ ಒಡಿಯೂರು ವಿವಿದ್ದೊದ್ದೇಶ ಸಹಕಾರಿ ಸಂಘ [ನಿ] ಬ್ಯಾಂಕಿನಲ್ಲಿ ಜನರಲ್ ಮ್ಯಾನೇಜರ್ ಉಗ್ಗಪ್ಪ ಶೆಟ್ಟಿಯವರ ಮುಖಾಂತರ ರೂ.4 ಕೋಟಿ ಸಾಲಕ್ಕೆ ಅಡಮಾನ ಇರಿಸಿದ ಬಳಿಕ ಅದೇ ಆಸ್ತಿಯಲ್ಲಿ 3% ಅವಿಭಜಿತ ಹಕ್ಕನ್ನು ಫಿರ್ಯಾದಿಯ ಹೆಸರಿನಲ್ಲಿ ಸೇಲ್ ಡೀಡ್ ಮಾಡಿ ಮಂಗಳೂರು ತಾಲೂಕು ಉಪ ನೋಂದಣಾಧಿಕಾರಿಯಲ್ಲಿ ನೊಂದಣಿ ಮಾಡಿಸಿಕೊಟ್ಟಂತೆ ಆರೋಪಿತರನೆಲ್ಲಾ ನಂಬಿದ ಫಿರ್ಯಾದಿ ಸ್ಥಳದಲ್ಲಿ ಕಟ್ಟಡ ಕಟ್ಟುವ ಕೆಲಸ ಪ್ರಾರಂಬಿಸಿ ರೂ.3,82,00,755/- ಹಣವನ್ನು ಖರ್ಚು ಮಾಡಿರುತ್ತಾರೆ. ಬಳಿಕ ಆರೋಪಿತರ ಕೃತ್ಯದ ಬಗ್ಗೆ ಫಿರ್ಯಾದಿದಾರರಿಗೆ ಗೊತ್ತಾದ ಬಳಿಕ ಆರೋಪಿತರಲ್ಲಿ ವಿಚಾರಿಸಿದಲ್ಲಿ ಆರೋಪಿತರೆಲ್ಲಾ ಫಿರ್ಯಾಧಿ ಖರ್ಚು ಮಾಡಿದ ಹಣವನ್ನು ವಾಪಸು ನೀಡುವುದಾಗಿ ಕಾಲಾವಕಾಶ ಕೇಳಿ ಈ ವರೆಗೂ ಹಣ ನೀಡದೆ ಸತಾಯಿಸಿದ್ದು, ಆರೋಪಿತರೆಲ್ಲಾ ಸಮಾನ ದುರುದ್ದೇಶದಿಂದ ಫಿರ್ಯಾದಿದಾರರನ್ನು ನಂಬಿಸಿ ವಂಚಿಸಿ ಭಾರಿ ನಷ್ಟವನ್ನುಂಟು ಮಾಡಿರುವುದು ಎಂಬಿತ್ಯಾದಿ
Crime Reported in : Mulki PS
“ದಿನಾಂಕ 24-07-2022 ರಂದು ಮಂಗಳೂರು ತಾಲೂಕು ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಎಂಬಲ್ಲಿ ಬೋಜ ಅಮೀನ್ ಕಾಂಪ್ಲೆಕ್ಸ್ ಹಿಂದುಗಡೆ, ಸಾರ್ವಜನಿಕ ಸ್ಥಳದಲ್ಲಿ ಕೆಲವು ಯುವಕರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟು ಉಲಾಯಿ- ಪಿದಾಯಿ ಎಂಬ ನಸೀಬಿನ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನ ಮೇರೆಗೆ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಕುಸುಮಾಧರ.ಕೆ ರವರು ಪಂಚರೊಂದಿಗೆ, ಸದ್ರಿ ಸ್ಥಳಕ್ಕೆ 17.30 ಗಂಟೆಗೆ ದಾಳಿ ಮಾಡಿ 8 ಮಂದಿ ಆರೋಪಿಗಳು ಹಾಗೂ ಆರೋಪಿಗಳ ವಶದಲ್ಲಿದ್ದ ಒಟ್ಟು 6030=00 ರೂ. ಹಣ ಮತ್ತು ಜೂಜಾಟಕ್ಕೆ ಉಪಯೋಗಿಸಿದ ಹಸಿರು ,ಬಿಳಿ ಕಂದು ಬಣ್ಣದ ಡಿಸೈನ್ ನ ಬೆಡ್ ಶೀಟ್- 01, ಜೂಜಾಟಕ್ಕೆ ಬಳಸಿದ ಇಸ್ಫೀಟ್ ಎಲೆ-52, ಗಳನ್ನು ಸ್ವಾಧೀನ ಪಡಿಸಿ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ.
