ಅಭಿಪ್ರಾಯ / ಸಲಹೆಗಳು

Crime Reported  in Mangalore East Traffic PS

ದಿನಾಂಕ: 19-08-2021 ರಂದು ಪಿರ್ಯಾದಿ MOHAMMED ARHAN ದಾರರು ತನ್ನ ಬಾಬ್ತು KA-19-EP-4599 ನಂಬ್ರದ ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ಕುಂಟಿಕಾನ ಕಡೆಯಿಂದ ಕೆಪಿಟಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯಲ್ಲಿ ಹೋಗುತ್ತಾ ರಾತ್ರಿ ಸಮಯ ಸುಮಾರು 7:30 ಗಂಟೆಗೆ SKS ಜಂಕ್ಷನ್ ನ ತೆರೆದ ಡಿವೈಡರ್ ಬಳಿ ತಲುಪುತ್ತಿದ್ದಂತೆ SKS ಜಂಕ್ಷನ್ ಬಳಿ ಕೆಪಿಟಿ ಕಡೆಯಿಂದ ಕುಂಟಿಕಾನ ಕಡೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ನೇ ಡಾಮಾರು ರಸ್ತೆಯಲ್ಲಿ ಕೆಪಿಟಿ ಕಡೆಯಿಂದ KA-19-ML-4474 ನಂಬ್ರದ ಬ್ರೀಜಾ ಕಾರನ್ನು ಅದರ ಚಾಲಕ ಪ್ರಮೋದ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು SKS ಜಂಕ್ಷನ್ ಬಳಿ ತೆರೆದ ಡಿವೈಡರ್ ನಲ್ಲಿ ತನ್ನ ಕಾರನ್ನು ಕೆಪಿಟಿ ಕಡೆಗೆ ಹೋಗಲು U ಟರ್ನ್ ಮಾಡುವ ವೇಳೆ ಪಿರ್ಯಾದಿದಾರರ ಮೋಟಾರು ಸೈಕಲಿನ ಬಲಬದಿಗೆ ಢಿಕ್ಕಿ ಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ಢಿಕ್ಕಿ ಪಡಿಸಿದ ಕಾರಿನ ಎಡಭಾಗದ ಕಿಟಕಿ ಗಾಜಿಗೆ ಬಡಿದು ನಂತರ ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಗದ್ದಕ್ಕೆ ರಕ್ತಗಾಯ, ಎಡದವಡೆಯ ಭಾಗಕ್ಕೆ ಗುದ್ದಿದ ಗಾಯ, ಬಲಭುಜಕ್ಕೆ ಗುದ್ದಿದ ಗಾಯ, ಬಲಮೊಣಕೈ, ಕೋಲು ಕೈ ಮತ್ತು ಅಲ್ಲಲ್ಲಿ ಬೆರಳಿನಲ್ಲಿ ತರಚಿದ ಗಾಯ, ಎಡಕೈ ಬೆರಳು, ಕೋಲು ಕೈ, ಮುಂಗೈ ಬಳಿ ತರಚಿದ ಗಾಯ, ಬಲಮೊಣಕಾಲು, ಕೋಲು ಕಾಲು, ಎಡಮೊಣಕಾಲು, ಪಾದದ ಗಂಟಿನ ಬಳಿ ತರಚಿದ ರಕ್ತಗಾಯವಾಗಿದ್ದು, ಈ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

Crime Reported  in Traffic North PS

ದಿನಾಂಕ: 25-08-2021 ರಂದು ಪಿರ್ಯಾದಿದಾರರಾದ ಹಸೈನಾರ್ ರವರು ತನ್ನ ಬಾಬ್ತು KA-19-EN-9505 ನಂಬ್ರದ ಸ್ಕೂಟರಿನಲ್ಲಿ  ಸುರತ್ಕಲ್ ಕಡೆಯಿಂದ ತನ್ನ ಮನೆ ಕಡೆಗೆ ಬರುತ್ತಾ ಬೆಳಿಗ್ಗೆ ಸಮಯ ಸುಮಾರು 11:40 ಗಂಟೆಗೆ ಸುರತ್ಕಲಿನ ಗೋವಿಂದ ದಾಸ್ ಕಾಲೇಜು ಸಮೀಪ ಬರುತ್ತಿದ್ದಂತೆ ರಸ್ತೆಯ ಎಡಬದಿಯಲ್ಲಿ ಪ್ರಯಾಣಿಕರನ್ನು ಹತ್ತಿಸುವ ಸಲ್ಲುವಾಗಿ ನಿಲ್ಲಿಸಿದ್ದ KA-20-AA-6049 ನಂಬ್ರದ ಖಾಸಗಿ ಎಕ್ಸ್ ಪ್ರೆಸ್ ಬಸ್ಸನ್ನು ಅದರ ಚಾಲಕನಾದ ಪ್ರದೀಪ್ ಪೂಜಾರಿ ಎಂಬತನ್ನು ನಿರ್ಲಕ್ಷತನದಿಂದ ತನ್ನ ಬಸ್ಸನ್ನು ಒಮ್ಮೆಲೇ ಮುಂದಕ್ಕೆ ಬಲಕ್ಕೆ ಚಲಾಯಿಸಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು. ಸ್ಕೂಟರಿನ ಎದುರಿನ ಎಡಭಾಗ ಜಖಂಗೊಂಡಿರುತ್ತದೆ ಎಂಬಿತ್ಯಾದಿ.

