ಅಭಿಪ್ರಾಯ / ಸಲಹೆಗಳು

Crime Reported in Moodabidre PS

ದಿನಾಂಕ: 24-09-2021 ರಂದು ಪಿರ್ಯಾದಿ Larsan Sequire ದಾರರು ತನ್ನ ಮೋಟಾರು ಸೈಕಲ್ ನಲ್ಲಿ ತನ್ನ ಮನೆಯಾದ ವಿದ್ಯಾಗಿರಿಯಿಂದ ಅಶ್ವಥಪುರ ಕಡೆಗೆ ಹೋಗುತ್ತಾ ಮುಲ್ಕಿ ಕ್ರಾಸ್ ಎಂಬಲ್ಲಿ ತನ್ನ ಮೋಟಾರು ಸೈಕಲ್ ನ್ನು  ಬಲಗಡೆಗೆ ಇಂಡಿಕೇಟರ್ ನ್ನು ಹಾಕಿ ತಿರುಗಿಸಿ ಮುಲ್ಕಿ ರಸ್ತೆಗೆ ತಲುಪುವ ಸಮಯ ಸುಮಾರು 08:30 ಗಂಟೆಗೆ ಹಂಡೇಲು ಕಡೆಯಿಂದ ಮೂಡಬಿದರೆ ಕಡೆಗೆ ಒರ್ವ ಮೋಟಾರು ಸೈಕಲ್ ಸವಾರನು ಸಹಸವಾರನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನ ಎಡಗಡೆಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ಎಡಕಾಲಿನ ತೊಡೆಗೆ, ಎಡಭುಜಕ್ಕೆ, ಕುತ್ತಿಗೆಗೆ ರಕ್ತಗಾಯವಾಗಿದ್ದು, ಅಪಘಾತಪಡಿಸಿದ ಮೋಟಾರು ಸೈಕಲ್ ಯಮಹಾ ಕಂಪೆನಿಯ ನಂಬ್ರ ಪ್ಲೇಟ್ ಇಲ್ಲದ ಹೊಸ ಮೋಟಾರು ಸೈಕಲ್ ಆಗಿದ್ದು, ಅದರ ಸವಾರ ಹೆಸರು ರಕ್ಷಣ್ ಆಗಿದ್ದು, ಆತನಿಗೂ ಅಪಘಾತದಿಂದ ರಕ್ತಗಾಯವಾಗಿರುತ್ತದೆ. ಅದರ ಸಹಸವಾರನ ಹೆಸರು ನಿತೇಶ್ ಆಗಿದ್ದು, ಆತನಿಗೆ ತರಚಿದ ನಮೂನೆಯ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಹೊಸ ಯಮಹಾ ಕಂಪೆನಿಯ ಮೋಟಾರು ಸೈಕಲ್ ಸವಾರ ರಕ್ಷಣ್ ನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.

 

2) ಪಿರ್ಯಾದಿ Evgen Vinod Soans ದಾರರು ಕೃಷಿಕರಾಗಿದ್ದು, ದಿನಾಂಕ: 20-09-2021 ರಂದು ತನ್ನ ಕೃಷಿ ಭೂಮಿಯಲ್ಲಿ ಹುಲ್ಲು ತೆಗೆಯುವ ಯಂತ್ರದಿಂದ ಕೆಲಸಗಾರರಲ್ಲಿ ಕೆಲಸ ಮಾಡಿಸಿ ಸಂಜೆ ಸಮಯ ಸುಮಾರು 17:00 ಗಂಟೆಯ ವೇಳೆಗೆ ಸದ್ರಿ ಹುಲ್ಲು ತೆಗೆಯುವ ಮಿಷನ್ ನನ್ನು ತನ್ನ ಮನೆಯ ಎದುರು ಇರಿಸಿದ್ದು, ದಿನಾಂಕ:  ದಿನಾಂಕ: 24-08-2021 ರಂದು ಬೆಳಿಗ್ಗೆ 09-00 ಗಂಟೆಯ ಸಮಯಕ್ಕೆ ಹುಲ್ಲು ತೆಗೆಯುವ ಸಲುವಾಗಿ ಮಿಷನ್ ಇಟ್ಟಿದ್ದ ಜಾಗಕ್ಕೆ ಹೋಗಿ ನೋಡಿದಾಗ ಹುಲ್ಲು ತೆಗೆಯುವ ಮಿಷನ್ ಕಳವಾಗಿರುವುದು ಕಂಡು ಬಂದಿದ್ದು, ಬೆಳಿಗ್ಗಿನಿಂದ ಈವರೆಗೆ ಸದ್ರಿ ಮಿಷನ್ ನನ್ನು ತೋಟದ ಎಲ್ಲಾ ಕಡೆ ಹುಡುಕಾಡಿದ್ದು, ಪತ್ತೆಯಾಗಿರುವುದಿಲ್ಲ. ಸದ್ರಿ ಮಿಷನ್ ನನ್ನು ದಿನಾಂಕ: 20-09-2021 ರಂದು 17:00 ಗಂಟೆಯಿಂದ ದಿನಾಂಕ: 24-09-2021 ರಂದು ಬೆಳಿಗ್ಗೆ 09:00 ಗಂಟೆಯ ಮದ್ಯಾವದಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನವಾದ ಹುಲ್ಲು ಕತ್ತರಿಸುವ  ಮಿಷನ್ ನ ಅಂದಾಜು ಬೆಲೆ ರೂ 10,000/- ಆಗಬಹುದು ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 25-09-2021 03:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080