2) ದಿನಾಂಕ 24-07-2022 ರಂದು 10-45 ಗಂಟೆಗೆ ಪಿರ್ಯಾದಿದಾರರಿಗೆ ಕಾರ್ನಾಡು ಗ್ರಾಮದ ಲಿಂಗಪ್ಪಯ್ಯಕಾಡು ಆಶ್ರಯ ಕಾಲೊನಿ ಬಳಿ ಇರುವ ಸಾರ್ವಜನಿಕ ರಸ್ತೆಯ ಬದಿಗೆ ಇರುವ ಮೋರಿಯ ಬಳಿಯಲ್ಲಿ ಸಂಜೀವ ಎಂಬಾತನು ಗಾಂಜಾವನ್ನು ಹೊಗೆಬತ್ತಿಯೊಂದಿಗೆ ಸೇವನೆ ಮಾಡುತ್ತಿರುವವನನ್ನು ವಶಕ್ಕೆ ಪಡೆದು ಎ.ಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಲ್ಲಿ ಆರೋಪಿಯು ಗಾಂಜಾ ಸೇವನೆ ಮಾಡಿರುವುದು ಧೃಡ ಪಟ್ಟ ಮೇರೆಗೆ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿಯಾಗಿದೆ.
Crime Reported in : Konaje PS
ಪಿರ್ಯಾದಿದಾರರ H Ismail ತಮ್ಮನಾದ ಅಬ್ದುಲ್ ಜಬ್ಬಾರ್ ಪ್ರಾಯ 42 ವರ್ಷ ಎಂಬವರು ಬೆಳ್ಮ ಗ್ರಾಮದ ದೇರಳಕಟ್ಟೆ ಬದ್ಯಾರ್ ಗುಡ್ಡೆಮಾರ್ ಎಂಬಲ್ಲಿ ತನ್ನ ಹೆಂಡತಿ ನೂರ್ ಜಹಾನ್ ಮತ್ತು ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ಅಬ್ದುಲ್ ಜಬ್ಬಾರ್ ರವರು ಈ ಹಿಂದೆ ದೇರಳಕಟ್ಟೆಯಲ್ಲಿ ಸ್ವಂತ ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡಿದ್ದು ಒಂದು ತಿಂಗಳ ಹಿಂದೆ ಈ ಮೊಬೈಲ್ ಶಾಪ್ ನ್ನು ಬೇರೆಯವರಿಗೆ ಮಾರಿ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇರುತ್ತಾರೆ. ದಿನಾಂಕ 23.07.2022 ರಂದು ಮದ್ಯಾಹ್ನ 3.00 ಗಂಟೆಗೆ ಅಬ್ದುಲ್ ಜಬ್ಬಾರ್ ರವರು ತನ್ನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ತನ್ನ ಮನೆಯಿಂದ ಈಗ ಬರುತ್ತೇನೆಂದು ಹೇಳಿ ಹೋದವರು ರಾತ್ರಿಯಾದರೂ ಮನೆಗೆ ವಾಪಾಸ್ ಬಾರದೇ ಇದ್ದುದ್ದರಿಂದ ಅಬ್ದುಲ್ ಜಬ್ಬಾರ್ ರವರ ಹೆಂಡತಿ ನೂರ್ ಜಹಾನ್ ರವರು ಪಿರ್ಯಾದಿದಾರರಿಗೆ ಫೋನ್ ಮಾಡಿ ತಿಳಿಸಿದ್ದು ಈ ವಿಚಾರವನ್ನು ತನ್ನ ಅಣ್ಣಂದಿರಿಗೆ ತಿಳಿಸಿ ಎಲ್ಲಾ ಕಡೆ ಮತ್ತು ನೆರೆಕೆರೆಯವರಲ್ಲಿ, ಸಂಬಂಧಿಕರಲ್ಲಿ ಕರೆ ಮಾಡಿ ವಿಚಾರಿಸಿದಾಗ ಇಲ್ಲಿಯ ತನಕ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಅಬ್ದುಲ್ ಜಬ್ಬಾರ್ ನ ಪತ್ತೆಯ ಬಗ್ಗೆ ನೆರೆಕೆರೆಯವರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿ ಪತ್ತೆಯಾಗದೇ ಇರುವುದರಿಂದ ಈ ದಿನ ಠಾಣೆಗೆ ದೂರು ನೀಡಿರುತ್ತಾರೆ ಎಂಬಿತ್ಯಾದಿ.