Crime Reported  in Bajpe PS

 “ಫಿರ್ಯಾದಿ Bikram Sahu ದಾರರ ದೊಡ್ಡಪ್ಪನ ಮಗ ಮಾನಶ್ ಸಾಹು (27 ವರ್ಷ) ಎಂಬವರು ಗಂಜಿಮಠ ಬಿಗ್ ಬ್ಯಾಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು, ಮಂಗಳೂರು ತಾಲೂಕು, ಬಡಗುಳಿಪಾಡಿ ಗ್ರಾಮದ, ಮಳಲಿ ಎಂಬಲ್ಲಿರುವ ಡಾ|ಸತೀಶ್ ಶಂಕರ್ ರವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸದ್ರಿ ಮಾನಶ್ ಸಾಹು ಈತನು ದಿನಾಂಕ 18.08.2021 ರಂದು ಸಂಜೆ 5:00 ಗಂಟೆಗೆ ಸದ್ರಿ ಬಾಡಿಗೆ ಮನೆಯಿಂದ ಮಾರ್ಕೆಟಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ವಾಪಾಸ್ಸು ಬಾರದೇ ಇದ್ದು ಆತನ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿದ್ದು ಈತನ ಬಗ್ಗೆ ಸುತ್ತಮುತ್ತ ಪರಿಸರದಲ್ಲಿ ಮತ್ತು ಆತನ ಊರಾದ ಒಡಿಸ್ಸಾದಲ್ಲಿ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ” ಎಂಬಿತ್ಯಾದಿ

ಕಾಣೆಯಾದವನ ಚಹರೆ:

ಹೆಸರು : ಮಾನಶ್ ಸಾಹು, ಪ್ರಾಯ: 27 ವರ್ಷ,

ತಂದೆ: ದಿ|ಕಾರ್ತಿಕ್ ಚಂದ್ರ ಸಾಹು

ಎತ್ತರ : 5”8” ಅಡಿ

ಮೈಕಟ್ಟು : ಸಪೂರ ಶರೀರ, ಎಣ್ಣೆಗಪ್ಪು ಮೈ ಬಣ್ಣ

Crime Reported  in Kavoor PS             

ಫಿರ್ಯಾದಿ LAWRENCE ROSHAN D’SA ದಾರರು ದಿನಾಂಕ 25/08/2021 ರಂದು ಬೆಳಗ್ಗೆ ಸಮಯ ಸುಮಾರು 08:30 ಗಂಟೆಗೆ ಅವರ ತಮ್ಮನಾದ ಅನಿಲ್ ಸ್ವೀವನ್ ಡೇಸಾ ರವರೊಂದಿಗೆ ಬೈಕ್ ನಲ್ಲಿ ಕೂಳೂರು ಕಡೆಗೆ ತೆರಳುವ ಸಮಯದಲ್ಲಿ ಉರುಂದಾಡಿಗುಡ್ಡೆಯ ಬದ್ರಿಯಾ ಅಂಗಡಿಯ ಬಳಿ ಫಿರ್ಯಾದಿದಾರರನ್ನು ಉದ್ದೇಶಿಸಿ ಪ್ರಿಯಾಸ್ ಭಂಡಾರಿ ಎಂಬಾತನು ಬೆವರ್ಸಿ ಮಗ, ಮತ್ತು  ಮಗ ಎಂದು ಬೈದು ಅಲ್ಲೆ ಅಂಗಡಿಯ ಬಳಿ ಬಿದ್ದಿದ್ದ ಸೋಡ ಬಾಟಲಿಯಿಂದ ಫಿರ್ಯಾದಿದಾರರ ಗಲ್ಲದ ಬಳಿ ಇರಿದು ಗಾಯಗೊಳಿಸಿ ಅವರ ತಮ್ಮನಿಗೆ ಕೈ ಬೆರಳಿಗೆ ತಾಗಿಸಿ ಗಾಯಗೊಳಿಸಿರುವುದಾಗಿದೆ ಎಂಬಿತ್ಯಾದಿ.

Crime Reported  in Mangalore Rural PS

ತಾರೀಕು 24-08-2021 ರಂದು ಪಿರ್ಯಾದಿ Sureshkumar Y ದಾರರು ರೌಂಡ್ಸ ಕರ್ತವ್ಯದಲ್ಲಿರುತ್ತಾ ಸಂಜೆ 18-00 ಗಂಟೆಗೆ ತಿರುವೈಲು ಗ್ರಾಮದ ವಾಮಂಜೂರಿನ ಆಶ್ರಯ ಕಾಲೋನಿ 3 ಸೆಂಟ್ಸ್ ಎಂಬಲ್ಲಿ  ಮಾದಕ ವಸ್ತುವಾದ ಗಾಂಜ ಸೇವನೆ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಶಾರೂಕ್ ಎಂಬಾತನನ್ನು ವಶಕ್ಕೆ ಪಡೆದು ಸ್ವ ಪಿರ್ಯಾದಿಯಂತೆ ಪ್ರಕರಣ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 25-08-2021 08:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080