ಅಭಿಪ್ರಾಯ / ಸಲಹೆಗಳು

Crime Reported in Barke PS     

M/s ONYX Air Lounge & Kitchen  ನಲ್ಲಿ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ರಾತ್ರಿ ವೇಳೆಗೆ ಜೋರಾಗಿ ಸಂಗೀತಾ ಸೌಂಡ್ ಬಾಕ್ಸ್/ಡಿಜೆ ಹಾಕಿಕೊಂಡು ಯುವಕ/ಯುವತಿಯರು ಜೋರಾಗಿ ನರ್ತಿಸುತ್ತಿದ್ದಾರೆ ಹಾಗೂ ಪರಿಷ್ಕೃತ ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿರುವ ಬಗ್ಗೆ ಮಾಹಿತಿಯಂತೆ ದಿನಾಂಕ: 23-10-2021 ರಂದು ಸಿಸಿಬಿ ಘಟಕದ ಪಿ.ಎಸ್.ಐ ಪಿರ್ಯಾದಿದಾರರಾದ ರಾಜೇಂದ್ರರವರು ಸಿಬ್ಬಂದಿಗಳ ಜೊತೆ  ಮಂಗಳೂರು ನಗರದ ಎಂ ಜಿ ರಸ್ತೆಯಲ್ಲಿರುವ M/s ONYX Air Lounge & Kitchen  ಎಂಬ ಬಾರ್ & ರೆಸ್ಟೋರೆಂಟ್ ಗೆ ತೆರಳಿ ಈ ಬಗ್ಗೆ ಮಾಹಿತಿಯಂತೆ ಸದ್ರಿ  ಬಾರ್ & ರೆಸ್ಟೋರೆಂಟ್ ನಲ್ಲಿ ಕಾನೂನು ಉಲ್ಲಂಘಿಸಿ ಅಕ್ರಮವಾಗಿ ರಾತ್ರಿ ವೇಳೆಗೆ ಜೋರಾಗಿ ಸಂಗೀತಾ ಸೌಂಡ್ ಬಾಕ್ಸ್/ಡಿಜೆ ಹಾಕಿಕೊಂಡು ಕೋವಿಡ್ ನಿಯಾಮಾವಳಿಗಳನ್ನು ಉಲ್ಲಂಘಿಸಿರುವುದು ಧೃಡಪಟ್ಟಿರುವುದರಿಂದ ಕಾನೂನು ಕ್ರಮ ಕೈಗೊಂಡಿರುವುದು ಎಂಬಿತ್ಯಾದಿ

Crime Reported in Konaje PS

ದಿನಾಂಕ 24.10.2021 ರಂದು ಸುಮಾರು 19.30 ಗಂಟೆಯ ಸಮಯಕ್ಕೆ ಪಿರ್ಯಾದಿ Mahammad Faizal ದಾರರು ಅವರ ಸಂಬಂಧಿ ಮುಸ್ತಾಪ ಎಂಬವರೊಂದಿಗೆ  ಬೋಳಿಯಾರ್ ಗೆ ಬಂದಿದ್ದು, ಬೋಳಿಯಾರ್ ನ ಮೊಬೈಲ್ ಪಾಯಿಂಟ್ ಎಂಬ ಅಂಗಡಿಯಲ್ಲಿ ಕರೆನ್ಸಿ ಹಾಕಿಸಿಕೊಂಡು ಬೈಕ್ ನಲ್ಲಿ ಮನೆಗೆ ಹೊರಟ ಸಮಯ ಪಿರ್ಯಾದಿದಾರರಿಗೆ ಪರಿಚಯದ ಶಬೀರ್, ಶಿನಾನ್ ಹಾಗೂ ಶೈಲ್ @ ಸುಹೈಲ್ ಎಂಬವರು ಸ್ಕೂಟರ್ ನಲ್ಲಿ ಬಂದಿದ್ದು,  ಪಿರ್ಯಾದಿದಾರರನ್ನು ಶಬೀರ್ ಎಂಬವನು ಅಡ್ಡಗಟ್ಟಿ “ಬೇವರ್ಸಿ  ಮಗ” ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಬೆನ್ನಿಗೆ ಕಾಲಿಗೆ ದೊಣ್ಣೆಯಿಂದ ಹೊಡೆದಿದ್ದು, ಕೈಯಿಂದ ಕೆನ್ನಿಗೂ ಹೊಡೆದಿರುತ್ತಾನೆ. ಶಿನಾನ್ ಹಾಗೂ ಸುಹೈಲ್ ಎಂಬವರು ಪಿರ್ಯಾದಿದಾರರನ್ನು ಕಾಲಿನಿಂದ ತುಳಿದಿರುತ್ತಾರೆ. ಅದೇ ಸಮಯ ಬಿಡಿಸಲು ಬಂದ ಮುಸ್ತಾಪನನ್ನು ಶಬೀರ್ ಎಂಬವನು ದೂಡಿ ಚಾಕುವಿನಿಂದ ಹೊಡೆಯಲು ಹೋದಾಗ ಮುಸ್ತಾಪ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಬಲಭುಜಕ್ಕೆ ಗೀರಿದ ಗಾಯವಾಗಿರುತ್ತದೆ ಹಾಗೂ ಕೆಳಗೆ ಬಿದ್ದ ಪರಿಣಾಮ ಬಲಗೈ ಮಣಿಗಂಟಿಗೆ ಗಾಯವಾಗಿದ್ದು, ಅಲ್ಲಿ ಜನರು ಸೇರುತ್ತಿದ್ದಂತೆ  “ನಿಮ್ಮನ್ನು ಮುಂದಕ್ಕೂ ನೋಡಿಕೊಳ್ಳುತ್ತೇನೆ” ಎಂದು ಎಂದು ಬೆದರಿಕೆ ಹಾಕಿ ಬಂದ ಸ್ಕೂಟರ್ ನಲ್ಲಿ ಅರೋಪಿಗಳು ಹೋಗಿರುತ್ತಾರೆ.  ನಂತರ ಮಹಮ್ಮದ್ ಸವಾದ್ ಎಂಬವರು ಗಾಯಗೊಂಡ ಪಿರ್ಯಾದಿ ಹಾಗೂ ಮುಸ್ತಾಪರವರನ್ನು ಕಣಚೂರು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಿರುವುದು ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 25-10-2021 06:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080