Crime Reported in : Traffic South PS
ದಿನಾಂಕ 23-07-2022 ರಂದು ಪಿರ್ಯಾದಿದಾರರು ASHRAF ಮೋಟಾರ್ ಸೈಕಲ್ ನಂಬರ್ KA-19-EZ-9935 ನೇದರಲ್ಲಿ ಸಹ ಸವಾರರಾಗಿಯು ಮತ್ತು ಅವರ ಸಂಬಂಧಿಯಾದ ಅಹಮ್ಮದ್ ಕಬೀರ್ ರವರು ಸವಾರರಾಗಿ ಮೋಟಾರ್ ಸೈಕಲನ್ನು ಬೋಳಿಯಾರ್ ನಿಂದ ಗ್ರಾಮ ಚಾವಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು 16:00 ಗಂಟೆಗೆ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಪಾಣೇಲ ಬಳಿಯ ತಿರುವು ರಸ್ತೆಯಲ್ಲಿ ತಲುಪುತ್ತಿದ್ದಂತೆ ಅವರ ಎದುರಿನಿಂದ ಅಂದರೆ ಗ್ರಾಮ ಚಾವಡಿ ಕಡೆಯಿಂದ ಪಿಕ್ ಅಪ್ ನೊಂದಣಿ ಸಂಖ್ಯೆ KA-17-B-9781 ನೇದನ್ನು ಅದರ ಚಾಲಕ ಪರಶುರಾಮ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುತ್ತಿರುವಾಗ ಪಿರ್ಯಾದಿದಾರರು ಕುಳಿತಿದ್ದ ಮೋಟಾರ್ ಸೈಕಲ್ ನ್ನು ಅದರ ಸವಾರ ಅಹಮ್ಮದ್ ಕಬೀರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಪಿಕ್ ಅಪ್ ವಾಹನದ ಮುಂಭಾಗ ಮೋಟಾರ್ ಸೈಕಲ್ ನ ಸೈಲೆನ್ಸರ್ ನ ಬಳಿ ಇದ್ದ ಪಿರ್ಯಾದಿದಾರರ ಬಲ ಕಾಲಿಗೆ ಡಿಕ್ಕಿಯಾದ ಪರಿಣಾಮ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ ಸಾರ್ವಜನಿಕರು ಮತ್ತು ಮೋಟಾರ್ ಸೈಕಲ್ ಸವಾರ ಆಟೋರಿಕ್ಷಾವೊಂದರಲ್ಲಿ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ
2) ಪಿರ್ಯಾದಿದಾರರು ABDUL RASHEED ರವರು ದಿನಾಂಕ:14-07-2022 ರಂದು ತಮ್ಮ ಬಾಬ್ತು ಸ್ಕೂಟರ್ ನಂಬ್ರ KA-19-HJ-0554 ನೇದರಲ್ಲಿ ಪಿರ್ಯಾದಿದಾರರು ಸವಾರನಾಗಿ ಹಾಗೂ ಹೆಂಡತಿ ಸಪ್ನಾಝ್ ಹಾಗೂ ಮಗಳು ಫಾತಿಮ ನುಸ್ರಾತ್ (6) ರವರನ್ನು ಸಹ ಸವಾರಳನಾಗಿ ಕುಳ್ಳಿರಿಸಿಕೊಂಡು ಸವಾರಿಮಾಡಿಕೊಂಡು ನರಿಂಗಾನದಿಂದ ನಾಟೆಕಲ್ ಕಡೆಗೆ ಬರುತ್ತಿರುವ ಸಮಯ ಸುಮಾರು ಬೆಳಗ್ಗೆ 10:00 ಗಂಟೆಗೆ ಮಂಜನಾಡಿ ನರಿಂಗಾನ ಕ್ರಾಸ್ ಎಂಬಲ್ಲಿಗೆ ತಲುಪಿದಾಗ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರ್ ಮುಂಭಾಗದಿಂದ ಬರುತ್ತಿದ್ದ ಕಾರು ನಂಬ್ರ KL-14-M-2010 ನೇದರ ಚಾಲಕ ಅಫೀಝ್ ರವರು ದುಡುಕುತನ ಹಾಗೂ ನಿರ್ಲಕ್ಷತನದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್ಗೆ ಮುಂದಿನಿಂದ ಡಿಕ್ಕಿ ಪಡಿಸಿದ್ದು ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಸಪ್ನಾಝ್ ಹಾಗೂ ಫಾತಿಮ ನುಸ್ರಾತ್ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಪಿರ್ಯಾದಾರರ ಬಲಗಾಲಿಗೆ ಮೂಳೆ ಮುರಿತದ ಗಾಯ , ಹೆಂಡತಿ ಸಪ್ನಾಝ್ ಳಿಗೆ ಎಡಗಾಲಿನ ಹೆಬ್ಬರಳಿಗೆ ಮೂಳೆಮುರಿತದ ಗಾಯ ಹಾಗೂ ಮಗಳು ಫಾತಿಮ ನುಸ್ರಾತ್ (6) ರವರಿಗೆ ಕುತ್ತಿಗೆ ಕೆಳಗಡೆ ಮೂಳೆ ಮುರಿತದ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಅವರನ್ನು ಚಿಕಿತ್ಸೆ ಬಗ್ಗೆ ಕಣಚೂರು ಆಸ್ಪತ್ರೆಯಲ್ಲಿ ದಾಖಲಿಸಿದ್ದು ಅಲ್ಲಿಂದ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿರುತ್ತಾರೆ. ನಂತರ ದಿನಾಂಕ 18-07-2022 ರಂದು ಪಿರ್ಯಾದಿದಾರರ ಹೆಂಡತಿ ಸಪ್ನಾಝ್ ಳಿಗೆ KS HEGDE ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಂಡು ಮನೆಗೆ ತೆರಳಿರುತ್ತಾರೆ, ಮತ್ತೆ ದಿನಾಂಕ 21-07-2022 ರಂದು ಮಗಳು ಫಾತಿಮಾ ನುಸ್ರತಾಳಿಗೆ ಗಾಯ ಉಲ್ಬಣಗೊಡಿದ್ದು ಮತ್ತೆ KS HEGDE ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ತೆರಳಿರುತ್ತಾರೆ. ದಿನಾಂಕ 24-07-2022 ರಂದು ಪಿರ್ಯಾದಿದಾರರು ಹಾಗೂ ಅವರ ಹೆಂಡತಿ ಸಪ್ನಾಝ್ ಳಿಗೆ ಮತ್ತು ಫಾತಿಮ ನುಸ್ರಾತ್ ಳಿಗೆ ಗಾಯ ಉಲ್ಬಣಗೊಂಡಿದ್ದರಿಂದ ಚಿಕಿತ್ಸೆ ಬಗ್ಗೆ ಯೆನಪೋಯಾ ಆಸ್ಪತ್ರೆಗೆ ತೆರಳಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.
Crime Reported in : Moodabidre PS
ದಿನಾಂಕ 24/07/2022 ರಂದು ರಾತ್ರಿ ಸುಮಾರು 21.00 ಗಂಟೆ ಸಮಯದಲ್ಲಿ ಪಿರ್ಯಾದುದಾರರು B Rathnakara Kamath ಮೂಡಬಿದ್ರೆಯ ಹಳೆ ಬಸ್ ನಿಲ್ದಾಣದಲ್ಲಿರುವ ತಮ್ಮ ’ಕಾಮತ್ ಸ್ವೀಟ್ಸ್’ ಎಂಬ ಹೆಸರಿನ ಬೇಕರಿಯಲ್ಲಿನ ವ್ಯವಹಾರವನ್ನು ಮುಗಿಸಿ ಬೀಗ ಹಾಕಿಕೊಂಡು ಹೋಗಿದ್ದು, ನಂತರ ದಿನಾಂಕ 25/07/2022 ರಂದು ಬೆಳಿಗ್ಗೆ ಬೇಕರಿಗೆ ಬಂದು ನೋಡಿದಾಗ ಕಳ್ಳರು ಅಂಗಡಿಯ ಒಳಗಿನ ಹೆಂಚಿನ ಚಾವಣಿಯನ್ನು ತೆರೆದು ಒಳಗೆ ಪ್ರವೇಶಿಸಿ 5 ಸಾವಿರ ನಗದು , ಒಂದು ಮೊಬೈಲ್ ಫೋನ್ ಹಾಗೂ ಸಿ.ಸಿ ಟಿವಿ & ಡಿ.ವಿ.ಆರ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